ನವರಾತ್ರಿ ಸಂಭ್ರಮ: ಶಾರದೆಗೆ ಬ್ರಾಹ್ಮಿ ಅಲಂಕಾರ, ಅನ್ನಪೂಣೇಶ್ವರಿಗೆ ಗಜಾರೂಢಾ ಬ್ರಹ್ಮಚಾರಿಣೀ ರೂಪ

By Govindaraj S  |  First Published Oct 16, 2023, 10:43 PM IST

ರಾಜ್ಯದ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡಿನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ ದೇವಸ್ಥಾನದ ಶಾರದೆ  ಬ್ರಾಹ್ಮಿ ಅಲಂಕಾರದಲ್ಲಿ ದರ್ಶನ ನೀಡಿದ್ರೆ ಹೊರನಾಡಿನ, ಅನ್ನಪೂಣೇಶ್ವರಿ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದಳು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.16): ರಾಜ್ಯದ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಹೊರನಾಡಿನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ ದೇವಸ್ಥಾನದ ಶಾರದೆ  ಬ್ರಾಹ್ಮಿ ಅಲಂಕಾರದಲ್ಲಿ ದರ್ಶನ ನೀಡಿದ್ರೆ ಹೊರನಾಡಿನ, ಅನ್ನಪೂಣೇಶ್ವರಿ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಿದಳು.

Tap to resize

Latest Videos

undefined

ಶಾರದೆಗೆ  ಬ್ರಾಹ್ಮಿ ಅಲಂಕಾರ: ಶೃಂಗೇರಿ ಮಠದ ಶಾರದೆ ಕ್ಯೆಯಲ್ಲಿ ಕಮಂಡಲು,ಅಕ್ಷಮಾಲೆ,ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ  ಬ್ರಹ್ಮನ ಪಟ್ಟದ ರಾಣಿಯಾಗಿ ಬ್ರಾಹ್ಮಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಿದ ಳು.ಬೀದಿ ಇತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾದಿಗಳು ಭಾಗವಹಿಸಿದರು.ಶ್ರೀಮಠದಲ್ಲಿ ರಾತ್ರಿ ನಡೆಯುವ  ದರ್ಬಾರಿನಲ್ಲಿ ಕಿರಿಯಶ್ರೀ ಗಳು ಭಾಗಿಯಾಗಿಲಿದ್ದು ಭಕ್ತ ಸಮೂಹ ಸಾಕ್ಷಿಯಾಗಲಿದೆ. ನವರಾತ್ರಿಯ 2ನೇ ದಿನವಾದ ಇಂದು ಕೂಡ ಶ್ರೀಮಠದಲ್ಲಿ  ಪಾರಾಯಣಗಳು, ಸೂರ್ಯನಮಸ್ಕಾರ. ಶ್ರೀಸೂಕ್ತ ಜಪ, ಭುವನೇಶ್ವರಿ -ಜಪ, ದುರ್ಗಾಜಪ, ಮೊದಲಾದ, ಜಪಗಳು ನಡೆದ್ರೆ,ಶ್ರೀಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನಾತೆಯ ಆವಾಸಸ್ಥಾನವಾದ ಶ್ರೀಚಕ್ರಕ್ಕೆ ನವಾವರಣ ಪೂಜೆ ನಡೆಯಿತು. ನವರಾತ್ರಿ ಸಮಯದಲ್ಲಿ  ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸುವಾಸಿನಿ ಪೂಜೆ, ಕುಮಾರೀ ಪೂಜೆ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಇತ್ಯಾದಿಗಳು ನಡೆಯುತ್ತವೆ.ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ರಥೋತ್ಸವ ನಡೆಯುಲಿದೆ.

Chikkamagaluru: ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರಕ್ಕೆ ವರದಿ

ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಹೊರನಾಡಿನ ಅನ್ನಪೂಣೇಶ್ವರಿ: ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಎರಡನೇ ದಿನವಾದ ಇಂದು ( ಸೋಮವಾರ) ಅನ್ನಪೂರ್ಣೇಶ್ವರಿಯು ದುರ್ಗಾದೇವಿಯ ಎರಡನೇ ಸ್ವರೂಪ ಗಜಾರೂಢಾ ಬ್ರಹ್ಮಚಾರಿಣೀ ರೂಪದಲ್ಲಿ ಕಂಗೊಳಿಸಿದಳು.ಬೆಳಿಗ್ಗೆಯಿಂದಲೇ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ನಂತರ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ನಡೆಯಿತು. 

ಶಕ್ತಿ ಯೋಜನೆಯ ಎಫೆಕ್ಟ್: ಬಸ್ ನಿಲ್ದಾಣ ಬಟ್ಟೆ ಒಣಗಿಸುವ ತಾಣವನ್ನಾಗಿ ಪರಿವರ್ತನೆ

ಹೋಮದ ಪೂರ್ಣಹುತಿಯನ್ನು ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು. ವಿವಿಧ ಪುಷ್ಪ ಆಭರಣಗಳ ಅಲಂಕಾರಗಳಿಂದ ಶೃಂಗಾರಗೊಂಡಿದ್ದ ಅನ್ನಪೂರ್ಣೇಶ್ವರಿಯನ್ನು ನೋಡಿ ಭಕ್ತರು ಕಣ್ತುಂಬಿಸಿಕೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಹೆಚ್.ಎಸ್.ಕೇಶವ ಪ್ರಸಾದ್ ತಂಡ ಗುಬ್ಬಿ ಇವರಿಂದ ವಯಲಿನ್ ವಾದನ, ಸಂಜೆ ಮನು ವಿದ್ಯಾ ಕಲ್ಚರಲ್ ಪೌಂಡೇಶನ್ ಮೈಸೂರು ಇವರಿಂದ ಭರತ ನಾಟ್ಯ ಕಾರ್ಯಕ್ರಮ ನೆರವೇರಿತು. ನಾಳೆಸಿಂಹರೂಢಾ ಚಂದ್ರಘಂಟಾ ಅಲಂಕಾರ ಪೂಜೆ.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಪುರುಷಸೂಕ್ತ ಹೋಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಸಂಜೆ ಯಕ್ಷಗಾನ ನಡೆಯಲಿದೆ.

click me!