ಲಂಕೆಯಿಂದ ಆಯೋಧ್ಯೆಗೆ ಶ್ರೀರಾಮ ತೆಗೆದುಕೊಂಡಿದ್ದು 21 ದಿನ, ಹೌದು ಎನ್ನುತ್ತಿದೆ ಗೂಗಲ್ ಮ್ಯಾಪ್!

By Chethan Kumar  |  First Published Oct 15, 2024, 2:06 PM IST

ರಾವಣನ ವಧಿಸಿದ ಶ್ರೀರಾಮ,  ಸೀತಾ ಮಾತೆಯನ್ನು ಕರೆದುಕೊಂಡು ಶ್ರೀಲಂಕೆಯಿಂದ ಆಯೋಧ್ಯೆಗೆ ಬರಲು 21 ದಿನ ತೆಗೆದುಕೊಂಡಿದ್ದ ಎಂದು ರಾಮಾಯಣ ಹೇಳುತ್ತೆ. ವಿಶೇಷ ಅಂದರೆ ಪುರಾಣದ ಈ ದಾಖಲೆಗೆ ಗೂಗಲ್ ಮ್ಯಾಪ್ ಸಾಕ್ಷಿ ಹೇಳುತ್ತಿದೆ. ಏನಿದು ಗೂಗಲ್ ಮ್ಯಾಪ್ ನುಡಿದ ಸಾಕ್ಷ್ಯ.
 


ಶ್ರೀರಾಮ ಕಾಲ್ಪನಿಕ ಅನ್ನೋ ಆರೋಪಕ್ಕೆ ನೈಜ ಘಟನೆ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಇವೆ. ಆರೋಪ ಪ್ರತ್ಯಾರೋಪದ ನಡುವೆ ಶ್ರೀರಾಮನ ಆರಾಧನೆ ನಡೆಯುತ್ತಲೇ ಇದೆ. ಇದರ ನಡುವೆ 500 ವರ್ಷಗಳ ಬಳಿಕ ಭವ್ಯ ರಾಮ ಮಂದಿರ ಆಯೋಧ್ಯೆಯಲ್ಲಿ ನಿರ್ಮಾಣಗೊಂಡಿದೆ.ವಿಶೇಷ ಅಂದರೆ ಶ್ರೀರಾಮಾಯಣ ಕಟ್ಟು ಕತೆ ಅನ್ನೋ ಆರೋಪಕ್ಕೆ ಇದೀಗ ಗೂಗಲ್ ಮ್ಯಾಪ್ ಸಾಕ್ಷ್ಯ ನುಡಿದಿದೆ. ಶ್ರೀರಾಮಾಯಣದಲ್ಲಿ ಹೇಳಿರುವಂತೆ  ಅಪಹರಿಸಿದ ಸೀತಾ ಮಾತೆಯನ್ನು ರಾವಣನ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಲಂಕೆಯಿಂದ ಆಯೋಧ್ಯೆಗೆ ಮರಳಲು ಶ್ರೀರಾಮ 21 ದಿನ ತೆಗೆದುಕೊಂಡಿದ್ದರು. ಕಾಲ್ನಾಡಿಯಲ್ಲಿ ಶ್ರೀರಾಮ ಲಂಕೆಯಿಂದ ಪ್ರಯಾಣ ಆರಂಭಿಸಿ 21 ದಿನದಲ್ಲಿ ಆಯೋಧ್ಯೆಗೆ ತಲುಪಿದಾಗ ಜನ ದೀಪ ಬೆಳಗಿ ಭವ್ಯ ಸಾಗತ ನೀಡಿದ್ದರು. ಶ್ರೀರಾಮ ಲಂಕಾದಿಂದ ಆಯೋಧ್ಯೆ ತಲುಪಲು 21 ದಿನ ಅನ್ನೋದು ಪುರಾಣದಲ್ಲಿ ಉಲ್ಲೇಖವಾಗಿದೆ. ಇದೀಗ ಗೂಗಲ್ ಮ್ಯಾಪ್ ಕೂಡ ಶ್ರೀಲಂಕಾದಿಂದ ಕಾಲ್ನಡಿಗೆಯಲ್ಲಿ ಆಯೋಧ್ಯೆ ತಲುಪಲು 21 ದಿನ ತೂರಿಸುತ್ತಿದೆ. 

