ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ,ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಲಲಿತಾ ಮೂಲಮಂತ್ರ ಹೋಮ ನಡೆಯಿತು.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಅ.19): ಜಿಲ್ಲೆಯ ಶೃಂಗೇರಿ, ಹೊರನಾಡಿನ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದೆ. ಶೃಂಗೇರಿ, ಹೊರನಾಡಿನ ದೇವಿ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬಂದಿದೆ. ನವರಾತ್ರಿಯ 5ನೇ ದಿನವಾದ ಇಂದು ಶೃಂಗೇರಿ ಶಾರದೆ ಮಹಾವಿಷ್ಣುವಿನ ಅಲಂಕಾರದಲ್ಲಿ ದರ್ಶನ ನೀಡಿದ್ರೆ, ಅನ್ನಪೂಣೇಶ್ವರಿಗೆ ಮಕರಾರೂಢ ಸ್ಕಂದಮಾತೆ ಅವತಾರಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಳು.
undefined
ಶೃಂಗೇರಿ ಶಾರದೆಗೆ ಮಹಾವಿಷ್ಣುವಿನ ಅಲಂಕಾರ :
ವಿದ್ಯಾಧಿದೇವತೆ ಶೃಂಗೇರಿ ಶಾರದಾಂಭೆ ನವರಾತ್ರಿಯ ಐದನೇ ದಿನವಾದ ಇಂದು ಕೈಯಲ್ಲಿ ಶಂಖ, ಚಕ್ರ ಗದೆ ಹಿಡಿದು ಗರುಡನನ್ನು ಆರೋಹಿಸಿ ಮಹಾವಿಷ್ಣುವಿನ ಶಕ್ತಿಯಾದ ರೂಪಗೈದು ಭಕ್ತರಿಗೆ ದರ್ಶನ ನೀಡಿದ್ದಳು. ಅನುಗ್ರಹಿಸಿಳು.ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾದಿಗಳು ಭಾಗವಹಿಸಿದರು.ನವರಾತ್ರಿ ಹಿನ್ನಲೆಯಲ್ಲಿ ಶ್ರೀ ಮಠದಲ್ಲಿ ಪ್ರತಿದಿನದಂತೆ ಇಂದು ಕೂಡ ಪಾರಾಯಣ,ಕುಂಕುಮಾರ್ಚನೆ ಪೂಜೆಗಳು ನೆರವೇರಿದವು.ಬೀದಿ ಉತ್ಸವದ ಜೊತೆಗೆ ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ರಥೋತ್ಸವ ನಡೆಯುಲಿದೆ.ನವರಾತ್ರಿಯ ಅಂಗವಾಗಿ ಶೃಂಗೇರಿ ಶಾರದಾಂಭೆ ದೇಗುಲದ ಒಳಭಾಗ, ಹೊರಭಾಗದಲ್ಲಿ ಹೂವಿನ ಅಲಂಕಾರ ಭಕ್ತರನ್ನು ಆಕರ್ಷಣೆ ಮಾಡುತ್ತಿದೆ.
ಮೈಸೂರು ಬಳಿಕ ಕಾಫಿನಾಡಲ್ಲಿ ಮಹಿಷಾ ದಸರಾ: ಇಲ್ಲಿಗೂ ಬರ್ತಾನಾ ಮುಖ್ಯ ಅತಿಥಿಯಾಗಿ ಭಗವಾನ್?
ಹೊರನಾಡಿನಲ್ಲಿ ಲಲಿತಾ ಮೂಲಮಂತ್ರ ಹೋಮ :
ನವರಾತ್ರಿಯ ಐದನೇ ದಿನವಾದ ಇಂದು (ಗುರುವಾರ) ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿ ದುರ್ಗೆಯ ಮಕರರೂಢಾ ಸ್ಕಂದಮಾತಾ ಅಲಂಕಾರದೊಂದಿಗೆ ಕಂಗೊಳಿಸಿದಳು.ವಿವಿಧ ಹೂಗಳ ಅಲಂಕಾರ ಆಭರಣಗಳಿಂದ ಕಂಗೊಳಿಸಿದ ಅನ್ನಪೂರ್ಣೇಶ್ವರಿಯನ್ನು ಕಣ್ತುಂಬಿಸಲು ರಾಜ್ಯ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಬಂದು ಕಣ್ತುಂಬಿಸಿಕೊಂಡರು.ಕಷ್ಟ ಕಾಲಕ್ಕೆ ಹೇಳಿಕೊಂಡಿದ ಹರಕೆಗಳನ್ನು ಭಕ್ತರು ತೀರಿಸಿಕೊಂಡರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ,ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಲಲಿತಾ ಮೂಲಮಂತ್ರ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ವಿದುಷಿ ಲಲಿತ.ಆರ್ ಮತ್ತು ತಂಡ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಸಂಜೆ ವಿದ್ವಾನ್ ಆರ್.ಪಿ.ಪ್ರಶಾಂತ್ ಮತ್ತು ತಂಡ ಬೆಂಗಳೂರು ಇವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 20 ರಂದು ನಾಳೆ ಮಯೂರಾರೂಢಾ ಕಾತ್ಯಾಯಿನೀ ಅಲಂಕಾರ ಪೂಜೆ, ಶ್ರೀ ಸರಸ್ವತಿ ಮೂಲಮಂತ್ರ ಹೋಮ ಮತ್ತು ಶಾರದಾ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸ್ಯಾಕ್ಸೋಫೋನ್ ವಾದನ ಮತ್ತು ಸಂಜೆ ಯಕ್ಷಗಾನ ನಡೆಯಲಿದೆ.