ಸೊಸೆಗೇ ಗೊತ್ತಿರೋ ಸಂಪ್ರದಾಯ ಅತ್ತೆಗೆ ಗೊತ್ತಿಲ್ವಾ? ಭಕ್ತರಿಗೆ ಪ್ರಸಾದವೆಸೆದು ಟ್ರೋಲ್ ಆದ ನೀತಾ ಅಂಬಾನಿ!

By Roopa Hegde  |  First Published Sep 9, 2024, 10:28 AM IST

ಮುಖೇಶ್ ಅಂಬಾನಿ ಕುಟುಂಬ ಗಣೇಶ ಚೌತಿಯನ್ನು ಅದ್ಧೂರಿಯಾಗಿ ಆಚರಿಸಿದೆ. ಮೆರವಣಿಗೆ ವೇಳೆ ನೀತಾ ಅಂಬಾನಿ ಹಾಗೂ ರಾಧಿಕಾ ಗಮನ ಸೆಳೆದಿದ್ದಾರೆ. ಅವರಿಬ್ಬರ ಮಧ್ಯೆ ಇರುವ ವ್ಯತ್ತಾಸ ಪತ್ತೆ ಮಾಡಿರುವ ಟ್ರೋಲರ್, ನೀತಾ ಕಾಲೆಳೆದಿದ್ದಾರೆ.  


ಭಾರತದ ಶ್ರೀಮಂತ ಕುಟುಂಬ ಅಂಬಾನಿ (India richest family Ambani) ಮನೆಯಲ್ಲಿ ಗಣೇಶ ಚತುರ್ಥಿ (Ganesh Chaturthi) ಸಂಭ್ರಮ. ಗಣಪತಿ ಬಪ್ಪನನ್ನು ಮೋರೆಯಾ ಮೋರೆಯಾ ಎನ್ನುತ್ತಲೇ ನೀರಿಗೆ ಬಿಟ್ಟಿದೆ ಅಂಬಾನಿ ಫ್ಯಾಮಿಲಿ. ಸೋಶಿಯಲ್ ಮೀಡಿಯಾ (social media ) ದಲ್ಲಿ ಅಂಬಾನಿ ಕುಟುಂಬದ ಗಣೇಶ ಮೆರವಣಿಗೆ ವಿಡಿಯೋ ವೈರಲ್ (video viral) ಆಗಿದೆ. ಇದ್ರಲ್ಲಿ ನೀತಾ ಅಂಬಾನಿ, ಅವರ ತಾಯಿ, ಅನಂತ್ ಅಂಬಾನಿ ಮತ್ತು ರಾಧಿಕಾರನ್ನು ನೋಡ್ಬಹುದು. ರಾಧಿಕಾಗೆ ಮದುವೆ ಆದ್ಮೇಲೆ ಅನಂತ್ ಅಂಬಾನಿ ಮನೆಯಲ್ಲಿ ಮೊದಲ ಹಬ್ಬವಾಗಿದ್ದು, ರಾಧಿಕಾ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಆದ್ರೆ ರಾಧಿಕಾ ಹಾಗೂ ನೀತಾ ಅಂಬಾನಿ (Nita Ambani) ಮಧ್ಯೆ ಇರುವ ವ್ಯತ್ಯಾಸ ಕಂಡು ಹಿಡಿಯಲು ಟ್ರೋಲರ್ಸ್ ಮುಂದಾಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ನೀತಾ ಅಂಬಾನಿ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ದೊಡ್ಡ ಲಾರಿಯಲ್ಲಿ ಗಣೇಶ ವಿಸರ್ಜನೆಗೆ ಅಂಬಾನಿ ಕುಟುಂಬ ಹೊರಟಿದೆ. ಇದ್ರಲ್ಲಿ ನೀತಾ ಅಂಬಾನಿ ನಿಂತಿದ್ದಾರೆ. ಜನರಿಗೆ ಕೈ ಮುಗಿಯುತ್ತಾ ಹೋಗುವ ನೀತಾ ಅಂಬಾನಿ, ಕೆಳಗೆ ನಿಂತ ಜನರಿಗೆ ಪ್ರಸಾದವನ್ನು ಎಸೆಯುತ್ತಿದ್ದಾರೆ. ಒಬ್ಬೊಬ್ಬರಿಗೆ ನೀತಾ ಪ್ರಸಾದ ಎಸೆಯೋದನ್ನು ನೀವು ನೋಡ್ಬಹುದು. ಇದು ಟ್ರೋಲರ್ ಕೋಪಕ್ಕೆ ಕಾರಣವಾಗಿದೆ. ಪ್ರಸಾದವನ್ನು ಯಾವಾಗ್ಲೂ ಎಸೆಯಬಾರದು. ನೀತಾಗೆ ಹಿಂದೂ ಪದ್ಧತಿ ತಿಳಿದಿಲ್ಲ. ಅವರನ್ನು ಭಾರತದಿಂದ ಓಡಿಸಿ ಅಂತ ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ಅವರು ಅಂಬಾನಿ ಪತ್ನಿ, ಏನ್ ಬೇಕಾದ್ರೂ ಮಾಡ್ಬಹುದು ಅಂತ ಒಬ್ಬರು ಕಮೆಂಟ್ ಮಾಡಿದ್ರೆ, ಇನ್ನೊಬ್ಬರು ಹಣ ಬೇಕಾದಷ್ಟಿದೆ. ಆದ್ರೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನೀತಾ ಅಂಬಾನಿಗೆ ಏನೂ ತಿಳಿದಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಮುಂಬೈನಲ್ಲಿ ಪ್ರಸಾದವನ್ನು ಎಸೆಯೋದು ಕಾಮನ್, ಮೆರವಣಿಗೆ ವೇಳೆ ಕೆಳಗೆ ನಿಂತ ಜನರಿಗೆ ಪ್ರಸಾದವನ್ನು ಎಸೆಯುತ್ತಾರೆ. ಜನರು ಅದನ್ನು ಕ್ಯಾಚ್ ಹಿಡಿಯುತ್ತಾರೆ. ಇದೇ ಅವರಿಗೆ ಖುಷಿ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Tap to resize

