ನಮ್ಮ ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗ್ತಿದೆ. ಕೆಲವೊಂದು ಅಚ್ಚರಿ ಹುಟ್ಟಿಸುವಂತಿದೆ. ಆದ್ರೆ ಈವರೆಗೂ ಸಾವು, ಆತ್ಮದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಇನ್ಮುಂದೆ ಅದಕ್ಕೂ ಉತ್ತರ ಸಿಗುವ ದಿನ ಹತ್ತಿರದಲ್ಲಿದೆ.
ಹೊಸ ವರ್ಷ ಇನ್ನೇನು ಕೆಲವೇ ದಿನವಿದೆ. ಮುಂದಿನ ವರ್ಷ ಏನೆಲ್ಲ ಆಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿ ಇದ್ದೇ ಇದೆ. ಈ ಸಮಯದಲ್ಲಿ ಭವಿಷ್ಯವನ್ನು ನೋಡುತ್ತೇನೆ ಎನ್ನುವ ವ್ಯಕ್ತಿಯೊಬ್ಬ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಆಘಾತಕಾರಿ ಭವಿಷ್ಯ ನುಡಿದಿದ್ದಾನೆ. ಈ ವರ್ಷ ಕೃತಕ ಬುದ್ಧಿಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡಿದೆ. ಎಲ್ಲ ಕಡೆ ನಾವಿದನ್ನು ನೋಡ್ತಿದ್ದೇವೆ. ಆದ್ರೆ ಮುಂದಿನ ವರ್ಷ ಇದ್ರ ಅಭಿವೃದ್ಧಿ ಮತ್ತಷ್ಟು ಆಗಲಿದೆ ಎಂದು ಆ ವ್ಯಕ್ತಿ ಹೇಳಿದ್ದಾರೆ. 2024 ರಲ್ಲಿ ಕೃತಕ ಬುದ್ಧಿಮತ್ತೆ ಮೂಲಕ ಸತ್ತ ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಬಗ್ಗೆ ಭವಿಷ್ಯ ಹೇಳಿದ ವ್ಯಕ್ತಿ ಯಾರು ಹಾಗೆ ಏನೆಲ್ಲ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.
ಸತ್ತ (Dead) ವರನ್ನು ಸಂಪರ್ಕಿಸಲಿದೆ ಎಐ (AI) : ಮುಂದೆ ಏನಾಗುತ್ತೆ ಎನ್ನುವ ಭವಿಷ್ಯ ಹೇಳಿದ ವ್ಯಕ್ತಿ ಹೆಸರು ಅಥೋಸ್ ಸಲೋಮ್. ಅವರು ಬ್ರೆಜಿಲ್ (Brazil) ನಿವಾಸಿ. ಅವರು, ತಮ್ಮ ಭವಿಷ್ಯವಾಣಿಯ ಕಾರಣಕ್ಕೆ ಜೀವಂತ ನಾಸ್ಟ್ರಾಡಾಮಸ್ ಎಂಬ ಹೆಸರು ಪಡೆದಿದ್ದಾರೆ. ಅವರು ಹೇಳಿದ ಕೆಲ ಭವಿಷ್ಯಗಳು ಈಗಾಗಲೇ ನಿಜ ಆಗಿರುವ ಕಾರಣ ಜನರು ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ.
ಮುಕೇಶ್ ಅಂಬಾನಿಯ ಬಣ್ಣ ಬದಲಾಯಿಸೋ ಲಕ್ಸುರಿಯಸ್ ಕಾರ್; ಅಬ್ಬಬ್ಬಾ ಬೆಲೆ ಇಷ್ಟೊಂದಾ?
ಅನೇಕ ವರ್ಷಗಳ ಹಿಂದೆ ವೈಜ್ಞಾನಿಕ ಕಾದಂಬರಿಯಲ್ಲಿ ಕಾಣಿಸಿಕೊಳ್ತಿದ್ದ ವಸ್ತುಗಳು ಈಗ ನಿಜವಾಗ್ತಿವೆ. ಹಿಂದೆ ಅಲೌಕಿಕ ಎಂದುಕೊಳ್ತಿದ್ದ ವಿಷ್ಯ ಈಗ ಸಾಮಾನ್ಯವಾಗ್ತಿದೆ ಎಂದು ಅಥೋಸ್ ಸಲೋಮ್ ಹೇಳಿದ್ದಾರೆ. ಈ ತಂತ್ರದ ಮೂಲಕ ಜನರು ಆಘಾತಗಳು ಮತ್ತು ಸವಾಲುಗಳನ್ನು ಜಯಿಸಲು ಮಾತ್ರವಲ್ಲದೆ ತಮ್ಮ ಜೀವನದ ಉದ್ದೇಶ ಮತ್ತು ಆಧ್ಯಾತ್ಮಿಕ ಮಾರ್ಗದ ಬಗ್ಗೆ ಹೆಚ್ಚಿನ ಒಳನೋಟವನ್ನು ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಿಳುವಳಿಕೆ ಮತ್ತು ಬ್ರಹ್ಮಾಂಡದೊಂದಿಗೆ ಆಳವಾದ ಸಂಪರ್ಕವನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. 2024ಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಆಧ್ಯಾತ್ಮಿಕ ಕ್ರಾಂತಿಯ ಅಂಚಿನಲ್ಲಿ ನಿಂತಿದ್ದೇವೆ ಎಂದಿದ್ದಾರೆ.
