ಮಹಾಕುಂಭ ಸ್ನಾನ ಮಾಡುವ ಮಹಿಳೆಯರಿಗೆ ವಿಶೇಷ ನಿಯಮ ಇದ್ಯಾ?

Published : Feb 10, 2025, 12:46 PM ISTUpdated : Feb 10, 2025, 12:50 PM IST
ಮಹಾಕುಂಭ ಸ್ನಾನ ಮಾಡುವ ಮಹಿಳೆಯರಿಗೆ ವಿಶೇಷ ನಿಯಮ ಇದ್ಯಾ?

ಸಾರಾಂಶ

ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ಫೆಬ್ರವರಿ 26ಕ್ಕೆ ಮುಕ್ತಾಯಗೊಳ್ಳಲಿದೆ. ಫೆಬ್ರವರಿ 12ರ ಮಾಘ ಪೂರ್ಣಿಮೆ ಮತ್ತು 26ರ ಮಹಾಶಿವರಾತ್ರಿಯಂದು ಎರಡು ಪವಿತ್ರ ಸ್ನಾನಗಳು ಉಳಿದಿವೆ. ತ್ರಿವೇಣಿ ಸಂಗಮದಲ್ಲಿ ಮಿಂದರೆ ಪಾಪ ಪರಿಹಾರ, ಮೋಕ್ಷ ಲಭ್ಯ ಎಂಬ ನಂಬಿಕೆ ಇದೆ. ಮಹಿಳೆಯರು ನಿರ್ದಿಷ್ಟ ನಿಯಮ ಪಾಲಿಸಿ ಸ್ನಾನ, ಪೂಜೆ, ಧ್ಯಾನದಲ್ಲಿ ಭಾಗವಹಿಸಬೇಕು. ಸ್ನಾನಾನಂತರ ಬಡೇ ಹನುಮಾನ್ ಅಥವಾ ನಾಗವಾಸುಕಿ ದೇವಾಲಯಕ್ಕೆ ಭೇಟಿ ಅಗತ್ಯ.

ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ (Maha Kumbh Mela) ಮುಕ್ತಾಯಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. ಫೆಬ್ರವರಿ 26ರಂದು ಮಹಾ ಕುಂಭ ಮೇಳ ಮುಕ್ತಾಯಗೊಳ್ಳಲಿದೆ. 144 ವರ್ಷಗಳಿಗೊಮ್ಮೆ ಬರುವ ಈ ಮೇಳದಲ್ಲಿ ಪಾಲ್ಗೊಂಡು ಮಹಾಕುಂಭ ಸ್ನಾನ ಮಾಡುವ ಆಸೆ ಪ್ರತಿಯೊಬ್ಬರಿಗಿದೆ. ಆದ್ರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಹಿಂದೂ ಧರ್ಮ (Hinduism)ದಲ್ಲಿ ಮಹಾಕುಂಭ ಸ್ನಾನ (Maha Kumbh Snan)ವನ್ನು ಅತ್ಯಂತ ಪವಿತ್ರವೆಂದು ನಂಬಲಾಗಿದೆ. ತ್ರಿವೇಣಿ ಸಂಗಮದಲ್ಲಿ ಮಿಂದೇಳುವುದ್ರಿಂದ ಎಲ್ಲ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಜನರು ಕೆಲ ನಿಯಮಗಳನ್ನು ಪಾಲಿಸಬೇಕು. ನಾಗಾ ಸಾಧುಗಳು ತಮ್ಮದೇ ನಿಯಮಗಳನ್ನು ಪಾಲಿಸುತ್ತಾರೆ. ಹಾಗೆಯೇ ತ್ರಿವೇಣಿಯಲ್ಲಿ ಮಹಾಕುಂಭ ಸ್ನಾನ ಮಾಡುವ ಮಹಿಳೆಯರಿಗೂ ಕೆಲ ನಿಯಮಗಳಿವೆ. ನೀವು ನಿಯಮದಂತೆ ಸ್ನಾನ ಮಾಡಿದಲ್ಲಿ ಸ್ನಾನದ ಪುಣ್ಯ ಲಭಿಸುತ್ತದೆ.

