ಕಲಬುರಗಿ: ಕೋಳಿ ಎಸೆದು ಮರಗಮ್ಮ ದೇವಿಗೆ ಹರಕೆ ತೀರಿಸಿದ ಭಕ್ತರು, ಜಾತ್ರೆಗೆ ಹರಿದುಬಂದ ಜನಸಾಗರ

By Kannadaprabha News  |  First Published Jul 29, 2022, 10:13 AM IST

ಜಾತ್ರೆಯಲ್ಲಿ ಎಲ್ಲ ಜಾತಿ ಜನಾಂಗದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಮುಟ್ಟಿಸುವುದು ಇಲ್ಲಿನ ವಿಶಿಷ್ಟ.
 


ಚಿತ್ತಾಪುರ(ಜು.29):  ಸಾವಿರಾರು ಜನಸಾಗರ ಮದ್ಯೆ ಪಟ್ಟಣದ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಬಹಳ ಅದ್ದೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಎಲ್ಲ ಜಾತಿ ಜನಾಂಗದವರು ಭಕ್ತಿಯಿಂದ ಭಾಗವಹಿಸಿ ದೇವಿಯ ಗೊಂಬೆಗಳ ಮೇಲೆ ಕೋಳಿ ಎಸೆಯುವ ಮೂಲಕ ತಮ್ಮ ಹರಕೆ ಮುಟ್ಟಿಸುವುದು ಇಲ್ಲಿನ ವಿಶಿಷ್ಟ. ಸಂಜೆ 6ಕ್ಕೆ ಮರಗಮ್ಮ ದೇವಿಯ ಗೊಂಬೆಗಳ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ತಮ್ಮ ಮನದಾಳದ ಬೇಡಿಕೆಗಳನ್ನು ಇಡೇರಿಕೆಗಾಗಿ ಇಲ್ಲಿಯ ಭಕ್ತರು ಕೋಳಿ ಕೊಡುವ ಹರಕೆ ಮಾಡಿಕೊಳ್ಳುತ್ತಾರೆ.

ಪಟ್ಟಣದ ಹೋಳಿಕಟ್ಟಾದ ದೇಶಮುಖ ಹಾಗೂ ರೇಷ್ಮಿ ಮನೆಯಿಂದ ದೇವಿಯ ಗೊಂಬೆಗಳಿಗೆ ಬಟ್ಟೆ ತರುವುದು, ಮುಕುಂದ ಬಡಿಗೇರ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೊಂಬೆಗಳ ಪೂಜೆ ಕಾರ್ಯ ನೆರವೇರಿತ್ತು, ಇಲ್ಲಿ ಮಹಿಳೆಯರು, ಸಾರ್ವಜನಿಕರು ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯಿಂದ ಪ್ರಾರಂಭವಾದ ಮೆರವಣಿಗೆ ಹನುಮಾನ ಮಂದಿರ ರಸ್ತೆ, ಶಿಶುವಿಹಾರ ಶಾಲೆಯ ರಸ್ತೆ ಮೂಲಕ ದೇವಸ್ಥಾನಕ್ಕೆ ತಲುಪಿತ್ತು.

Tap to resize

Latest Videos

ಭಟ್ಕಳದಲ್ಲಿ ಅದ್ಧೂರಿ ಮಾರಿ ಜಾತ್ರೆ: ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು

ಮೆರವಣಿಗೆ ಉದ್ದಕ್ಕೂ ಭಕ್ತರು ನೂರಾರು ಕೋಳಿಗಳು ಎಸೆಯುವುದೇ ನೋಡುಗರ ಕಣಮನ ಸೆಳೆಯುತ್ತದೆ. ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು, ಮಹಿಳೆಯರು, ರಾಜಕೀಯ ಮುಖಂಡರು, ಅಧಿಕಾರಿಗಳು, ಯುವಕರು ಹೀಗೆ ಎಲ್ಲರು ಶ್ರದ್ದಾ ಭಕ್ತಿ ಭಾವನೆಯಿಂದ ಭಾಗಹಿಸುತ್ತಾರೆ.

ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರೂ ಸಹ ಯಾವುದೇ ಜಗಳ, ಅನಾಹುತಗಳು ಆಗದೆ ಇರುವುದು ಮತ್ತೊಂದು ವಿಶೇಷ, ಪಟ್ಟಣದಲ್ಲಿ ಮರಗಮ್ಮ ದೇವಿ ಜಾತ್ರೆಗೆ ಸೇರುವಷ್ಟು ಜನ ಮತ್ತೇ ಯಾವ ಜಾತ್ರೆಗೆ ಅಷ್ಟು ಜನ ಸೇರುವುದಿಲ್ಲ ಎಂಬ ಅಭಿಪ್ರಾಯ ಇಲ್ಲಿಯ ಸಾರ್ವಜನಿಕರದ್ದಾಗಿದೆ.

click me!