ಮಾರ್ಚ್‌ನಲ್ಲಿ ಈ ರಾಶಿಗೆ ಸುಖದ ಸುಪ್ಪತ್ತಿಗೆ, ಈ ರಾಶಿಗೆ ಶನಿ ಬಾಧೆ, ಯಾರಿಗೆ ಅದೃಷ್ಟ? ದುರಾದೃಷ್ಟ?

Published : Feb 27, 2025, 12:20 PM ISTUpdated : Feb 28, 2025, 10:03 AM IST
ಮಾರ್ಚ್‌ನಲ್ಲಿ ಈ ರಾಶಿಗೆ ಸುಖದ ಸುಪ್ಪತ್ತಿಗೆ, ಈ ರಾಶಿಗೆ ಶನಿ ಬಾಧೆ, ಯಾರಿಗೆ ಅದೃಷ್ಟ? ದುರಾದೃಷ್ಟ?

ಸಾರಾಂಶ

ಮಾರ್ಚ್ ನಲ್ಲಿ ಕುಂಭ ಮತ್ತು ಮೀನ ಸಂಚಾರ, ಕ್ರೋಧಿ ಸಂವತ್ಸರದ ಕೊನೆ, ವಿಶೇಷ ಗ್ರಹಸಂಚಾರ ಹೀಗೆ ವಿಶೇಷ ತಿಂಗಳಾಗಿ ಗುರುತಿಸಲ್ಪಟ್ಟಿದೆ. ಆದರೂ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷ್ಯ ತಜ್ಞರಾದ ಹರೀಶ್ ಕಶ್ಯಪ್ ತಿಳಿಸಿದ್ದಾರೆ .

ಯುಗಾದಿಗೆ ಚಂದ್ರ, ರಾಹು, ಶನಿ ಸೇರಿ ಅಪರೂಪದ ಯೋಗವನ್ನು ಉಂಟುಮಾಡುತ್ತಿದ್ದಾರೆ. ಹಾಗೇ ರಾಹು-ಶನಿಯ ಯತಿಯು ಇದ್ದು, ರವಿ-ಚಂದ್ರ-ಶುಕ್ರ-ಬುಧ ಸೇರಿದಾಗ ಅಶುಭ ಫಲಗಳು ಉಂಟಾಗುತ್ತದೆ. 14 ಮಾರ್ಚ್ ಮತ್ತು 29  ಮಾರ್ಚ್ ಚಂದ್ರ ಮತ್ತು ಸೂರ್ಯ ಗ್ರಹಣವಿದೆ. ಆದರೆ ಇದು ಭಾರತ ಮತ್ತು ಪೂರ್ವ ದೇಶಗಳಿಗೆ ಗೋಚರವಿರಲ್ಲ. ಜನರು ಮಾರ್ಚ್ ತಿಂಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಜಗಳ ಕದನಗಳು ಆಗಬಹುದು. ಮಾನಸಿಕ ಅಸ್ಥರತೆ ಹೆಚ್ಚಾಗಲಿದೆ. ಶ್ರೀ ರುದ್ರಾಭಿಷೇಕ, ಶಿವನಾಮ-ಹರಿನಾಮ ಸ್ಮರಣೆ, ಗ್ರಹಶಾಂತಿ, ದೇವಿ ಆರಾಧನೆಯಲ್ಲಿ ಹೆಚ್ಚು ತೊಡಗಬೇಕು.  

ಮೇಷ ರಾಶಿಗೆ ಧನಾದಯ ಉತ್ತಮವಿದ್ದು, ವ್ಯಾಪಾರ ವ್ಯವಹಾರಗಳು ಹೊಸ ಚೈತನ್ಯವನ್ನು ಪಡೆಯುತ್ತವೆ. ಜನ್ಮ ಶನಿಯ ಪ್ರಭಾವ ಆರಂಭವಾಗುತ್ತದೆ. ರಾಹುವಿನ ಪ್ರಭಾವವನ್ನು ಕಾಣುವಿರಿ. ಶ್ರೀ ನರಸಿಂಹನ ಸೇವೆ ಮಾಡುತ್ತೀರಿ.

ವೃಷಭ ರಾಶಿಗೆ ಜನ್ಮ ಗುರು ವಿಶೇಷ ಸ್ಥಾನಮಾನಕ್ಕೆ ಕಾರಣನಾಗುತ್ತಾನೆ. ಶನಿಯಿಂದ ಲಾಭ ಫಲವಿದೆ. ಸ್ರೀಯರಿಂದ ಜಾಗ್ರತೆ. ಶ್ರೀ ದುರ್ಗಾರಾಧನೆ ನಡೆಯುತ್ತಿರಲಿ.

ಮಿಥುನ ರಾಶಿಗೆ ಜನ್ಮ ಕುಜ, ವ್ಯಯದ ಗುರು ವ್ಯವಹಾರ, ನೆಮ್ಮದಿ ಕೊಡುವುದಿಲ್ಲ.  ತಾಳ್ಮೆಯಿಂದ ನಡೆಯಿರಿ. ಮಾತು ಖರ್ಚುಗಳ ಬಗ್ಗೆ ಜಾಗ್ರತೆಯಿರಲಿ. ಶ್ರೀ ದುರ್ಗಾ ಸುಬ್ರಮಣ್ಯ ದೇವರ ಮೊರೆ ಹೋಗಿ.

