ವಾಸ್ತು ಪ್ರಕಾರ ಈ ವಸ್ತುಗಳನ್ನು ಎರವಲು ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ..!

By Sushma Hegde  |  First Published Jun 27, 2023, 2:29 PM IST

ನಾವು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಹಿವಾಟು ನಡೆಸುವುದು ತುಂಬಾ ಸಾಮಾನ್ಯ. ಅಗತ್ಯವಿರುವ ಸಮಯದಲ್ಲಿ, ನಾವು ಹಣ, ಬಟ್ಟೆ  (clothes) ಸೇರಿ ಇತ್ಯಾದಿಗಳನ್ನು ಕೇಳಿ ಪಡೆಯುತ್ತೇವೆ. ಆದರೆ ಯಾವ ವಸ್ತುವನ್ನು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ


ನಾವು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ವಹಿವಾಟು ನಡೆಸುವುದು ತುಂಬಾ ಸಾಮಾನ್ಯ. ಅಗತ್ಯವಿರುವ ಸಮಯದಲ್ಲಿ, ನಾವು ಹಣ, ಬಟ್ಟೆ  (clothes) ಸೇರಿ ಇತ್ಯಾದಿಗಳನ್ನು ಕೇಳಿ ಪಡೆಯುತ್ತೇವೆ. ಆದರೆ ಯಾವ ವಸ್ತುವನ್ನು ತೆಗೆದುಕೊಳ್ಳಬೇಕು ಮತ್ತು ತೆಗೆದುಕೊಳ್ಳಬಾರದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ

ಕೆಲವೊಮ್ಮೆ ನಮಗೆ ಬೇಕಾದ ವಸ್ತುಗಳು ಸರಿಯಾದ ಸಮಯಕ್ಕೆ ಸಿಗುವುದಿಲ್ಲ ಅಥವಾ ಇಲ್ಲದಿದ್ದಾಗ ಬೇರೆಯವರಿಂದ ಕೇಳಿ ಪಡೆಯುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ನಾವು ಕೆಲವು ವಸ್ತುಗಳನ್ನು ಎರವಲು ಪಡೆದರೆ, ನಾವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಇದು ನಮ್ಮ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗಾದರೆ ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ಯಾವ ಯಾವ ವಸ್ತುಗಳನ್ನು ಎರವಲು ಪಡೆಯಬಾರದು ಎಂದು ತಿಳಿದುಕೊಳ್ಳೋಣ.

Tap to resize

Latest Videos

undefined

 

ಬಟ್ಟೆ ಹಾಗೂ ಗಡಿಯಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೊಬ್ಬರು ಬಳಸಿದ ಬಟ್ಟೆಗಳನ್ನು ಎಂದಿಗೂ ಧರಿಸಬಾರದು. ಹಾಗೆ ಮಾಡುವುದರಿಂದ ನಿಮಗೆ ದೈಹಿಕ ಸಮಸ್ಯೆ (physical problem) ಗಳು ಉಂಟಾಗಬಹುದು ಅಥವಾ ಸ್ನೇಹಿತರೊಂದಿಗೆ ಸಂಬಂಧವನ್ನು ಹಾಳುಮಾಡಬಹುದು. ಹಾಗೂ ಬೇರೆಯವರ ಗಡಿಯಾರವನ್ನು ಎಂದಿಗೂ ಧರಿಸಬೇಡಿ. ಹೀಗೆ ಮಾಡುವುದರಿಂದ ತೊಂದರೆಗೆ ಆಹ್ವಾನ ನೀಡಿದಂತಾಗುತ್ತದೆ. ಅವರ ಕೆಟ್ಟ ಸಮಯ (bad timing) ಗಳು ನಿಮಗೆ ಸಂಭವಿಸುತ್ತವೆ.

ಕರವಸ್ತ್ರ ಹಾಗೂ ಪೆನ್ನು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಂದಿಗೂ ಸ್ನೇಹಿತ ಅಥವಾ ಸಂಬಂಧಿಕರಿಂದ ಕರವಸ್ತ್ರ (Handkerchief) ವನ್ನು ಎರವಲು ಪಡೆಯಬಾರದು, ಹಾಗೆ ಮಾಡುವುದರಿಂದ ಸ್ನೇಹಿತ ಅಥವಾ ಸಂಬಂಧಿಕರೊಂದಿಗಿನ ಸಂಬಂಧವನ್ನು ಹಾಳಾಗುತ್ತದೆ. ಹಾಗೂ ಪೆನ್ನನ್ನು ಕೂಡ ಬೇರೆಯವರ ಬಳಿ ತೆಗೆದುಕೊಳ್ಳಬಾರದು. ಶಾಸ್ತ್ರ ಪ್ರಕಾರ, ಪೆನ್ ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯ (Bad deed) ಗಳ ಲೆಕ್ಕವನ್ನು ಇಡುತ್ತದೆ. ಇದರಿಂದ ಅವರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವು ನಿಮಗೆ ಬರಲಿದೆ.

