ಕೋವಿಡ್ ನಿಖರ ಭವಿಷ್ಯ ನುಡಿದ್ದ ಭವಿಷ್ಯಕಾರ 2025ರ ಕುರಿತು ಹೇಳಿದ ಸ್ಫೋಟಕ ಪ್ರಿಡಿಕ್ಷನ್ ಏನು?

By Chethan Kumar  |  First Published Jan 2, 2025, 7:38 PM IST

2018ರಲ್ಲಿ ಕೋವಿಡ್ ಮಹಾಮಾರಿ ಸೇರಿದಂತೆ ಕೆಲ ನಿಖರ ಭವಿಷ್ಯ ನುಡಿದಿ ಸಂಚಲನ ಸೃಷ್ಟಿಸಿರುವ 38ರ ಹರೆಯದ ಭವಿಷ್ಯಕಾರ ಇದೀಗ 2025ರ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈತ ಇದುವೆರೆಗೆ ಹೇಳಿದ್ದೆಲ್ಲವೂ ನಿಜವಾಗಿದೆ. ಇದೀಗ ಈತನ 2025ರ ಭವಿಷ್ಯ ಆತಂಕ ಹೆಚ್ಚಿಸಿದೆ


ಲಂಡನ್(ಜ.02) ಹೊಸ ವರ್ಷದ ಸಂಭ್ರಮದಿಂದ ಆರಂಭಗೊಂಡಿದೆ. ಈ ವರ್ಷ ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಈ  ವರ್ಷ ನೆಮ್ಮದಿ, ಸುಖ ಶಾಂತಿ ಇರುತ್ತಾ ಅನ್ನೋದು ಹಲವರ ಪ್ರಶ್ನೆ. ಈಗಾಗಲೇ ಹಲವು ಭವಿಷ್ಯಕಾರರು 2025ರ ಸಾಲಿನ ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಡಾಮಸ್, ಬಾಬಾ ವಂಗಾ ನುಡಿದಿರುವ ಭವಿಷ್ಯಗಳು ಬಹಿರಂಗವಾಗಿದೆ. ಇದರ ನಡುವೆ 38ರ ಹರೆಯದ ಲಂಡನ್ ಮೂಲದ ಭವಿಷ್ಯಕಾರ ನಿಕೋಲಸ್ ಅಹೌಜುಲಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದುವರೆಗೆ ನಿಕೋಸಲ್ ಹೇಳಿದ ಎಲ್ಲಾ ಭವಿಷ್ಯಗಳು ನಿಜವಾಗಿದೆ. ಕೋವಿಡ್ ವೈರಸ್ ಬಹುತೇಕರ ಬದುಕು ನಾಶ ಮಾಡಲಿದೆ ಅನ್ನೋ ನಿಖರ ಭವಿಷ್ಯವನ್ನು 2018ರಲ್ಲೇ ಈತ ನುಡಿದಿದ್ದ. ಇದೀಗ 2025ರ ವರ್ಷ ಭಯಾನಕ ಎಂದಿದ್ದಾನೆ. ಎಲ್ಲೆಡೆ ಸಂಘರ್ಷಗಳು ಶುರುವಾಗಲಿದ್ದು, 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದಿದ್ದಾನೆ.

2025ರಲ್ಲಿ ಅತೀ ಹೆಚ್ಚು ಸಂಘರ್ಷಗಳು ಧಾರ್ಮಿಕ ಕಾರಣದಿಂದ ಆಗಲಿದೆ ಎಂದಿದ್ದಾನೆ. ಧಾರ್ಮಿಕ ಹಾಗೂ ರಾಷ್ಟ್ರೀಯತೆ ಕಾರಣದಿಂದ ಬಡಿದಾಟ ಹೊಡೆದಾಟಗಳು ನಡೆಯಲಿದೆ. ರಾಜಕೀಯ ಕೊಲೆಗಳು ಹೆಚ್ಚಾಗಲಿದೆ. ಹಿಂಸಾಚಾರಗಳು ತಾಂಡವವಾಡಲಿದೆ. ಆಕ್ರಮಣ, ಅತಿಕ್ರಮಣ ಹೆಚ್ಚಾಗಲಿದೆ. ಇವೆಲ್ಲವೂ ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ನಿಕೋಲಸ್ ಭವಿಷ್ಯ ನುಡಿದಿದ್ದಾನೆ. 

Tap to resize

Latest Videos

ಬಾಬಾ ವಂಗಾ-ನಾಸ್ಟ್ರಡಾಮಸ್ ನುಡಿದ 2025ರ ಸ್ಫೋಟಕ ಭವಿಷ್ಯ, ಹೊಸ ವರ್ಷದಲ್ಲಿ ಏನೆಲ್ಲಾ ಕಾದಿದೆ?

ಹವಾಮಾನ ವೈಪರಿತ್ಯಗಳಿಂದ ಭಾರಿ ಮಳೆ, ಪ್ರವಾಹಗಳು ಸೃಷ್ಟಿಯಾಗಲಿದೆ. ಕಂಡು ಕೇಳರಿಯದ ಪ್ರವಾಹ, ಮಳೆ ಕಾಣಲಿದೆ. ಹಲವರು ಬದುಕು ಕೊಚ್ಚಿ ಹೋಗಲಿದೆ. ಮನೆ ಮಠ ಕಳೆದುಕೊಳ್ಳುತ್ತಾರೆ. ಇಷ್ಟೇ ಅಲ್ಲ ಸಮುದ್ರ ಮಟ್ಟ ಏರಿಕೆಯಾಗಲಿದೆ. ಇದರಿಂದ ಕೆಲ ನಗರಗಳು ಮುಳುಗಡೆಯಾಗಲಿದೆ ಎಂದಿದ್ದಾನೆ. 

