ಸೋಮವಾರ ಹುಟ್ಟಿದ ನಿಮ್ಮ ಮಗುವಿಗಿಡಿ ಭಗವಾನ್ ಶಿವನ ಅಪರೂಪದ ಹೆಸರು

By Suvarna News  |  First Published Mar 20, 2023, 3:28 PM IST

ಶಿವ ಪುರಾಣದ ಪ್ರಕಾರ, ಶಿವನನ್ನು 1008ಕ್ಕೂ ಹೆಚ್ಚು ಹೆಸರುಗಳಿಂದ ಕರೆಯಲಾಗುತ್ತದೆ. ಶಿವನ ಆರಾಧನೆಗೆ ಸೋಮವಾರ ವಿಶೇಷವಾಗಿದೆ. ಈ ದಿನ ಜನಿಸಿದ ಗಂಡು ಮಗುವಿಗೆ ಶಿವನ ಸಾವಿರಾರು ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಾಗಿದೆ.


ಅತ್ಯಂತ ಪ್ರೀತಿಯ ಮತ್ತು ಪೂಜಿಸುವ ಹಿಂದೂ ದೇವರುಗಳಲ್ಲಿ ಒಬ್ಬ ಶಿವ. ಹಿಂದೂ ಪುರಾಣಗಳ ಪ್ರಕಾರ, ಅವನು ದುಷ್ಟ ನಾಶಕ, ಶಿಷ್ಟರಕ್ಷಕ, ಶಕ್ತಿಶಾಲಿ, ಮೊಂಡನಾದರೂ ಛಲವಂತ. ಭಗವಾನ್ ಶಿವನನ್ನು ದೇಶದ ವಿವಿಧ ಭಾಗಗಳಲ್ಲಿ ನೂರಾರು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ ಮತ್ತು ಪ್ರತಿ ವರ್ಷ ಅನೇಕ ಮಕ್ಕಳಿಗೆ ಅವನ ಹೆಸರನ್ನು ಇಡಲಾಗುತ್ತದೆ. ಅದರಲ್ಲೂ ಸೋಮವಾರ ಜನಿಸಿದ ಗಂಡು ಮಕ್ಕಳಿಗೆ ಶಿವನ ಹೆಸರಿಡುವುದು ಸೂಕ್ತವಾಗಿದೆ. ಏಕೆಂದರೆ, ಸೋಮವಾರವು ಶಿವನಿಗೆ ಮೀಸಲಾಗಿದೆ. ಅಲ್ಲದೆ, ಮಗುವಿನ ವ್ಯಕ್ತಿತ್ವದ ಮೇಲೆ ಹೆಸರು ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಲೆತಲಾಂತರದಿಂದಲೂ ಹೇಳಲಾಗುತ್ತಿದೆ. ಹೆಸರಿನಿಂತೆಯೇ ವ್ಯಕ್ತಿತ್ವ ಬೆಳಗುತ್ತದೆ ಎನ್ನಲಾಗುತ್ತದೆ. ಅಂದ ಮೇಲೆ, ಈ ವಿಶ್ವದಲ್ಲಿ ಭವ್ಯ, ಸೃಷ್ಟಿಕರ್ತ ಮತ್ತು ಪರಮಶ್ರೇಷ್ಠನಾದ ಭಗವಾನ್ ಶಿವನ ಹೆಸರಿಗಿಂತ ಉತ್ತಮವಾದ ಆಯ್ಕೆ ಯಾವುದಿದೆ?

ಶಿವ ಪುರಾಣದ ಪ್ರಕಾರ, ಶಿವನನ್ನು 1008ಕ್ಕೂ ಹೆಚ್ಚು ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತದಲ್ಲಿರುವ ಈ ಎಲ್ಲಾ ಹೆಸರುಗಳು ಶಿವನ ಕೆಲವು ಲಕ್ಷಣಗಳನ್ನು ಚಿತ್ರಿಸುತ್ತವೆ. ಭಗವಂತನ ಸದ್ಗುಣಗಳನ್ನು ವಿವರಿಸುವ ಕೆಲವು ಅತ್ಯುತ್ತಮ ಶಿವನ ಹೆಸರುಗಳನ್ನು ನಾವು ಹಂಚಿಕೊಳ್ಳುತ್ತೇವೆ. ಆದ್ದರಿಂದ, ನೀವು ನಿಮ್ಮ ಮಗುವಿಗೆ ಶಿವನ ಹೆಸರನ್ನು ಹುಡುಕುತ್ತಿದ್ದರೆ, ಆಯ್ಕೆ ಮಾಡಲು ಇಲ್ಲಿವೆ ಶಿವನ ಹತ್ತು ಹಲವಾರು ಹೆಸರುಗಳು.

