
ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ಮಹಾ ತಪ್ಪು ಎಂಬ ಹೇಳಿಕೆ ಇತ್ತೀಚಿನ ದಿನಗಳಲ್ಲಿ ಭಾರೀ ಚಾಲ್ತಿಯಲ್ಲಿರುವ ಹೇಳಿಕೆಯಾಗಿದೆ. ಇದಕ್ಕೆ ತಕ್ಕಂತೆ ನಮ್ಮ ಜ್ಯೋತಿಷ್ಯ ಶಾಸ್ತ್ರಗಳು ಹಾಗೂ ಗರುಡ ಪುರಾಣಗಳಲ್ಲಿಯೂ ಉಲ್ಲೇಖ ಮಾಡಲಾಗಿದೆ. ಎಂತಹ ಆಗರ್ಭ ಶ್ರೀಮಂತ ವ್ಯಕ್ತಿಗಳಾಗಿದ್ದರೂ, ಮನೆಯಲ್ಲಿ ಈ 3 ತಪ್ಪುಗಳನ್ನು ಮಾಡಿದರೆ ಎಲ್ಲವನ್ನೂ ಕಳೆದುಕೊಂಡು ನಿಮ್ಮ ಕುಟುಂಬ ಬೀದಿಗೆ ಬರಲಿದೆ ಎಂದು ಹೇಳಲಾಗುತ್ತದೆ. ಗರುಡ ಪುರಾಣದಲ್ಲಿ ತಿಳಿಸಲಾದ ಈ 3 ಮಹತ್ವದ ಅಂಶಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..
ಗರುಡ ಪುರಾಣದ ಪ್ರಕಾರ ಜೀವನ ನಿರ್ವಹಣೆ: ನಮ್ಮ ಧರ್ಮಗ್ರಂಥಗಳಲ್ಲಿ ಜೀವನ ನಿರ್ವಹಣೆಗೆ ಸಂಬಂಧಿಸಿದ ಹಲವು ಸಲಹೆಗಳನ್ನು ನೀಡಲಾಗಿದೆ. ಇವುಗಳಲ್ಲಿ ನಮ್ಮ ಯಾವ ತಪ್ಪುಗಳು ಹಣ ಅಥವಾ ಆರ್ಥಿಕತೆ ನಷ್ಟಕ್ಕೆ ಕಾರಣವಾಗಬಹುದು ಎಂಬುದನ್ನೂ ಬರೆಯಲಾಗಿದೆ. ಗರುಡ ಪುರಾಣವು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಒಂದಾಗಿದೆ. ಈ ಗ್ರಂಥದಲ್ಲಿ 3 ಕೆಲಸಗಳ ಬಗ್ಗೆ ತಿಳಿಸಲಾಗಿದ್ದು, ಇವುಗಳನ್ನು ಮಾಡುವುದರಿಂದ ಎಂತಹ ಐಶ್ವರ್ಯವಂತರೂ ಬಡವರಾಗಬಹುದು. ಈ ಕೆಲಸಗಳು ನೋಡಲು ಚಿಕ್ಕದಾಗಿ ಕಂಡರೂ ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ತಿಳಿಸಲಾಗಿದೆ.
ರಾತ್ರಿ ಎಂಜಲು ಪಾತ್ರೆಗಳನ್ನು ಶುಚಿಗೊಳಿಸದೇ ಇಡುವುದು: ಕೆಲವರು ತಮ್ಮ ಆಲಸ್ಯದಿಂದ ರಾತ್ರಿ ಊಟ ಮಾಡಿದ ಎಂಜಲು ಪಾತ್ರೆಗಳನ್ನು ಸಿಂಕ್‌ನಲ್ಲಿ ಬಿಡುತ್ತಾರೆ. ಅವುಗಳನ್ನು ಬೆಳಗ್ಗೆ ಸಮಯ ಸಿಕ್ಕಿದಾಗ ಅಥವಾ ಮಕ್ಕಳು ಶಾಲೆಗೆ ಮತ್ತು ಗಂಡ ಕೆಲಸಕ್ಕೆ ಹೋದಾಗ ಸ್ವಚ್ಛಗೊಳಿಸುತ್ತಾರೆ. ಇದು ಚಿಕ್ಕ ವಿಷಯದಂತೆ ಕಂಡರೂ, ಇದರಿಂದ ನಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ. ಜೊತೆಗೆ, ಲಕ್ಷ್ಮಿ ದೇವಿಯು ಅಂತಹ ಮನೆಯನ್ನು ತಕ್ಷಣವೇ ಬಿಟ್ಟು ಹೋಗುತ್ತಾಳೆ. ಆದ್ದರಿಂದ ಇಂತಹ ಮನೆಗಳಲ್ಲಿ ವಾಸಿಸುವ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಬೇಗನೆ ಬಡವನಾಗುತ್ತಾನೆ.