Latest Videos

undefined

ಪತಿ ಜಹೀರ್ ಇಕ್ಬಾಲ್ ಜೊತೆ ಸೇರಿ ಗಣೇಶನಿಗೆ ಆರತಿ ಮಾಡಿದ ಸೋನಾಕ್ಷಿ: ನೆಟ್ಟಿಗರಿಂದ ಕಾಮೆಂಟ್‌ನಲ್ಲಿ ಕಿತ್ತಾಟ

ಈ ಮಧ್ಯೆ ರಾಧಿಕಾ ಮರ್ಚೆಂಟ್ (Radhika Merchant) ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ರಾಧಿಕಾ,ಅನಂತ್, ನೀತಾ ಜೊತೆ ಗಣೇಶನ ವಿಸರ್ಜನೆಗೆ ಹೋಗ್ತಿದ್ದಾರೆ. ಈ ಸಮಯದಲ್ಲಿ ಕೆಳಗೆ ನಿಂತಿರುವ ಜನರಿಗೆ ರಾಧಿಕಾ ಪ್ರಸಾದವನ್ನು ಕೈನಲ್ಲಿ ನೀಡ್ತಿದ್ದಾರೆ. ದೂರ ಇರುವ ಜನರಿಗೆ ಪ್ರಸಾದ ಹಸ್ತಾಂತರಿಸುವಂತೆ ಲಾರಿ ಕೆಳಗೆ ನಿಂತಿರುವ ಜನರಿಗೆ ರಾಧಿಕಾ ಹೇಳ್ತಿರೋದನ್ನು ನೋಡ್ಬಹುದು. ರಾಧಿಕಾ ಹಾಗೂ ನೀತಾ ಮಧ್ಯೆ ಇರುವ ವ್ಯತ್ಯಾಸವನ್ನು ಜನರು ಇದ್ರಿಂದ ಅಳೆಯುತ್ತಿದ್ದಾರೆ. ರಾಧಿಕಾಗೆ ಭಾರತದ ಸಂಪ್ರದಾಯ ಗೊತ್ತಿದೆ. ಪ್ರಸಾದವನ್ನು ಎಸೆಯುವ ಬದಲು ಕೈನಲ್ಲಿ ನೀಡ್ತಿದ್ದಾರೆಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ರಾಧಿಕಾ, ಅಂಬಾನಿ ಮನೆಯಲ್ಲಿ ಗಣೇಶ ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಅವರು ಮೆರವಣಿಗೆಯಲ್ಲಿ ಗಣಪತಿ ಬಪ್ಪ ಮೊರೆಯಾ ಅಂತಾ ಘೋಷಣೆ ಕೂಗೋದನ್ನು ನೀವು ನೋಡ್ಬಹುದು.

