ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ: ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ

By Govindaraj SFirst Published Oct 5, 2022, 7:21 AM IST
Highlights

ಐತಿಹಾಸಿಕ 413ನೇ ದಸರಾ ಮಹೋತ್ಸವವು ನಂದಿಪೂಜೆಯೊಂದಿಗೆ ವಿಜಯ ದಶಮಿ ಮೆರವಣಿಗೆಗೆ ಮುನ್ನುಡಿಯಾಗಲಿದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತವಾಗಲಿದ್ದು, ಆದರೆ ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆಯಾಗಲಿದೆ. 

ಮೈಸೂರು (ಅ.05): ಐತಿಹಾಸಿಕ 413ನೇ ದಸರಾ ಮಹೋತ್ಸವವು ನಂದಿಪೂಜೆಯೊಂದಿಗೆ ವಿಜಯ ದಶಮಿ ಮೆರವಣಿಗೆಗೆ ಮುನ್ನುಡಿಯಾಗಲಿದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತವಾಗಲಿದ್ದು, ಆದರೆ ಜಂಬೂ ಸವಾರಿಯಲ್ಲಿ ನಂದಿಗೆ ಅಗ್ರ ಪೂಜೆಯಾಗಲಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದು, ಗೌರಿಶಂಕರ ನಗರದ ನಂದಿ ಧ್ವಜ, ವೀರಗಾಸೆ ತಂಡದವರು ಭಾಗಿಯಾಗಲಿದ್ದಾರೆ. ಜೊತೆಗೆ ದಶಕಗಳಿಂದ ಉಡಿಗಾಲ ಮಹದೇವಸ್ವಾಮಿ ನೇತೃತ್ವದ ತಂಡವು ಭಾಗಿಯಾಗಲಿದೆ. 

ಈ ಪೂಜೆಯು ಶುಭ ಮಕರ ಲಗ್ನದಲ್ಲಿ ಮಧ್ಯಾಹ್ನ 2.36ರಿಂದ 2.50ರವರೆಗೆ ನಡೆಯಲಿದ್ದು, ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಇನ್ನು ನಂದಿ ಧ್ವಜದ ಹಿಂದೆ ನಿಶಾನೆ ಆನೆ, ಇನ್ನುಳಿದ ಕಲಾತಂಡಗಳು, ಸ್ತಬ್ಧಚಿತ್ರಗಳ ಪಯಣದಲ್ಲಿ ಭಾಗಿಯಾಗುತ್ತವೆ. ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ರಾಜವಂಶಸ್ಥರ ವಿಜಯದಶಮಿ ವಿಶಿಷ್ಟ ಕಾರ್ಯಕ್ರಮದ ಆಚರಣೆ ಸಂಪ್ರದಾಯದಂತೆ ಸಾಗುತ್ತಿದೆ. ಇಂದು ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವ  ಜಟ್ಟಿ ಕಾಳಗ ನಡೆಯಲಿದ್ದು, ಮೈಸೂರು ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಚಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಇನ್ನು ಈ ಕಾಳಗದಲ್ಲಿ ತಲೆಯಲ್ಲಿ ಸಾಂಕೇತಿಕವಾಗಿ ರಕ್ತ ಚಿಮ್ಮುವ ತನಕ ಜಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. 

Mysuru Dasara 2022: ಅದ್ದೂರಿ ದಸರಾ ಜಂಬೂಸವಾರಿಗೆ ಮೈಸೂರು ಸಜ್ಜು

ಈ ಕಾಳಗದಲ್ಲಿ ವಿಜೇತರಾದವರಿಗೆ ಯದುವೀರ್ ಭಕ್ಷಿಸ್ ನೀಡಲಿದ್ದು, ಅನಾದಿ ಕಾಲದಿಂದಲೂ ರಾಜ ಪರಂಪರೆ ಇದನ್ನು ನಡೆಸಿಕೊಂಡು ಬಂದಿದೆ. ಇನ್ನು ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ತೆರಳಲಿದ್ದಾರೆ. ಪಲ್ಲಕ್ಕಿಯಲ್ಲಿಯಲ್ಲಿ ಕತ್ತಿ ಇಟ್ಟು ಕಾರಿನಲ್ಲಿ ವಿಜಯ ಯಾತ್ರೆ ಸಾಗುವ ಯದುವೀರ್ ಭುವನೇಶ್ವರಿ ದೇವಸ್ಥಾನದ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅನಂತರ ಮೆರವಣಿಗೆಯಲ್ಲಿ ಅರಮನೆಗೆ ವಾಪಸ್ ಆಗಲಿದ್ದಾರೆ. ಈ ಮೂಲಕ ರಾಜಮನೆಯನದ ಸಾಂಪ್ರದಾಯಿಕ, ಧಾರ್ಮಿಕ ಕಾರ್ಯಕ್ರಮಗಳು ಸಮಾಪ್ತಿಯಾಗಲಿದ್ದು, ತರುವಾಯ ಕಂಕಣ ವಿಸರ್ಜನೆ ಮಾಡಲಿದ್ದಾರೆ. ಇನ್ನು ಅಂತಿಮವಾಗಿ ಮುಖ್ಯಮಂತ್ರಿಗಳ ಜೊತೆ ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಯದುವೀರ್ ಭಾಗಿಯಾಗಲಿದ್ದಾರೆ.

