Latest Videos

ಬುಧ ಮಾರ್ಗಿ: ಮೂರು ರಾಶಿಗಳಿಗೆ ಲಾಭಕಾರಿ, ಎರಡಕ್ಕೆ ಅಪಾಯಕಾರಿ!

By Suvarna NewsFirst Published Jun 1, 2022, 4:13 PM IST
Highlights

ಮೇ 10, 2022ರಂದು ಬುಧ ಗ್ರಹವು ಹಿಮ್ಮುಖ ಚಲನೆ ಆರಂಭಿಸಿತ್ತು. ಆದರೆ, ಜೂನ್ 3ರಂದು ಬುಧವು ವೃಷಭ ರಾಶಿಯಲ್ಲಿ ನೇರ ಸಾಗಣೆ ನಡೆಸುತ್ತಿದೆ. ಬುಧ ಗ್ರಹ ಪರಿವರ್ತನೆಯಿಂದ ಮೂರು ರಾಶಿಗಳು ಲಾಭ ಪಡೆದರೆ, ಎರಡು ರಾಶಿಗಳು ಎಚ್ಚರವಾಗಿರಬೇಕು ಎಂದು ಸೂಚಿಸಲಾಗಿದೆ. 

ಸೌರವ್ಯೂಹದ ಒಂಬತ್ತು ಗ್ರಹಗಳಲ್ಲಿ ಬುಧ ಗ್ರಹ(Planet Mercury)ವನ್ನು ರಾಜಕುಮಾರ ಎಂದು ಕರೆಯಲಾಗುತ್ತದೆ. ಇದು ಮಾನವ ಜೀವನದಲ್ಲಿ ಆರ್ಥಿಕತೆ, ಬುದ್ಧಿವಂತಿಕೆ, ವ್ಯಾಪಾರ ಇತ್ಯಾದಿಗಳಲ್ಲಿ ತನ್ನ ಪ್ರಭಾವ ಬೀರುತ್ತದೆ.  ಈ ಕಾರಣದಿಂದಾಗಿ, ನಿಮ್ಮ ರಾಶಿಚಕ್ರ ಚಿಹ್ನೆ(Zodiac signs)ಯಲ್ಲಿ ಬುಧ ಗ್ರಹವು ಸರಿಯಾದ ಸ್ಥಾನದಲ್ಲಿರದಿದ್ದರೆ ನಿಮ್ಮ ಜೀವನದ ಈ ಮೇಲೆ ಹೇಳಿದ ಅಂಶಗಳ ಮೇಲೆ ಪರಿಣಾಮ ಬೀರಬಹುದು. ಮೇ 10, 2022ರಂದು, ಬುಧ ಗ್ರಹವು ಹಿಮ್ಮುಖ ಚಲನೆ(retrograde motion) ಆರಂಭಿಸಿತ್ತು. ಆದರೆ 3 ಜೂನ್ 2022 ರಂದು, ಅದು ಮತ್ತೆ ವೃಷಭ(Taurus) ರಾಶಿಯಲ್ಲಿ ನೇರವಾಗಿ ಚಲಿಸುತ್ತಿದೆ. ಬುಧದ ಈ ನಡೆ ಹಲವಾರು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವವನ್ನು ಬೀರಲಿದೆ. ಬುಧ ಗ್ರಹದ ಈ ಸಾಗಣೆಯಿಂದ ಯಾವೆಲ್ಲ ರಾಶಿಚಕ್ರಗಳ ಮೇಲೆ  ಋಣಾತ್ಮಕ ಪರಿಣಾಮ ಬೀರುವುದು, ಯಾವೆಲ್ಲ ರಾಶಿಗಳು ಲಾಭ ಗಳಿಸುವುವು ನೋಡೋಣ. 

ಬುಧ ಮಾರ್ಗಿಯಿಂದ ಈ ರಾಶಿಗಳು ಎದುರಿಸಲಿವೆ ಸಂಕಷ್ಟ
ತುಲಾ(Libra): ರಾಶಿಚಕ್ರದ ಎಂಟನೇ ಮನೆಯಲ್ಲಿ ಹಿಮ್ಮುಖ ಬುಧ ಸಂಕ್ರಮಿಸುವುದು ಅನಿರೀಕ್ಷಿತ ಏರಿಳಿತಗಳನ್ನು ತರುತ್ತದೆ. ಕೆಲವು ದಿನಗಳವರೆಗೆ, ಪ್ರತಿ ನಿರ್ಧಾರ ಮತ್ತು ಕೆಲಸವನ್ನು ಎಚ್ಚರಿಕೆಯಿಂದ ಯೋಚಿಸಿ ಮಾಡಬೇಕು. ನಿಮ್ಮ ಕೆಲಸದಲ್ಲಿ ಉಂಟಾಗಬಹುದಾದ ಅಡೆತಡೆಗಳ ಹೊರತಾಗಿಯೂ ನೀವು ಅಂತಿಮವಾಗಿ ಯಶಸ್ವಿಯಾಗುತ್ತೀರಿ. ನಿಮ್ಮ ಆರೋಗ್ಯ, ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಚರ್ಮ ರೋಗಗಳ ಬಗ್ಗೆ ಕಾಳಜಿ ವಹಿಸಿ. ಸಂಚುಕೋರರ ಬಲೆಗೆ ಬೀಳಬೇಡಿ. ಕೆಲಸದ ಸ್ಥಳದಲ್ಲಿ ಹೆಚ್ಚು ಮಾತು ಬೇಡ.  ಸಾಧ್ಯವಾದಾಗಲೆಲ್ಲಾ ವಿವಾದಗಳನ್ನು ತಪ್ಪಿಸಿ.

