ನಂದಳಿಕೆ ಸಿರಿ ಜಾತ್ರೆ ಪ್ರಚಾರ; ಪಕ್ಷಿ ಪ್ರೇಮ ಮೆರೆದ ಅಭಿಯಾನ

By Reshma Rao  |  First Published Mar 27, 2023, 3:00 PM IST

ನಂದಳಿಕೆ ಸಿರಿ ಜಾತ್ರೆ ಪ್ರಚಾರಕ್ಕೆ ವಿಶಿಷ್ಟ ಅಭಿಯಾನ
ನಂದಳಿಕೆ ಶ್ರೀ ಮಹಾಲಿಂಗೇಶ್ವರ ಜಾತ್ರೆ
ಮರದ ಬಾಕ್ಸ್ ಮೇಲೆ ಮಣ್ಣಿನ ತಟ್ಟೆ


ಶಶಿಧರ್ ಮಾಸ್ತಿಬೈಲು, ಉಡುಪಿ

ಜಾಹೀರಾತು ಪ್ರಪಂಚ ಯೋಚನೆಗೆ ನಿಲುಕದಂತೆ ಬೆಳೆದುಬಿಟ್ಟಿದೆ‌. ಜಾಹಿರಾತು ಬಹಳ ಕ್ರಿಯಾತ್ಮಕ ಕ್ಷೇತ್ರ. ಉಡುಪಿ ಜಿಲ್ಲೆಯ ದೇವಸ್ಥಾನವೊಂದು ತನ್ನ ಜಾತ್ರೆ ಪ್ರಚಾರವನ್ನು ವಿಭಿನ್ನವಾಗಿ ಮತ್ತು ಪರಿಸರ ಪೂರಕವಾಗಿ ಮಾಡಿ ಗಮನ ಸೆಳೆಯುತ್ತಿದೆ.

Tap to resize

Latest Videos

undefined

ಉಡುಪಿಯ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಈ ಪ್ರಯತ್ನಕ್ಕೆ ಕೈ ಹಾಕಿದೆ. ಪ್ರತಿವ ರ್ಷ ಇಲ್ಲಿ ಆಯನ- ಸಿರಿಜಾತ್ರೆ, ರಾಶಿ ಪೂಜೆ ನಡೆಯುತ್ತದೆ. ಲಕ್ಷಾಂತರ ಭಕ್ತರು 4-5 ಜಿಲ್ಲೆಗಳಿಂದ ಇಲ್ಲಿಗೆ ಬರುತ್ತಾರೆ. ಅತಿ ದೊಡ್ಡ ಜಾತ್ರಾ ಕಾರ್ಯಕ್ರಮವನ್ನು ಬಹಳ ವಿಭಿನ್ನವಾಗಿ ಕಳೆದ ಆರೇಳು ವರ್ಷಗಳಿಂದ ಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯದ್ದು ಕೂಡ ಬಹಳ ವಿಭಿನ್ನ ರೀತಿಯ ಪ್ರಚಾರ.

ದಪ್ಪ ರಟ್ಟಿನ ಬಾಕ್ಸ್.. ಬಾಕ್ಸ್ ನಲ್ಲಿ ನಂದಳಿಕೆ ಜಾತ್ರಾ ಮಹೋತ್ಸವದ ಮಾಹಿತಿ. ಅದರ ಮೇಲೊಂದು ಮಣ್ಣಿನ ತಟ್ಟೆ.. ತಟ್ಟೆ ತುಂಬ ನೀರು. ಇದು ನಂದಳಿಕೆ ಜಾತ್ರಾ ಮಹೋತ್ಸವದ ಪ್ರಚಾರದ ಶೈಲಿ. 

Ram Navami 2023: ರಾಮಾಯಣ ಕಪೋಲಕಲ್ಪಿತವೇ? ರಾಮ ನಿಜವಾಗಿಯೂ ಇದ್ದನೇ?

ಈ ಹಿಂದೆ ಮೈಲಿಗಲ್ಲು ಮಾದರಿ, ಗೋಣಿಚೀಲ, ಬಣ್ಣದ ಕೊಡೆಯಲ್ಲಿ ಆಮಂತ್ರಣ ಬರೆದು ವಿಭಿನ್ನ ರೀತಿಯಲ್ಲಿ ಪ್ರಚಾರವನ್ನು ಮಾಡಲಾಗಿತ್ತು. ಪ್ರತಿ ಬಾರಿ ಪ್ರಚಾರದ ರೀತಿ ದೊಡ್ಡ ಜನಮನ್ನಣೆ ಪಡೆಯುತ್ತದೆ. ಈ ಬಾರಿ ಕೇವಲ ಪ್ರಚಾರಕ್ಕೆ ಒತ್ತು ಕೊಡದೆ ಪಕ್ಷಿ ಕಳಕಳಿಯನ್ನು ಕೂಡ ಮೆರೆಯಲಾಗಿದೆ. ಜಾತ್ರೆ ಮುಗಿದ ನಂತರ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿ ಹಕ್ಕಿಗಳಿಗಾಗಿ ನೀರು ಇಡುವ ಕಾನ್ಸೆಪ್ಟನ್ನು ಸ್ಥಳೀಯ ಅಂಗಡಿ ಮಾಲೀಕರಿಗೆ, ಮನೆಯವರಿಗೆ ಮನವರಿಕೆ ಮಾಡಲಾಗುತ್ತಿದೆ.

1200 ಕಡೆಗಳಲ್ಲಿ ಈ ತರದ ಮಣ್ಣಿನ ತಟ್ಟೆಯಲ್ಲಿ ಹಕ್ಕಿಗಳಿಗಾಗಿ ನೀರಿಡಲಾಗುತ್ತಿದೆ. ಪ್ರಚಾರದ ಜೊತೆ ಪಕ್ಷಿ ಪ್ರೇಮ ಎಲ್ಲರಿಂದ ಪ್ರಶಂಸೆಗೆ ಕಾರಣವಾಗಿದೆ. ಬಿರು ಬಿಸಿಲು ಹೆಚ್ಚಾಗಿದ್ದು ತಾಪಮಾನ ವಿಪರೀತವಾಗಿದ್ದು ಪಕ್ಷಿಗಳ ರಕ್ಷಣೆಗೆ ನಾವು ನೀರುಣಿಸೋದು ಅತಿ ಅವಶ್ಯಕ.

click me!