ಈ Zodiac Sign ರೀತಿ ಎಲ್ರಿಗೂ ಸ್ಫೂರ್ತಿ ತುಂಬೋದು ಸಾಧ್ಯವೇ ಇಲ್ಲ

By Suvarna News  |  First Published Oct 25, 2022, 4:18 PM IST

ಇತರರಲ್ಲಿ ಸ್ಫೂರ್ತಿ ತುಂಬಲು ಎಲ್ಲರಿಂದಲೂ ಸಾಧ್ಯವಿಲ್ಲದ ಮಾತು. ಕೆಲವೇ ಕೆಲವು ರಾಶಿಗಳ ಜನರಿಗೆ ಮಾತ್ರ ಅದು ಸಲೀಸು. ಇವರು ಸ್ವಾರ್ಥವಿಲ್ಲದೆ ಇತರರಲ್ಲಿ ಸುಲಭವಾಗಿ ಪ್ರೇರಣೆ ತುಂಬಬಲ್ಲರು.
 


ಯಾವುದಾದರೂ ಸಮಸ್ಯೆ ಅಥವಾ ಕ್ಲಿಷ್ಟಕರ ಜವಾಬ್ದಾರಿಯನ್ನು ಎದುರಿಸುವ ಬಗ್ಗೆ ನಿಮ್ಮ ಸ್ನೇಹಿತರ ಬಳಿ ಹಂಚಿಕೊಳ್ಳಿ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವರು “ಅದು ನಿಮ್ಮಿಂದ ಸಾಧ್ಯವಿಲ್ಲ, ಸುಮ್ಮನೆ ರಿಸ್ಕ್ ತಗೋಬೇಡ’ ಎಂದು ಎಚ್ಚರಿಕೆ ನೀಡುತ್ತಾರೆ. ಕೆಲವರಂತೂ ಇನ್ನೂ ಮುಂದಕ್ಕೆ ಹೊಗಿ, ಅದರಿಂದಾಗುವ ಬಾಧಕಗಳನ್ನು ನಿಮ್ಮೆದುರು ತೆರೆದಿಡುತ್ತಾರೆ. ಇತರರ ಸೋಲುಗಳ ಕಥೆ ಹೇಳುತ್ತ ಮುಂದಿಟ್ಟ ಹೆಜ್ಜೆಯ ಬಗ್ಗೆ ಚಿಂತಿಸುವಂತೆ ಮಾಡುತ್ತಾರೆ. ಆದರೆ, ಇನ್ನು ಕೆಲವರು ಬೆನ್ನು ತಟ್ಟುತ್ತಾರೆ. ನಿಮ್ಮ ಧನಾತ್ಮಕ ಗುಣಗಳ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ. ಸ್ವಾರ್ಥದ ಚೂರೇ ಚೂರು ಸೋಂಕಿಲ್ಲದೆ ನಿಮಗೆ ಸ್ಫೂರ್ತಿ ತುಂಬುತ್ತಾರೆ. ಯಾರಲ್ಲಾದರೂ ಅವರು ಸುಲಭವಾಗಿ ಸ್ಫೂರ್ತಿ ತುಂಬಬಲ್ಲರು. ಸೋತವರು ಎದ್ದು ನಿಲ್ಲುವಂತೆ ಮಾಡಬಲ್ಲರು. ವೃತ್ತಿಪರ ಆಪ್ತ ಸಮಾಲೋಚಕರಿಗಿಂತ ಹೆಚ್ಚಾಗಿ ವಿಚಾರಗಳ ಸ್ಪಷ್ಟತೆ ತಿಳಿಸಬಲ್ಲರು. ಇಂಥವರು ಉತ್ಕೃಷ್ಟ ಮಟ್ಟದಲ್ಲಿ ಆಶಾವಾದಿಗಳಾಗಿರುತ್ತಾರೆ. ಆಧ್ಯಾತ್ಮಿಕತೆಯ ತಳಹದಿ ಹಾಗೂ ಮಾತೃ ಹೃದಯ ಹೊಂದಿರುತ್ತಾರೆ. ಹೀಗಾಗಿ, ಇತರರಿಗೆ ಸುಲಭವಾಗಿ ಮಾರ್ಗದರ್ಶನ ಮಾಡುತ್ತಾರೆ. ಸರಿಯಾದ ದಾರಿ ಯಾವುದೆಂದು ಇಂಥವರಲ್ಲಿ ಕೇಳಿದರೆ ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗುವ ಮಾರ್ಗವನ್ನೇ ತೋರಿಸುತ್ತಾರೆ. ಈ ಗುಣವನ್ನು ಕೆಲವು ರಾಶಿಗಳ ಜನ ಮಾತ್ರವೇ ಹೊಂದಿರುವುದು ವಿಶೇಷ.

•    ಧನು (Sagittarius)
ಧನು ರಾಶಿ ಸ್ವಾತಂತ್ರ್ಯಕ್ಕೆ (Free) ಮತ್ತೊಂದು ಹೆಸರು. ಸ್ವತಂತ್ರ ಚಿಂತನೆ, ಸ್ವತಂತ್ರ ಬದುಕು ಇವರದ್ದು. ಇವರ ಮನಸ್ಸು (Mind) ಯಾವಾಗಲೂ ಸುತ್ತಾಡುತ್ತಿರುತ್ತದೆ. ಯಾವತ್ತೂ ಸ್ಫೂರ್ತಿ (Motivation) ಯಿಂದ ಕೂಡಿರುತ್ತಾರೆ. ತಮ್ಮ ಬದುಕಿನ ಹಳಿ ತಪ್ಪಿದ ಸಮಯದಲ್ಲೂ ಕಂಗೆಡುವುದಿಲ್ಲ. ಅತ್ಯಂತ ಆಶಾವಾದಿ (Optimistic) ಆಗಿದ್ದು, ಸಾಕಷ್ಟು ಜ್ಞಾನ (Knowledge) ಮತ್ತು ಅನುಭವ (Experience) ಹೊಂದಿರುತ್ತಾರೆ. ಹೀಗಾಗಿ, ಇತರರ ಉತ್ತಮ ಗುಣಗಳನ್ನು ಸುಲಭವಾಗಿ ಪತ್ತೆ ಮಾಡುತ್ತಾರೆ ಹಾಗೂ ಅವುಗಳನ್ನು ತಕ್ಷಣ ಮೆಚ್ಚುವ ಮೂಲಕ ಉತ್ತೇಜಿಸುತ್ತಾರೆ. 

Tap to resize

Latest Videos

Festive vibes: ಹಬ್ಬದ ಆಚರಣೆಯಲ್ಲಿ ಹೆಚ್ಚಿನ ಉತ್ಸಾಹ ತೋರುವ ರಾಶಿಗಳಿವು!

•    ಕನ್ಯಾ (Virgo)
ಕನ್ಯಾ ರಾಶಿಯ ಜನ ಪ್ರೇರಣೆಯ ಸ್ವಭಾವವನ್ನು (Nature) ಸಹಜವಾಗಿ ಹೊಂದಿರುತ್ತಾರೆ. ಏನೇ ಮಾಡಿದರೂ ಅತ್ಯಂತ ಪರಿಪೂರ್ಣತೆ (Perfection) ತುಂಬುತ್ತಾರೆ. ಪ್ರಬುದ್ಧತೆ (Maturity) ಹೊಂದಿರುವ ಇವರು ತಮ್ಮ ಸುತ್ತ ಇರುವ ಜನ ಖುಷಿಯಾಗಿ ಇರಬೇಕೆಂದು ಬಯಸುತ್ತಾರೆ ಹಾಗೂ ಅದಕ್ಕಾಗಿ ಪ್ರಯತ್ನ ಪಡುತ್ತಾರೆ. ತಮಗೆ ನೋವಾದ ಸಮಯದಲ್ಲಿ ಇತರರ ಜತೆ ಬೆರೆತು ಅವರಲ್ಲಿ ಪ್ರೇರಣೆ ಮೂಡಿಸಲು ನೋಡುತ್ತಾರೆ. ಈ ರಾಶಿಯಲ್ಲಿ (Zodiac Sign) ಜನಿಸಿದ ಜನ ಸಾಕಷ್ಟು ಕರುಣಾಮಯಿ ಆಗಿದ್ದು, ಪ್ರಾಯೋಗಿಕ ಬುದ್ಧಿಯನ್ನೂ ಹೊಂದಿರುತ್ತಾರೆ. ಹೀಗಾಗಿ, ಇತರರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಸುಲಭವಾಗಿ ಗುರುತಿಸುತ್ತಾರೆ. ಅಂತಹ ಸಮಯದಲ್ಲಿ ಸರಿಯಾದುದನ್ನು ಗುರುತಿಸಲು ಅವರಿಗೆ ಸಹಾಯ ಮಾಡುತ್ತಾರೆ. ಎಲ್ಲ ರೀತಿಯ ನಕಾರಾತ್ಮಕ (Negative) ಅಡೆತಡೆ ಮಿರಿ ಗುರಿ ತಲುಪುವ ಬಗ್ಗೆ ಅರಿವು ಮೂಡಿಸುತ್ತಾರೆ.

