ಮುಕೇಶ್ ಅಂಬಾನಿ-ನೀತಾ ಗರ್ಬಾ ನೃತ್ಯ ವಿಡಿಯೋ ವೈರಲ್, ಕಳೆಗಟ್ಟಿದ ನವರಾತ್ರಿ ಹಬ್ಬ ಸಂಭ್ರಮ!

By Chethan Kumar  |  First Published Oct 8, 2024, 5:33 PM IST

ದೇಶದೆಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇನ್ನು ಅಂಬಾನಿ ಕುಟುಂಬಕ್ಕೆ ನವರಾತ್ರಿ ವಿಶೇಷ ಹಬ್ಬ.ಇದೀಗ ಮುಕೇಶ್ ಅಂಬಾನಿ-ನೀತಾ ಅಂಬಾನಿ ಸೇರಿದಂತೆ ಕುಟುಂಬಸ್ಥರ ಗರ್ಬಾ ನೃತ್ಯ ಭಾರಿ ವೈರಲ್ ಆಗಿದೆ.


ಮುಂಬೈ(ಅ.08) ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಉತ್ತರ ಭಾರತದಲ್ಲಿ ಗರ್ಬಾ ನೃತ್ಯ ವಿಶೇಷ. ದಾಂಡಿಯಾ ಮೂಲಕ ವಿಶೇಷವಾಗಿ ಹಬ್ಬ ಆಚರಣೆ ನವರಾತ್ರಿಯ ಮೆರುಗು ಮತ್ತಷ್ಟು ಹೆಚ್ಚಿಸಲಿದೆ. ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬಸ್ಥರ ನವರಾತ್ರಿ ಹಬ್ಬ ಆಚರಣೆ ಜೋರಾಗಿದೆ. ಇದೀಗ ಅಂಬಾನಿ ಕುಟುಂಬಸ್ಥರ ಗರ್ಬಾ ನೃತ್ಯ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಮುಕೇಶ್ ಅಂಬಾನಿ, ನೀತಾ ಅಂಬಾನಿ ಸೇರಿದಂತೆ ಹಲವರು ಗರ್ಬಾ ನೃತ್ಯದ ಮೂಲಕ ನವರಾತ್ರಿ ಆಚರಣೆ ಮಾಡುತ್ತಿರುವ ವಿಡಿಯೋ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ಶ್ರೀಮಂತ ಉದ್ಯಮಿಯಾದರೂ ನವರಾತ್ರಿ ಹಬ್ಬದಲ್ಲಿ ಮುಕೇಶ್ ಅಂಬಾನಿಯ ಉತ್ಸಾಹ, ಆಸಕ್ತಿ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸುವ ಬದ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಕಳೆದ ಕೆಲ ತಿಂಗಳ ಅಂಬಾನಿ ಕುಟುಂಬ ಆಚರಿಸಿದ ದಾಂಡಿಯಾ ನೈಟ್ ಆಚರಣೆ ವಿಡಿಯೋ ಎನ್ನಲಾಗುತ್ತಿದೆ. ಈ ವಿಡಿಯೋದಲ್ಲಿ ಅಂಬಾನಿ ಕುಟುಂಬಸ್ಥರು, ಗಣ್ಯರು ದಾಂಡಿಯಾ ಹಿಡಿದು ಗರ್ಬಾ ನೃತ್ಯ ಮಾಡಿದ್ದಾರೆ. ನವರಾತ್ರಿ ವಿಶೇಷ ನೃತ್ಯ ಇದಾಗಿದ್ದು ಅಂಬಾನಿ ಕುಟುಂಬಸ್ಥರು ಅಷ್ಟೇ ಅಚ್ಚುಕಟ್ಟಾಗಿ ಆಚರಿಸಿದ್ದಾರೆ.  

Latest Videos

undefined

15 ಸಾವಿರ ಕೋಟಿ ರೂ ಆ್ಯಂಟಿಲಿಯಾ ಮನೆಯ ಯಾವ ಮಹಡಿಯಲ್ಲಿ ಮುಕೇಶ್-ನೀತಾ ವಾಸ?

ಮುಕೇಶ್ ಅಂಬಾನಿ ತಾಯಿ ಕೊಕಿಲಾ ಬೆನ್ ಅಂಬಾನಿ ಜುಲೈ ತಿಂಗಳಲ್ಲಿ ದಾಂಡಿಯಾ ನೈಟ್ ಆಯೋಜಿಸಿದ್ದರು. ಈ ವೇಳೆ ಅಂಬಾನಿ ಕುಟುಂಬಸ್ಥರು ದಾಂಡಿಯಾ ಹಿಡಿದು ಹೆಜ್ಜೆ ಹಾಕಿದ್ದರು. ಅನಂತ್ ಅಂಬಾನಿ ಹಾೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ವಿಡಿಯೋ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಮುಕೇಶ್ ಅಂಬಾನಿ, ನೀತಾ ಅಂಬಾನಿ, ಶ್ಲೋಕಾ ಮೆಹ್ತಾ ಸೇರಿದಂತೆ ಹಲವು ಅಂಬಾನಿ ಕುಟುಂಬಸ್ಥರು ಹಾಜರಿದ್ದಾರೆ. 

 

ಅಂಬಾನಿ ಕುಟುಂಬ ಅತ್ಯಂತ ಸಂಭ್ರಮದಿಂದ ಗಣೇಶ ಹಬ್ಬ, ನವರಾತ್ರಿ ಹಾಗೂ ದೀಪಾವಳಿ ಹಬ್ಬ ಆಚರಿಸುತ್ತದೆ. ಗಣೇಶ ಹಬ್ಬಕ್ಕ ಅಂಬಾನಿ ಮನೆ ಆ್ಯಂಟಿಲಿಯಾದಲ್ಲಿ ಗಣೇಶನ ಮೂರ್ತಿ ಕೂರಿಸಲಾಗುತ್ತದೆ. ಇದಕ್ಕೆ ಆ್ಯಂಟಿಲಿಯಾ ಚಾ ರಾಜಾ ಎಂದು ಹೆಸರಿಡಲಾಗಿದೆ. ಮುಕೇಶ್ ಅಂಬಾನಿ ಮನೆಯ ಗಣೇಶ ಹಬ್ಬಕ್ಕೆ ಕುಟುಂಬಸ್ಥರ ಜೊತೆ ಆಹ್ವಾನಿತ ಬಾಲಿವುಡ್ ಸೆಲೆಬ್ರೆಟಿಳು, ಗಣ್ಯರು ಪಾಲ್ಗೊಳ್ಳುತ್ತಾರೆ. ನೀತಾ ಅಂಬಾನಿ, ರಾಧಿಕಾ ಮರ್ಚೆಂಡ್ ಮುಂದಾಳತ್ವದಲ್ಲಿ ಈ ಬಾರಿ ಗಣೇಶ ವಿಸರ್ಜನೆ ನಡೆದಿತ್ತು. ಮುಂಬೈನ ಚೌಪಾಟಿ ಸಮುದ್ರ ಕಿನಾರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗಿತ್ತು.  ಇನ್ನು ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೂ ಇದೇ ರೀತಿಯ ಆಚರಣೆ ನಡೆಯಲಿದೆ.

BSNL ಘೋಷಣೆಗೆ ಬೆಚ್ಚಿದ ಅಂಬಾನಿ, ಕರ್ನಾಟಕದ ಕಂಪನಿ ಜೊತೆ ಸೇರಿ ಸ್ಮಾರ್ಟ್‌ಫೋನ್ ಉತ್ಪಾದನೆ!
 

click me!