ಬುಧ ಮತ್ತು ಶುಕ್ರ ಡಿಸೆಂಬರ್ 5ರಂದು ಒಂದೇ ರಾಶಿಯಲ್ಲಿ ಭೇಟಿಯಾಗಲಿವೆ. ಈ ಎರಡು ಶುಭಗ್ರಹಗಳ ಸಂಯೋಗದಿಂದ 5 ರಾಶಿಚಕ್ರದ ಚಿಹ್ನೆಗಳ ಅದೃಷ್ಟ ಖುಲಾಯಿಸಲಿದೆ.
ಡಿಸೆಂಬರ್‌ನಲ್ಲಿ ಗ್ರಹಗಳ ರಾಶಿಚಕ್ರ ಬದಲಾವಣೆಯು ಅನೇಕ ರಾಶಿಚಕ್ರಗಳ ಸ್ಥಳೀಯರಿಗೆ ಅದೃಷ್ಟವನ್ನು ಸಾಬೀತುಪಡಿಸಬಹುದು. ಡಿಸೆಂಬರ್ 5ರಂದು, ಒಂದೇ ರಾಶಿಯಲ್ಲಿ ಎರಡು ಗ್ರಹಗಳು ಭೇಟಿಯಾಗುತ್ತವೆ, ಇದರ ಲಾಭವನ್ನು ಅನೇಕ ರಾಶಿಚಕ್ರಗಳ ಸ್ಥಳೀಯರು ಪಡೆಯಬಹುದು. ಈ ಸಂಚಾರವು ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 3ರಂದು ಬುಧನು ಧನು ರಾಶಿಗೆ ಪ್ರವೇಶಿಸುತ್ತಾನೆ ಮತ್ತು ಡಿಸೆಂಬರ್ 5ರಂದು ಶುಕ್ರನು ಧನು ರಾಶಿಯಲ್ಲಿ ಸಾಗುತ್ತಾನೆ, ಅಂದರೆ ಡಿಸೆಂಬರ್ 5ರಂದು ಈ ಗ್ರಹಗಳು ಧನು ರಾಶಿಯಲ್ಲಿ ಸಂಧಿಸುತ್ತವೆ. ಬುಧ ಗ್ರಹವು ಬುದ್ಧಿವಂತಿಕೆ, ವಾಕ್ಚಾತುರ್ಯ, ವ್ಯಾಪಾರ ವ್ಯವಹಾರಗಳ ಅಧಿಪತಿಯಾಗಿದ್ದರೆ, ಶುಕ್ರ ಗ್ರಹವು( Planet venus) ಐಶಾರಾಮಿ ವಸ್ತುಗಳ, ಸಂಬಂಧಗಳ, ಆಸ್ತಿಪಾಸ್ತಿಗಳ ಕಾರಕನಾಗಿದ್ದಾನೆ.
ಈ ಎರಡು ಶುಭ ಗ್ರಹಗಳ ಸಂಧಿಯು ಕೆಲ ರಾಶಿಚಕ್ರಗಳ ಮೇಲೆ ಅನುಕೂಲಕರ ಮತ್ತು ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು. ಯಾವ ರಾಶಿಗಳ ಈ ಗ್ರಹಗಳ ಧನು ಪರಿವರ್ತನೆಯ(Planet transits in Sagittarius zodiac signs) ಲಾಭ ಪಡೆಯುತ್ತಾರೆ ನೋಡೋಣ.
New Year 2023: ಮನೆಯಲ್ಲಿ ವರ್ಷವಿಡೀ ಹಣವಿರಬೇಕಂದ್ರೆ ಈ ವಸ್ತುಗಳನ್ನು ಹೊರ ಹಾಕಿ!
ಧನು ರಾಶಿ(Sagittarius)
ಶುಕ್ರ ಮತ್ತು ಬುಧ ಇದೇ ಧನು ರಾಶಿಯಲ್ಲಿ ಸಾಗುತ್ತಾರೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಬರುತ್ತವೆ. ಆರ್ಥಿಕವಾಗಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯವನ್ನು ಹೆಚ್ಚಿಸಲು ಉತ್ತಮ ಅವಕಾಶಗಳಿವೆ. ಈ ಅವಧಿಯಲ್ಲಿ ವೈಯಕ್ತಿಕ ಜೀವನವೂ ಸಂತೋಷವಾಗಿರುತ್ತದೆ. ವ್ಯಾಪಾರದಲ್ಲಿ ಸುಧಾರಣೆಯ ಜೊತೆಗೆ ಲಾಭದ ಸಾಧ್ಯತೆ ಇದೆ.
