Magh Purnima 2023: ಮಾಘ ಪೂರ್ಣಿಮೆಯಂದು ಮಾಡುವ ಈ ಕಾರ್ಯದಿಂದ ಪಾಪನಾಶ

By Suvarna News  |  First Published Feb 2, 2023, 6:13 PM IST

ಪೂರ್ಣಿಮಾಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನದಂದು ಎಲ್ಲಾ ದೇವತೆಗಳು ಚಿನ್ನದೊಂದಿಗೆ ಭೂಮಿಗೆ ಬಂದು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ. 


ಹಿಂದೂ ನಂಬಿಕೆಯಲ್ಲಿ, ಹುಣ್ಣಿಮೆಯ ದಿನ ಅಥವಾ ಪೂರ್ಣಿಮಾವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಪೂರ್ಣತೆ ಮತ್ತು ಸಮೃದ್ಧಿಯ ಸಂಕೇತವಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಪೂರ್ಣಿಮಾ ಎಂಬುದು ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ ಪ್ರತಿ ತಿಂಗಳಿಗೊಮ್ಮೆ ಸಂಭವಿಸುತ್ತದೆ. ಪಂಚಾಂಗದಲ್ಲಿನ ಹಲವಾರು ಹಿಂದೂ ಹಬ್ಬಗಳು ಹುಣ್ಣಿಮೆಯ ದಿನಕ್ಕೆ ಹೊಂದಿಕೆಯಾಗುತ್ತವೆ. ಇದನ್ನು ಸೌಮ್ಯವಾದ ಮತ್ತು ಆಶೀರ್ವಾದದ ಘಟನೆ ಎಂದು ಪರಿಗಣಿಸಲಾಗುತ್ತದೆ.

ಈ ವರ್ಷ ಮಾಘ ಪೂರ್ಣಿಮೆಯು 5 ಫೆಬ್ರವರಿ 2023 ರಂದು ಬರುತ್ತಿದೆ. ಮಾಘ ಪೂರ್ಣಿಮಾಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನದಂದು ಎಲ್ಲಾ ದೇವತೆಗಳು ಚಿನ್ನದೊಂದಿಗೆ ಭೂಮಿಗೆ ಬಂದು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಈ ದಿನ ಗಂಗಾನದಿ ಮತ್ತು ದೇಶದ ಇತರ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಸಂಪ್ರದಾಯವಿದೆ.

Tap to resize

Latest Videos

ಅಪರೂಪದ ಯೋಗಗಳು
ಈ ದಿನ 2 ಅಪರೂಪದ ಯೋಗಗಳು ರೂಪುಗೊಳ್ಳಲಿವೆ. ಅವುಗಳ ಹೆಸರುಗಳು ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಪುಷ್ಯ ಯೋಗ. ಈ ಸಮಯದಲ್ಲಿ ಮಾಡಿದ ದಾನಕ್ಕೆ ವಿಶೇಷ ಫಲ ದೊರೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಯೋಗಗಳಲ್ಲಿ ಮಾಡುವ ಕೆಲಸವು ಅಖಂಡ ಸೌಭಾಗ್ಯವನ್ನು ನೀಡುತ್ತದೆ. ಈ ಯೋಗಗಳು ಮತ್ತು ಅವುಗಳಲ್ಲಿ ಮಾಡುವ ಕೆಲಸಗಳ ಬಗ್ಗೆ ತಿಳಿಸುತ್ತೇವೆ.

Valentine Day 2023: ನಿಮ್ಮ ಜಾತಕದಲ್ಲಿ ಪ್ರೇಮ ವಿವಾಹ ಯೋಗವಿದೆಯೇ?

