ಪ್ರಭು ಶ್ರೀರಾಮನಿಗೆ ಮನಮೋಹಕ ಸೂರ್ಯ ತಿಲಕ! ಈ ಅದ್ಭುತ ದೃಶ್ಯಾವಳಿ ಕಣ್ತುಂಬಿಕೊಳ್ಳಿ..

By Santosh Naik  |  First Published Apr 17, 2024, 12:08 PM IST

ರಾಮನವಮಿಯ ದಿನದಂದು ಶ್ರೀರಾಮ ಮಂದಿರದ ಬಾಲಕರಾಮನ ಹಣೆಯ ಮೇಲೆ ಸೂರ್ಯ ತಿಲಕ ಮೂಡಿದೆ. ಈ ದೃಶ್ಯವನ್ನು ಶ್ರೀರಾಮಜನ್ಮಭೂಮಿ ಟ್ರಸ್ಟ್‌ ಪ್ರಸಾರ ಮಾಡಿದೆ.
 


ನವದೆಹಲಿ (ಏ.17): ಪ್ರಭು ಶ್ರೀರಾಮನ ಹಣೆಯ ಮೇಲೆ ವೈಭವನದ ಸೂರ್ಯತಿಲಕ ಇಡಲಾಗಿದೆ. ಈ ದೃಶ್ಯವನ್ನು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ. ರಾಮನ ಹಣೆಯ ಮೇಲೆ ಮೂಡಿದ ಸೂರ್ಯ ತಿಲಕ ಆಕರ್ಷಕವಾಗಿ ಕಂಡಿದೆ. ಇದೇ ಮೊದಲ ಬಾರಿಗೆ ಸೂರ್ಯವಂಶಸ್ಥ ಶ್ರೀರಾಮನ ಹಣೆಯ ಮೇಲೆ ರಾಮ ಮಂದಿರದಲ್ಲಿಯೇ ಸೂರ್ಯತಿಲಕ ಇಡಲಾಗಿದೆ. ಅಂದಾಜು 4-5 ನಿಮಿಷಗಳ ಕಾಲ ಪ್ರಭು ಶ್ರೀರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಿದೆ. ಪ್ರತಿ ವರ್ಷದ ರಾಮನವಮಿಯಂದು ಅಯೋಧ್ಯೆಯಲ್ಲಿ ಬಾಲಕರಾಮನಿಗೆ ಸೂರ್ಯ ತಿಲಕ ಇಡಲಾಗುತ್ತದೆ. ಸೂರ್ಯ ವಂಶಜನಾಗಿದ್ದ ಶ್ರೀರಾಮ ಹುಟ್ಟಿದಾಗ, ಸೂರ್ಯ ಒಂದು ತಿಂಗಳು ಅಯೋಧ್ಯೆಯನ್ನು ಬಿಟ್ಟು ಹೋಗಿರಲಿಲ್ಲ ಎನ್ನುವ ಐತಿಹ್ಯವೂ ಇದೆ.

ಹೇಗೆ ಮೂಡಲಿದೆ ಸೂರ್ಯತಿಲಕ: ರಾಮನವಮಿಯ ಸಂದರ್ಭದಲ್ಲಿ ರಾಮಲಲ್ಲಾನ ಸೂರ್ಯ ತಿಲಕದ ದರ್ಶನವು ಬಹಳ ಅದ್ಭುತವಾಗಿರುತ್ತದೆ. ದೇವಾಲಯದ ಮೂರನೇ ಮಹಡಿಯಲ್ಲಿ ಅಳವಡಿಸಲಾಗಿರುವ ಮೊದಲ ಕನ್ನಡಿಯ ಮೇಲೆ ಸೂರ್ಯನ ಬೆಳಕು ಬೀಳಲಿದೆ. ಇಲ್ಲಿಂದ ಅದು ಪ್ರತಿಫಲನವಾಗಲಿದ್ದು, ಹಿತ್ತಾಳೆಯ ಪೈಪ್ ಅನ್ನು ಪ್ರವೇಶಿಸುತ್ತದೆ. ಹಿತ್ತಾಳೆ ಪೈಪ್‌ನಲ್ಲಿ ಅಳವಡಿಸಲಾದ ಎರಡನೇ ಕನ್ನಡಿಗೆ ತಾಕಿದ ನಂತರ, ಅವು ಮತ್ತೆ 90 ಡಿಗ್ರಿಗಳಲ್ಲಿ ಪ್ರತಿಫಲಿಸುತ್ತದೆ. ನಂತರ, ಹಿತ್ತಾಳೆಯ ಪೈಪ್ ಮೂಲಕ ಹೋಗುವಾಗ, ಈ ಕಿರಣವು ಮೂರು ವಿಭಿನ್ನ ಮಸೂರಗಳ ಮೂಲಕ ಹಾದುಹೋಗುತ್ತದೆ ಮತ್ತು ಉದ್ದವಾದ ಪೈಪ್‌ನ ಗರ್ಭಗುಡಿಯ ತುದಿಯಲ್ಲಿರುವ ಕನ್ನಡಿಗೆ ಹೊಡೆಯುತ್ತದೆ. ಗರ್ಭಗುಡಿಯಲ್ಲಿ ಅಳವಡಿಸಲಾಗಿರುವ ಗಾಜಿನ ಮೇಲೆ ಕಿರಣಗಳು ನೇರವಾಗಿ ರಾಮ್ ಲಲ್ಲಾನ ಹಣೆಯ ಮೇಲೆ 75 ಮಿಮೀ ವೃತ್ತಾಕಾರದ ತಿಲಕವನ್ನು ಇಡುತ್ತದೆ. ಐದು ನಿಮಿಷಗಳ ಕಾಲ ನಿರಂತರವಾಗಿ ಈ ತಿಲಕ ಇರುತ್ತದೆ.

