2024ನೇ ಸಾಲಿನಲ್ಲಿ ನಡೆದ ಜಾತ್ರೆಯ ವೇಳೆ ಮೈಲಾರಲಿಂಗೇಶ್ವರ ದೇವರ ಗೊರವಯ್ಯ 'ಸಂಪಾಯಿತಲೇ ಪರಾಕ್' ಎಂಬ ಕಾರ್ಣಿಕವನ್ನು ನುಡಿದಿದ್ದಾರೆ.
ವಿಜಯನಗರ (ಫೆ.26): ರಾಜ್ಯದ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ನುಡಿಯುವ ಕಾರ್ಣಿಕವನ್ನು ರಾಜ್ಯದ ಮುನ್ನುಡಿ ಎಂದೇ ಭಾವಿಸಲಾಗುತ್ತದೆ. 2024ನೇ ಸಾಲಿನಲ್ಲಿ ನಡೆದ ಜಾತ್ರೆಯ ವೇಳೆ ಮೈಲಾರಲಿಂಗೇಶ್ವರ ದೇವರ ಗೊರವಯ್ಯ 'ಸಂಪಾಯಿತಲೇ ಪರಾಕ್' ಎಂಬ ಕಾರ್ಣಿಕವನ್ನು ನುಡಿದಿದ್ದಾರೆ. ಈ ಮೂಲಕ ಬರಗಾಲದಿಂದ ತತ್ತರಿಸಿದ್ದ ಜನತೆಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಮೈಲಾರದ ಡಂಗನಮರಡಿಯಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವವನ್ನು ಸೋಮವಾರ ಸಂಜೆ ನುಡಿಯಲಾಗಿದೆ. 18 ಎತ್ತರದ ಅಡಿ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ ಸದ್ದಲೇ ಎಂದು ಹೇಳಿದೊಡನೇ ಎಲ್ಲರೂ ಶಾಂತವಾಗಿದ್ದರು. ಮರು ಕ್ಷಣವೇ 'ಸಂಪಾಯಿತಲೇ ಪರಾಕ್' ಎಂದು ಕಾರ್ಣಿಕವನ್ನು ನುಡಿದು ಅಲ್ಲಿಂದ ಬಿದ್ದಿದ್ದಾರೆ. ಈ ಕಾರ್ಣಿಕವನ್ನು ರಾಜ್ಯದ ಒಂದು ವರ್ಷದ ಭವಿಷ್ಯವಾಣಿ ಎಂದೇ ಕರೆಯಲಾಗುತ್ತದೆ.
undefined
ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದ್ಯಾರು? ಕಾರ್ಣಿಕ ನುಡಿದ ಮೈಲಾರಲಿಂಗೇಶ್ವರ ಸ್ವಾಮಿ
ಇನ್ನು ಸಂಪಾಯಿತಲೇ ಪರಾಕ್ ಕಾರ್ಣಿಕವನ್ನು ದೇವಸ್ಥಾನ ಆಡಳಿತ ಮಂಡಳಿಯು ವಿಶ್ಲೇಷಣೆ ಮಾಡಲಾಗಿದ್ದು, ಈ ವರ್ಷ ಮಳೆ-ಬೆಳೆ ಸಮೃದ್ದವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬರಗಾಲದಿಂದ ರೈತರು ಕಂಗೆಟ್ಟ ಹಿನ್ನೆಲೆಯಲ್ಲಿ ಕಾರ್ಣಿಕವು ರೈತ ಸಮುದಾಯಕ್ಕೆ ತುಸು ಸಂತಸ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾಗಲಿದೆ ಎಂಬ ಸಂದೇಶ ನೀಡಲಾಗಿದೆ. ಇನ್ನು ರಾಜಕೀಯದ ಬಗ್ಗೆ ಯಾವುದೇ ವಿಶ್ಲೇಷಣೆಯನ್ನು ಮಾಡಲಾಗಿಲ್ಲ.