ನಾಳೆ ನವರಾತ್ರಿ 9ನೇ ದಿನ ಮಹಾಗೌರಿ ಪೂಜೆ ಮಹತ್ವ, ಮಂತ್ರ

Published : Oct 22, 2023, 04:20 PM ISTUpdated : Oct 25, 2023, 04:17 PM IST
ನಾಳೆ ನವರಾತ್ರಿ 9ನೇ ದಿನ ಮಹಾಗೌರಿ ಪೂಜೆ ಮಹತ್ವ, ಮಂತ್ರ

ಸಾರಾಂಶ

ನವರಾತ್ರಿಯ ವಿಜಯದಶಮಿಯಂದು ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಆ ದಿನ ಸೌಮ್ಯ ಸ್ವಭಾವದ ಹೆಣ್ಣುಮಗಳು, ಮೃದುಭಾವದ ಗೌರಿ, ಮಹಿಷಾಸುರನನ್ನು ಮರ್ಧನ ಮಾಡಲು ತಾಯಿಯು ಚಾಮುಂಡೇಶ್ವರಿಯ  ಅವತಾರ ಎತ್ತುತ್ತಾಳೆ. ಮಹಿಷನನ್ನು ಕೊಂದ ತಾಯಿಯನ್ನು ಇದೇ ಕಾರಣಕ್ಕೆ ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ.

ನವರಾತ್ರಿಯ ವಿಜಯದಶಮಿಯಂದು ತಾಯಿ ಸಿದ್ಧಿದಾತ್ರಿಗೆ ವಿಶೇಷ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಆ ದಿನ ಸೌಮ್ಯ ಸ್ವಭಾವದ ಹೆಣ್ಣುಮಗಳು, ಮೃದುಭಾವದ ಗೌರಿ, ಮಹಿಷಾಸುರನನ್ನು ಮರ್ಧನ ಮಾಡಲು ತಾಯಿಯು ಚಾಮುಂಡೇಶ್ವರಿಯ  ಅವತಾರ ಎತ್ತುತ್ತಾಳೆ. ಮಹಿಷನನ್ನು ಕೊಂದ ತಾಯಿಯನ್ನು ಇದೇ ಕಾರಣಕ್ಕೆ ಮಹಿಷಾಸುರ ಮರ್ದಿನಿ ಎಂದು ಕರೆಯಲಾಗುತ್ತದೆ.

ಈ ಒಂಭತ್ತು ರಾತ್ರಿಗಳು ತಾಯಿಯ ಒಂಬತ್ತು ಅವತಾರಗಳ ಬಿಂಬವಾಗಿವೆ. ತಾಯಿಯನ್ನು ನವದುರ್ಗೆ ಎಂದೂ ಕರೆಯಲಾಗುವುದು. ದೇವಿಯು ಒಂಬತ್ತು ಅವತಾರ ಎತ್ತಿ ದುಷ್ಟ ಶಕ್ತಿಯ ಸಂಹಾರ ಮಾಡುವುದೇ ಈ ಹಬ್ಬದ ವಿಶೇಷ. ಹಾಗೇ ನವ ಎಂದರೆ ಹೊಸದು ಎಂದೂ ಅರ್ಥ. ದೇವಿ ಪ್ರತಿಸಲ ದುಷ್ಟರನ್ನು ನಾಶ ಮಾಡುವುದಕ್ಕೂ ಹೊಸ ಹೊಸದಾಗಿ ಅವತಾರ ಎತ್ತುತ್ತಲೇ ಇರುತ್ತಾಳೆ. ಕತೆಗಳ ಪ್ರಕಾರ ತಾಯಿಯು ಮಹಿಷಾಸುರನನ್ನು ಮರ್ದನ ಮಾಡಿ ವಿಜಯ ಸಾಧಿಸುವ ಹಬ್ಬವೇ ವಿಜಯ ದಶಮಿ. ಒಂಬತ್ತು ದಿನಗಳ ಕಾಲ ಯುದ್ಧ ಮಾಡುವ ತಾಯಿಯು ಕೊನೆಯ ದಿನದಂದು ಮಹಿಷನನ್ನು ವಧಿಸುತ್ತಾಳೆ.

ಸಿದ್ಧಿದಾತ್ರಿಯ ಮಹತ್ವ
ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ ಮತ್ತು ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ ಮತ್ತು ದಾತ್ರಿ ಎಂದರೆ ಕೊಡುವುದು. ಸಿದ್ಧಿದಾತ್ರಿಯ ಪೂಜೆಯಿಂದ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪುರಾಣದ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಆದಿ ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸಿದರೂ ಶಕ್ತಿ ದೇವತೆಯು ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಆಗಿನಿಂದ ಪರಶಿವನು ಅರ್ಧನಾರೀಶ್ವರ ಎನ್ನುವ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

ಈ 4 ರಾಶಿಯ ಹುಡುಗರು ಹುಡುಗಿಯರ ಡ್ರೀಮ್ ಬಾಯ್

ನವರಾತ್ರಿ 2023 ಸಿದ್ದಿದಾತ್ರಿ ದೇವಿ ಪೂಜೆ ಮುಹೂರ್ತ​

ಶಾರದೀಯ ನವರಾತ್ರಿಯ ಒಂಬತ್ತನೇ ದಿನದಂದು ಮಹಾ ನವಮಿ ಸಂಭವಿಸುತ್ತದೆ. ಈ ಉಪವಾಸವನ್ನು ಅಶ್ವಿನ್ ಶುಕ್ಲ ನವಮಿ ತಿಥಿಯಂದು ಆಚರಿಸಲಾಗುತ್ತದೆ. ವೈದಿಕ ಪಂಚಾಂಗದ ಆಧಾರದ ಮೇಲೆ, ಈ ವರ್ಷದ ಅಶ್ವಿನ್ ಶುಕ್ಲ ನವಮಿ ತಿಥಿಯು ಅಕ್ಟೋಬರ್ 22 ರ ಭಾನುವಾರದಂದು ಸಂಜೆ 07:58 ರಿಂದ ಪ್ರಾರಂಭವಾಗಿ ಅಕ್ಟೋಬರ್ 23 ರ ಸೋಮವಾರದಂದು ಸಂಜೆ 05:44 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯತಿಥಿಯ ಆಧಾರದ ಮೇಲೆ ಅಕ್ಟೋಬರ್ 23 ರಂದು ಮಹಾನವಮಿಯನ್ನು ಆಚರಿಸಲಾಗುತ್ತದೆ.

ಸಿದ್ಧಿದಾತ್ರಿ ಪೂಜಾ ಮಂತ್ರ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೇವ್ಯಾಮಾನಾ

ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ ||

ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

PREV
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!