ಮನೋಕಾಮನೆ ಈಡೇರಿಸುವ ಮ್ಯಾನಿಫೆಸ್ಟೇಷನ್​ ಜಾರ್​: ಮಾಡುವುದು ಬಲು ಸುಲಭ...

Published : May 06, 2025, 10:38 PM ISTUpdated : May 07, 2025, 09:53 AM IST
ಮನೋಕಾಮನೆ ಈಡೇರಿಸುವ ಮ್ಯಾನಿಫೆಸ್ಟೇಷನ್​ ಜಾರ್​: ಮಾಡುವುದು ಬಲು ಸುಲಭ...

ಸಾರಾಂಶ

ಮನೋಕಾಮನೆ ಈಡೇರಿಕೆಗೆ ವಿವಿಧ ವಿಧಾನಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯೂಟ್ಯೂಬರ್ ರಶ್ಮಿ "ಮ್ಯಾನಿಫೆಸ್ಟೇಷನ್ ಜಾರ್" ಬಳಸಿ ಆಸೆಗಳನ್ನು ಬರೆದು ಜಾರಿನಲ್ಲಿಡುವ ವಿಧಾನ ತಿಳಿಸಿದ್ದಾರೆ. ನಟಿ ವೈಷ್ಣವಿ ಗೌಡ ಪಲಾವಿನ ಎಲೆಯ ಮೇಲೆ ಆಸೆ ಬರೆದು ಬೂದಿ ಮಾಡಿ ಗಾಳಿಗೆ ಬಿಡುವ ವಿಧಾನ ಸೂಚಿಸಿದ್ದಾರೆ. ಇವು ಮೂಢನಂಬಿಕೆಯೇ ಅಥವಾ ಪರಿಣಾಮಕಾರಿಯೇ ಎಂಬ ಚರ್ಚೆ ಮುಂದುವರೆದಿದೆ.


ಮನಸ್ಸಿನಲ್ಲಿ ಅಂದುಕೊಂಡದ್ದೆಲ್ಲಾ ನೆರವೇರಬೇಕು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನೀವು ಸಾಕಷ್ಟು ವಿಡಿಯೋಗಳನ್ನು ನೋಡಿರಬಹುದು. ಯೂಟ್ಯೂಬ್​ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಈ ರೀತಿಯ ವಿಡಿಯೋಗಳಿಗಂತೂ ಬರವೇ ಇಲ್ಲ. ಕೆಲವರು ತುಂಬಾ ಸ್ಟಡಿ ಮಾಡಿ  ಈ ಬಗ್ಗೆ ಹೇಳುವುದು ಉಂಟು. ಇನ್ನು ಕೆಲವರು ಲೈಕ್ಸ್​, ವ್ಯೂವ್ಸ್​ ಗೋಸ್ಕರ ಏನೇನೋ ಟಿಪ್ಸ್​ ಕೊಡುವುದು ಉಂಟು. ಜನರು ಇಂಥ ವಿಡಿಯೋಗಳನ್ನು ಹೆಚ್ಚು ನೋಡುವ ಕಾರಣ, ಅದನ್ನೇ ಬಂಡವಾಳ ಮಾಡಿಕೊಂಡು ಏನೇನೋ ಹೇಳುವುದು ಉಂಟು. ಆದರೆ ಜ್ಯೋತಿಷಿ, ಭವಿಷ್ಯ, ಮ್ಯಾನಿಫೆಸ್ಟೇಷನ್​ ಎನ್ನುವುದು ಸುಳ್ಳಲ್ಲ ಎನ್ನುವುದು ಕೂಡ ಸಾಬೀತಾಗಿದೆ. 

