ಬಾಬಾ ವಂಗಾ-ನಾಸ್ಟ್ರಡಾಮಸ್ ನುಡಿದ 2025ರ ಸ್ಫೋಟಕ ಭವಿಷ್ಯ, ಹೊಸ ವರ್ಷದಲ್ಲಿ ಏನೆಲ್ಲಾ ಕಾದಿದೆ?

By Chethan Kumar  |  First Published Dec 31, 2024, 7:31 PM IST

ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ 2025 ವರ್ಷದಲ್ಲಿ ನಡೆಯುವ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಇಬ್ಬರ ಭವಿಷ್ಯವೂ ಬಹುತೇಕ ಒಂದೇ ರೀತಿ ಇದೆ. ಇಷ್ಟೇ ಅಲ್ಲ ಇಬ್ಬರೂ ನೀಡಿರುವ ಎಚ್ಚರಿಕೆ ಸದ್ಯ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಹೊಸ ವರ್ಷದಲ್ಲಿ ಕೆಲ ಆಪತ್ತುಗಳು ಕಾದಿದೆಯಾ ಅನ್ನೋ ಆತಂಕ ಸೃಷ್ಟಿಸುತ್ತಿದೆ.
 


ಹೊಸ ವರ್ಷದಲ್ಲಿ ಹೊಸ ಹುರುಪು, ಹೊಸ ನಿರ್ಣಯ ಸೇರಿದಂತೆ ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಹೊಸತನ ತರಲು, ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಕೆಲ ಕನಸುಗಳನ್ನು ಬೆನ್ನಟ್ಟಲು ಗಟ್ಟಿ ನಿರ್ಧಾರ ಮಾಡುತ್ತಾರೆ. 2025ರ ಹೊಸ ವರ್ಷ ಯಶಸ್ಸು ತರಲಿ ಅನ್ನೋದು ಎಲ್ಲರ ಪ್ರಾರ್ಥನೆ. ಆದರೆ ಹೊಸ ವರ್ಷದಲ್ಲಿನ ಸವಾಲುಗಳು, ಪ್ರಮುಖ ಘಟನೆಗಳ ಕುರಿತು ಖ್ಯಾತ ಭವಿಷ್ಯಕಾರರಾದ ನಾಸ್ಟ್ರಡಾಮಸ್ ಹಾಗೂ ಬಾಬಾ ವಂಗಾ ಕೆಲ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಇಬ್ಬರು ನುಡಿದಿರುವ ಭವಿಷ್ಯ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಇಬ್ಬರು 2025ರ ಸಾಲಿನಲ್ಲಿ ಎದುರಾಗುವ ಆಪತ್ತು, ಯುದ್ಧ, ಪ್ರವಾಹ ಸೇರಿದಂತೆ ಹಲವು ಸಂಘರ್ಷಗಳ ಕುರಿತು ಮಾಹಿತಿ ನೀಡಿದ್ದಾರೆ.

16ನೇ ಶತಮಾನದ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡಾಮಸ್ 2025ನೇ ವರ್ಷದ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಆರ್ಥಿಕ ಸಂಕಷ್ಟ, ಹವಾಮಾನ ಬದಲಾವಣೆಯಿಂದಾಗುವ ಪ್ರಾಕೃತಿಕ ವಿಕೋಪ, ಯುದ್ಧ ಸಂಘರ್ಷ ಸೇರಿದಂತೆ ಕೆಲ ಘಟನೆಗಳ ಭವಿಷ್ಯ ನುಡಿದಿದ್ದಾರೆ.

