Astrology Tips : ಮದುವೆಗೆ ಮುನ್ನ ಈ ಕೆಲಸ ಮಾಡಿದ್ರೆ ಕಾಡಲ್ಲ ಸಮಸ್ಯೆ

By Suvarna NewsFirst Published Nov 22, 2022, 6:54 PM IST
Highlights

ಮನೆಯ ಮುಂದೆ ಮಾವಿನ ಮರ ಇದ್ದೇ ಇರುತ್ತೆ. ಮಾವಿನ ಮರದಲ್ಲಿ ಅಪಾರ ಶಕ್ತಿಯಿದೆ. ಮಾವಿನ ಮರದ ಕೆಲ ಉಪಾಯ ನಮ್ಮ ಜೀವನಕ್ಕೆ ನೆರವಾಗಲಿದೆ. ಭವಿಷ್ಯ ಸುಂದರವಾಗಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

ನಮ್ಮ ಸುತ್ತಮುತ್ತಲಿರುವ ಅನೇಕ ಗಿಡಗಳು ನಮಗೆ ನೆರಳು ನೀಡುವುದು ಮಾತ್ರವಲ್ಲ ಅನೇಕ ದೋಷಗಳಿಂದ ನಮ್ಮನ್ನು ಮುಕ್ತಿಗೊಳಿಸುತ್ತದೆ. ಮದುವೆ ಸೇರಿದಂತೆ ಯಾವುದೇ ಸಮಾರಂಭವಿರಲಿ, ಹಬ್ಬವಿರಲಿ ಮನೆ ಮುಂದೆ ಮಾವಿನ ತೋರಣ ಹಾಕ್ತೇವೆ. ಹಬ್ಬದ ಸಂದರ್ಭದಲ್ಲಿ ಮಾವಿನ ಎಲೆಗಳನ್ನು ತಂದು ಮನೆಯ ಮುಖ್ಯ ದ್ವಾರಕ್ಕೆ ಹಾಕಿದಾಗ್ಲೇ ಮನೆಗೆ ಹಬ್ಬದ ಕಳೆ ಬರುತ್ತದೆ. ಯಾವುದೇ ಮಂಟಪವಿರಲಿ ಅದಕ್ಕೆ ಮಾವಿನ ಎಲೆಗಳನ್ನು ಹಾಕುವ ಪದ್ಧತಿ ನಮ್ಮಲ್ಲಿದೆ. 

ಮಾವಿನ (Mango) ಮರ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಿಂದೂ (Hindu) ಧರ್ಮದಲ್ಲಿ, ಮಾವಿನ ಎಲೆಗಳಿಗೆ ಮಾತ್ರವಲ್ಲ ಮಾವಿನ ಮರಕ್ಕೂ ಮಹತ್ವವಿದೆ. ಮಾವಿನ ಮರವನ್ನು ಪೂಜಿಸುವುದು ಮಂಗಳಕರವೆಂದು ನಂಬಲಾಗಿದೆ. ಜ್ಯೋತಿಷ್ಯ (Astrology) ದ ಪ್ರಕಾರ, ಮಾವು ಸೂರ್ಯ ಗ್ರಹಕ್ಕೆ ಸಂಬಂಧಿಸಿದೆ. ಇದಲ್ಲದೆ ಮಾವಿನ ಮರವು ರಾಹು ಮತ್ತು ಕೇತುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಮಾವಿನ ಮರಕ್ಕೆ ಪೂಜೆ ಮಾಡುವ ಜೊತೆಗೆ ಕೆಲ ಪರಿಹಾರಗಳನ್ನು ಮಾಡಿದ್ರೆ ನಮ್ಮ ಅನೇಕ ಸಮಸ್ಯೆ ಕೊನೆಗೊಳ್ಳುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.

