ಇತ್ತೀಚಿನ ದಿನಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಇಡೋಕೆ ಮೀಸಲಾಗಿರುವ ಪರ್ಸ್ ನಲ್ಲಿ ಮತ್ತೇನೆಲ್ಲ ಇರಬೇಕು? ಆರ್ಥಿಕ ವೃದ್ಧಿ, ಬಯಸಿದ ಆಸೆ ಈಡೇರಬೇಕು ಅಂದ್ರೆ ಹೀಗೆ ಮಾಡಿ.
ಈ ದುಬಾರಿ ದುನಿಯಾದಲ್ಲಿ ಹಣ ಎಷ್ಟಿದ್ರೂ ಸಾಲೋದಿಲ್ಲ. ಲಕ್ಷಗಟ್ಟಲೆ ದುಡಿಯುವ ವ್ಯಕ್ತಿ ಕೂಡ ತಿಂಗಳ ಕೊನೆಯಲ್ಲಿ ಬರಿಗೈನಲ್ಲಿ ಓಡಾಡುವಂತಾಗ್ತಿದೆ. ಬ್ಯಾಂಕ್ ಬ್ಯಾಲೆನ್ಸ್ (Bank balance) ಖಾಲಿಯಾಗಿ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಹಗಲು – ರಾತ್ರಿ ದುಡಿದು ಹಣ ಸಂಪಾದನೆ ಮಾಡಿದ್ರೆ ಆಗ್ಲಿಲ್ಲ, ಆ ಹಣವನ್ನು ಹೇಗೆ ಖರ್ಚು ಮಾಡ್ಬೇಕು ಎಂಬುದು ಗೊತ್ತಿರಬೇಕು. ಅನೇಕ ಬಾರಿ ಹಣ ಅನಾವಶ್ಯಕ ಕೆಲಸಕ್ಕೆ ಹಾಳಾಗುತ್ತದೆ. ವ್ಯರ್ಥ ಖರ್ಚನ್ನು ತಪ್ಪಿಸಿ ಸದಾ ನಿಮ್ಮ ಪರ್ಸ್ (Purse) ಹಾಗೂ ಖಾತೆಯಲ್ಲಿ ಹಣವಿರಬೇಕು ಅಂದ್ರೆ ಕೆಲ ನಿಯಮಗಳನ್ನು ನೀವು ಪಾಲಿಸಬೇಕು. ಆ ಪರ್ಸ್ ನಲ್ಲಿ ನೀವು ಕಂಡ ಕಂಡ ವಸ್ತು ಇಟ್ಕೊಂಡ್ರೆ ನಷ್ಟ ಜಾಸ್ತಿ. ಸದಾ ನಿಮ್ಮ ಕೈನಲ್ಲಿ ಹಣ ಇರ್ಬೇಕು, ಲಕ್ಷ್ಮಿ ನಿಮ್ಮ ಮನೆಯಲ್ಲೇ ಇರಬೇಕು ಎಂದಾದ್ರೆ ಫಿಂಗ್ ಶೂಯಿ ನಿಯಮಗಳನ್ನು ಪಾಲಿಸಿ. ನಿಮ್ಮ ಮೂಲಾಂಕಕ್ಕೆ ತಕ್ಕಂತೆ ನೀವು ಪರ್ಸ್ ನಲ್ಲಿ ಏನು ಇಡಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮೂಲ ಸಂಖ್ಯೆ ಒಂದು : ಜನ್ಮ ದಿನಾಂಕದ ಮೂಲಕ ನಿಮ್ಮ ಮೂಲ ಸಂಖ್ಯೆಯನ್ನು ಪತ್ತೆ ಮಾಡಲಾಗುತ್ತದೆ. ನಿಮ್ಮ ಜನ್ಮ ಸಂಖ್ಯೆ ಒಂದಾಗಿದ್ದರೆ ನೀವು ಸೂರ್ಯನ ಬೆಳಕನ್ನು ಪ್ರತಿನಿಧಿಸುವ ತಾಮ್ರದ ನಾಣ್ಯವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ನಾಣ್ಯವನ್ನು ಪರ್ಸ್ ನಲ್ಲಿ ಇಟ್ರೆ ಯಶಸ್ಸು, ಸಮೃದ್ಧಿ, ಗೌರವ ಹೆಚ್ಚಾಗುತ್ತದೆ. ಕೆಲವೇ ದಿನಗಳಲ್ಲಿ ನಿಮಗೆ ಅದ್ರ ಪರಿಣಾಮ ಗೋಚರಿಸುತ್ತದೆ.
ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ದೃಷ್ಟಿ ಜಾಸ್ತಿ ಬೀಳುತ್ತೆ
ಜನ್ಮ ಸಂಖ್ಯೆ ಎರಡು : ನಿಮ್ಮ ಜನ್ಮ ಸಂಖ್ಯೆ 2 ಆಗಿದ್ದರೆ ನೀವು ಬೆಳ್ಳಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಚೌಕ ಅಥವಾ ಆಯತಾಕಾರದ ಬೆಳ್ಳಿ ನಾಣ್ಯವನ್ನು ಇಟ್ಟುಕೊಳ್ಳಬೇಕು. ಇದು ಶಾಂತಿಯ ಸಂಕೇತವಾಗಿದೆ.