ಸದ್ಯ  ಅರಮನೆ ಅಂಗಳದಲ್ಲಿ 25 ಸಾವಿರಾರು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ, ಸಂಪುಟ ಸಚಿವರು, ಸ್ಪೀಕರ್, ಶಾಸಕರಿಗೆ ಸ್ಪೆಷಲ್ ಸೀಟ್ ಇದ್ದು, ಹೈಕೋರ್ಟ್, ಸುಪ್ರೀಕೋರ್ಟ್ ನ್ಯಾಯಮೂರ್ತಿಗಳಿಗೂ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತವು ಬೃಹತ್ ಶಾಮಿಯಾನ ಹಾಕಿದ್ದು, ಅರಮನೆ ಆಡಳಿತ ಮಂಡಳಿ ಆಸನದ ವ್ಯವಸ್ಥೆ ಕಲ್ಪಿಸಿದೆ. ಅರಮನೆಯಲ್ಲಿ ಕುಳಿತವರಿಗೆ ಜಂಬೂ ಸವಾರಿಯ ಆರಂಭಿಕ ದೃಶ್ಯ ನೋಡಲು ವ್ಯವಸ್ಥೆಯನ್ನು ಮಾಡಲಾಗಿದ್ದು, ರಾಜವಂಶಸ್ಥರು ವಿಜಯ ದಶಮಿ ನೋಡಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ದಸರಾ ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದ್ದು, ಜಿಲ್ಲಾವಾರು ಪಟ್ಟಿ ಈ ಕೆಳಕಂಡಂತಿದೆ.

1. ಬಾಗಲಕೋಟೆ- ಮುದೋಳ್‌ ಶ್ವಾನಗಳು, ಇಳಕಲ್‌ ಸೀರೆ
2. ಬಳ್ಳಾರಿ- ದುರ್ಗಮ್ಮ ದೇವಸ್ಥಾನ
3. ಬೆಳಗಾವ್- ಶ‍್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ
4. ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ
5. ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣಗುಡಿ
6. ಬೀದರ್‌- ಅನುಭವ ಮಂಟಪ
7. ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ
8. ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ
9. ಚಿಕ್ಕಮಗಳೂರು- ಸಪ್ತನದಿಗಳ ತವರು
10. ಚಿತ್ರದುರ್ಗ- ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ಥಂಭ
11. ದಕ್ಷಿಣ ಕನ್ನಡ- ಕಂಬಳ, ಹುಲಿವೇಷ, ಭೂತಕೋಲ
12. ದಾವಣಗೆರೆ- ಸಂತೆ ಬೆನ್ನೂರು, ಪುಷ್ಕರಣೆ
13. ಧಾರವಾಡ- ಸಂಗೀತ ದಿಗ್ಗಜರು
14. ಗದಗ- ಶ್ರೀಕ್ಷೇತ್ರ ಶ್ರೀಮಂತಗಢ, ಹೊಳಲಮ್ಮ ದೇವಿ, ಶಿವಾಜಿ
15. ಹಾಸನ- ಬೇಲೂರು, ಹಳೇಬೀಡ್, ಶ್ರವಣ ಬೆಳಗೊಳ ಗೊಮ್ಮಟಗಿರಿ
16. ಹಾವೇರಿ- ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕ್ತೇಶ್ವರ ದೇವಾಲಯ
17. ಕಲಬುರ್ಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ
18. ಕೊಡಗು- ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ
19. ಕೋಲಾರ- ಬಿ.ಕೆ.ಎಸ್‌ ಅಯ್ಯಂಗಾರ್‌ ಯೋಗಥಾನ್‌, ಅಂತರಗಂಗೆ ಬೆಟ್ಟ
20. ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
21. ಮಂಡ್ಯ- ಮಂಡ್ಯ ಜಿಲ್ಲೆಯ ದೇವಾಲಯಗಳು
22. ಮೈಸೂರು- ಮೈಸೂರು ಜಿಲ್ಲೆಯ ವಿಶೇಷತೆಗಳು
23. ರಾಜಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ
24. ರಾಮನಗರ- ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ
25. ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
26. ತುಮಕೂರು- ನಿಟ್ಟೂರಿನ ಎಚ್‌ಎಎಲ್‌ ತಯಾರಿಕಾ ಘಟಕ, ಪಾವಗಡದ ಬೃಹತ್‌ ಸೋಲಾರ್‌ ಪಾರ್ಕ್‌
27. ಉಡುಪಿ- ಜಿ.ಐ.ಟ್ಯಾಗ್‌ ಹೊಂದಿರುವ ಕೈಮಗ್ಗ ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ
28. ಉತ್ತರ ಕನ್ನಡ- ಕಾರವಾರ ನೌಕಾಶಾಲೆ
29. ವಿಜಯಪುರ- ಸಿದ್ದರಾಮೇಶ್ವರ ದೇವಸ್ಥಾನ
30. ವಿಜಯನಗರ- ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ
31. ಯಾದಗಿರಿ- ಸುರಪುರ ಕೋಟೆ
ಸ್ತಬ್ಧಚಿತ್ರಗಳ ಉಪಸಮಿತಿ
32. ಅರಮನೆ ವಾದ್ಯಗೋಷ್ಠಿ
33. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ
34. ಆಜಾದಿ ಕಾ ಅಮೃತ ಮಹೋತ್ಸವ

ದಸರಾ ಆನೆ ಕರೆತಂದು ಮೆರವಣಿಗೆ : ನಂಜನಗೂಡಿನಲ್ಲಿ ಗ್ರಾಮೀಣ ದಸರಾ

ಇಲಾಖಾವಾರು
35. ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ
36. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ
37. ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು
38. ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ
39. ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು
40. ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ
41. ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು
42. ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು
43. ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ
44. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌
45. ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು
46. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ
47. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ

click me!