13 ದಿನದ ಶಮಿಕಾಳ ಉಸಿರು ನಿಂತಾಗ ನಡೆದಿತ್ತು ಪವಾಡ: ವಿಚಿತ್ರ ಘಟನೆ ನೆನಪಿಸಿದ ರಾಧಿಕಾ ಕುಮಾರಸ್ವಾಮಿ

ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಗಣೇಶ ಹಬ್ಬದ ಸಂಭ್ರಮ ಕಾಣಸಿಗ್ತಿದೆ. ಎಲ್ಲ ಸೆಲೆಬ್ರಿಟಿ ಮನೆಯಲ್ಲಿ ಗಣೇಶ ಪೂಜೆ, ವಿಸರ್ಜನೆ ಕಾಣಸಿಗ್ತಿದೆ. ಅಂಬಾನಿ, ಗಣೇಶ ಪೂಜೆಗೆ ಬಾಲಿವುಡ್ ಮಂದಿಯನ್ನು ಆಹ್ವಾನಿಸಿದ್ದರು. ಎಲ್ಲರೂ ಚೆಂದದ ಡ್ರೆಸ್ ಧರಿಸಿ ಫೋಟೋಕ್ಕೆ ಫೋಸ್ ನೀಡಿದ್ದರು. ಆದ್ರೆ ಈ ಸಂಭ್ರಮಾಚರಣೆಯಲ್ಲಿ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಮಿಸ್ ಆಗಿದ್ದಾರೆ. ಆಕಾಶ – ಶ್ಲೋಕಾ ಮಿಸ್ ಮಾಡಿಕೊಂಡಿರುವ ಜನರು, ಅವರು ವಿದೇಶಕ್ಕೆ ಹೋಗಿದ್ದಾರಾ ಅಂತ ಪ್ರಶ್ನೆ ಮಾಡಿದ್ದಾರೆ. 

ದೇವರ ಪ್ರಸಾದವನ್ನು ಹಂಚೋದ್ರಲ್ಲಿದೆ ಇಷ್ಟೊಂದು ಲಾಭ : ಹೊಟ್ಟೆ ತುಂಬಿಸಲು  ಎರಡು ಕಾಳು ಪ್ರಸಾದವಾದರೂ ಸಾಕು ಎಂಬ ಮಾತಿದೆ. ಅದು ಯಾವುದೇ ರೀತಿಯ ಪ್ರಸಾದವಾಗಲಿ, ಅದನ್ನು  ಎಸೆಯುವುದು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜನರು ತಿನ್ನಲಾಗದ ಅಥವಾ ಸಾಧ್ಯವಾಗದ ಪ್ರಸಾದವನ್ನು ಎಸೆಯುವ ಬದಲು ನೆರೆಹೊರೆಯವರಿಗೆ ಹಂಚಬೇಕು.  
 

click me!