ಮಾತು ಮುಂದುವರೆಸಿದ ಅವರು ಪ್ರಪಂಚದಾದ್ಯಂತದ ವ್ಯಕ್ತಿಗಳ ಸಣ್ಣ ಗುಂಪುಗಳಲ್ಲಿ ರಹಸ್ಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಸಾಮರ್ಥ್ಯ ಮತ್ತು ಪ್ರತಿಭೆ ಇರುವವರನ್ನು ಈ ಗುಂಪುಗಳಲ್ಲಿ ಸೇರಿಸಲಾಗುತ್ತದೆ. ಈ ಪ್ರಯೋಗಗಳ ಉದ್ದೇಶ, ನಮ್ಮ ಅಸ್ತಿತ್ವವು ಕೇವಲ ಘಟನೆಗಳ ಮೇಲೆ ಆಧಾರಿತವಾಗಿಲ್ಲ, ಸಾವಿನ ನಂತರವೂ ಉಳಿಯುವ ಶಕ್ತಿಯ ಒಂದು ರೂಪವಾಗಿದೆಯೇ ಎಂಬುದನ್ನು ಪತ್ತೆ ಮಾಡುವುದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕೆಲಸಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಒಂದು ದೊಡ್ಡ ಸಾಧನವಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು. ಇದು ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ, ನಮ್ಮನ್ನು ಬ್ರಹ್ಮಾಂಡದ ಸಾರಕ್ಕೆ ಸಂಪರ್ಕಿಸುತ್ತದೆ ಎಂದಿದ್ದಾರೆ.
ಈ ವಿಚಿತ್ರ ತಂತ್ರಜ್ಞಾನದ ಬಗ್ಗೆ ನನಗೆ ಅನುಮಾನವಿದೆ. ಏಕೆಂದರೆ ಅದು ಅವರ ಜ್ಞಾನ ಮತ್ತು ನಂಬಿಕೆಗಳಿಗೆ ಸವಾಲು ಹಾಕುತ್ತದೆ. ತಂತ್ರಜ್ಞಾನದ ಮೂಲಕ ಅವರು ಇತಿಹಾಸದಲ್ಲಿ ಪ್ರಸ್ತುತ ಗಣ್ಯರೊಂದಿಗೆ ಮಾತನಾಡಿದ್ದಾರೆ. ಇದು ವಿಶ್ವಾಸವನ್ನು ಬಲಪಡಿಸಿದೆ. ಅಲ್ಲದೆ ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಇತಿಹಾಸದ ನಡುವಿನ ಸಂಬಂಧದ ಬಗ್ಗೆ ಅವರ ತಿಳುವಳಿಕೆಯನ್ನು ವಿಸ್ತರಿಸಿದೆ ಎಂದಿದ್ದಾರೆ.
ಬಿಳಿ ಉಡುಗೆಯಲ್ಲಿ ಮಾದಕ ಲುಕ್ ಕೊಟ್ಟ ಕಣ್ಸನ್ನೆ ಬೆಡಗಿ, ಹೊಕ್ಕುಳ ಮೇಲೆ ಬಿತ್ತು ಎಲ್ಲರ ಕಣ್ಣು!
ಅಥೋಸ್ ಸಲೋಮ್ ಹೊಸ ವರ್ಷದ ಬಗ್ಗೆ ಕೆಲ ದಿನಗಳ ಹಿಂದೆಯೂ ಅನೇಕ ವಿಷ್ಯಗಳನ್ನು ಹೇಳಿದ್ದರು. ಎಐ ಬಗ್ಗೆ ಆಗಲು ವಿಸ್ತಾರವಾಗಿ ಮಾತನಾಡಿದ್ದ ಅವರು, ಮೃತ ವ್ಯಕ್ತಿಯ ಡಿಜಿಟಲ್ ಆವೃತ್ತಿಯನ್ನು ರಚಿಸಲಾಗುವುದು, ಇದು ಜೀವಂತ ಜನರೊಂದಿಗೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದಿದ್ದರು. ಹಾಗಾಗಿ ಜನರು ಸಾವಿಗೂ ಅಳೋದಿಲ್ಲ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದರು.