ಪ್ರಧಾನಿ ಮೋದಿ ಶೀಘ್ರದಲ್ಲೇ ವೈರಾಗ್ಯದಿಂದ ಅಧಿಕಾರ ತ್ಯಜಿಸಲಿದ್ದು, ಖಾವಿಧಾರಿ ಸನ್ಯಾಸಿಯೊಬ್ಬರು ದೇಶವನ್ನು ಆಳಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು (ಏ.12): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನು ಒಂದು ವರ್ಷದಲ್ಲಿ ಆಡಳಿತದ ಮೇಲೆ ವೈರಾಗ್ಯ ಬಂದು ಅಧಿಕಾರದಿಂದ ಕೆಳಗೆ ಇಳಿಯುತ್ತಾರೆ. ಆಗ ಒಬ್ಬ ಖಾವಿಧಾರಿ ಸನ್ಯಾಸಿ ಬಂದು ದೇಶದ ಅಧಿಕಾರವನ್ನು ಹಿಡಿಯುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯವನ್ನು ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಆರಂಭಗೊಂಡ ಬೆಂಗಳೂರು ಕರಗ ಶಕ್ತೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಧರ್ಮರಾಯನಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟ ಬ್ರಹ್ಮಾಂಡ ಗುರೂಜಿ, ದೌಪ್ರದಿ ದೇವಿಯ ದರ್ಶನ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಪ್ರಧಾನಿ ಮೋದಿಗೆ ವೈರಾಗ್ಯ ಮೂಡುತ್ತದೆ. ಒಂದು ವರ್ಷದೊಳಗೆ ರಾಜೀನಾಮೆ ಕೊಡೋದು ಅಥವಾ ಅಧಿಕಾರ ಬಿಟ್ಟು ಹೊಗೋದು ಮಾಡುತ್ತಾರೆ. ಮುಂದಿನ ದಿನಗಳಲ್ಲಿ ದೇಶವನ್ನು ಸನ್ಯಾಸಿ ಆಳುತ್ತಾನೆ. ಮುಂದಿನ ದಿನಗಳಲ್ಲಿ ದೇಶ ಆಳೋದು ಒಬ್ಬ ಖಾವಿಧಾರಿ. ಮಕ್ಕಳ ಬಗ್ಗೆ ಈ ಸಮಯದಲ್ಲಿ ಹೆಚ್ಚು ಜಾಗೃತಿ ಇರಲಿ ಎಂದು ಭವಿಷ್ಯ ನುಡಿದರು.
ಇವತ್ತು ಚೈತ್ರ ಪೂರ್ಣಮಿ ಇದೆ. ಜೊತೆಗೆ, ಹನುಮ ಜಯಂತಿ ಕೂಡ ಇವತ್ತೇ ಬಂದಿದೆ. ಡಿಸೆಂಬರ್ ನಲ್ಲಿ ಆಗುವುದು ಹನುಮ ವ್ರತ. ಇವತ್ತು ಶನೇಶ್ವರ ಶನಿ ಕಳೆದುಕೊಳ್ಳುವ ದಿನ. ಕೃಷ್ಣ ಪರಮಾತ್ಮನ ಸಹೋದರಿ ಆಗಿರುವ ದೌಪ್ರದಿಯ ದಿನ ಇವತ್ತು. ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ದ ಧರ್ಮರಾಯನಸ್ವಾಮಿ ದೇವಾಲಯ ಇದೆ. ಈ ಸಲ ಬಿಸಿಲಿನ ಝಳ ಹೆಚ್ಚಾಗಿ ಸ್ಕಿನ್ ಡಿಸೀಸ್ ಹೆಚ್ಚಾಗುತ್ತದೆ. ಶನೇಶ್ವರ ವ್ಯಾದಿ ನೀಡುತ್ತಾನೆ. ಧರ್ಮವಾಗಿ ಯಾರು ಯಾರು ನಡೆದುಕೊಳ್ಳುತ್ತಾರೋ ಅವರಿಗೆ ಶ್ರೀ ರಕ್ಷೆ ಸಿಗಲಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಕರಗ ಉತ್ಸವಕ್ಕೂ ಸರ್ಕಾರದ ಬಳಿ ಹಣ ಇಲ್ವಾ?
