ಧನು ರಾಶಿಯ ಮಹಿಳೆಯರು ಬುದ್ಧಿವಂತರು ಮತ್ತು ವಿನೋದಪ್ರಿಯರು. ಅವರು ಉತ್ತಮ ಸ್ನೇಹಿತರಾಗುತ್ತಾರೆ, ಉತ್ತಮ ಸಂಗಾತಿಗಳಾಗುತ್ತಾರೆ. ಆದರೆ, ತಪ್ಪು ಮಾಡದವರು ಯಾರು ತಾನೇ ಇದ್ದಾರೆ? ಧನು ರಾಶಿ ಮಹಿಳೆಯರು ಸಂಬಂಧಗಳಲ್ಲಿ ಸಾಮಾನ್ಯವಾಗಿ ಈ ತಪ್ಪುಗಳನ್ನು ಮಾಡುತ್ತಾರೆ.
ಧನು ರಾಶಿಯವರು ಸಾಮಾನ್ಯವಾಗಿ ಪ್ರೀತಿಯಲ್ಲಿ ಅದೃಷ್ಟವಂತರು. ಧನು ರಾಶಿ ಬುದ್ಧಿವಂತರು ಮತ್ತು ವಿನೋದಪ್ರಿಯರು. ಅವರು ಉತ್ತಮ ಸ್ನೇಹಿತರಾಗುತ್ತಾರೆ ಅಥವಾ ಪಾಲುದಾರರಾಗುತ್ತಾರೆ. ಧನು ರಾಶಿಯ ಮಹಿಳೆಯರು ಅತ್ಯುತ್ತಮ ಸಂಗಾತಿಗಳು. ಏಕೆಂದರೆ ಅವರು ನಿರಂತರವಾಗಿ ಲವಲವಿಕೆಯಿಂದಿರುತ್ತಾರೆ, ಸಾಮಾಜಿಕವಾಗಿ ಬೆರೆಯುತ್ತಾರೆ ಮತ್ತು ಒಳ್ಳೆಯವರು. ಮತ್ತೊಂದೆಡೆ, ಅವರು ಪ್ರಾಮಾಣಿಕವಾಗಿರುತ್ತಾರೆ ಮತ್ತು ತಮ್ಮ ಪಾಲುದಾರರನ್ನು ಎಂದಿಗೂ ಟೀಕಿಸುವುದಿಲ್ಲ. ಅದೇನೇ ಇದ್ದರೂ, ಪ್ರೀತಿಯ ಸಂಬಂಧದಲ್ಲಿ ಅವರು ಮಾಡುವ ಕೆಲವು ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1. ಬೇಗ ಪ್ರೀತಿಗೆ ಬೀಳುತ್ತಾರೆ..
ಧನು ರಾಶಿಯವರು ಡೇಟಿಂಗ್ ಮಾಡುವಾಗ ಪ್ರಾಮಾಣಿಕವಾಗಿ ಮತ್ತು ಆಳವಾಗಿ ಪ್ರೀತಿಸುತ್ತಾರೆ. ಅವರ ಎಲ್ಲಾ ಪ್ರೀತಿ, ಕಾಳಜಿ ಮತ್ತು ಗಮನವನ್ನು ಅವರ ಸಂಗಾತಿಗೆ ನೀಡುತ್ತಾರೆ. ಧನು ರಾಶಿಯ ಪ್ರಮುಖ ಸಮಸ್ಯೆಯೆಂದರೆ, ಅವರು ಇತರ ವ್ಯಕ್ತಿಯನ್ನು ಚೆನ್ನಾಗಿ ತಿಳಿದಿಲ್ಲದಿದ್ದರೂ ಸಹ ಅವರೊಂಡನೆ ಬೇಗನೆ ಪ್ರೀತಿಯಲ್ಲಿ ಬೀಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.
2. ಭರವಸೆ ಉಳಿಸಿಕೊಳ್ಳುವಲ್ಲಿ ಸೋಲು
ಧನು ರಾಶಿಯವರು ತಮ್ಮ ಸಂಗಾತಿಯನ್ನು ನಿರಂತರವಾಗಿ ಮೆಚ್ಚಿಸಲು ಬಯಸುತ್ತಾರೆ. ಹಾಗಾಗಿ ಅವರು ಅತಿಯಾದ ಭರವಸೆ ನೀಡುತ್ತಾರೆ. ಆದರೆ ಅವರದನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ಬೇಕಾದ ಬದ್ಧತೆಗೆ ಕಡಿಮೆ ಇಚ್ಚಾ ಶಕ್ತಿ ಹೊಂದಿದ್ದಾರೆ. ಸಂಗಾತಿಯನ್ನು ಮೆಚ್ಚಿಸುವ ಬಯಕೆಗೂ, ಅದನ್ನು ಪ್ರಾಯೋಗಿಕವಾಗಿ ಮಾಡುವುದಕ್ಕೂ ಇರುವ ವ್ಯತ್ಯಾಸ ಅವರನ್ನು ಬಾಧಿಸುತ್ತದೆ.
