ಶ್ರೀಮಂತರಾಗುವ ತರಾತುರಿಯಲ್ಲಿ ಅಪ್ಪಿತಪ್ಪಿಯೂ ಈ ರತ್ನ ಧರಿಸಬೇಡಿ

By Contributor Asianet  |  First Published Feb 4, 2022, 7:40 PM IST

ಶ್ರೀಮಂತನಾಗುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಅನೇಕರು ಇದಕ್ಕೆ ಹಗಲಿರುಳು ದುಡಿದ್ರೆ ಮತ್ತೆ ಕೆಲವರು ಶಾಸ್ತ್ರಗಳನ್ನು ನಂಬಿ ಅದರಂತೆ ನಡೆಯುತ್ತಾರೆ. ಆದ್ರೆ ಗ್ರಹ,ನಕ್ಷತ್ರಗಳ ಬಗ್ಗೆ ಸರಿಯಾಗಿ ತಿಳಿಯದೆ ಹೆಜ್ಜೆಯಿಟ್ಟರೆ ಲಾಭಕ್ಕಿಂತ ನಷ್ಟ ಹೆಚ್ಚು ಎಂಬುದನ್ನು ಅರಿಯುವುದಿಲ್ಲ. 
 


ಮನುಷ್ಯ(Human)ನ ದೇಹರಚನೆ,ಆತ ಧರಿಸುವ ಬಟ್ಟೆ,ಆತ ವಾಸಿಸುವ ಸ್ಥಳ ಹೀಗೆ ಎಲ್ಲವೂ ಜ್ಯೋತಿಷ್ಯ ಶಾಸ್ತ್ರ(Astrology )ದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯವು ಗ್ರಹ(planet)ಗಳು ಮತ್ತು ನಕ್ಷತ್ರಪುಂಜಗಳನ್ನು ಆಧರಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಗ್ರಹಗಳು ಮತ್ತು ರಾಶಿಗಳ ಸ್ಥಿತಿಯು ಕೆಟ್ಟದ್ದಾಗಿದ್ದರೆ, ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂತೋಷ,ಆರ್ಥಿಕ ವೃದ್ಧಿ,ಆರೋಗ್ಯಕ್ಕೆ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಿತಿ ಮಹತ್ವ ಪಡೆಯುತ್ತದೆ. ಅದನ್ನು ಮಂಗಳಕರವಾಗಿಸಿದಾಗ ಮಾತ್ರ ಎಲ್ಲ ಸಮಸ್ಯೆ ದೂರವಾಗಲು ಸಾಧ್ಯ. ಗ್ರಹದೋಷ ನಿವಾರಣೆಗೆ ಜ್ಯೋತಿಷಿಗಳು ಅನೇಕ ಉಪಾಯಗಳನ್ನು ಹೇಳ್ತಾರೆ.

ಪೂಜೆ, ಜಪ, ಹವನ ಸೇರಿದಂತೆ ಕೆಲ ಮಂತ್ರ ಜಪಿಸುವ ಸಲಹೆ ನೀಡ್ತಾರೆ. ಇಷ್ಟೇ ಅಲ್ಲ, ಕೆಲ ದಾರ,ಯಂತ್ರದ ಜೊತೆ ಜ್ಯೋತಿಷಿಗಳು ರತ್ನದ ಕಲ್ಲುಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಜ್ಯೋತಿಷಿಗಳ ಸಲಹೆಯಿಲ್ಲದೆ ಕಲ್ಲುಗಳನ್ನು ಧರಿಸುವುದು ಒಳ್ಳೆಯದಲ್ಲ. ಎಲ್ಲ ಕಲ್ಲಗಳು ಎಲ್ಲ ಗ್ರಹಗಳಿಗೆ ಆಗಿಬರುವುದಿಲ್ಲ. ನಮ್ಮಲ್ಲಿ ಕೆಲವರು ಐಷಾರಾಮಿ ಜೀವನ ತೋರ್ಪಡಿಸಲು ಅಥವಾ ಚಂದಕ್ಕಾಗಿ ರತ್ನಗಳನ್ನು ಧರಿಸುತ್ತಾರೆ. ಆದ್ರೆ ಇದೇ ರತ್ನ ಅವರ ಪದೋನ್ನತಿ ಅಥವಾ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಜ್ಯೋತಿಷಿಗಳ ಸಲಹೆ ಪಡೆಯಬೇಕಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರತ್ನಗಳನ್ನು ಬಹಳ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಬಿಳಿ ನೀಲಮಣಿ ಒಂದು. ಬಿಳಿ ನೀಲಮಣಿ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ರತ್ನವನ್ನು ಧರಿಸುವುದು ಯಾರಿಗೆ ಲಾಭದಾಯಕ ಮತ್ತು ಯಾರು ಈ ರತ್ನದಿಂದ ದೂರವಿರಬೇಕು ಎಂಬುದನ್ನು ಇಂದು ಹೇಳುತ್ತೇವೆ. 