ಇನ್ನು ಮೇಲೆ ಮಿಥುನ ರಾಶಿ ಗುರು ಬರುತ್ತದೆ. ಇದರಿಂದ ಯಾರಾರು ಎರಡು ಮೂರು ಹೆಂಡತಿಯರನ್ನ ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ. ಸಿನಿಮಾ ತಾರೆಯರು ರಾಜಕಾರಣಿಗಳ ಬಗ್ಗೆ ಎಲ್ಲಾ ಬೀದಿಗೆ ಬರುತ್ತದೆ. ವಕೀಲರುಗಳಿಗೆ ಕೆಲಸ ಜಾಸ್ತಿಯಾಗುತ್ತದೆ. ಪೊಲೀಸರು ರಕ್ತಪಾತ ಆಗೋದನ್ನ ತಪ್ಪಿಸಬೇಕಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಕರಗಕ್ಕೆ ಹಣ ಕೊರತೆ ಎದುರಾಗಿದೆಯೇ ಎಂಬ ಅನುಮಾನ ಬಂದಿದೆ.ಕರಗ ಉತ್ಸವ ಆರಂಭ ಆಗಿದ್ದರೂ ಇನ್ನೂ ಬಿಬಿಎಂಪಿಯಿಂದ ಹಣ ಬಿಡುಗಡೆಯಾಗಿಲ್ಲ. ಕರಗ ಉತ್ಸವಕ್ಕೆ ಸರ್ಕಾರದ ಬಳಿ ಹಣ ಇಲ್ವಾ? ಎಂಬ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಕರಗ ಉತ್ಸವಕ್ಕೆ ಈ ಬಾರಿ 1.5 ಕೋಟಿ ರೂ. ಹಣ ಮೀಸಲು ಇಡಲಾಗಿದೆ. ಆದರೆ ಈ ತನಕ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಆಗಿಲ್ಲ. ಹೂವಿನ ಅಲಂಕಾರಕ್ಕೆ ಹಣದ ಕೊರತೆ.? ಎದುರಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮರಾಯನಸ್ವಾಮಿ ದೇವಾಲಯದ ಅಧ್ಯಕ್ಷ ಸತೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರಗ ಉತ್ಸವದ ಮೇಲೆ ಗ್ಯಾರಂಟಿ ಎಫೆಕ್ಟ್? । Bengaluru Karaga 2025 । Suvarna News
ಈ ಕುರಿತು ಮಾತನಾಡಿದ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಸತೀಶ್ ಅವರು, ಕರಗ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ 1.5 ಕೋಟಿ ರೂ. ಹಣವನ್ನು ಮೀಸಲು ಇಡಲಾಗಿದೆ. ಆದರೆ, ಇದುವರೆಗೆ ದುಡ್ಡು ಬಂದಿಲ್ಲ. ನಾವೇ ದುಡ್ಡು ಹಾಕಿ ಜಾತ್ರೆ ನಡೆಸುತ್ತಿದ್ದೇವೆ. ರಾಜ್ಯ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ. ಮಾಜಿ ಮೇಯರ್ ಪಿ.ಆರ್. ರಮೇಶ್ ಸೇರಿ ಮುಜರಾಯಿ ಇಲಾಖೆ ಅಧಿಕಾರಿಗಳು ಹಣ ಬಿಡುಗಡೆಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ಹಿಂದೆ ಒಂದು ವಾರ ಮುಂಚೆ 50 ಲಕ್ಷ ರೂ. ಅಡ್ವಾನ್ಸ್ ಆಗಿ ಕೊಡುತ್ತಿದ್ದರು. ಈಗ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.