ಮಾಘ ಪೂರ್ಣಿಮೆ ಮುಹೂರ್ತ
ಮಾಘ ಪೂರ್ಣಿಮಾ ಪ್ರಾರಂಭ ಸಮಯ - 4 ಫೆಬ್ರವರಿ 2023 (ಶನಿವಾರ) ರಾತ್ರಿ 9.29 ಕ್ಕೆ
ಮಾಘ ಪೂರ್ಣಿಮಾ ಅಂತಿಮ ಸಮಯ - 5 ಫೆಬ್ರವರಿ 2023 (ಭಾನುವಾರ) ರಾತ್ರಿ 11.58 ಕ್ಕೆ
ರವಿ ಪುಷ್ಯ ಯೋಗ - ಬೆಳಿಗ್ಗೆ 7.10 ರಿಂದ 12.13 ರವರೆಗೆ
ಸರ್ವಾರ್ಥಸಿದ್ಧಿ ಯೋಗ - ಬೆಳಗ್ಗೆ 7.10 ರಿಂದ ಮಧ್ಯಾಹ್ನ 12.13
ಅಭಿಜಿತ್ ಮುಹೂರ್ತ - ಮಧ್ಯಾಹ್ನ 12.19 ರಿಂದ 1.03 ರವರೆಗೆ
ವಿಜಯ ಮುಹೂರ್ತ - ಮಧ್ಯಾಹ್ನ 2.31 ರಿಂದ 3.15 ರವರೆಗೆ
ಶುಭ ಗಳಿಗೆ - ಬೆಳಿಗ್ಗೆ 9.56 ರಿಂದ 11.18 ರವರೆಗೆ ಮತ್ತು ಮಧ್ಯಾಹ್ನ 2.04 ರಿಂದ 3.26 ರವರೆಗೆ
ಅಮೃತ ಘಳಿಗೆ - ರಾತ್ರಿ 7.49 ರಿಂದ 9.26 ರವರೆಗೆ

ಮಾಘ ಪೂರ್ಣಿಮೆಯಂದು ಈ ಕೆಲಸ ಮಾಡಿದರೆ ಅನಂತ ಪುಣ್ಯ ಸಿಗುತ್ತದೆ..
ಮಾಘ ಮಾಸದ ಹುಣ್ಣಿಮೆಯಂದು ಪವಿತ್ರ ನದಿಗಳು ಮತ್ತು ಸರೋವರಗಳಲ್ಲಿ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಆದ್ದರಿಂದ ಈ ದಿನದಂದು ಗಂಗಾ (ಪ್ರಯಾಗ ತೀರ್ಥ) ಸೇರಿದಂತೆ ದೇಶದ ಇತರ ಪವಿತ್ರ ನದಿಗಳು ಮತ್ತು ಸರೋವರಗಳಲ್ಲಿ ಸ್ನಾನ ಮಾಡಬೇಕು. ಈ ಒಂದು ಸಣ್ಣ ಪರಿಹಾರದಿಂದ, ವ್ಯಕ್ತಿಯ ಹಿಂದಿನ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ.

Vastu Tips: ಈ 6 ಮಂಗಳಕರ ವಸ್ತುಗಳಿದ್ದಲ್ಲಿ ತಾಯಿ ಲಕ್ಷ್ಮಿಯೂ ಇರುತ್ತಾಳೆ, ಇಂದೇ ಮನೆಗೆ ತನ್ನಿ..

ಹುಣ್ಣಿಮೆಯಂದು ಭಗವಾನ್ ವಿಷ್ಣುವನ್ನು ಪೂಜಿಸಬೇಕು. ಇದು ಅವರ ಆಶೀರ್ವಾದವನ್ನು ಸಹ ತರುತ್ತದೆ ಮತ್ತು ಜೀವನದ ಎಲ್ಲಾ ಹಂತಗಳಲ್ಲಿ ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ. ತಮ್ಮ ಮನೆಯಲ್ಲಿ ಪೂರ್ವಜರಿರುವವರು ತಮ್ಮ ಪೂರ್ವಜರ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನೂ ಮಾಡಬೇಕು. ಹೀಗೆ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಧಾರ್ಮಿಕ ವಿಧಿವಿಧಾನಗಳ ನಂತರ ಸಾಧ್ಯವಾದಷ್ಟು ಬಡವರಿಗೆ ದಾನ ಮಾಡಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!