ಧನು(Sagittarius): ರಾಶಿಚಕ್ರದ ಆರನೇ ಶತ್ರು ಮನೆಯ ಮೇಲೆ ಹಿಮ್ಮುಖ ಬುಧದ ಪರಿಣಾಮವನ್ನು ಬಹಳ ಧನಾತ್ಮಕವಾಗಿ ವಿವರಿಸಲಾಗುವುದಿಲ್ಲ. ಅನೇಕ ವಿದ್ಯಾವಂತ ಮತ್ತು ರಹಸ್ಯ ಶತ್ರುಗಳಿರುತ್ತಾರೆ. ಜನರು ನಿಮ್ಮನ್ನು ಅವಮಾನಿಸುತ್ತಾರೆ. ಎಲ್ಲಾ ವಿವಾದಗಳು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ವಿಸರ್ಜಿಸಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಈ ಸಮಯದಲ್ಲಿ, ಇತರರಿಗೆ ಹೆಚ್ಚುವರಿ ಹಣವನ್ನು ಸಾಲವಾಗಿ ನೀಡಬೇಡಿ. ಸ್ನೇಹಿತರು ಮತ್ತು ಕುಟುಂಬವು ಅಹಿತಕರ ಸುದ್ದಿಗಳನ್ನು ಪಡೆಯಬಹುದು. ಆದರೆ ನೀವು ವಿದೇಶಕ್ಕೆ ಪ್ರಯಾಣಿಸುವ ಆಯ್ಕೆಯನ್ನು ಸಹ ಹೊಂದಿರುತ್ತೀರಿ.

ವಾಸ್ತು ದೋಷದಿಂದ ಮುಕ್ತರಾಗೋಕೆ ಪ್ರಾಣಿ ಪರಿಹಾರ!

ಬುಧ ಮಾರ್ಗಿಯಿಂದ ಲಾಭ ಪಡೆವ ರಾಶಿಚಕ್ರಗಳು
ಮೇಷ(Aries): ರಾಶಿಚಕ್ರದ ಎರಡನೇ ಹಣದ ಮನೆಯಲ್ಲಿ ಬುಧದ ಚಲನೆಯಿಂದ ಆರ್ಥಿಕ ಸ್ಥಿತಿ ಬಲ ಪಡೆಯುವುದು. ಕುಟುಂಬದಲ್ಲಿ ಪರಸ್ಪರ ಸಾಮರಸ್ಯವೂ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಕೌಶಲ್ಯದ ಬಲದ ಮೇಲೆ, ಎಲ್ಲ ಸನ್ನಿವೇಶಗಳ ಮೇಲೆ ನೀವು ಸುಲಭವಾಗಿ ನಿಯಂತ್ರಣವನ್ನು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ನಿಮ್ಮ ಪರವಾಗಿ ನಿರ್ಧಾರ ಬರುವ ಸೂಚನೆಗಳಿವೆ. ಈ ಅವಧಿಯಲ್ಲಿ ದೊಡ್ಡ ಸಾಲವನ್ನು ತೆಗೆದುಕೊಳ್ಳುವಾಗ, ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಹೊರಗಿನವರು ನಿಮ್ಮ ಯಶಸ್ಸನ್ನು ತಡೆಯಲು ಪ್ರಯತ್ನಿಸುತ್ತಾರೆ, ಆದರೆ ನಿಮ್ಮ ತಿಳುವಳಿಕೆಯೊಂದಿಗೆ ನೀವು ಅದನ್ನು ನಿಯಂತ್ರಿಸುತ್ತೀರಿ.

ವೃಷಭ(Taurus): ಬುಧನು ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಮತ್ತು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಕೆಲಸದಲ್ಲಿ ಒಂದರ ನಂತರ ಒಂದರಂತೆ ತ್ವರಿತ ಯಶಸ್ಸು ಇರುತ್ತದೆ. ಕೆಲವು ದೊಡ್ಡ ಒಪ್ಪಂದಗಳನ್ನು ಕಾಣಬಹುದು. ದಪ್ಪ ಪ್ಯಾಕೇಜ್‌ನ ಹೊಸ ಕೆಲಸವನ್ನು ನೀವು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವವರಿಗೆ ಯಶಸ್ಸು ಸಿಗಲಿದೆ. ಲವ್ ಮ್ಯಾರೇಜ್ ಬಯಸುವವರಿಗೆ ಈ ಸಮಯ ತುಂಬಾ ಒಳ್ಳೆಯದು.

ತಿರುಪತಿಯಲ್ಲಿ ಕೂದಲು ಕೊಡೋದ್ರ ಹಿಂದಿದೆ ರೋಚಕ ಕತೆ!

ಕನ್ಯಾ(Libra): ನಿಮ್ಮ ರಾಶಿಯ ಒಂಬತ್ತನೇ ಮನೆಗೆ ಬುಧ ಬಂದಿದ್ದಾನೆ. ಇದನ್ನು ಅದೃಷ್ಟದ ಮನೆ ಎಂದು ಕರೆಯಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಕೈಗೂಡಲಿವೆ. ಅದೇ ಸಮಯದಲ್ಲಿ, ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬಹುದು. ಇದರಲ್ಲಿ ನೀವು ಹಣವನ್ನೂ ಮಾಡಬಹುದು. ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ಅಲ್ಲದೆ, ಈ ಸಮಯವು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. ಅಂದರೆ ಅವರು ಎಲ್ಲೋ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬಹುದು.

click me!