ಪ್ರಯಾಣ ಪ್ರಾರಂಭಿಸುವ ಮೊದಲು ಜ್ಯೋತಿಷ್ಯ ಶಾಸ್ತ್ರದ ಈ ವಿಷಯ ನೆನಪಿಡಿ

ಮಾವಿನ ಮರದಿಂದ ಇದೆ ಈ ಎಲ್ಲ ಪ್ರಯೋಜನ

  •  ಮಧುರ ವೈವಾಹಿಕ ಜೀವನಕ್ಕೆ ಇಲ್ಲಿದೆ ಉಪಾಯ : ಮದುವೆಯಾದ್ಮೇಲೆ ದಾಂಪತ್ಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಎಂದಾದ್ರೆ ಮದುವೆಗೆ ಮುನ್ನವೇ ನೀವು ಕೆಲ ಉಪಾಯಗಳನ್ನು ಮಾಡಬೇಕಾಗುತ್ತದೆ. ಮದುವೆಗೆ ಮೊದಲು ಮನೆಯಿಂದ ದೂರದ ಯಾವುದಾದರೂ ಸ್ಥಳದಲ್ಲಿ 5 ಮಾವಿನ ಗಿಡಗಳನ್ನು ನೆಟ್ಟು ಆ ಗಿಡಗಳಿಗೆ ನೀರು ಹಾಕಿ ಪ್ರತಿದಿನ ವಿಷ್ಣುವನ್ನು ಸ್ಮರಿಸಬೇಕು. ಇದ್ರಿಂದ ಮುಂದಿನ ಜೀವನ ಸುಖಮಯವಾಗಿರುತ್ತದೆ.
  • ಮದುವೆಗೆ ಮುನ್ನ ಎಲ್ಲಿಗಾದರೂ ಹೊರಗೆ ಹೋಗುವಾಗ ಮಾವಿನ ಎಲೆಯನ್ನು ಬಟ್ಟೆಯ ಜೊತೆ ಹಳದಿ ಮತ್ತು ಕೆಂಪು ಬಣ್ಣದ ದಾರದಲ್ಲಿ ಕಟ್ಟಿ, ಕೈಗೆ ಕಟ್ಟಿಕೊಳ್ಳಿ. 
  • ಮದುವೆಗೆ ಮೊದಲು ಪ್ರತಿದಿನ ಮಾವಿನ ಮರಕ್ಕೆ ಪ್ರದಕ್ಷಿಣೆ ಹಾಕುವುದ್ರಿಂದಲೂ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. ಮಾವಿನ ಮರಕ್ಕೆ ನೀರನ್ನು ಹಾಕುವಾಗ ಓಂ ವೈಷ್ಣವೇ ನಮಃ ಮಂತ್ರವನ್ನು ಜಪಿಸಬೇಕು. 
  • ಮದುವೆಗೆ ಮುನ್ನ ಮಾವಿನ ಮರದ ಬೇರನ್ನು ಮದುವೆಯಾಗುವವರ ಯಾವುದಾದರೊಂದು ವಸ್ತುವಿನೊಂದಿಗೆ ಕಟ್ಟಿ ದೇವರ ಮುಂದೆ ಇಡಬೇಕು. ಇದ್ರಿಂದ ಮುಂದೆ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ. 
  • ಮದುವೆಯ ಮೊದಲು 11 ಶನಿವಾರದವರೆಗೆ ಮಾವಿನ ಮರದ ಎಲೆಗಳನ್ನು ಮುರಿದು ತೋರಣವನ್ನು ಮಾಡಿ ದೇವಸ್ಥಾನಕ್ಕೆ ಅರ್ಪಿಸಬೇಕು. ಹೀಗೆ ಮಾಡಿದ್ರೆ ದಾಂಪತ್ಯದಲ್ಲಿ ಯಾವುದೇ ಗಲಾಟೆ, ಜಗಳ, ತೊಂದರೆ ಎದುರಾಗುವುದಿಲ್ಲ.  

ಜೀವನದ ಇತರ ತೊಂದರೆಗೂ ಮಾವಿನ ಮರದಲ್ಲಿದೆ ಪರಿಹಾರ : ವಾಸ್ತು ಪ್ರಕಾರ ಮನೆಯಲ್ಲಿ ಮಾವಿನ ಮರವನ್ನು ನೆಡುವುದರಿಂದ ಒಳ್ಳೆಯ ಫಲ ಸಿಗುತ್ತದೆ. ಚಂದ್ರ, ಶನಿ ಅಥವಾ ರಾಹುವಿನ ತೊಂದರೆಯಿಂದ ಮುಕ್ತಿ ಸಿಗುತ್ತದೆ. ಚಂದ್ರ, ರಾಹು, ಶನಿ ದೋಷವಿದ್ದವರು ಮಾವಿನ ಮರಕ್ಕೆ 1 ಚಮಚ ಕಪ್ಪು ಎಳ್ಳನ್ನು 1 ಚಮಚ ಹಾಲಿನ ಜೊತೆ ಅರ್ಪಿಸಬೇಕು.ಮಾವಿನ ಮರದ ಎಲೆಯ ಮೇಲೆ ಶ್ರೀಗಂಧದಿಂದ ಜೈ ಶ್ರೀ ರಾಮ್ ಎಂದು ಬರೆದು ಹನುಮಂತನ ದೇವಸ್ಥಾನಕ್ಕೆ ಪ್ರತಿದಿನ ಅರ್ಪಿಸಬೇಕು. ಮಾವಿನ ಮರದ ತೊಗಟೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ಬಿಡಬೇಕು. ಇದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ.

ಮನೆಯಲ್ಲಿ ಗ್ಲಾಸ್ ಒಡೆದ್ರೆ ಶುಭವೋ? ಅಶುಭವೋ?  

ಮಾವಿನ ಮರವನ್ನು ನೆಡುವ ಮುನ್ನ ಇದನ್ನು ಗಮನಿಸಿ : ಮನೆಯ ಅಂಗಳದಲ್ಲಿ ಮಾವಿನ ಮರವನ್ನು ನೆಡುವವರು ಅದರ ದಿಕ್ಕನ್ನು ನೋಡಬೇಕು. ಮನೆಯ ನೈಋತ್ಯ ದಿಕ್ಕಿನಲ್ಲಿ ಮಾವಿನ ಮರವನ್ನು ನೆಡಬೇಕು. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿನ ಮರವನ್ನು ನೆಡುವಾಗ ಅದರ ನೆರಳು ಮನೆಯ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. 

click me!