ಗೌಳಿ ಪಂಚಾಂಗದಂತೆ ಹಲ್ಲಿಗಳು ದೇಹದ ಕೆಲ ಭಾಗದ ಮೇಲೆ ಬಿದ್ದಾಗ ಶುಭ ಸೂಚನೆಯಾಗಿದ್ದರೆ, ಮತ್ತೆ ಕೆಲ ಭಾಗದ ಮೇಲೆ ಬಿದ್ದು ಅಶುಭದ ಸೂಚನೆ ನೀಡುತ್ತವೆ. ಎಲ್ಲಿ ಬಿದ್ದರೆ ಏನರ್ಥ ಎಂದು ಇಲ್ಲಿ ತಿಳಿಯಿರಿ.
ಹಲ್ಲಿ ಮೈ ಮೇಲೆ ಬಿದ್ದರೆ ಅದು ಶಕುನ(omen) ಹೇಳುತ್ತಿದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಗೌಳಿ ಪಠಣ ಶಾಸ್ತ್ರದಲ್ಲಿ ಹಲ್ಲಿಯು ದೇಹದ ಒಂದೊಂದು ಭಾಗಕ್ಕೆ ಬಿದ್ದಾಗ ಒಂದೊಂದು ಶಕುನವನ್ನು ಸೂಚಿಸುತ್ತದೆ. ಗೌಳಿ ಪಂಚಾಂಗದಲ್ಲಿ ಹೇಳಿರುವಂತೆ ಹಲ್ಲಿ ಬಿದ್ದ ಸಮಯ ಹಾಗೂ ಬಿದ್ದ ಭಾಗದಿಂದ ನಮ್ಮ ಬದುಕಿನಲ್ಲಿ ಮುಂದಾಗಲಿರುವ ಘಟನೆಯ ಸೂಚನೆ ಪಡೆದುಕೊಳ್ಳಬಹುದು.
ಸಾಮಾನ್ಯವಾಗಿ, ಹೆಂಗಸಿರಿಗೆ ದೇಹದ ಎಡ ಭಾಗದ ಮೇಲೆ, ಪುರುಷರಿಗೆ ದೇಹದ ಬಲ ಭಾಗದಲ್ಲಿ ಹಲ್ಲಿ ಬಿದ್ದರೆ ಒಳ್ಳೆಯದಾಗುತ್ತದೆ ಎಂದೂ, ಇದು ತಿರುವು ಮುರುವಾದರೆ ಕೆಟ್ಟದಾಗುತ್ತದೆ ಎಂದೂ ಹೇಳಲಾಗುತ್ತದೆ. ಹಾಗಾದರೆ ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಏನನ್ನು ಸೂಚಿಸುತ್ತದೆ ನೋಡೋಣ..
ಪುರುಷರಿಗೆ(For men)
ಒಂದು ವೇಳೆ ಹಲ್ಲಿಯು ಪುರುಷರ ತಲೆ(head)ಯ ಮೇಲೆ ಬಿದ್ದರೆ ವಿವಾದಗಳು ಎದುರಾಗಲಿವೆ.
ಹಲ್ಲಿಯೇನಾದರೂ ನೆತ್ತಿಯ ಮೇಲೆಯೇ ಬಿದ್ದಿತೋ, ಸಾವಿನ ಭಯದ ಮುನ್ಸೂಚನೆ ಅದೆಂದು ಹೇಳಲಾಗುತ್ತದೆ.
ಮುಖ(face)ದ ಮೇಲೆ ಹಲ್ಲಿ ಬಿದ್ದರೆ ಭಯದಿಂದಲ್ಲ, ಖುಷಿಯಿಂದ ಕಿರುಚಿ. ಏಕೆಂದರೆ ಇದು ಮುಂದೆ ಅನಿರೀಕ್ಷಿತ ಸಂಪತ್ತು ದೊರೆಯುವ ಯೋಗವನ್ನು ಹೇಳುತ್ತಿದೆ.
ಎಡಗಣ್ಣಿ(left eye)ನ ಮೇಲೆ ಬಿದ್ದರೆ ಒಳ್ಳೆಯ ಸುದ್ದಿಯೊಂದು ನಿಮಗಾಗಿ ಕಾದಿದೆಯೆಂದೂ, ಬಲಗಣ್ಣಿನ ಮೇಲೆ ಬಿದ್ದರೆ ನೀವು ಕೈಗೊಂಡ ಕೆಲಸವು ವಿಫಲವಾಗಲಿದೆಯೆಂದೂ ಅರ್ಥ.
ಹಲ್ಲಿಯು ನಿಮ್ಮ ಹಣೆಯ ಮೇಲೆ ಬಿದ್ದರೆ ಹಣೆಬರಹವೇ ಬದಲಾಗಲಿದೆ. ಯಾಕೆಂದರೆ, ನಿಮ್ಮ ಪ್ರೀತಿಪಾತ್ರರಿಂದ ದೂರಾಗಲಿರುವುದರ ಮುನ್ಸೂಚನೆ ಇದಾಗಿದೆ.
ಹಲ್ಲಿಯೇನಾದರೂ ನಿಮ್ಮ ಬಲಗೆನ್ನೆಯ ಮೇಲೆ ಬಿದ್ದರೆ ಅಂದು ನೀವು ಕೆಟ್ಟ ಸುದ್ದಿ(bad news) ಕೇಳಲು ಸಿದ್ಧರಾಗಿ.
ಹಲ್ಲಿಯು ಎಡಗಿವಿಗೆ ತಾಕಿ ಕೆಳ ಬಿದ್ದರೆ ಧನಲಾಭ(money gain)ದ ನಿರೀಕ್ಷೆ ಇಟ್ಟುಕೊಳ್ಳಬಹುದು.
ಹಲ್ಲಿಯು ತುಟಿಗೆ ತಾಕಿದರೆ ಯಾರದೋ ಸಾವಿನ ಸುದ್ದಿ ಕೇಳಬೇಕಾಗಿ ಬರಬಹುದು.
ಎಡ ಬೆನ್ನಿನ ಮೇಲೆ ಹಲ್ಲಿ ಬಿದ್ದರೆ ಯಶಸ್ಸು(success) ಇಲ್ಲವೇ ಲಾಭ ನಿಮಗೆ ಲಭಿಸಿಯೇ ಸಿದ್ಧ.
ಹಲ್ಲಿಯು ಕನಸಿನಲ್ಲಿ ಬಂದರೆ ಸರ್ಕಾರಕ್ಕೆ ಹೆದರಬೇಕಾದ ಸಂದರ್ಭವಿದೆ ಎಂದರ್ಥ.