ಗೂಗಲ್ ಮ್ಯಾಪ್ ಮೂಲಕ ಪರಿಶೀಲಿಸಿದರೆ ಲಂಕಾದಿಂದ ಆಯೋಧ್ಯೆ ತಲುಪಲು 21 ದಿನ ಬೇಕು. ಲಂಕಾ ರಾಜಧಾನಿಯಿಂದ ಆಯೋಧ್ಯೆಗೆ ಗೂಗಲ್ ಮ್ಯಾಪ್ ಬೈ ವಾಕ್ ನೀಡಿದರೆ 3,125.6 ಕಿಲೋಮೀಟರ್ ತೋರಿಸುತ್ತಿದೆ. ಇಷ್ಟೇ ಅಲ್ಲ ಇದಕ್ಕೆ 542 ಗಂಟೆ ಬೇಕಿದೆ ಎಂದು ಗೂಗಲ್ ಮ್ಯಾಪ್ ಹೇಳುತ್ತಿದೆ. ಇದನ್ನು ದಿನಗಳ ಲೆಕ್ಕದಲ್ಲಿ ಹೇಳಿದರೆ 21 ದಿನ 10 ಗಂಟೆ.   

Tap to resize

Latest Videos

undefined

ಕಾಶಿ ದಾಖಲೆ ಮುರಿದ ಆಯೋಧ್ಯೆ, 6 ತಿಂಗಳಲ್ಲಿ ರಾಮಮಂದಿರಕ್ಕೆ ಭೇಟಿ ನಿಡಿದವರೆಷ್ಟು?

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮುಕುಲ್ ದಿಖಾನೆ ಮಹತ್ವದ ಬೆಳಕು ಚೆಲ್ಲಿದ್ದಾರೆ. ದಸರಾ ಹಬ್ಬದ 21 ದಿನಗಳ ಬಳಿಕ ದೀಪಾವಳಿ ಆಚರಿಸುವುದು ಏಕೆ ಅನ್ನೋ ಕುತೂಹಲಕ್ಕೆ ಮುಕುಲ್ ದಿಖಾನೆ ಗೂಗಲ್ ಮ್ಯಾಪ್ ಬಳಸಿ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಯಾಕೆ ದೀಪಾವಳಿ ಹಬ್ಬ ದಸರಾದ 21 ದಿನ ಬಳಿಕ ಆಚರಿಸಲಾಗುತ್ತದೆ? ನನಗೆ ಶ್ರೀರಾಮ ಲಂಕೆಯಿಂದ ಆಯೋಧ್ಯೆಗೆ ಮರಳಲು 21 ದಿನ ತೆಗೆದುಕೊಂಡಿದ್ದ ಎಂದು ಪುರಾಣವನ್ನು ಹೇಳಿಕೊಟ್ಟಿದ್ದರು. ಇದನ್ನು ಪರಿಶೀಲಿಸಲು ಗೂಗಲ್ ಮ್ಯಾಪ್ ಪರಿಶೀಲಿಸಿದಾಗ ನನಗೆ ಅಚ್ಚರಿಯಾಗಿದೆ. ಕಾರಣ ಲಂಕೆಯಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ತೆರಳಲು 21 ದಿನ ಬೇಕು ಎಂದು ಮ್ಯಾಪ್ ತೋರಿಸುತ್ತಿದೆ. ಶ್ರೀರಾಮ ಈ ನೆಲದಲ್ಲಿ ಬದುಕಿದ್ದರು. ಇಷ್ಟೇ ಅಲ್ಲ ಶ್ರೀರಾಮನಿಗೆ ಫಾಸ್ಟರ್ ರೂಟ್ ತಿಳಿದಿತ್ತು ಎಂದು ಟ್ವೀಟ್ ಮಾಡಿದ್ದಾರೆ.

 

Why is Diwali celebrated 21 days after Dussehra.

They told me that it took Shree Ram ji 21 days to walk from Srilanka to Ayodhya.
I then checked it in Google maps and I was just shocked to see it does take 21 days to get back.

So Shree Ram ji did exist and he knew the… pic.twitter.com/d2uedGp2d6

— Mukul Dekhane (@dekhane_mukul)

 

ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀರಾಮ ಅತ್ಯಂತ ಪವಿತ್ರ ಹಾಗೂ ಮಹಾ ಯಾನ, ಯುದ್ದವನ್ನು ಗೂಗಲ್ ಮ್ಯಾಪ್ ಮೂಲಕ ಸರಳೀಕರಣಗೊಳಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅಂದು ಶ್ರೀರಾಮ ಸಾಗಿದ ದಾರಿಗೂ, ಇದಗೀ ಗೂಗಲ್ ಮ್ಯಾಪ್ ತೋರಿಸುತ್ತಿರುವ ದಾರಿಗೂ ಕೆಲ ವ್ಯತ್ಯಾಸಗಳಿವೆ ಎಂದು ಕೆಲವರು ಸೂಚಿಸಿದ್ದಾರೆ.