ಇದೇ ನಿಕೋಲಸ್ 2018ರಲ್ಲಿ ಕೋವಿಡ್ ಮಹಾಮಾರಿ ಬರಲಿದೆ ಎಂದಿದ್ದ. 2019ರ ಅಂತ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್‌ನಿಂದ ಇಡೀ ವಿಶ್ವವೇ ಸ್ಥಬ್ಧವಾಗಿತ್ತು. ಇನ್ನು ಅಮೆರಿಕದಲ್ಲಿ ಕೆಲ ಸಂಘರ್ಷದ ಕುರಿತು ಈತ ಭವಿಷ್ಯ ನುಡಿದಿದ್ದ. ಈ ಪೈಕಿ ಬ್ಲಾಕ್ ಲೀವ್ಸ್ ಮ್ಯಾಟರ್ ಅಭಿಯಾನ ಹಾಗೂ ಹೋರಾಟದ ಕುರಿತು ಈತ ಭವಿಷ್ಯ ನುಡಿದಿದ್ದ. ಇನ್ನು ಡೋನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲುವು, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಾಬಲ್ಯ ಸೇರಿದಂತೆ ಹಲವು ಭವಿಷ್ಯಗಳು ನಿಜವಾಗಿದೆ. ಹೀಗಾಗಿ ಇದೀಗ 2025ರ ಕುರಿತು ನಿಕೋಲಸ್ ಹೇಳಿರುವ ಭವಿಷ್ಯ ನಿಜವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಪರಿಸ್ಥಿತಿಗಳು ಇದಕ್ಕೆ ಪೂರಕವಾಗಿದೆ ಎಂದು ಹಲವರು ಹೇಳಿದ್ದಾರೆ.

ನಿಕೋಲಸ್ ಬಾಲ್ಯದಿಂದ ಕೆಲ ವಿಶೇಷ ಶಕ್ತಿಗಳು ತನ್ನಲ್ಲಿದೆ ಎಂದು ಭಾವಿಸಿದ್ದ. ಬಾಲ್ಯದಲ್ಲೇ ಈತ ಹಲವು ದಿನಗಳ ಕಾರಣ ಕೋಮಾಗೆ ಜಾರಿದ್ದ. ಬಳಿಕ ಬದುಕಿ ಬಂದ ನಿಕೋಲಸ್ ಕೆಲ ವರ್ಷಗಳಿಂದ ಸ್ಫೋಟಕ ಭವಿಷ್ಯ ನುಡಿಯುವ ಮೂಲಕ ಸದ್ದು ಮಾಡುತ್ತಿದ್ದಾರೆ. 2018ರಲ್ಲಿ ಜಗತ್ತಿಗೆ ವೈರಸ್ ಅಪ್ಪಳಿಸಲಿದೆ ಎಂದಿದ್ದ. ಈ ವೈರಲ್ ವಿಶ್ವವನ್ನೇ ಬುಡಮೇಲು ಮಾಡಲಿದೆ. ಜನರ ಬದುಕು ನಾಶವಾಗಲಿದೆ ಎಂದಿದ್ದ. 2018ರಲ್ಲಿ ಈತನ ಮಾತನ್ನು ಯಾರೂ ಪರಿಗಣಿಸಿರಲಿಲ್ಲ. ಆದರೆ 2019ರಲ್ಲಿ ಕೋವಿಡ್ ವಕ್ಕರಿಸಿ ಲಾಕ್ ಡಾನ್, ಸೀಲ್ ಡೌನ್ ಸೇರಿದಂತೆ ಮರಣಮೃದಂಗ ಬಾರಿಸುತ್ತಿದ್ದಂತೆ ನಿಕೋಲಸ್ ಭವಿಷ್ಯದ ನಿಖರತೆ ಅರಿವಾಗಿತ್ತು. ಬಳಿಕ ನಿಕೋಲಸ್ ಭವಿಷ್ಯ ಭಾರಿ ಜನಪ್ರಿಯತೆ ಪಡೆದುಕೊಂಡಿದೆ.

2025ರ ಭವಿಷ್ಯ ನುಡಿದ ಬಾಬಾ ವಂಗಾ, ಭೀಕರ ಯುದ್ಧ, ಮುಸ್ಲಿಮರ ಆಳ್ವಿಕೆ

ಬಾಬಾ ವಂಗಾ, ನಾಸ್ಟ್ರಡಾಮಸ್ ಕೂಡ ಸಂಘರ್ಷ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವು ಎಚ್ಚರಿಕೆ ನೀಡಿದ್ದಾರೆ. ಚೀನಾ, ಅಮೆರಿಕ ನಡುವೆ ವೈಮನಸ್ಸು, ಇತರ ದೇಶಗಳ ಯುದ್ಧ ಸಂಘರ್ಷಗಳ ಕುರಿತು ಇಬ್ಬರು ಭವಿಷ್ಯಕಾರರು ಭವಿಷ್ಯ ಹೇಳಿದ್ದಾರೆ. ಇದೀಗ ನಿಕೋಲಸ್ ಕೂಡ ಇದೇ ರೀತಿಯ ಭವಿಷ್ಯ ಹೇಳಿದ್ದಾರೆ. ಹೀಗಾಗಿ ಹಲವರ ಆತಂಕ ಹೆಚ್ಚಿದೆ.
 

click me!