Tap to resize

Latest Videos

ಆಶುತೋಷ್: ನಿರಂತರವಾಗಿ ಸಂತೋಷದಿಂದ ಮತ್ತು ತೃಪ್ತಿಯಿಂದ ಇರುವವನು.
ಅಭಿಗಮ್ಯಃ: ಎಲ್ಲವನ್ನೂ ಸುಲಭವಾಗಿ ಸಾಧಿಸಬಲ್ಲವನು.
ಅಭಿರಾಮ: ವಾತ್ಸಲ್ಯಮಯಿ

Sunday born baby names: ಭಾನುವಾರ ಹುಟ್ಟಿದ ಮಗುವಿಗಿಡಿ ಸೂರ್ಯನ ಅಪರೂಪದ ಹೆಸರು

ಅಭಿವಾದ್ಯಃ: ಪ್ರತಿಯೊಬ್ಬರಿಂದ ಪೂಜ್ಯ ಮತ್ತು ಗೌರವಾನ್ವಿತ ಸ್ಥಾನ ಪಡೆವವನು
ಅಮರ್ತ್ಯ: ಆಕ್ರಮಣ ಮಾಡಲಾಗದವನು; ಅನಂತ ಜೀವನ ಮತ್ತು ಅಮರತ್ವದಿಂದ ಆಶೀರ್ವದಿಸಲ್ಪಟ್ಟವನು.
ಆಯುಧಿ: ತ್ರಿಶೂಲವನ್ನು ತನ್ನ ಮುಖ್ಯ ಆಯುಧವಾಗಿ ಹಿಡಿದಿರುವ ಭಗವಂತ
ಓಂಕಾರ: ಓಂ ಎಂಬುದು ಭೂಮಿಯನ್ನು ಸೃಷ್ಟಿಸಿದ ಮೂಲ ಶಬ್ದವಾಗಿದೆ. ಇದು ವಿಸ್ತರಣೆ ಮತ್ತು ಅನಾವರಣವನ್ನು ಸಂಕೇತಿಸುತ್ತದೆ.
ಪುಷ್ಕರ: ನೀಲಿ ಬಣ್ಣದವನು, ಪೋಷಣೆಯನ್ನು ಒದಗಿಸುವ ವ್ಯಕ್ತಿ.
ಅಕ್ಷತ್: ಅಕ್ಷತ್ ಎಂದರೆ ‘ಮುರಿಯಲಾಗದವನು.’ ಇದು ಅಜೇಯ ಎಂದು ಕರೆಯಲ್ಪಡುವ ಶಿವನ ಹೆಸರೂ ಆಗಿದೆ.
ಅಲೋಕ್: ಅಲೋಕ್ ಎಂದರೆ 'ಪ್ರಕಾಶಮಾನ,' ಅಥವಾ 'ಬೆಳಕು.' ಇದು ಶಿವನ ಅನೇಕ ಹೆಸರುಗಳಲ್ಲಿ ಒಂದಾಗಿದೆ.
ಅಶುತೋಷ್: ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ಶಿವನು ಇಷ್ಟಾರ್ಥಗಳನ್ನು ತಕ್ಷಣವೇ ಪೂರೈಸುವ ದೇವರು. ಅದಕ್ಕಾಗಿಯೇ ಅವನ ಭಕ್ತರು ಅವನನ್ನು ಅಶುತೋಷ್ ಎಂಬ ಹೆಸರಿನಿಂದ ಕರೆಯುತ್ತಾರೆ, ಇದರಲ್ಲಿ 'ಅಶು' ಎಂದರೆ ತ್ವರಿತ/ಸುಲಭ ಮತ್ತು 'ತೋಷ್' ಎಂದರೆ ತೃಪ್ತಿ.
ಚಾರುವಿಕ್ರಮ: ಚಾರುವಿಕ್ರಮ ಎಂದರೆ ‘ಅಲೆದಾಡುವ ಯಾತ್ರಾರ್ಥಿಗಳ ಕಾವಲುಗಾರ.’ ದಂತಕಥೆಯ ಪ್ರಕಾರ, ಶಿವನು ತನ್ನ ದೇವಾಲಯಗಳಿಗೆ ಭೇಟಿ ನೀಡುವ ಯಾತ್ರಿಕರನ್ನು ರಕ್ಷಿಸುತ್ತಾನೆ, ಆದ್ದರಿಂದ ಅವನನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

Hindu Baby Boy Names: ಬುಧವಾರ ಹುಟ್ಟಿದ ಗಂಡು ಮಗುವಿಗಿಡಿ ಗಣೇಶನ ವಿಶೇಷ ಹೆಸರು

ಇಶಾನ್: ನೀವು ಆಧುನಿಕ ಮತ್ತು ಸೊಗಸಾದ ಭಗವಾನ್ ಶಿವನ ಹೆಸರನ್ನು ಹುಡುಕುತ್ತಿದ್ದರೆ, ಇಶಾನ್ ಇಡಬಹುದು, ಅಂದರೆ 'ಆಡಳಿತಗಾರ.'
ಸುಖದಾ: ಪ್ರತಿಯೊಬ್ಬ ಪೋಷಕರು ತಮ್ಮ ಮಗು ತಮ್ಮ ಜೀವನವನ್ನು ಅತ್ಯಂತ ಸಂತೋಷದಿಂದ ಬದುಕಬೇಕೆಂದು ಬಯಸುತ್ತಾರೆ. ಸುಖದ ಅಂದರೆ ‘ಸಂತೋಷವನ್ನು ದಯ ಪಾಲಿಸುವವನು’. ಮಗು ಪೋಷಕರಿಗೆ ಸಂತೋಷ ದಯ ಪಾಲಿಸುತ್ತದೆ. ಹಾಗೆಯೇ, ಮಗುವೂ ಸಂತೋಷವಾಗಿರಲೆಂದು ಈ ಹೆಸರು ಇಡಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!