ವಯಸ್ಸು ಮೀರುತ್ತಿದೆ ಮದುವೆ ಸೆಟ್ ಆಗ್ತಿಲ್ಲ ಅಂದ್ರೆ ಈ ಮಂತ್ರ ಪಠಿಸಿ; 21 ದಿನಗಳಲ್ಲಿ ನಡೆಯಲಿದೆ ಅಚ್ಚರಿ

Published : Dec 09, 2024, 03:40 PM ISTUpdated : Dec 10, 2024, 10:14 AM IST
ವಯಸ್ಸು ಮೀರುತ್ತಿದೆ ಮದುವೆ ಸೆಟ್ ಆಗ್ತಿಲ್ಲ ಅಂದ್ರೆ ಈ ಮಂತ್ರ ಪಠಿಸಿ; 21 ದಿನಗಳಲ್ಲಿ ನಡೆಯಲಿದೆ ಅಚ್ಚರಿ

ಸಾರಾಂಶ

ಮದುವೆ ವಿಚಾರದಲ್ಲಿ ದೇವರ ಮೊರೆ ಹೋಗುವವರು ನೀವಾದರೆ 21 ದಿನಗಳ ಕಾಲ ಈ ಮಂತ್ರವನ್ನು ಪಠಿಸಿ...ಪರಿಹಾರ ಸಿಕ್ಕಿದವರಿಂದ ಪಾಸಿಟಿವ್ ಕಾಮೆಂಟ್.....

ಮನೆಯಲ್ಲಿ ವಯಸ್ಸಿಗೆ ಬಂದಿರುವ ಮಕ್ಕಳ ಮದುವೆ ಆಗಿಲ್ಲ ಅಂದರೆ ಪೋಷಕರು ಸಿಕ್ಕಾಪಟ್ಟೆ ಯೋಚನೆ ಮಾಡಲು ಶುರು ಮಾಡುತ್ತಾರೆ. ಸಿಕ್ಕ ಕಡೆಯಲ್ಲಿ ಮದುವೆ ಹುಡುಗ/ ಹುಡುಗಿಯ ಫೋಟೋ ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ, ಜಾತಕ ತೋರಿಸಿ ದೇವರ ಪೂಜೆ ಮಾಡಿಸುತ್ತಾರೆ ಅದೂ ಫಲ ಕೊಟ್ಟಿಲ್ಲ ಅಂದರೆ ಮನೆ ಅಥವಾ ದೇವಸ್ಥಾನದಲ್ಲಿ ವ್ರತ ಮಾಡಲು ಹೇಳುತ್ತಾರೆ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ, ಮದುವೆ ಆಗಿಲ್ಲ ಅಂದ್ರೆ ಅಥವಾ ಹುಡುಗಿ ಬೇಗ ಸಿಗಬೇಕು ಅಂದ್ರೆ ಅಥವಾ ಹೊಸದಾಗಿ ಮದುವೆಯಾಗಿ ನೆಮ್ಮದಿಯಾಗಿ ಇಲ್ಲ ಅಂದ್ರೆ ಈ ಮಂತ್ರ ಪಠಿಸಿ ಎಂಬ ಪೋಸ್ಟ್‌ ವೈರಲ್ ಆಗುತ್ತಿದೆ. ಇದು ವರ್ಕ್ ಆಗಿದ್ಯಾ ಇಲ್ಲ ಎಂದು ಜನರು ಕಾಮೆಂಟ್ಸ್ ಮಾಡಿದ್ದಾರೆ. 

ಕಾತ್ಯಾಯನಿ ಮಂತ್ರ: 

ಓಂ ಹ್ರೀಂ ಕಾತ್ಯಾನೇಯಿ ಸ್ವಾಹ
ಹ್ರೀಂ ಶ್ರೀ ಕಾತ್ಯಾನೇಯಿ ಸ್ವಾಹ

"ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಾಧೀಶ್ವರಿ, ನಂದಗೋಪ್ಸುತಾಂ ದೇವಿಪತಿಂ ಮೇ ಕುರು ತೇ ನಮಃ".

