ನವರಾತ್ರಿ ಸಂಭ್ರಮ: ಒಂಭತ್ತು ಬಣ್ಣಗಳಲ್ಲಿದೆ ವಿಶೇಷ ಶಕ್ತಿ..!

By Suvarna News  |  First Published Oct 18, 2020, 3:39 PM IST

ಬಣ್ಣಗಳಿಗೂ ಸಕಾರಾತ್ಮಕ ಶಕ್ತಿಯನ್ನು ಸೆಳೆಯುವ ಶಕ್ತಿಯಿದೆ. ಒಂಭತ್ತು ದಿನಗಳ ನವರಾತ್ರಿಯಲ್ಲಿ ಪ್ರತಿ ದಿನಕ್ಕೂ ಅದರದ್ದೇ ಆದ ಭಿನ್ನ ವರ್ಣಗಳ ವಸ್ತ್ರ ಧರಿಸುವ ಪರಂಪರೆಯಿದೆ. ಪ್ರತಿ ಬಣ್ಣಕ್ಕೂ ವಿಶೇಷ ಶಕ್ತಿಯಿದ್ದು, ದೇವಿಯ ಆರಾಧನೆಯ ಜೊತೆಗೆ ಈ ಬಣ್ಣಗಳಿಂದ ಉಂಟಾಗುವ ಸಕಾರಾತ್ಮಕ ಪ್ರಭಾವ ದೇವಿಯನ್ನು ಆರಾಧಿಸುವವ ಏಳಿಗೆಗೆ ಕಾರಣವಾಗುತ್ತದೆ. ಹಾಗಾದರೆ ಯಾವ ದಿನಕ್ಕೆ ಯಾವ ಬಣ್ಣ? ತಿಳಿಯೋಣ..


ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಪೂಜೆ, ಆರಾಧನೆ, ಭಜನೆ, ಮಂತ್ರ ಪಠಣಗಳಿಂದ ದೇವಿಯ ಕೃಪೆಯನ್ನು ಪಡೆಯುವ ವಿಶೇಷ ಸಂದರ್ಭ ನವರಾತ್ರಿಯಾಗಿದೆ. ನವರಾತ್ರಿಯ ಒಂಭತ್ತು ದಿನಗಳಿಗೆ ಒಂಭತ್ತು ಬೇರೆ ಬೇರೆ ಬಣ್ಣಗಳ ಮಹತ್ವವೂ ಇದೆ.

ಬಣ್ಣಗಳ ಮಹತ್ವದ ಜೊತೆಗೆ ನವರಾತ್ರಿಯಲ್ಲಿ ಹೊಸ ವಸ್ತುಗಳನ್ನು ಕೊಂಡುಕೊಳ್ಳಲು ಎಲ್ಲ ದಿನಗಳು ಶುಭವೆಂದು ಹೇಳಲಾಗುತ್ತದೆ. ಸರ್ವಾರ್ಥ ಸಿದ್ಧಿಯೋಗದಲ್ಲಿ ಈ ಬಾರಿಯ ನವರಾತ್ರಿ ಆರಂಭವಾಗಿರುವುದರಿಂದ ಅತ್ಯಂತ ಶುಭವೆಂದು ಹೇಳಲಾಗುತ್ತಿದೆ. ನವರಾತ್ರಿಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳಲು ತ್ರಿಪುಷ್ಕರ, ಸೌಭಾಗ್ಯ ಮತ್ತು ರವಿಯೋಗದಂತಹ ವಿಶೇಷ ಯೋಗಗಳಿವೆ ಎಂದು ಹೇಳಲಾಗುತ್ತಿದೆ.

Tap to resize

Latest Videos

ಇದನ್ನು ಓದಿ: ನವರಾತ್ರಿ ದೇವಿಯ ಒಂಭತ್ತು ಸ್ವರೂಪದ ಮಹತ್ವ, ಮತ್ತದರ ಲಾಭ! 

ನವರಾತ್ರಿಯ ವ್ರತವನ್ನು ಆಚರಣೆ ಮಾಡುವವರು ಆ ದಿನಕ್ಕೆ ತಕ್ಕ ಬಣ್ಣದ ವಸ್ತ್ರವನ್ನು ತೊಡುವ ಪರಂಪರೆ ಸಹ ಕೆಲವು ಕಡೆ ಇದೆ. ಅಕ್ಟೋಬರ್ 17ರಿಂದ ನವರಾತ್ರಿ ಆರಂಭವಾಗಿದೆ. ಹಾಗಾಗಿ ಈ ಒಂಭತ್ತು ದಿನಗಳಿಗಿರುವ ಬಣ್ಣಗಳ ಬಗ್ಗೆ ತಿಳಿಯೋಣ...

ಕೇಸರಿ
ನವರಾತ್ರಿಯ ಮೊದಲನೆ ದಿನ ದೇವಿಯ ಶೈಲಪುತ್ರಿ ಸ್ವರೂಪವನ್ನು ಆರಾಧಿಸಲಾಗುತ್ತದೆ. ಬೂದು ಬಣ್ಣದ ವಸ್ತ್ರವನ್ನು ಈ ಧರಿಸುತ್ತಾರೆ. ಕೇಸರಿ ಬಣ್ಣವು ಶಕ್ತಿ ಸಂತೋಷದ ಪ್ರತೀಕವಾಗಿದೆ.