ಕರ್ಕ ರಾಶಿಗೆ ಅನೇಕ ಅವಕಾಶವಿದೆ. ಹುರುಪು ಪಡೆಯುವಿರಿ. ಅಷ್ಟಮ ಶನಿ ಪರಿಹಾರ, ಆದಾಯ ಉತ್ತಮ, ಶ್ರೀ ಸುಭ್ರಮಣ್ಯ ನಾಗರ ಸೇವೆಗಳಾಗಲಿ.

ಸಿಂಹ ರಾಶಿಗೆ ರವಿ ಗುರು ದೆಸೆಯಿಂದ ಉದ್ಯೋಗ ಭಡ್ತಿ,ಅಷ್ಟಮ ಶನಿ ಆರಂಭ, ಆರೋಗ್ಯದ ಬಗ್ಗೆ ಗಮನವಿರಲಿ, ಸಂಚಾರದಲ್ಲಿ ಜಾಗ್ರತೆ. ಗ್ರಹಗಳ ಶಾಂತಿ ಆಗಲಿ.

ಕನ್ಯಾ ರಾಶಿಗೆ ರವಿಯಿಂದ ಅನೂಕೂಲಕರ ತಿಂಗಳು. ವ್ಯವಹಾರಿಕವಾಗಿ ಉತ್ತಮ ತಿಂಗಳು. ವಿದ್ಯಾರ್ಥಿ ವ್ಯಧ್ಯಕೀಯ ವರ್ಗಗಳಿಗೆ ಏಳಿಗೆ. ಶ್ರೀ ಗಣಪತಿ ನಾಗರ ಪೂಜೆಗಳಾಗಲಿ. 

ತುಲಾ ರಾಶಿಗೆ ಪಂಚಮ ಶನಿ ಪರಿಹಾರ, ಏಳಿಗೆ ಕಾಣುವಿರಿ, ಕೇತುವಿನಿಂದ ಫಲ ಸಿಗುತ್ತೆ. ಶ್ರೀ ದುರ್ಗೆ ನಾಗರ ಪೂಜೆಗಳಾಗಲಿ. 

ವೃಶ್ಚಿಕ ರಾಶಿಗೆ ದೈವಾನುಕೂಲವಿದ್ದು, ಅಧಿಕಾರ ವರ್ಗಕ್ಕೆ ಶ್ರಮ ಹೆಚ್ಚುವುದು. ಪಂಚಮ ಶನಿ ಆರಂಭವು ಆಯಾಸ ತಂದೀತು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.  ಶ್ರೀ ದುರ್ಗಾ, ನರಸಿಂಹ ಆರಾಧನೆಗಳಾಗಲಿ.

ಧನು ರಾಶಿಗೆ ಬಹುಗ್ರಹ ಯೋಗದಿಂದ ಮಾನಸಿಕ ವಿಚಲತೆಯಾದೀತು. ಜಾಗ್ರತೆ ಇರಲಿ. ಗ್ರಹ ಶಾಂತಿ, ಧ್ಯಾನ ಗಳಾಗಲಿ.

ಮಕರ ರಾಶಿಗೆ ಜನ್ಮಶನಿ ಪರಿಹಾರ, ಕುಟುಂಬದಲ್ಲಿ ಅನೇಕ ಚಟುವಟಿಕೆಗಳಾಗುವುದು. ಉದ್ಯೋಗದಲ್ಲಿ ಉನ್ನತಿಯಾಗುತ್ತದೆ. ಕುಲದೇವತಾ ಪೂಜೆಮಾಡಿ.

ಕುಂಭ ರಾಶಿಗೆ ಶನಿಯ ಜನ್ಮ ಬಾಧೆ ಮುಗಿದಂತೆ. ರವಿ ಗುರು ಶುಕ್ರರ ಅನುಕೂಲದಿಂದ ಆದಾಯ ಅಧಿಕಾರ ಬದಲಾವಣೆ ಉತ್ತಮವಾಗಿರುತ್ತದೆ. ಶ್ರೀನಿವಾಸನ ದರ್ಶನ ಸೇವೆ ಇರಲಿ.

ಮೀನ ರಾಶಿಗೆ ಮಾನಸಿಕ ಗೊಂದಲಗಳು ಹೆಚ್ಚುವುದು. ಸ್ರೀಯರಿಗೆ ಬಾಧೆ.  ಜನ್ಮ ಶನಿ ಪ್ರಭಾವವಿದೆ. ಗ್ರಹ ಶಾಂತಿ ಮಾಡಿಸಿ. 

ಮಾರ್ಚ್ 2 ರಿಂದ 3 ರಾಶಿಗೆ ಅದೃಷ್ಟ, ಗುರು ರಾಶಿಯಲ್ಲಿ ಶುಕ್ರ ಹಿಮ್ಮುಖ

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