ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ಉತ್ಸವ, 1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗ ದರ್ಶನ

Published : Feb 25, 2025, 01:11 PM ISTUpdated : Feb 25, 2025, 02:19 PM IST
ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮಹಾ ಶಿವರಾತ್ರಿ ಉತ್ಸವ, 1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗ ದರ್ಶನ

ಸಾರಾಂಶ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ.  

ಈ ವರ್ಷ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ವೈಭದಿಂದ ಆಚರಿಸಲಾಗುತ್ತಿದೆ. ಶ್ರೀ ಶ್ರೀ ರವಿಶಂಕರ ಗುರುದೇವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಈ ಉತ್ಸವವು ಆಶ್ರಮದಲ್ಲಿ ಜಪ-ತಪ, ಆಳವಾದ ಧ್ಯಾನ ಮತ್ತು ರುದ್ರಪೂಜೆಯ ಮಂತ್ರಘೋಷಗಳೊಂದಿಗೆ ಶ್ರವಣಗೊಳ್ಳಲಿದೆ.

ಕ್ರಿ.ಶ.1025 ರಲ್ಲಿ ಮಹ್ಮದ್ ಘಜ್ನಿಯು ದಾಳಿಗೆ ಸೋಮನಾಥ ದೇವಾಲಯವ ನಾಶವಾಗಿತ್ತು, ಆದರೆ  ಜ್ಯೋತಿರ್ಲಿಂಗವು ಸಂಪೂರ್ಣ ನಾಶವಾಗಿರಲಿಲ್ಲ. ಅಗ್ನಿಹೋತ್ರಿ ಬ್ರಾಹ್ಮಣರು ಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕೊಂಡೊಯ್ದು, ದಕ್ಷಿಣ ಭಾರತದಲ್ಲಿ ರಹಸ್ಯವಾಗಿ ಆರಾಧಿಸುತ್ತಿದ್ದರು. ಹಲವು ಪೀಳಿಗೆಗಳ ನಂತರ ಈ ಲಿಂಗವು ಸೀತಾರಾಮ ಶಾಸ್ತ್ರಿಗಳ ಕೈಗೆ ಸೇರಿತು. ಇವರು ಕಳೆದ 20 ವರ್ಷಗಳಿಂದ ಇದರ ಪುನಃ ಪ್ರತಿಷ್ಠಾಪನೆಯ ಸಂದರ್ಭದ ನಿರೀಕ್ಷೆಯಲ್ಲಿ ಇದ್ದರು.   

ಹಲವು ವರ್ಷಗಳ ಹಿಂದೆ 1924ರಲ್ಲಿ ಸಂತ ಶ್ರೀ ಪ್ರಣವೇಂದ್ರ ಸರಸ್ವತಿಯವರುಈ ಪವಿತ್ರ ಜ್ಯೋತಿರ್ಲಿಂಗದ ತುಂಡುಗಳನ್ನು ಕಂಚಿ ಶಂಕರಾಚಾರ್ಯ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿಯವರಿಗೆ ಅರ್ಪಿಸಿದಾಗ, ಅವರು "ಇದನ್ನು ಪ್ರತಿಷ್ಠಾಪಿಸಲು ಇನ್ನೂ 100 ವರ್ಷಗಳು ಬೇಕಾಗುತ್ತದೆ" ಎಂದು ಭವಿಷ್ಯವಾಣಿ ನುಡಿದಿದ್ದರು. 2024ರಲ್ಲಿ ಈಗಿನ ಕಂಚಿ ಶಂಕರಾಚಾರ್ಯರ ಆಶೀರ್ವಾದ ಪಡೆದು, ಈ ಪವಿತ್ರ ಲಿಂಗವನ್ನು ಶ್ರೀ ಶ್ರೀ ರವಿಶಂಕರರ ಬಳಿಗೆ ತರಲು ನಿರ್ಧರಿಸಲಾಯಿತು.

ಈ ವರ್ಷ ಜನವರಿ 2025ರಲ್ಲಿ  ಜನವರಿಯಲ್ಲಿ ಪವಿತ್ರ ಜ್ಯೋತಿರ್ಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಇಂಟರ್‌ನ್ಯಾಷನಲ್ ಕೇಂದ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುದೇವರು ಅದನ್ನು ಅನಾವರಣ ಮಾಡಿದರು. ಗುರುದೇವರು ಲಿಂಗವನ್ನು ಕೈಯಲ್ಲಿ ಹಿಡಿದು ಅದರ ಅದ್ಭುತ ಅಯಸ್ಕಾಂತ ಶಕ್ತಿಯನ್ನು ಎಲ್ಲರಿಗೂ ಪ್ರದರ್ಶನ ಮಾಡಿ ತೋರಿಸಿದರು.

ವೈಜ್ಞಾನಿಕ ಅಧ್ಯಯನ: ಅದ್ಭುತ ಕಾಂತೀಯ ಗುಣಗಳು 

1000 ವರ್ಷ ಹಳೆಯ ಸೋಮನಾಥ ಜ್ಯೋತಿರ್ಲಿಂಗದ ಕುರಿತು 2007ರಲ್ಲಿ ನಡೆಸಿದ ಭೌಗೋಳಿಕ ಅಧ್ಯಯನ ನಡೆಸಲಾಯಿತು. ಈ ಲಿಂಗದಲ್ಲಿ ಸಾಮಾನ್ಯ ಭೌತಿಕಶಾಸ್ತ್ರಕ್ಕೆ ನಿಲುಕದ ಅಯಸ್ಕಾಂತಿಯ ಗುಣ ಹೊಂದಿದೆ  ಎಂಬುದು ಪತ್ತೆಯಾಗಿತ್ತು.

ಸೋಮನಾಥ ಜ್ಯೋತಿರ್ಲಿಂಗ ಸಾನ್ನಿಧ್ಯದಲ್ಲಿ ಭಕ್ತರಿಗೆ ವಿಶೇಷ ಅನುಭವ 

ಈ ಮಹಾ ಶಿವರಾತ್ರಿಯಂದು ಆಶ್ರಮದಲ್ಲಿ ಎಲ್ಲಾ ಭಕ್ತರಿಗೆ ಅಪರೂಪದ ಅವಕಾಶವನ್ನು ಒದಗಿಸಲಾಗಿದೆ. ಫೆಬ್ರವರಿ 26ರ ಸಂಜೆ 6:30 ಗಂಟೆಗೆ ಮಹಾ ರುದ್ರಾಭಿಷೇಕ ಮತ್ತು ಮಹಾ ಸತ್ಸಂಗದೊಂದಿಗೆ ಪ್ರಾರಂಭವಾಗುವ ಈ ಉತ್ಸವ, ಫೆಬ್ರವರಿ 27ರ ಮುಂಜಾನೆ 4:00 ಗಂಟೆಗೆ ಮಹಾ ರುದ್ರ ಹೋಮದೊಂದಿಗೆ ಮುಗಿಯಲಿದೆ.  ಈ ಮಹಾ ಶಿವರಾತ್ರಿಯಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿಕೊಡಬಹುದು.ಎಲ್ಲರಿಗೂ ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಜೂನ್ 14 ರಿಂದ ಈ 3 ರಾಶಿಗೆ ರಾಜಯೋಗ ಜೊತೆ ಅದೃಷ್ಟ, ರಾಹು ನಕ್ಷತ್ರದಲ್ಲಿ ಗುರು ಸಂಚಾರ

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