ಮಹಿಳೆಯರಿಗೆ ಮಹಾಕುಂಭ ಸ್ನಾನದ ನಿಯಮ :     
• ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ಸ್ನಾನ ಮಾಡುವ ಮಹಿಳೆಯರು ಮೂರು ಬಾರಿ ಮಿಂದೇಳಬೇಕು. 
• ಮೂರು ಬಾರಿ ತ್ರಿವೇಣಿಯಲ್ಲಿ ಸ್ನಾನ ಮಾಡಿದ ನಂತ್ರ ಭಗವಂತನನ್ನು ಪೂಜಿಸಿ, ಧ್ಯಾನ, ಭಜನೆ ಮತ್ತು ಯಜ್ಞಗಳಲ್ಲಿ ಭಾಗವಹಿಸಬೇಕು.
• ಮಹಾ ಕುಂಭದಲ್ಲಿ ಸ್ನಾನ ಮಾಡಿದ ನಂತರ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಬಹುದು. 
• ಮಹಾ ಕುಂಭ ಸ್ನಾನದಲ್ಲಿ ಪಾಲ್ಗೊಳ್ಳುವ ಮಹಿಳೆಯರು ದೈಹಿಕ ಸಂಬಂಧ ಬೆಳೆಸಬಾರದು. 
• ಮಹಿಳೆಯರು ಆತ್ಮಶುದ್ಧಿ ಮತ್ತು ಭಕ್ತಿಗೆ ಆದ್ಯತೆ ನೀಡ್ಬೇಕು.
• ಮಹಾ ಕುಂಭ ಸ್ನಾನದ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು.
• ಮುಟ್ಟಿನ ಸಮಯದಲ್ಲಿ ಮಹಾಕುಂಭ ಸ್ನಾನ ಮಾಡಬಾರದು. ನೀವು ನೀರನ್ನು ತೆಗೆದುಕೊಂಡು ತಲೆಗೆ ಸಿಂಪಡಿಸಬಹುದು.
• ನಿಯಮದ ಪ್ರಕಾರ, ಪಿರಿಯಡ್ಸ್ ಆದ ಮಹಿಳೆಯರು ಮಹಾ ಕುಂಭ ಸ್ನಾನದಲ್ಲಿ ಅಥವಾ ಪೂಜೆ, ಯಜ್ಞದಲ್ಲಿ ಪಾಲ್ಗೊಳ್ಳುವಂತಿಲ್ಲ.
• ಮಹಾ ಕುಂಭ ಸ್ನಾನ ಮಾಡುವ ಮಹಿಳೆಯರು ಶುದ್ಧ ನಡವಳಿಕೆ ಹೊಂದಿರಬೇಕು. ಮಾತು, ಮನಸ್ಸು ಮತ್ತು ಕ್ರಿಯೆಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳಬೇಕು. ಸುಳ್ಳು, ಕೋಪಕ್ಕೆ ಅವಕಾಶ ನೀಡಬಾರದು.  

ಮಹಾಕುಂಭದಲ್ಲಿ ಡಿಕೆಶಿ ದಂಪತಿ ಪವಿತ್ರ ಸ್ನಾನ: ನೊಣವಿನಕೆರೆ ಶ್ರೀ ನೇತೃತ್ವದಲ್ಲಿ ವಿಶೇಷ ಪೂಜೆ

ಮಹಾ ಕುಂಭ ಸ್ನಾನದ ನಂತ್ರ ಏನು ಮಾಡಬೇಕು? : ಮಹಾ ಕುಂಭ ಮೇಳಕ್ಕೆ ತೆರಳಿ, ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತ್ರ ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಬಡೇ ಹನುಮಂಜಿ ಅಥವಾ ನಾಗವಾಸುಕಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯಬೇಕು. ನೀವು ಈ ಎರಡರಲ್ಲಿ ಒಂದೂ ದೇವಸ್ಥಾನಕ್ಕೆ ಭೇಟಿ ನೀಡಿಲ್ಲ ಎಂದಾದ್ರೆ ನಿಮ್ಮ ಧಾರ್ಮಿಕ ಪ್ರವಾಸ ಅಪೂರ್ಣವಾಗುತ್ತದೆ.