Tap to resize

Latest Videos

2025ರಲ್ಲಿ ನಿಮ್ಮ ಪ್ರೀತಿ ಪ್ರೇಮ ಪ್ರಣಯ ಹೀಗಿರುತ್ತೆ! ನಿಮ್ಮ ರಾಶಿಯ ಲವ್‌ ಜಾತಕ ಇಲ್ಲಿ ನೋಡಿ

ಹಣದುಬ್ಬರ ಸಮಸ್ಯೆಗಳು 2025ರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದಿದ್ದಾರೆ. ಇದರಿಂದ ಜಗತ್ತಿನ ಹಲವು ಭಾಗದಲ್ಲಿ ಗೋಧಿ ಬೆಲೆ ಹೆಚ್ಚಾಗಲಿದೆ. ಇದರಿಂದ ಕಿತ್ತಾಟ, ಬಡಿದಾಟಗಳು ನಡೆಯಲಿದೆ ಎಂದಿದ್ದಾರೆ. ಜೀವನ ನಿರ್ವಹಣೆ ಕಷ್ಟವಾಗಲಿದೆ. ದುಬಾರಿ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಕೆಗಳು ಎಲ್ಲರ ಮೇಲೂ ಪರಿಣಾಮ ಬೀರಲಿದೆ ಎಂದು ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದಾರೆ.  ಹವಾಮಾನ ಬದಲಾವಣೆ ಸಂಕಷ್ಟ 2025ರಲ್ಲಿ ಮತ್ತಷ್ಟು ತೀವ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ. ಪ್ರವಾಹ, ಕಾಡ್ಗಿಚ್ಚು, ದೈತ್ಯ ಅಲೆಗಳಿಂದ ಕಡಲ ತೀರದಲ್ಲಿನ ನಾಶ, ಅತೀಯಾದ ಮಳೆ, ಅತೀಯಾದ ಬಿಸಿಲು ಸೇರಿದಂತೆ ಹಲವು ವೈಪರಿತ್ಯಗಳು ಮುನುಷ್ಯ ಹಾಗೂ ಪ್ರಾಣಿ ಸಂಕುಲದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಯುದ್ಧ ಸಂಘರ್ಷ ಹೆಚ್ಚಾಗಲಿದೆ. ಅಮೆರಿಕ ಹಾಗೂ ಚೀನಾ ನಡುವೆ ದೊಡ್ಡಣ್ಣ ಸ್ಥಾನಕ್ಕಾಗಿ ಹೊಡೆದಾಟ ನಡೆಯಲಿದೆ. ಹಲವು ದೇಶಗಳ ನಡುವೆ ರಾಜತಾಂತ್ರಿಕ ಅಡತಡೆ, ಸಂಘರ್ಷದ ವಾತಾವರಣ ನಿರ್ಮಾಣವಾಗಲಿದೆ ಎಂದು ನಾಸ್ಟ್ರಡಾಮಸ್ 2025ರ ಭವಿಷ್ಯ ನುಡಿದಿದ್ದಾರೆ. ರಾಜಕುಟುಂಬದಲ್ಲಿನ ಬದಾವಣೆ, ಹೊಸ ಪೋಪ್ ಆಗಮನ ಸೇರಿದಂತೆ ಪ್ರಮುಖ ವಿಚಾರಗಳ ಭವಿಷ್ಯ ನುಡಿದಿದ್ದಾರೆ.

ಇತ್ತ ಬಲ್ಗೇರಿಯಾದ ಬಾಬಾ ವಂಗಾ 1996ರಲ್ಲಿ ನಿಧನರಾಗಿದ್ದಾರೆ. ಆದರೆ ಬಾಬಾ ವಂಗಾ ನುಡಿದಿರುವ ಭವಿಷ್ಯ ಹಾಗೂ ನಿಖರತೆ ಹಲವರನ್ನು ಅಚ್ಚರಿಪಡಿಸಿದೆ. ಯೂರೋಪ್‌ನಲ್ಲಿ ಆತಂರಿಕ ಯುದ್ಧ ಸಂಘರ್ಷಗಳು ಹೆಚ್ಚಾಗಲಿದೆ. ಇದು ಜನಸಂಖ್ಯೆ ಮೇಲೂ ಪರಿಣಾಮ ಬೀರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ಜಗತ್ತಿನ ದಿಕ್ಕನ್ನೇ ಬದಲಿಸಲಿದೆ ಎಂದಿದ್ದಾರೆ. ಮಾನವೀಯತೆಗಳು ಅಂತ್ಯಗೊಳ್ಳಲಿದೆ. ಹವಾಮಾನ ಬದಲಾವಣೆ, ಭೂಕಂಪ, ಜ್ವಾಲಾಮುಖಿಗಳಿಂದ ನಾಶ ಸಂಭವಿಸಲಿದೆ  ಎಂದು ಬಾಬಾ ವಾಂಗ ಭವಿಷ್ಯ ಹೇಳುತ್ತಿದೆ.

ಹೊಸ ವರ್ಷ 2025 ರ ಭವಿಷ್ಯ , 12 ರಾಶಿಗಳ ವರ್ಷ ಭವಿಷ್ಯ ಹೇಗಿರಲಿದೆ ?
 

click me!