ವೃಶ್ಚಿಕ ರಾಶಿ(Scorpio)
ಈ ರಾಶಿಯ ಜನರು ಈ ಸಮಯದಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಲು ಇದು ಅನುಕೂಲಕರ ಸಮಯ ಎಂದು ಸಾಬೀತುಪಡಿಸಬಹುದು. ವಿದೇಶದಿಂದಲೂ ಆರ್ಥಿಕ ಲಾಭ ಸಿಗುವ ಸಾಧ್ಯತೆ ಇದೆ. ಅನೇಕ ಜನರು ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಳದ ಲಾಭವನ್ನು ಪಡೆಯಬಹುದು. ನಿಮ್ಮ ಕೌಶಲ್ಯ ಸಾಮರ್ಥ್ಯವೂ ಸುಧಾರಿಸಬಹುದು ಮತ್ತು ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಮೊದಲಿಗಿಂತ ಉತ್ತಮವಾಗಿರುತ್ತದೆ.
ಕನ್ಯಾ ರಾಶಿ(Virgo)
ಬುಧ ಮತ್ತು ಶುಕ್ರ ಒಂದೇ ರಾಶಿಯಲ್ಲಿ ಭೇಟಿಯಾಗುವುದರಿಂದ ಕನ್ಯಾ ರಾಶಿಯ ಸ್ಥಳೀಯರು ತಮ್ಮ ತಾಯಿಯ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಮನೆಯ ಜೀವನ ಸುಖಮಯವಾಗಿರಬಹುದು. ಈ ಸಮಯದಲ್ಲಿ ನಿಮ್ಮ ಸೌಕರ್ಯಗಳು ಸಹ ಹೆಚ್ಚಾಗಬಹುದು. ಆದಾಯ ಹೆಚ್ಚುವುದು.
Shopoholic zodiac: ಸೇಲ್ಸ್ ಎಂದರೆ ಸಾಕು, ಶಾಪಿಂಗ್ ಮಾಡೋ ರಾಶಿಗಳಿವು! ನಿಮಗೂ ಈ ಅಭ್ಯಾಸ ಇದೆಯಾ?
ಈ ರಾಶಿಯವರಿಗೆ ತೊಂದರೆಗಳು ಹೆಚ್ಚಾಗಬಹುದು.
ಕರ್ಕಾಟಕ ರಾಶಿ(Cancer)
ಈ ರಾಶಿಯ ಸ್ಥಳೀಯರ ಆರೋಗ್ಯ ಹದಗೆಡಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ನೀವು ಯಾವುದೇ ಕಾನೂನು ವಿಷಯದಲ್ಲಿ ಭಾಗಿಯಾಗಿದ್ದರೆ, ಅದರಲ್ಲಿ ನೀವು ಹಿನ್ನಡೆ ಅನುಭವಿಸಬಹುದು. ಆದಷ್ಟು ಜಾಗರೂಕರಾಗಿರಬೇಕು. ಮಾತಿನಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಸಂಬಂಧ ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ
ಮಕರ ರಾಶಿ(Capricorn)
ಸ್ಥಳೀಯರ ಖರ್ಚುಗಳು ಹೆಚ್ಚಾಗಬಹುದು. ಈ ಕಾರಣದಿಂದಾಗಿ, ಕೆಲವು ಸಮಸ್ಯೆಗಳು ಸಹ ಉದ್ಭವಿಸಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಜಾಗರೂಕರಾಗಿರಬೇಕು, ನೀವು ಕೆಲವು ಕಾಯಿಲೆಗಳಿಂದ ಬಳಲುವಿರಿ. ನಿಮ್ಮ ಸಂಬಂಧವು ಹಾಳಾಗುವ ಸಾಧ್ಯತೆಯಿದೆ. ಹಾಗಾಗಿ, ಡಿಸೆಂಬರ್ 5ರ ನಂತರ ಮಾತು ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.