ಮಹಾಕುಂಭ ಮೇಳದಲ್ಲಿ ಸನಾತನ ದರ್ಮ ಅಪ್ಪಿಕೊಂಡ ಮಹಿಳೆಯರ ಸಂಖ್ಯೆ ಹೆಚ್ಚು

ಮಹಾ ಕುಂಭ ಮೇಳದಲ್ಲಿ ಇನ್ನೆಷ್ಟು ಪವಿತ್ರ ಸ್ನಾನವಿದೆ? : ಮೊದಲೇ ಹೇಳಿದಂತೆ ಫೆಬ್ರವರಿ 26ರಂದು ಮಹಾಕುಂಭ ಮೇಳ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಭಕ್ತರಿಗೆ ಎರಡು ಪವಿತ್ರ ಸ್ನಾನಗಳು ಲಭಿಸಲಿವೆ.  ಫೆಬ್ರವರಿ 12  ರಂದು ಮಾಘ ಪೂರ್ಣಿಮೆಯಂದು ಪವಿತ್ರ ಸ್ನಾನ ನಡೆಯಲಿದೆ. ಸ್ಕಂದ ಮತ್ತು ಭವಿಷ್ಯ ಪುರಾಣಗಳಲ್ಲದೆ, ಇತರ ಗ್ರಂಥಗಳಲ್ಲಿಯೂ ಮಾಘ ಪೂರ್ಣಿಮೆಯನ್ನು ಬಹಳ ವಿಶೇಷವೆಂದು ವಿವರಿಸಲಾಗಿದೆ.  ಮಾಘ ಪೂರ್ಣಿಮೆಯಂದು ಮಾಡುವ  ಸ್ನಾನದಿಂದ  ಎಲ್ಲಾ ರೀತಿಯ ಪಾಪಗಳು ಮತ್ತು ದೋಷಗಳಿಗೆ ಪರಿಹಾರ ಸಿಗಲಿದೆ.  ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನವು ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ನಡೆಯಲಿದೆ. ಇದು ಶಿವನಿಗೆ ಅತ್ಯಂತ ಪ್ರಿಯವಾದ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ಕಾಶಿಯ ಗಂಗಾ ಘಾಟ್‌ನಲ್ಲಿ ಸ್ನಾನ ಮಾಡುವುದು ಮಹತ್ವದ್ದಾಗಿದೆ.  ಸೂರ್ಯ ಮಕರ ರಾಶಿಯಲ್ಲಿ ಮತ್ತು ಗುರು ವೃಷಭ ರಾಶಿಯಲ್ಲಿದ್ದಾಗ ಅದನ್ನು ಅಮೃತ ಸ್ನಾನ ಎನ್ನಲಾಗುತ್ತದೆ. ಆದ್ರೆ ಮಾಘ ಪೂರ್ಣಿಮೆ ಮತ್ತು ಶಿವರಾತ್ರಿ ದಿನ ಸೂರ್ಯ ಮಕರ ರಾಶಿಯಲ್ಲಿ ಇರೋದಿಲ್ಲ. ಹಾಗಾಗಿ ಈ ದಿನ ಮಾಡುವ ಸ್ನಾನವನ್ನು ಅಮೃತ ಸ್ನಾನ ಎಂದು ಕರೆಯಲಾಗುವುದಿಲ್ಲವಾದ್ರೂ ಆ ದಿನ ಮಾಡುವ ಸ್ನಾನ ಬಹಳ ಪವಿತ್ರ ಎಂದು ಪರಿಗಣಿಸಲಾಗಿದೆ. 
 

PREV
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?