ಹೊಸ ವರ್ಷದ ಮೊದಲ ದಿನ ಮಾತ್ರವಲ್ಲ ಇಡೀ ವರ್ಷ ಸಂತೋಷ ತುಂಬಿರಬೇಕು. ಸುಖ, ಸಂಪತ್ತು ಪ್ರಾಪ್ತಿಯಾಗಬೇಕು. ಜನವರಿಯಿಂದ ಡಿಸೆಂಬರ್ ವರೆಗೂ ಎಲ್ಲ ದಿನ ಖುಷಿ ತುಂಬಿರಬೇಕು ಅಂದ್ರೆ ಮೊದಲ ದಿನ ನೀವು ಈ ಕೆಲಸ ಮಾಡಬೇಕು.
ಹೊಸ ವರ್ಷ (New Year) ಪೂರ್ತಿ ಸುಖ,ಸಂತೋಷ, ಆರೋಗ್ಯ, ಆರ್ಥಿಕ ಸ್ಥಿತಿ ಸುಧಾರಣೆ, ನೆಮ್ಮದಿ ಬೇಕು ಎನ್ನುವವರು ದೇವರ (God) ಪೂಜೆ ಮಾಡಬೇಕು. ವರ್ಷದ ಮೊದಲ ದಿನವನ್ನು ಬಹಳ ಸಂತೋಷದಿಂದ ಸ್ವಾಗತಿಸಬೇಕು. ಈಗಿನ ದಿನಗಳಲ್ಲಿ ಆರ್ಥಿಕ (Economy) ಸ್ಥಿತಿ ಸರಿಯಾಗಿದ್ದಲ್ಲಿ, ಕೈನಲ್ಲಿ ಹಣವಿದ್ದಲ್ಲಿ ಮಾತ್ರ ಬೆಲೆ ಜಾಸ್ತಿ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದು, ವರ್ಷಪೂರ್ತಿ ಹಣ, ಸಂಪತ್ತು ನಿಮ್ಮ ಕೈನಲ್ಲಿ ಇರಬೇಕು ಎಂದು ಬಯಸುವವರು ಹೊಸ ವರ್ಷದ ಮೊದಲ ದಿನದಂದು ಪೂಜೆ ಮತ್ತು ಶಾಪಿಂಗ್ ಮಾಡಲು ಮಂಗಳಕರ ಸಮಯವನ್ನು ನೋಡಬೇಕು. ನಾವಿಂದು ಹೊಸ ವರ್ಷದ ಮೊದಲ ದಿನ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಜನವರಿ ಒಂದರ ಪಂಚಾಂಗ : ಜನವರಿ ಒಂದರಂದು ಪಂಚಮಿ ತಿಥಿ ಬರುತ್ತದೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಪಂಚಮಿ ತಿಥಿಯು ಡಿಸೆಂಬರ್ 31 2023 ರಂದು ಬೆಳಿಗ್ಗೆ 11 ಗಂಟೆ 55 ನಿಮಿಷದಿಂದ ಪ್ರಾರಂಭವಾಗುತ್ತದೆ. ಪಂಚಮಿ ತಿಥಿಯು ಜನವರಿ 1, 2024 ರಂದು ಮಧ್ಯಾಹ್ನ 2 ಗಂಟೆ 28 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಇದಾದ ನಂತರ ಷಷ್ಠಿ ತಿಥಿ ಶುರುವಾಗುತ್ತದೆ. ಜನವರಿ ಒಂದು ಸೋಮವಾರ ಬರುತ್ತದೆ. ಸೋಮವಾರ ಶಿವನಿಗೆ ಪ್ರಿಯವಾದ ದಿನ. ಹಾಗಾಗಿ ಜನವರಿ ಮೊದಲ ದಿನ ಶಿವನ ಪೂಜೆ ಹಾಗೂ ಆತನಿಗೆ ಇಷ್ಟವಾದ ಕೆಲ ವಸ್ತುಗಳನ್ನು ಖರೀದಿ ಮಾಡೋದು ಒಳ್ಳೆಯದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ನಿಮ್ಮ ಏಂಜೆಲ್ ನಂಬರ್ ನಿಮಗೆ ಗೊತ್ತಾ? ಇದರಿಂದಲೇ ಅರ್ಥ ಮಾಡಿಕೊಳ್ಳಿ ನಿಮ್ಮ ಭವಿಷ್ಯ!
ಜನವರಿ ಒಂದರಂದು ಮಾಡಿ ಈ ಕೆಲಸ :
• ಡಿಸೆಂಬರ್ 31ರ ಮಧ್ಯರಾತ್ರಿಯವರೆಗೂ ಪಾರ್ಟಿ ನಡೆಯುವ ಕಾರಣ ಅನೇಕರು ಬೆಳಿಗ್ಗೆ ಬೇಗ ಏಳೋದಿಲ್ಲ. ಆದ್ರೆ ಹೊಸ ವರ್ಷದ ಮೊದಲ ದಿನ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ, ಸೂರ್ಯ ದೇವರಿಗೆ ಜಲವನ್ನು ಅರ್ಪಿಸಬೇಕು.