ಕೆಲವರಿಗೆ ಕೆಲವೊಂದು ವಿಷಯಗಳು ಮೂಢನಂಬಿಕೆ ಎನ್ನಿಸಬಹುದು. ಇಂದಿನ ಕಾಲಕ್ಕೆ ಇವೆಲ್ಲಾ ಅಪ್ರಸ್ತುತ ಎಂದೂ ಎನ್ನಿಸಬಹುದು. ಆದರೆ ತಲೆತಲಾಂತರಗಳಿಂದ ನಮ್ಮ ಮುತ್ತಜ್ಜ ಹಾಗೂ ಅವರ ಹಿರಿಯ ತಲೆಗಳಿಂದ ಬಂದಿರುವ ಅದೆಷ್ಟೋ ಶಾಸ್ತ್ರಗಳು, ನಂಬಿಕೆಗಳು ಇಂದಿಗೂ ಪ್ರಸ್ತುತ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ. ಕೆಲವರು ಇಂಥ ಸಂಪ್ರದಾಯಗಳನ್ನು ನಂಬಿ ತಮಗೆ ಆಗಿರುವ ಅನುಭವಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ಇವೆಲ್ಲಾ ಓಬಿರಾಯನ ಕಾಲದ್ದು, ಇಂದಿನ ಕಾಲಕ್ಕೆ ಅಪ್ರಸ್ತುತ ಎಂದು ಹೇಳುವುದು ಉಂಟು.

ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...

ಆದರೆ, ನಾವು ಏನು ಅಂದುಕೊಳ್ಳುತ್ತೆವೆಯೋ ಅದು ನೆರವೇರಬೇಕು ಎಂದರೆ ಮ್ಯಾನಿಫೆಸ್ಟೇಷನ್​ ಜಾರ್​ (Manifestation Jar) ಎನ್ನುವ ಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ ಯೂಟ್ಯೂಬರ್​, ರೇಡಿಯೋ ಜಾಕಿ ರ್ಯಾಪಿಡ್​ ರಶ್ಮಿ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಇದರ ಬಗ್ಗೆ ಮಾತನಾಡಿದ್ದಾರೆ. ಇದೇನೂ ವಿಶೇಷ ಜಾರ್​ ಅಲ್ಲ. ಬದಲಿಗೆ ಮಾಮೂಲಿ ಜಾರ್​. ಅದರಲ್ಲಿ ನೀವು ಏನು ಅಂದುಕೊಳ್ಳುತ್ತೀರೋ, ಅಂದರೆ ನಿಮಗೆ  ಏನು ಆಗಬೇಕು ಎಂದು ಮನಸ್ಸಿನಲ್ಲಿ ಇರುತ್ತದೆಯೋ ಅದನ್ನು ಚೀಟಿಯಲ್ಲಿ ಬರೆದು ಬರೆದು ಪ್ರತಿದಿನ ಆ ಜಾರಿನಲ್ಲಿ ಹಾಕುತ್ತಾ ಇರಬೇಕು. ಆಗಾಗ್ಗೆ ಅದನ್ನು ತೆಗೆಯುತ್ತಾ ನೋಡಿ, ಅದನ್ನು ಪದೇ ಪದೇ ನೋಡುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.

ಈ ಹಿಂದೆ ಸೀತಾರಾಮ ನಟಿ ವೈಷ್ಣವಿ ಗೌಡ ಕೂಡ ಈ ಬಗ್ಗೆ ಮಾತನಾಡಿದ್ದರು. ಅವರು ಬೇರೆ ವಿಧಾನ ತಿಳಿಸಿಕೊಟ್ಟಿದ್ದರು.  ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವ ಪಲಾವಿನ ಎಲೆ ಇದು. ಬೇ ಲೀಫ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಅದರ ಮೇಲೆ ತನಗೆ ಏನು ಆಗಬೇಕು ಎನ್ನುವ ವಿಷ್​ಗಳನ್ನು ಬರೆದು, ಒಂದು ಪ್ಲೇಟ್​ನಲ್ಲಿ ಅವುಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿ, ಅದನ್ನು ಗಾಳಿಯಲ್ಲಿ ಬಿಡುವಂತೆ ಹೇಳಿದ್ದಾರೆ. ಇದರಿಂದ ಯಾವುದೋ ರೂಪದಲ್ಲಿ ವಿಷ್​ ನೆರವೇರುವುದಾಗಿ ಹೇಳಿದ್ದಾರೆ. 

ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?