ದಸರಾ ಹಾಗೂ ನವರಾತ್ರಿ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ದೇವಿಯ ಮೂರ್ತಿ ಪ್ರತಿಷ್ಟಾಪನೆ ನಡೆಯುತ್ತೆ. ಹಬ್ಬದ ಕೊನೆಯ ದಿನ ದೇವಿ ಮೂರ್ತಿಯನ್ನ ಪೂಜೆ ಬಳಿಕ ವಿಸರ್ಜನೆ ಮಾಡಲಾಗುತ್ತೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಆ.22): ದಸರಾ ಹಾಗೂ ನವರಾತ್ರಿ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ದೇವಿಯ ಮೂರ್ತಿ ಪ್ರತಿಷ್ಟಾಪನೆ ನಡೆಯುತ್ತೆ. ಹಬ್ಬದ ಕೊನೆಯ ದಿನ ದೇವಿ ಮೂರ್ತಿಯನ್ನ ಪೂಜೆ ಬಳಿಕ ವಿಸರ್ಜನೆ ಮಾಡಲಾಗುತ್ತೆ. ಬಳಿಕ ಮುಂದಿನ ನವರಾತ್ರಿಗೆ ಮತ್ತೆ ಹೊಸ ದೇವಿಯ ಮೂರ್ತಿಯನ್ನ ತಂದು ಪ್ರತಿಷ್ಟಾಪನೆ ಮಾಡೋದು ವಾಡಿಕೆ. ವಿಚಿತ್ರ ಎಂದರೆ, ಗುಮ್ಮಟನಗರಿ ವಿಜಯಪುರದಲ್ಲಿ ಯುವಕ ಮಂಡಳವೊಂದು ಅರ್ಧ ಶತಮಾನದಿಂದ ಒಂದೇ ಮೂರ್ತಿಯನ್ನ ಪ್ರತಿಷ್ಟಾಪಿಸುತ್ತ ಬಂದಿದೆ.. ದೇವಿ ಮೂರ್ತಿಯಲ್ಲಿ ಜೀವಂತಿಕೆ ಇದೆ ಎನ್ನುವ ಮಾತುಗಳು ಕೇಳಿ ಬರ್ತಿವೆ..
ಅರ್ಧಶತಮಾನ, ಒಂದೇ ದೇವಿ ಮೂರ್ತಿ ಪ್ರತಿಷ್ಟಾಪನೆ: ಯಸ್, ಇದು ಅಚ್ಚರಿಯಾದ್ರು ನಿಜ. ಗುಮ್ಮಟನಗರಿ ಖ್ಯಾತಿಯ ವಿಜಯಪುರ ನಗರದ ಮಠಪತಿ ಗಲ್ಲಿಯಲ್ಲಿ ಕಳೆದ ಅರ್ಧ ಶತಮಾನ ಅಂದ್ರೆ 52 ವರ್ಷಗಳಿಂದ ಒಂದೇ ದೇವಿಯ ಮೂರ್ತಿಯನ್ನ ಪ್ರತಿಷ್ಟಾಪನೆ ಮಾಡಲಾಗ್ತಿದೆ. ನವರಾತ್ರಿ ಹಿನ್ನೆಲೆ 9, 7, 5 ದಿನಗಳ ಕಾಲ ದುರ್ಗಾದೇವಿಯ ಪ್ರತಿಷ್ಟಾಪನೆ ನಡೆಯುತ್ತೆ. ದಸರಾ ಬಳಿಕ ಮೂರ್ತಿಯನ್ನ ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಗುತ್ತೆ. ಆದ್ರೆ ಮಠಪತಿ ಗಲ್ಲಿಯಲ್ಲಿ ಮಾತ್ರ ಆದಿಶಕ್ತಿ ತರುಣ ಮಂಡಳಿ ಕಳೆದ 52 ವರ್ಷಗಳಿಂದ ಒಂದೇ ದೇವಿಯ ಮೂರ್ತಿಯನ್ನ ಪ್ರತಿಷ್ಟಾಪನೆ ಮಾಡ್ತಿದೆ. ಪ್ರತಿವರ್ಷ ಹಬ್ಬದ ಬಳಿಕ ವಿಸರ್ಜನೆ ಮಾಡದೆ ಮೂರ್ತಿಯನ್ನ ಸುರಕ್ಷಿತವಾಗಿ ತೆಗೆದು ಇಡಲಾಗುತ್ತೆ. ಮತ್ತೆ ಮುಂದಿಮ ವರ್ಷ ನವರಾತ್ರಿಗೆ ಪ್ರತಿಷ್ಠಾಪಿಸಲಾಗುತ್ತೆ..