ಇದನ್ನೂ ಓದಿ: ಕನಸಿನಲ್ಲಿ ಕಂಡ ಈ ನಾಲ್ಕು ವಿಷ್ಯವನ್ನು ಹೆಂಡ್ತಿಗೂ ಕೂಡ ಹೇಳಬೇಡಿ
ಮನೆಯನ್ನು ಕೊಳಕಾಗಿಡುವುದು: ಗರುಡ ಪುರಾಣದ ಪ್ರಕಾರ, ತಮ್ಮ ಮನೆಯನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು. ಮನೆಯಲ್ಲಿ ವಸ್ತುಗಳನ್ನು ಅಲ್ಲಲ್ಲಿ ಬಿಸಾಡುವ ಜನರು ಬೇಗನೆ ಬಡವರಾಗುತ್ತಾರೆ. ಏಕೆಂದರೆ ಲಕ್ಷ್ಮಿ ದೇವಿಯು ಅಂತಹ ಮನೆಯಲ್ಲಿ ಹೆಚ್ಚು ಕಾಲ ವಾಸಿಸುವುದಿಲ್ಲ. ಅಂತಹ ಮನೆಯಲ್ಲಿ ರೋಗಗಳು ಹರಡುತ್ತವೆ. ಹಣದ ಅನಗತ್ಯ ಖರ್ಚು ಕೂಡ ಆಗುತ್ತದೆ. ಅಂತಹ ಕುಟುಂಬದ ವಾತಾವರಣವು ನಕಾರಾತ್ಮಕವಾಗಿರುತ್ತದೆ. ಆದ್ದರಿಂದ ಪ್ರತಿದಿನ ಮನೆಯನ್ನು ಗುಡಿಸಿ, ಒರೆಸಿ ಮತ್ತು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ.
ಮನೆಯಲ್ಲಿ ಕಸ ಸಂಗ್ರಹಿಸುವುದು: ಗರುಡ ಪುರಾಣದ ಪ್ರಕಾರ, ಮನೆಯಲ್ಲಿ ಕಸವನ್ನು ಸಂಗ್ರಹಿಸಿಡುವವರು ಅಥವಾ ಅನುಪಯುಕ್ತ ವಸ್ತುಗಳನ್ನು ಇಟ್ಟುಕೊಳ್ಳುವವರ ಕುಟುಂಬದಲ್ಲಿ ಕಲಹ ಸಾಮಾನ್ಯವಾಗಿರುತ್ತದೆ. ಇದು ಮನೆಯ ಎಲ್ಲ ಸದಸ್ಯರಲ್ಲಿ ನಕಾರಾತ್ಮಕತೆಯನ್ನು ಹರಡುತ್ತದೆ. ಲಕ್ಷ್ಮಿ ದೇವಿಯು ಅಂತಹ ಮನೆಯಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಅಂತಹ ವಸ್ತುಗಳಿದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಿ.
ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ಒಡೆದ ಕನ್ನಡಿ ಇರಬಾರದು ಏಕೆ?
ಹಕ್ಕುತ್ಯಾಗ: ಈ ಲೇಖನದಲ್ಲಿರುವ ಮಾಹಿತಿಯನ್ನು ಜ್ಯೋತಿಷಿಗಳು ಒದಗಿಸಿದ್ದಾರೆ. ನಾವು ಈ ಮಾಹಿತಿಯನ್ನು ನಿಮಗೆ ತಲುಪಿಸುವ ಮಾಧ್ಯಮ ಮಾತ್ರ. ಬಳಕೆದಾರರು ಈ ಮಾಹಿತಿಯನ್ನು ಕೇವಲ ಮಾಹಿತಿಗಾಗಿ ಮಾತ್ರ ಪರಿಗಣಿಸಬೇಕು.