ಶ್ವೇತ ವರ್ಣ
ನವರಾತ್ರಿಯ ಎರಡನೇ ದಿನ ದೇವಿಯ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯನ್ನು ಪೂಜಿಸುವ ದಿನ ಶ್ವೇತ ವರ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಬಣ್ಣವು ನೆಮ್ಮದಿ ಮತ್ತು ಶುಭ್ರತೆಯ ಪ್ರತೀಕವಾಗಿದೆ. 

ಕೆಂಪು
ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಪೂಜಿಸಲಾಗುತ್ತದೆ. ಮೂರನೇ ದಿನ ದೇವಿಯ ಚಂದ್ರಘಂಟಾ ಸ್ವರೂಪವನ್ನು ಆರಾಧಿಸುವ ದಿನ ಕೆಂಪು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಬಣ್ಣವು ಸೌಂದರ್ಯ ಮತ್ತು ಧೈರ್ಯದ ಪ್ರತೀಕವೆಂದು ಹೇಳಲಾಗುತ್ತದೆ.

ನೀಲಿ
ನವರಾತ್ರಿಯ ನಾಲ್ಕನೇ ದಿನ ದೇವಿಯ ಕೂಷ್ಮಾಂಡಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ದಿನ ನೀಲಿ ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ನೀಲಿ ಬಣ್ಣವು ಆರೋಗ್ಯ ಮತ್ತು ಸಂಪತ್ತಿನ ಪ್ರತೀಕವಾಗಿದೆ.

ಹಳದಿ
ನವರಾತ್ರಿಯ ಐದನೇ ದಿನ ದೇವಿ ದುರ್ಗೆಯನ್ನು ಸ್ಕಂದಮಾತೆಯ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಸ್ಕಂದ ಮಾತೆಯನ್ನು ಪೂಜಿಸುವ ದಿನ ಹಳದಿ ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಸ್ವರೂಪದ ಆರಾಧನೆಯಿಂದ ಸಕಲ ಸುಖವನ್ನು ಪಡೆಯಬಹುದಾಗಿದೆ.  ಹಳದಿ ಬಣ್ಣವು ಸಂತೋಷ ಮತ್ತು ಸೌಂದರ್ಯದ ಪ್ರತೀಕವಾಗಿದೆ.

ಹಸಿರು
ನವರಾತ್ರಿಯ ಆರನೇ ದಿನ ದೇವಿಯ ಕಾತ್ಯಾಯನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನಿ ದೇವಿಯನ್ನು  ಪೂಜಿಸುವ ದಿನ ಹಸಿರು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಬಣ್ಣವು ಆರಂಭ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ.

ಇದನ್ನು ಓದಿ: ನವರಾತ್ರಿಯಲ್ಲಿ ಈ ವಸ್ತುಗಳನ್ನು ದಾನ ಮಾಡಿ, ಧನ ಲಾಭ ಪಡೆಯಿರಿ..! 

ಬೂದು ಬಣ್ಣ
ನವರಾತ್ರಿಯ ಏಳನೇ ದಿನ ದೇವಿಯ ಕಾಳರಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಕಾಳರಾತ್ರಿಯ ಸ್ವರೂಪವನ್ನು ಪೂಜಿಸುವ ದಿನ ಬೂದು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಬಣ್ಣವು ಉತ್ತಮ ಶಕ್ತಿಯಾಗಿ ಪರಿವರ್ತನೆಯಾಗುವುದರ ಸಂಕೇತವೆಂದು ಹೇಳಲಾಗುತ್ತದೆ.

ನೇರಳೆ ಬಣ್ಣ
ನವರಾತ್ರಿಯ ಎಂಟನೇ ದಿನ ದೇವಿಯ ಮಹಾಗೌರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವ ದಿನ ನೇರಳೆ ಬಣ್ಣದ ವಸ್ತ್ರವನ್ನು ಧರಿಸಿರುತ್ತಾರೆ. ಈ ಬಣ್ಣವು ಬುದ್ಧಿ ಶಕ್ತಿ ಮತ್ತು ಶಾಂತಿಯ ಪ್ರತೀಕವಾಗಿದೆ.

ಇದನ್ನು ಓದಿ: ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!? 

ನವಿಲು ಹಸಿರು ಬಣ್ಣ
ನವರಾತ್ರಿಯ ನವಮಿಯ ಅಂದರೆ ಒಂಭತ್ತನೇ ದಿನ ದೇವಿಯ ಸಿದ್ಧಿಧಾತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಒಂಭತ್ತನೇ ದಿನ ನವಿಲು ಹಸಿರು ಬಣ್ಣದ ವಸ್ತ್ರವನ್ನು ಧರಿಸುತ್ತಾರೆ. ಈ ಬಣ್ಣವು ದೇವಿಯ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವುದರ ಸಂಕೇತವೆಂದು ನಂಬಲಾಗಿದೆ. ದಶಮಿ ತಿಥಿಯಂದು ವಿಜಯ ದಶಮಿಯನ್ನು ಆಚರಿಸಲಾಗುತ್ತದೆ.

click me!