ಬಿಳಿ ನೀಲಮಣಿಯ ಪ್ರಯೋಜನಗಳು : 
ರತ್ನ ಶಾಸ್ತ್ರದ ಪ್ರಕಾರ, ಬಿಳಿ ನೀಲಮಣಿ ಶುಕ್ರನ ರತ್ನವಾಗಿದೆ. ಇದನ್ನು ಧರಿಸುವುದರಿಂದ ಸಂತೋಷ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಸಮೃದ್ಧಿ ಸದಾ ನೆಲೆಸುತ್ತದೆ. ಜ್ಞಾನದ ವೃದ್ಧಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮಕ್ಕಳ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ನೀಲಿಮಣಿಯನ್ನು ಧರಿಸಬೇಕು. ಇದ್ರಿಂದ ಸಂತಾನ ದೋಷ ನಿವಾರಣೆಯಾಗುತ್ತೆ ಎಂದು ನಂಬಲಾಗಿದೆ.  

Tap to resize

Latest Videos

undefined

Father And Son: ಅಪ್ಪನಿಗೆ ಹೆಮ್ಮೆ ತರುವ ಹುಡುಗರ ರಾಶಿಯಿದು..

ಬಿಳಿ ನೀಲಿಮಣಿ ಯಾವ ರಾಶಿಯವರಿಗೆ ಸೂಕ್ತ : ಹಿಂದೆ ಹೇಳಿದಂತೆ ಎಲ್ಲ ರಾಶಿಯವರಿಗೆ ಎಲ್ಲ ರತ್ನಗಳು ಹೊಂದುವುದಿಲ್ಲ. ನಕ್ಷತ್ರ,ರಾಶಿಯನ್ನು ನೋಡಿ,ಯಾವ ಸಮಸ್ಯೆಯಿದೆ ಎಂಬುದನ್ನು ಪರಿಶೀಲನೆ ಮಾಡಿ,ಯಾವ ರತ್ನ ಧರಿಸಬೇಕೆಂದು ಜ್ಯೋತಿಷಿಗಳು ಸಲಹೆ ನೀಡ್ತಾರೆ. ರತ್ನ ಶಾಸ್ತ್ರದ ಪ್ರಕಾರ ಕೆಲ ರಾಶಿಯವರು ಬಿಳಿ ನೀಲಿಮಣಿಯನ್ನು ಧರಿಸಬಹುದು. ಮೇಷ, ವೃಷಭ, ಮಿಥುನ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ಬಿಳಿ ನೀಲಮಣಿ ಮಂಗಳಕರವಾಗಿದೆ. ಈ ರಾಶಿಯವರು ಇದನ್ನು ಧರಿಸಿದರೆ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ರಾಶಿಯವರು ವೃತ್ತಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಅದು ದೂರವಾಗಲಿದೆ. ಅನೇಕ ದೈಹಿಕ ಸಮಸ್ಯೆಗಳೂ ಇದ್ರಿಂದ ದೂರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Saraswati Birthday: ಬಂದೇ ಬಿಡ್ತು ವಸಂತ ಪಂಚಮಿ; ಎಲ್ಲ ಶುಭಕಾರ್ಯಕ್ಕೂ ಶುಭ ಗಳಿಗೆ

ಅಪ್ಪಿತಪ್ಪಿಯೂ ಈ ರಾಶಿಯವರು ಬಿಳಿ ನೀಲಿಮಣಿಯನ್ನು ಧರಿಸಬೇಡಿ : ರತ್ನಶಾಸ್ತ್ರದ ತಜ್ಞರ ಪ್ರಕಾರ, ಬಿಳಿ ನೀಲಮಣಿಯನ್ನು ಕೆಲ ರಾಶಿಯವರು ಧರಿಸಿದ್ರೆ ತೊಂದರೆಯಾಗುತ್ತದೆ. ಅದ್ರಲ್ಲಿ ಸಿಂಹ, ಮಕರ ಮತ್ತು ಕುಂಭ ರಾಶಿಯ ಜನರು ಸೇರಿದ್ದಾರೆ. ಈ ರಾಶಿಯ ಜನರು ಬಿಳಿ ನೀಲಮಣಿಯನ್ನು ಧರಿಸಿದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆರೋಗ್ಯದ ಏರುಪೇರಿನಿಂದ ಹಿಡಿದು ಆರ್ಥಿಕ ಸಮಸ್ಯೆಯವರೆಗೆ ಅನೇಕ ಕಷ್ಟಗಳು ಎದುರಾಗುತ್ತವೆ. ಹಾಗಾಗಿ ಬಿಳಿ ನೀಲಿಮಣಿಯನ್ನು ಈ ರಾಶಿಯವರು ಧರಿಸಬಾರದು. ಒಂದು ವೇಳೆ ಜ್ಯೋತಿಷಿಗಳ ಸಲಹೆ ಕೇಳದೆ ನೀಲಿಮಣಿ ಧರಿಸಿದ್ದರೆ ಇಂದೇ ಅದನ್ನು ತೆಗೆದು ಹಾಕಿ. ಇಲ್ಲವೆ ಸೂಕ್ತ ಸಲಹೆ ಮೇಲೆ ಧರಿಸಿ.

click me!