• ಮನೆಯ ಎಲ್ಲ ಭಾಗಗಳನ್ನು ಸ್ವಚ್ಛಗೊಳಿಸಿ, ಮನೆಯ ಮುಖ್ಯ ದ್ವಾರದ ಮೇಲೆ ಲಕ್ಷ್ಮಿ ದೇವಿಯ ಪಾದದ ಗುರುತುಗಳನ್ನು ಹಾಕಬೇಕು. ಶನಿದೇವನ ಆಶೀರ್ವಾದವನ್ನು ಪಡೆಯಬೇಕು.
New Year 2024: ಜನವರಿ ಒಂದನ್ನೇ ಹೊಸ ವರ್ಷವನ್ನಾಗಿ ಆಚರಿಸೋದು ಏಕೆ?
• ಈಶ್ವರನಿಗೆ ಜಲಾಭಿಷೇಕ ಅಥವಾ ರುದ್ರಾಭಿಷೇಕ ಮಾಡುವುದು ಒಳ್ಳೆಯದು. ಸೋಮವಾರ ಅಭಿಷೇಕ ಮಾಡುವುದರಿಂದ ವಿಶೇಷ ಲಾಭ ಸಿಗುತ್ತದೆ.
• ಶಿವನಿಗೆ ಇಷ್ಟವಾಗುವ ಹೂ ಹಾಗೂ ಹಣ್ಣುಗಳನ್ನು ಅರ್ಪಿಸಿ ಪೂಜೆ ಮಾಡಬೇಕು.
• ತಾಯಿ ಪಾರ್ವತಿ ಪೂಜೆಯನ್ನೂ ಮರೆಯಬಾರದು. ಕೆಂಪು ಚುನರಿಯನ್ನು ಪಾರ್ವತಿಗೆ ಹಾಕಬೇಕು. ಇದು ನಿಮ್ಮ ಅದೃಷ್ಟ ಹೆಚ್ಚಿಸುವ ಜೊತೆಗೆ ದಾಂಪತ್ಯ ಸುಖಕ್ಕೆ ಕಾರಣವಾಗುತ್ತದೆ.
• ಈ ದಿನ ದಾನಕ್ಕೂ ವಿಶೇಷ ಮಹತ್ವವಿದೆ. ಬಿಳಿ ಅಕ್ಕಿ, ಬಿಳಿ ಬಟ್ಟೆ, ಬಿಳಿ ಹೂ, ಸಕ್ಕರೆ, ತೆಂಗಿನಕಾಯಿ ಇತ್ಯಾದಿಗಳನ್ನು ದಾನ ಮಾಡಿ.
• ವರ್ಷದ ಮೊದಲ ದಿನ ಮನೆಯಲ್ಲಿ ಬೆಲ್ಪತ್ರೆ ಗಿಡ ನೆಡುವುದು ಶುಭಕರ. ಬೆಲ್ಪತ್ರೆ ಮನೆಗೆ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ. ಹಾಗಾಗಿ ನಿತ್ಯ ಅದರ ಪೂಜೆ ಮಾಡಿ.
ವಿಶೇಷ ಯೋಗ : ಇನ್ನು ಹೊಸ ವರ್ಷದ ಮೊದಲ ದಿನ ಕೆಲ ಯೋಗಗಳು ಕೂಡಿ ಬರಲಿವೆ.
ಗಜಕೇಸರಿ ಯೋಗ : ಮೇಷ ರಾಶಿಯಲ್ಲಿ ಗುರು-ಚಂದ್ರ ಸಂಯೋಗವು ಗಜಕೇಸರಿ ಯೋಗವನ್ನು ಉಂಟುಮಾಡುತ್ತದೆ.
ಲಕ್ಷ್ಮೀ ನಾರಾಯಣ ಯೋಗ : ಶುಕ್ರ-ಬುಧರು ಈ ದಿನ ವೃಶ್ಚಿಕ ರಾಶಿಯಲ್ಲಿ ಇರುತ್ತಾರೆ. ಆದ್ದರಿಂದ ಈ ಯೋಗವು ರೂಪುಗೊಳ್ಳುತ್ತದೆ.
ಆದಿತ್ಯ ಮಂಗಲ ಯೋಗ : ಈ ದಿನ ಧನು ರಾಶಿಯಲ್ಲಿ ಸೂರ್ಯ-ಮಂಗಳರು ಒಟ್ಟಿಗೆ ಇರುತ್ತಾರೆ. ಇದರಿಂದ ಆದಿತ್ಯ ಮಂಗಲ ಯೋಗ ರೂಪುಗೊಳ್ಳುತ್ತದೆ.