ಕಾವ್ಯ ಗೌಡ ಗಂಡನ ಮನೆ ನಿಜಕ್ಕೂ ಯಾರಿಗೆ ಸೇರಿದ್ದು? ನೆಟ್ಟಿಗರ ಕೊಂಕು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ!

ಕಾತ್ಯಾಯನಿ ಮಂತ್ರವನ್ನು ಪಠಿಸುವುದರಿಂದ ಸಂತೋಷ ಮತ್ತು ಶಾಂತಿ ತರುತ್ತದೆ. ಈ ಮಂತ್ರ ಪಠಿಸುವುದರಿಂದ ದೋಷ ಎದುರಿಸುತ್ತಿರುವವರು ಅಥವಾ ಮದುವೆಯಾಗಲು ಕಷ್ಟ ಪಡುತ್ತಿರುವವರಿಗೆ ಸಹಾಯ ಆಗುತ್ತದೆ. ಈ ಮಂತ್ರ ಪಠಿಸಲು ಕೆಂಪು ಬಣ್ಣದ ಜಪ ಮಾಲೆ ಬಳಸಬೇಕು ಅಲ್ಲದೆ ಎದುರಿಗೆ ಮಾತಾ ಕಾತ್ಯಾಯನಿ ವಿಗ್ರಹ ಅಥವಾ ಫೋಟೋವನ್ನು ಇಡಬೇಕು. ದೇವಿಗೆ ಕೆಂಪು ಹೂವ ತುಂಬಾನೇ ಇಷ್ಟವಿರುವ ಕಾರಣ ಅದನ್ನು ಬಳಸಿದರೆ ಒಳ್ಳೆಯದು. ಒಟ್ಟು 12,500 ಬಾರಿ ಪಠಿಸ ಬೇಕು. ಈ ವ್ರತವನ್ನು 12 ಅಥವಾ 21 ದಿನಗಳ ಕಾಲ ಮಾಡಬೇಕು..ಇಷ್ಟು ದಿನಗಳಲ್ಲಿ 12,500 ಸಲ ಮುಗಿಸಬೇಕು. ಆದರೆ ದಿನಕ್ಕೆ 108 ಸಲ ಮಾತ್ರ ಮಂತ್ರ ಪಠಿಸಬೇಕು. 

ಮೋಕ್ಷಿತಾಗೆ ಬಿಗ್ ಬಾಸ್ ಅರ್ಥನೇ ಆಗಿಲ್ವಾ? ಕಿಚ್ಚನ ಪಂಚಾಯತಿಯಲ್ಲಿ ಕೆಲವರಿಗೆ ಕಿವಿಮಾತು, ಕೆಲವರಿಗೆ ಮಾತಿನ ಏಟು!

'ಈ ಮಂತ್ರ ನನಗೆ ಸಹಾಯ ಮಾಡಿ ನಾನು ಮದುವೆಯಾಗಿ ಖುಷಿಯಾಗಿದ್ದೀನಿ', ' ಮದುವೆ ಜೀವನ ಚೆನ್ನಾಗಿ ಇರಲಿಲ್ಲ ಹೀಗಾಗಿ ಕಾತ್ಯಾಯನಿ ಮಂತ್ರ ಸಹಾಯ ಮಾಡಿದೆ', 'ಬಹಳ ಶ್ರದ್ಧೆಯಿಂದ ಮಾಡಿದರೆ ಮಾತ್ರ ಫಲ ಸಿಗುವುದು','ನನ್ನ ಮಗಳಿಗೆ ಮದುವೆ ಆಗಿರಲಿಲ್ಲ ಎಂದು ನಾನು ಪೂಜೆ ಮಾಡಲು ಶುರು ಮಾಡಿದೆ ಈಗ ಆಕೆಗೆ ಮದುವೆ ಸೆಟ್ ಆಗಿದೆ ಅದು ಪೂಜೆಯ 21ನೇ ದಿನಕ್ಕೆ',' ಈ ಮಂತ್ರದಿಂದ ಬೇಗ ಫಲ ಪ್ರಾರ್ಪ್ತಿ ಆಗಲಿದೆ' ಎಂದು ಇದನ್ನು ಪಾಲಿಸಿದವರು ಕಾಮೆಂಟ್ ಮಾಡಿದ್ದಾರೆ. 

 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