•    ವೃಷಭ (Taurus)
ವೃಷಭ ರಾಶಿಯ ಜನ ಸಣ್ಣಪುಟ್ಟ ಮಾತುಗಳ ಮೂಲಕವೇ ಬೇರ್ಯಾರೂ ಮಾಡದಂತಹ ಪರಿಣಾಮವನ್ನು (Effect) ಬೀರುತ್ತಾರೆ. ಅತ್ಯಂತ ದೃಢಚಿತ್ತಕ್ಕೆ (Strong Mind) ಇವರು ಹೆಸರುವಾಸಿ. ಯಾರಿಗಾದರೂ ಉತ್ತೇಜನ, ಬೆಂಬಲ (Support) ನೀಡಬೇಕೆಂದು ಒಂದೊಮ್ಮೆ ಏನಾದರೂ ನಿರ್ಧಾರ ಮಾಡಿದರೆ ಯಾವುದೇ ಕಾರಣಕ್ಕೂ ಅದರಿಂದ ಹಿಂದೆ ಸರಿಯುವುದಿಲ್ಲ. ಪ್ರೇರಣಾದಾಯಕ, ಧನಾತ್ಮಕ (Positive) ಚಿಂತನೆಗಳ ಮೂಲಕ ಅವರನ್ನು ಹುರಿದುಂಬಿಸುತ್ತಾರೆ. ಇವರಿಂದ ಸ್ಫೂರ್ತಿ ಪಡೆದವರು ಯಾವುದೇ ಭಯವಿಲ್ಲದೆ ಮೆಟ್ಟಿಲುಗಳನ್ನು ಏರಬಲ್ಲರು.

Astrology Tips : ಸದ್ಯವೇ ಕೆಡಲಿದೆ ಈ ರಾಶಿಯವರ ಗ್ರಹಚಾರ

•    ಸಿಂಹ (Leo)
ಜನ್ಮಜಾತ ನಾಯಕತ್ವದ ಗುಣ ಹೊಂದಿರುವ ಸಿಂಹ ರಾಶಿಯ ಜನ ತಮ್ಮ ಸಮೀಪದ ಜನ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ತಮ್ಮ ಪ್ರೀತಿಪಾತ್ರರು (Loved Ones) ಬೇರ್ಯಾರೂ ಇರದಷ್ಟು ಎತ್ತರದಲ್ಲಿ ಇರಬೇಕೆಂಬ ಆಶಯ ಹೊಂದಿರುತ್ತಾರೆ. ಅದ್ಭುತ ಪ್ರಾಪಂಚಿಕ (Practical) ಜ್ಞಾನ ಹೊಂದಿರುತ್ತಾರೆ. ತಮ್ಮ ಕಷ್ಟಸಹಿಷ್ಣುತೆ ಮತ್ತು ಕೆಲಸಗಳಿಂದ ಇತರರನ್ನು ಅತ್ಯದ್ಭುತವಾಗಿ ಪ್ರೇರಿಸುತ್ತಾರೆ. 

click me!