ಇದೇ ವೇಳೆ ಶ್ರೀಲಂಕೆಯಿಂದ ಆಯೋಧ್ಯೆಗೆ ಶ್ರೀರಾಮ ಹಾಗೂ ಸಂಗಡಿಗರು ಪುಷ್ಪಕ ವಿಮಾನದಲ್ಲಿ ಮರಳಿದ್ದಾರೆ ಅನ್ನೋ ಐತಿಹ್ಯವೂ ಇದೆ. ಆದರೆ ಗೂಗಲ್ ಮ್ಯಾಪ್ ಹಾಗೂ ದಾಖಲೆ, ಸಾಕ್ಷ್ಯಗಳ ಪ್ರಕಾರ ನೋಡಿದರೆ ಕಾಲ್ನಡಿಗೆಯ ದಾರಿ ಸರಿ ಏನಿಸುತ್ತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಹಲವರು ಜೈ ಶ್ರೀರಾಮ್ ಎಂದು ಪ್ರತಿಕ್ರಿಯಿಸಿದ್ದಾರೆ.

ಶತ್ರುಗಳ ವಿರುದ್ಧದ ಗೆಲುವಿನ ದಿನವೇ ವಿಜಯದಶಮಿ. ಮಹಾಭಾರತದಲ್ಲಿ ಪಾಂಡವರು, ಕೌರವರ ವಿರುದ್ಧ ಸಾಧಿಸಿದ ಗೆಲುವಾದರೆ, ಶ್ರೀರಾಮಾಯಣದಲ್ಲಿ ಶ್ರೀರಾಮ ಲಂಕೆಯಲ್ಲಿ ರಾವಣನ ವಿರುದ್ದ ಗೆಲುವು ಸಾಧಿಸಿದ ದಿನ. ರಾವಣ ಅಪಹರಿಸಿದ ಸೀತಾ ಮಾತೆಯನ್ನು ಬಿಡಿಸಿಕೊಂಡು ಬರಲು ಶ್ರೀಲಂಕೆಗೆ ತೆರಳಿದ ಶ್ರೀರಾಮ ಸೈನ್ಯ ಘನಘೋರ ಯುದ್ಧದ ಮೂಲಕ ರಾವಣನ ಸೋಲಿಸಿದ ದಿನವನ್ನು ಭಾರತದಲ್ಲಿ ವಿಜಯದಶಮಿಯಾಗಿ ಆಚರಿಸಲಾಗುತ್ತದೆ. ಇದಾದ 21 ದಿನಗಳಲ್ಲಿ ದೀಪಾವಳಿ ಹಬ್ಬ ಆಗಮಿಸುತ್ತದೆ. ಅಂದರೆ ಲಂಕೆಯಿಂದ ಶ್ರೀರಾಮ, ಸೀತಾ ಮಾತೆಯನ್ನು ಕರೆದುಕೊಂಡು ಆಯೋಧ್ಯೆಗೆ ಬಂದಾಗ ದೀಪ ಬೆಳಗಿ ಸ್ವಾಗತಿಸಲಾಗಿತ್ತು. ಇದೇ ದಿನವನ್ನು ಭಾರತೀಯರು ದೀಪಾವಳಿಯಾಗಿ ಆಚರಿಸುತ್ತಾರೆ. ಲಂಕೆಯಿಂದ ಶ್ರೀರಾಮ ಆಯೋಧ್ಯೆಗೆ ಕಾಲ್ನಡಿಗೆಯಲ್ಲಿ ಮರಳಲು 21 ದಿನ ತೆಗೆದುಕೊಳ್ಳಲಾಗಿತ್ತು ಅನ್ನೋದು ಪುರಾಣದಲ್ಲಿ ಬರವು ಐತಿಹ್ಯ. ಇದೀಗ ಗೂಗಲ್ ಮ್ಯಾಪ್ ಕೂಡ 21 ದಿನ ಎಂದು ತೋರಿಸುತ್ತಿದೆ.

ಅಯೋಧ್ಯೆ ರಾಮಮಂದಿರದಿಂದ ಸಂಗ್ರಹವಾದ ಜಿಎಸ್‌ಟಿ ಹಣವೆಷ್ಟು?
 

click me!