Tap to resize

Latest Videos

undefined

ಇಂದಿನ ವಿಶೇಷಕ್ಕಾಗಿ ರಾಮಲಲ್ಲಾಗೆ ಹಳದಿ ಬಣ್ಣದ ವಿಶೇಷ ವಸ್ತ್ರವನ್ನು ವಿನ್ಯಾಸ ಮಾಡಲಾಗಿತ್ತು. ಖಾದಿ ಹಾಗೂ ಕೈಮಗ್ಗದಿಂದ ತಯಾರಿಸಿದ ವಸ್ತ್ರ ಇದಾಗಿದೆ. ಈ ಉಡುಪನ್ನು ತಯಾರಿಸಲು ವೈಷ್ಣೋ ಪಂಥದ ಚಿಹ್ನೆಗಳನ್ನು ಬಳಸಲಾಗಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಎಳೆಗಳನ್ನು ಬಳಸಲಾಗಿದೆ. ರಾಮಲಲ್ಲಾನ ವಸ್ತ್ರ ತಯಾರಿಸಿರುವ ಮನೀಶ್ ತ್ರಿಪಾಠಿ, ರಾಮಲಲ್ಲಾ ಬಟ್ಟೆಗಳನ್ನು ತಯಾರಿಸಲು 20 ರಿಂದ 22 ದಿನಗಳು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ. ರಾಮಲಲ್ಲಾ ಅವರ ಬಟ್ಟೆಗಳಲ್ಲಿ ವೆಲ್ವೆಟ್ ಹತ್ತಿಯನ್ನು ಬಳಸಲಾಗುತ್ತದೆ ಇದರಿಂದ ಅದು ಒಳಗಿನಿಂದ ಮೃದುವಾಗಿರುತ್ತದೆ.

Photos: ರಾಮನವಮಿಯಂದು ಕಣ್ತುಂಬಿಕೊಳ್ಳಿ ಪ್ರಭು ಶ್ರೀರಾಮನ ಭವ್ಯ ಅಲಂಕಾರ!

 ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ರಾಮಲಲ್ಲಾಗೆ ವಿವಿಧ ದಿನಗಳ ಪ್ರಕಾರ ವಿವಿಧ ಬಣ್ಣದ ಬಟ್ಟೆಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳುತ್ತಾರೆ. ಸೋಮವಾರದಂದು ರಾಮಲಲ್ಲಾ ವಿಗ್ರಹವನ್ನು ಬಿಳಿಯ ವಸ್ತ್ರದಲ್ಲಿ ಧರಿಸಲಾಗುತ್ತದೆ. ಮಂಗಳವಾರ ಗುಲಾಬಿ, ಬುಧವಾರ ಹಸಿರು, ಗುರುವಾರ ಹಳದಿ, ಶುಕ್ರವಾರ ಕೆನೆ, ಶನಿವಾರ ನೀಲಿ ಮತ್ತು ಭಾನುವಾರ ಕೆಂಪು ಬಣ್ಣದ ವಸ್ತ್ರವನ್ನು ಹಾಕಲಾಗುತ್ತದೆ.

ನಾಲ್ಕು ನಿಮಿಷ ಬಾಲಕರಾಮನ ಹಣೆಯ ಮೇಲೆ ಸೂರ್ಯ ತಿಲಕ, ರಾಮನವಮಿ ಸಂಭ್ರಮಕ್ಕೆ ಅಯೋಧ್ಯೆ ಸಿದ್ದ!

| ‘Surya Tilak’ illuminates Ram Lalla’s forehead at the Ram Janmabhoomi Temple in Ayodhya, on the occasion of Ram Navami.

(Source: DD) pic.twitter.com/rg8b9bpiqh

— ANI (@ANI)
click me!