ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 8 ಹಾಗೂ ಮಾರ್ಚ್ 9ರಂದು ಆಯೋಜಿಸಿರುವ ಮಹಾ ಶಿವರಾತ್ರಿಯ 4ನೇ ಮಹೋತ್ಸವವು ಬಹಳ ಅದ್ಧೂರಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಉಪಸ್ಥಿತರಿದ್ದರು.
ವರದಿ, ವಿದ್ಯಾಶ್ರೀ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಮಾ.8): ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 8 ಹಾಗೂ ಮಾರ್ಚ್ 9ರಂದು ಆಯೋಜಿಸಿರುವ ಮಹಾ ಶಿವರಾತ್ರಿಯ 4ನೇ ಮಹೋತ್ಸವವು ಬಹಳ ಅದ್ಧೂರಿಯಾಗಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರು ಉಪಸ್ಥಿತರಿದ್ದರು.
undefined
ತಿಪ್ಪಸಂದ್ರ ಆಟದ ಮೈದಾನದಲ್ಲಿ ಶಿವರಾತ್ರಿ ಪ್ರಯುಕ್ತ ಶಿವನ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಥರ್ಮಾ ಕೋಲ್ ನಿಂದ ಶಿಶು ಗೃಹ ಆಟದ ಮೈದಾನದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ಮಾರ್ಚ್ 7ರಂದು 10.30ಕ್ಕೆ ಹೊಸ ತಿಪ್ಪಸಂದ್ರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಲಿಂಗವನ್ನು 108 ಕುಂಭ ಕಳಸ ಹಾಗೂ ವಿವಿಧ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ತರಲಾಗಿತ್ತು.
40ಕಿಮೀ ದೂರ ಕಾಲ್ನಡಿಗೆಯಲ್ಲೇ ಪವಿತ್ರ ಕಪಿಲಾ ಜಲ ಹೊತ್ತು ತಂದು ಆಚರಿಸುತ್ತಾರೆ ಮಹಾಶಿವರಾತ್ರಿ!
ಹಾಗೇ ಮಾರ್ಚ್ 8 ಶುಕ್ರವಾರದಂದು ಬೆಳಿಗ್ಗೆ ಶಿವಲಿಂಗ ಸ್ಥಾ ಪನೆ, ಪ್ರಾಣ ಪ್ರತಿಷ್ಠಾಪನೆ, ಶತ ರುದ್ರಾಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ರುದ್ರಾಪಾರಾಯಣ ಇತ್ಯಾದಿ ಪೂಜಾಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.
ಇನ್ನು ನಾಳೆ ಮುಂಜಾನೆವರೆಗೂ ದೇವಾಲಯದಲ್ಲಿ ಅಭಿಷೇಕ ಪ್ರಿಯ ಗಂಗಾಧರೇಶ್ವನಿಗೆ ವಿಶೇಷ ಅಭಿಷೇಕಗಳನ್ನ ನೆರವೇರಿಸಲಾಗುವುದು. ಇನ್ನು ಶಿವರಾತ್ರಿಯ ಜಾಗರಣೆ ಹಿನ್ನೆಲೆ ಇಂದು ರಾತ್ರಿಯಿಂದ ಬೆಳಗಿನ ಜಾವದವರೆಗೆ ಭಜನೆ ಸೇರಿದಂತೆ ಭಕ್ತರು ದೇವರ ನಾಮ ಸ್ಮರಣೆ ಮಾಡಲಿದ್ದಾರೆ.
ಸ್ಥಳ: ಶಿಶು ಗೃಹ, ಪೂರ್ಣಪ್ರಜ್ಞಾ ಸಾರ್ವಜನನಿಕ ಆಟದ ಮೈದಾನ, ಎಚ್.ಎ.ಎಲ್ 3ನೇ ಹಂತ, ಹೊಸ ತಿಪ್ಪಸಂದ್ರ