ಡಿಕೆಶಿ, ಭೈರತಿ, ಪಾಟೀಲ್ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ
1972 ರಲ್ಲಿ ರೆಡಿಯಾಗಿರುವ ದೇವಿ ಮೂರ್ತಿ: ನಿಂತ ಭಂಗಿಯಲ್ಲಿರುವ ಮಠಪತಿ ಗಲ್ಲಿಯ ದೇವಿಯ ಮೂರ್ತಿ ನೋಡಲು ಬಲು ಅಂದಚಂದವಾಗಿದೆ. ನೋಡ್ತಾ ಇದ್ರೆ ಭಕ್ತಿ ಕಳೆ ಉಕ್ಕಿ ಬರುತ್ತೆ. ಇಂಥ ಸುಂದರ ಮೂರ್ತಿಯನ್ನ 1972ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಗಣೇಶ ಆರ್ಟ್ಸ್‌ನಲ್ಲಿ ಕಲಾವಿದ ಗಣೇಶ ಅನ್ನೋರು ತಯಾರಿಸಿದ್ದರು. ಆಗ ತರುಣ ಮಂಡಳಿಯ ಮುಖಂಡರಾಗಿದ್ದ ಎಲ್ ಆರ್ ಜಾಧವ, ಲಕ್ಷ್ಮಣ ಸಜ್ಜನ್, ಪಾರಸ್ ಕೇಶಿ, ಸಿದ್ದಪ್ಪ ಆಳಗುಂಡಿ ಸ್ಥಾಪಿದ್ದರು. ಅಂದು ಮೂರ್ತಿ ಸ್ಥಾಪನೆ ಮಾಡಿದವರಲ್ಲಿ ಇಂದು ಯಾರೊಬ್ಬರು ಜೀವಂತವಾಗಿಲ್ಲ, ಅತ್ತ ಮೂರ್ತಿ ತಯಾರಿಸಿದ ಕಲಾವಿದನು ಇಂದು ಜೀವಂತವಾಗಿಲ್ಲ.
ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಚಿವ ಗಡ್ಕರಿಗೆ ಮನವಿ: ಸಂಸದ ಪ್ರಜ್ವಲ್ ರೇವಣ್ಣ
ಮೂರ್ತಿ ಸ್ಥಾಪನೆ ಹಿಂದೆ ಅಡಗಿದೆ ವಿಸ್ಮಯಕಾರಿ ಸಂಗತಿ: ಇನ್ನೂ ಪ್ರತಿವರ್ಷ ವಿಸರ್ಜನೆಯಾಗಬೇಕಿದ್ದ ಮೂರ್ತಿಯನ್ನ ಯಾಕೆ ಅರ್ಧ ಶತಮಾನದಿಂದಲು ಪ್ರತಿಷ್ಟಾಪಿಸುತ್ತ ಬರಲಾಗ್ತಿದೆ ಎನ್ನುವ ಪ್ರಶ್ನೆಗೆ ಇಲ್ಲಿ ವಿಸ್ಮಯಕಾರಿ ಉತ್ತರ ಸಿಗುತ್ತೆ. ಸ್ಥಳೀಯರು, ಇಲ್ಲಿಗೆ ಬರುವ ಭಕ್ತರೆ ಹೇಳುವಂತೆ ಮೂರ್ತಿ ಪ್ರತಿಷ್ಟಾಪನೆ ಬಳಿಕ ಇಂಥದ್ದೆ ಇನ್ನೊಂದು ಮೂರ್ತಿ ತಯಾರಿಸೋಕೆ ಮಹಾರಾಷ್ಟ್ರದ ಕೊಲ್ಲಾಪುರ ಕಲಾವಿದ ಗಣೇಶಗೆ ಹೇಳಲಾಗಿತ್ತಂತೆ, ಆಗ ಎಷ್ಟೇ ಪ್ರಯತ್ನ ಮಾಡಿದ್ರು ಮತ್ತೊಂದು ಇದೆ ಮೂರ್ತಿ ತಯಾರಿಸಲು ಸಾಧ್ಯವಾಗಲೇ ಇಲ್ಲವಂತೆ. ಇನ್ನೂ ಅಂದು ಪ್ರತಿಷ್ಠಾಪನೆ ಮಾಡಲಾಗಿದ್ದ ಈ ಮೂರ್ತಿಯನ್ನ ವಿಸರ್ಜನೆ ಮಾಡದಂತೆ ಮಠಪತಿ ಗಲ್ಲಿಯ ಹೆಣ್ಣು ಮಕ್ಕಳು ಹಠ ಹಿಡಿದರಂತೆ. ಇನ್ನೂ ಮೂರ್ತಿ ಪ್ರತಿಷ್ಟಾಪನೆ ಮಾಡಿದ ವರ್ಷದಿಂದ ಗಲ್ಲಿಯ ಜನರಿಗೆ ಶುಭವಾಗುತ್ತಲೆ ಬಂದಿರೋದ್ರಿಂದ ಮೂರ್ತಿಯನ್ನ ಇಂದಿಗೂ ವಿಸರ್ಜಿಸದೆ ಪ್ರತಿವರ್ಷ ಪ್ರತಿಷ್ಟಾಪನೆ ಮಾಡಲಾಗ್ತಿದೆ.