ಮದುವೆಯಲ್ಲಿ ಮೆಹೆಂದಿ, ಅರಿಶಿಣ ಹಚ್ಚುವುದೇಕೆ?; ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

 

ಉಂಗುರ ಹಾಗೂ ಪಾದರಕ್ಷೆ

ಬೇರೆಯವರ ಉಂಗುರ  (ring) ಅಥವಾ ರತ್ನವನ್ನು ಧರಿಸಬೇಡಿ. ಏಕೆಂದರೆ ಉಂಗುರ ಅಥವಾ ರತ್ನವು ಗ್ರಹದೊಂದಿಗೆ ಸಂಬಂಧ ಹೊಂದಿದ್ದು, ಅದು ನಿಮಗೆ ಸೂಕ್ತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ಇನ್ನು ಬೇರೆಯವರು ಬಳಸಿದ ಪಾದರಕ್ಷೆಗಳನ್ನು ಧರಿಸಬಾರದು. ಇದು ವಾಸ್ತು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲ್ಪಟ್ಟಿದೆ.

ಹಾಸಿಗೆ ಹಾಗೂ ಪೊರಕೆ

ಬೇರೊಬ್ಬರ ಹಾಸಿಗೆ ಬಳಸುವುದು ಕಲಹಕ್ಕೆ ಕಾರಣ. ಇದು ಪತಿ ಮತ್ತು ಹೆಂಡತಿ ನಡುವಿನ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಹಾಗೂ ಪೊರಕೆಯನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ. ನೀವು ಬೇರೆಯವರ ಮನೆಯಿಂದ ಪೊರಕೆಯನ್ನು ಎರವಲು ಪಡೆದರೆ, ನಿಮ್ಮ ಮನೆಯವರು ಲಕ್ಷ್ಮಿಯಿಂದ ಅಸಮಾಧಾನಗೊಳ್ಳಬಹುದು. ಆದ್ದರಿಂದ ಯಾವತ್ತೂ ಪೊರಕೆ (broom) ಯನ್ನು ಎರವಲು ಪಡೆಯಬೇಡಿ.

ದಾನ ಮಾಡುವ ಬದಲು ಮರಗಳನ್ನು ನೆಡಿ: ಶ್ರೀಕೃಷ್ಣ ಹೇಳಿದ ಸ್ವರ್ಗದ ದಾರಿಯ ಗುಟ್ಟು ಏನು?

 

ಉಪ್ಪು

ಸಾಮಾನ್ಯವಾಗಿ ನಾವು ಅಡಿಗೆ ಸಾಮಗ್ರಿಗಳು ಖಾಲಿಯಾದಾಗ ಪಕ್ಕದ ಮನೆಯವರ ಬಳಿ ಕೇಳಿ ತೆಗೆದುಕೊಳ್ಳುತ್ತೇವೆ. ಆದರೆ ಉಪ್ಪ (salt) ನ್ನು ಎರವಲು ಪಡೆಯುವುದರಿಂದ ನೀವು ಸಾಲಗಾರರು ಆಗಬಹುದು. ಶಾಸ್ತ್ರಗಳ ಪ್ರಕಾರ ಉಪ್ಪನ್ನು ಯಾರಿಗೂ ಸಾಲವಾಗಿ ಅಥವಾ ದಾನ ಮಾಡಬಾರದು. ಇದರಿಂದ ಆರ್ಥಿಕ ಬಿಕ್ಕಟ್ಟು ನಮ್ಮ ಜೀವನದಲ್ಲಿ ಪ್ರಾರಂಭವಾಗುತ್ತದೆ. ಯಾರಿಗೂ ಉಪ್ಪನ್ನು ಕೊಡಬೇಡಿ ಅಥವಾ ಯಾರಿಂದಲೂ ಉಪ್ಪನ್ನು ತೆಗೆದುಕೊಳ್ಳಬೇಡಿ.

ವಾಸ್ತುಶಾಸ್ತ್ರದ ಪ್ರಕಾರ ಈ ಮೇಲಿನ ವಸ್ತುಗಳನ್ನು ಬೇರೆಯವರಿಂದ ಎರವಲು ಪಡೆಯುವುದಾಗಲಿ ಅಥವಾ ಆ ವಸ್ತುಗಳನ್ನು ಇತರರಿಗೆ ಕೊಡುವುದಾಗಲಿ ಮಾಡಬಾರದು. ಅದು ನಮ್ಮ ಜೀವನದಲ್ಲಿ ಸಮಸ್ಯೆ (problem) ಗಳಿಗೆ ಕಾರಣವಾಗಬಹುದು.

click me!