ಮೂಲ ಸಂಖ್ಯೆ ಮೂರು : ನಿಮ್ಮ ಮೂಲ ಸಂಖ್ಯೆ ಮೂರಾಗಿದ್ದರೆ ಕೇಸರಿಯನ್ನು ನೀವು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಕೇಸರಿ ಗುರು ಗ್ರಹಕ್ಕೆ ಸಂಬಂಧ ಹೊಂದಿದ್ದು, ನಿಮ್ಮ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ನೀವು ಸ್ವಲ್ಪ ಕೇಸರಿಯನ್ನು ಹಳದಿ ಬಣ್ಣದ ಪೇಪರ್ ನಲ್ಲಿ ಸುತ್ತಿ ಅದನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.
ಜನ್ಮ ಸಂಖ್ಯೆ ನಾಲ್ಕು : ಇವರು ಬಾರ್ಲಿಯನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ. ಬಾರ್ಲಿಯನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ಇಡುವುದ್ರಿಂದ ರಾಹು ದೋಷವನ್ನು ಕಡಿಮೆ ಮಾಡಬಹುದು.
ಮೂಲ ಸಂಖ್ಯೆ ಐದು : ನಿಮ್ಮ ಮೂಲ ಸಂಖ್ಯೆ ಐದಾಗಿದ್ದರೆ ನೀವು ತುಳಸಿಯ ಎಲೆಯನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದು ಬೇಗ ಒಣಗುವ ಕಾರಣ ಪದೇ ಪದೇ ಇದನ್ನು ಬದಲಿಸುತ್ತಿರಬೇಕು. ತುಳಸಿ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಬುದ್ಧಿವಂತಿಕೆ ಮತ್ತು ಸೂಕ್ಷ್ಮತೆ ಹೆಚ್ಚಿಸಲು ಕಾರಣವಾಗುತ್ತದೆ.
ಜನ್ಮ ದಿನಾಂಕ ಆರು : ಗುಲಾಬಿಯನ್ನು ಶುಕ್ರ ಗ್ರಹಕ್ಕೆ ಸಂಬಂಧ ಹೊಂದಿದೆ. ನಿಮ್ಮ ಜನ್ಮ ದಿನಾಂಕ ಆರಾಗಿದ್ದರೆ ನೀವು ಒಣಗಿದ ಗುಲಾಬಿಯನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಒಂದ್ವೇಳೆ ಗುಲಾಬಿ ಸಿಕ್ಕಿಲ್ಲ ಎಂದಾದ್ರೆ ನೀವು ಹೊಳಟೆಯುವ ಬಟ್ಟೆ ಇಡಬಹುದು.
2027ರ ವರೆಗೂ ಈ ರಾಶಿಗಳಿಗೆ ಅದೃಷ್ಟ, ಎಲ್ಲವೂ ಶನಿ ಕೃಪೆ
ಮೂಲ ಸಂಖ್ಯೆ ಏಳು : ನಿಮ್ಮ ಮೂಲ ಸಂಖ್ಯೆ ಆರಾಗಿದ್ದರೆ ನೀವು ನಿಮ್ಮ ಪ್ರೀತಿ ಪಾತ್ರರ ಫೋಟೋವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಪತಿ, ಮಕ್ಕಳು ಅಥವಾ ಯಾವುದೇ ನಿಮ್ಮಿಷ್ಟದ ವ್ಯಕ್ತಿ ಫೋಟೋ ಇಡಬಹುದು. ಇದು ನಿಮ್ಮ ಜಾತಕದಲ್ಲಿರುವ ಕೇತು ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಮೂಲ ಸಂಖ್ಯೆ ಎಂಟು : ಇವರು ಯಾವುದೇ ಅದೃಷ್ಟದ ನಾಣ್ಯವನ್ನು ಪರ್ಸ್ ನಲ್ಲಿ ಇಡಬಹುದು. ಆದ್ರೆ ಆ ನಾಣ್ಯವನ್ನು ಧಾರ್ಮಿಕ ಸ್ಥಳದಿಂದ ತಂದಿರಬೇಕು. ವೃತ್ತಿ ಹಾಗೂ ಆರ್ಥಿಕ ವೃದ್ಧಿಗೆ ಇದು ನೆರವಾಗುತ್ತದೆ.
ಮೂಲ ಸಂಖ್ಯೆ ಒಂಭತ್ತು : ಮೂಲ ಸಂಖ್ಯೆ ಒಂಭತ್ತಾಗಿದ್ದರೆ ಕೆಂಪು ದಾರ ನಿಮಗೆ ಉತ್ತಮ. ಅದನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಆಸೆ ಪೂರೈಸುತ್ತದೆ. ಆದ್ರೆ ಕೆಂಪು ದಾರವನ್ನು ಪರ್ಸ್ ನಲ್ಲಿ ಇಡುವ ಮುನ್ನ 9 ಗಂಟನ್ನು ಹಾಕಬೇಕು.