Weekly Love Horoscope: ಕನ್ಯಾ ಪ್ರೇಮ ಜೀವನದಲ್ಲಿ ಭಾವನಾತ್ಮಕ ಏರುಪೇರು
3. ಪ್ರೇಮಿಯನ್ನು ಪೀಠದ ಮೇಲೆ ಇರಿಸುತ್ತಾರೆ..
ಧನು ರಾಶಿಯವರು ತಮ್ಮ ವಿವಿಧ ಆಲೋಚನೆಗಳು ಮತ್ತು ಸಾಂದರ್ಭಿಕವಾಗಿ ಅವರ ಕಲ್ಪನೆಗಳಲ್ಲಿ ಕಳೆದುಹೋಗುವ ಸಾಧ್ಯತೆಯಿದೆ. ಮತ್ತು ಧನು ರಾಶಿಯವರು ಪ್ರೀತಿಯಲ್ಲಿ ಆನಂದಿಸುವುದರಿಂದ, ಅವರು ಸಂಬಂಧಗಳಲ್ಲಿ ಸ್ಪಷ್ಟವಾದ ಸಮಸ್ಯೆಗಳನ್ನು ಅಥವಾ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಲು ವಿಫಲರಾಗಬಹುದು. ಆರಂಭದಲ್ಲಿ ಪ್ರೇಮಿ ಮಾಡಿದ್ದೆಲ್ಲವೂ ಸರಿ ಕಂಡು ಅವರನ್ನು ಪೀಛದ ಮೇಲೆ ಕೂರಿಸುತ್ತಾರೆ. ನಂತರ ನಿರಾಶರಾಗುತ್ತಾರೆ.
4. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದು
ಧನು ರಾಶಿಯವರು ನಿರ್ದಾಕ್ಷಿಣ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ನಿರಂತರವಾಗಿ ಪಾಲುದಾರರ ಮೇಲೆ ಜವಾಬ್ದಾರಿಯನ್ನು ಹಾಕುವುದು ಅಥವಾ ಬದ್ಧತೆಗಳನ್ನು ವಿಳಂಬಗೊಳಿಸುವುದು ಸಮಸ್ಯಾತ್ಮಕವಾಗಿರುತ್ತದೆ. ಆದರೆ, ಅವರಲ್ಲಿ ಅವರು ಮಾಡಿದ್ದೆಲ್ಲಕ್ಕೂ ಕಾರಣಗಳಿರುತ್ತವೆ. ಅವರು ತಮ್ಮ ಪ್ರತಿ ತಪ್ಪನ್ನೂ ಸಮರ್ಥಿಸಿಕೊಳ್ಳುತ್ತಾರೆ.
5. ಟೀಕೆಗಳನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವುದು..
ಸಾಮಾನ್ಯವಾಗಿ ಹೇಳುವುದಾದರೆ, ಧನು ರಾಶಿಯವರು ಸ್ವಲ್ಪಮಟ್ಟಿಗೆ ದ್ವಿಗುಣವನ್ನು ಹೊಂದಿರುತ್ತಾರೆ: ಅವರು ಇತರರನ್ನು ತುಂಬಾ ಟೀಕಿಸಬಹುದು, ಆದರೆ ಪ್ರೇಮಿಗಳು ಟೀಕೆಗಳನ್ನು ನೀಡಿದಾಗ ಮಾತ್ರ ಅವರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಅವರಿಗೆ ಕಷ್ಟ.
6. ನಿಷ್ಠುರ ಮಾತುಗಳು
ಆರೋಗ್ಯಕರ ಸಂಬಂಧವನ್ನು ಪ್ರಾಮಾಣಿಕತೆಯ ಮೇಲೆ ನಿರ್ಮಿಸಲಾಗುತ್ತದೆ. ಮತ್ತು ಧನು ರಾಶಿಯವರು ಸತ್ಯವಂತರಾಗಿರೇ. ಅವರ ಮಾತುಗಳು ಕೆಲವೊಮ್ಮೆ ಬಹಳ ನಿಷ್ಠುರವಾಗಿರುತ್ತವೆ. ಇದು ಅವರ ಸಂಗಾತಿಯ ಮನಸ್ಸನ್ನು ನೋಯಿಸುತ್ತದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತಾಡಲು ಅವರಿಗೆ ತಿಳಿದಿಲ್ಲ.
Astro Tips: ನವಗ್ರಹ ದೋಷದಿಂದ ಮುಕ್ತರಾಗಲು ಈ 9 ವೃಕ್ಷಗಳನ್ನು ಪೂಜಿಸಿ..
7. ಅತಿಯಾದ ಸ್ವಾತಂತ್ರದ ಬಯಕೆ
ಧನು ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪಾಲಿಸುತ್ತಾರೆ ಮತ್ತು ಸ್ವಾತಂತ್ರ್ಯದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಆದ್ದರಿಂದ ಅವರು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು ಸ್ವತಂತ್ರವಾಗಿರಲು ಸಾಕಷ್ಟು ಅವಕಾಶವನ್ನು ಅನುಮತಿಸುವ ಪಾಲುದಾರರ ಅಗತ್ಯವಿರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.