Zodiac Sign: 2024ರಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಕೈ ಹಾಕಿದ್ದೆಲ್ಲ ಯಶಸ್ಸು

By Suvarna News  |  First Published Dec 26, 2023, 2:23 PM IST

ಹೊಸ ವರ್ಷ ಅದೃಷ್ಟ, ಹರುಷ ತರಲಿ ಎಂದು ಹಾರೈಸುವುದು ಸಾಮಾನ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ನಾಲ್ಕು ರಾಶಿಗಳ ಜನರಿಗೆ ಅದೃಷ್ಟ ಒಲಿದು ಬರಲಿದೆ. ಈ ರಾಶಿಗಳ ಜನ ಕೈ ಹಾಕಿದ ಎಲ್ಲ ಕೆಲಸಗಳಲ್ಲೂ ಅದೃಷ್ಟದ ಬೆಂಬಲದಿಂದಾಗಿ ಯಶಸ್ಸು ಗಳಿಸುತ್ತಾರೆ.


ಹೊಸ ವರ್ಷಕ್ಕೆ ಕಾಲಿಡುವ ಸಮಯದಲ್ಲಿ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಕೈಗೊಳ್ಳುವುದು ಬಹಳಷ್ಟು ಜನರ ಅಭ್ಯಾಸ. ಇವು ಚಿಕ್ಕಚಿಕ್ಕ ನಿರ್ಧಾರಗಳಂತೆ ಕಂಡರೂ ಕೆಲವೊಮ್ಮೆ ಬದುಕನ್ನೇ ಬದಲಿಸಬಲ್ಲವು, ಬದುಕಿಗೆ ಮಹತ್ತರ ತಿರುವು ನೀಡಬಲ್ಲವು. ಇನ್ನು, ಎಷ್ಟೋ ಜನ ಬೃಹತ್‌ ಕಾರ್ಯಗಳಿಗೆ ಕೈ ಹಾಕುವ ತೀರ್ಮಾನವನ್ನೂ ತೆಗೆದುಕೊಂಡಿರಬಹುದು. ಆದರೂ ಕೆಲವೊಮ್ಮೆ ಎಷ್ಟು ಪ್ರಯತ್ನಿಸಿದರೂ ನಾವು ಅಂದುಕೊಂಡ ಕೆಲಸವೇ ಆಗುವುದಿಲ್ಲ. ಅದಕ್ಕೆ ಅದೃಷ್ಟವೂ ಜತೆಯಾಗಿರಬೇಕಾಗುತ್ತದೆ. ಅದೃಷ್ಟವಿಲ್ಲದ ಸಮಯದಲ್ಲಿ ಏನು ಮಾಡಿದರೂ ಅಷ್ಟಕ್ಕಷ್ಟೇ ಎನ್ನುವಂತಾಗುತ್ತದೆ. ಅದೃಷ್ಟವಿಲ್ಲದಿದ್ದಾಗ ಸಾಮಾನ್ಯವಾಗಿ, ಎಷ್ಟೇ ಪ್ರಯತ್ನಿಸಿದರೂ ಕೆಲಸ ಆಗದಿರುವುದು, ಇದ್ದಕ್ಕಿದ್ದ ಹಾಗೆ ವೃತ್ತಿ ಅಥವಾ ಖಾಸಗಿ ಜೀವನದಲ್ಲಿ ಸಮಸ್ಯೆ ಸೃಷ್ಟಿಯಾಗುವುದು, ಹಣಕಾಸು ವಿಚಾರದಲ್ಲಿ ಏಳಿಗೆ ಇಲ್ಲದಿರುವುದು ಇಂಥ ಸಮಸ್ಯೆಗಳೆಲ್ಲ ಉಂಟಾಗುತ್ತವೆ. ಆದರೆ, ಈ ಸ್ಥಿತಿ ಬದಲಾಗುತ್ತಲೇ ಇರುತ್ತದೆ. ಇನ್ನೇನು ಹೊಸ ವರ್ಷ ಬರುತ್ತಿದೆ, 2024ರಲ್ಲಿ ನಿಮಗೆ ಅದೃಷ್ಟವಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕೆ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ನಾಲ್ಕು ರಾಶಿಗಳಿಗೆ ಭಾರೀ ಅದೃಷ್ಟ ಕಾದಿದೆ. ಬೇರೆಯವರಿಗೆ ಇಲ್ಲವೇ ಇಲ್ಲ ಎಂದಲ್ಲ. ಆದರೆ, ಈ ನಾಲ್ಕು ರಾಶಿಗಳ ಜನರಿಗೆ ಮುಟ್ಟಿದ್ದೆಲ್ಲವೂ ಅದೃಷ್ಟವಾಗುವ ಯೋಗವಿದೆ. 

•    ಮೇಷ (Aries) 
2024ರಲ್ಲಿ ಮೇಷ ರಾಶಿಯ (Zodiac Sign) ಜನ ಎಲ್ಲ ವಿಚಾರಗಳಲ್ಲೂ ಯಶಸ್ಸು (Success) ಹೊಂದುತ್ತಾರೆ. ಡೈನಮಿಕ್‌ ವ್ಯಕ್ತಿತ್ವ (Personality) ಹೊಂದಿರುವ ಮೇಷ ರಾಶಿಯ ಜನ ಮಹತ್ವಾಕಾಂಕ್ಷಿಗಳೂ ಹೌದು. ಅವರ ಮಹತ್ವಾಕಾಂಕ್ಷೆಗೆ (Ambitious) ಪುಷ್ಟಿ ದೊರೆಯುವ ಸಮಯ ಇದಾಗಿದೆ. ವೃತ್ತಿಯಲ್ಲಿ ಮೇಷ ರಾಶಿಯ ಜನ ಏನು ಬಯಸುತ್ತಾರೋ ಅದು ಅವರಿಗೆ ದಕ್ಕುತ್ತದೆ. ಇವರ ಆತ್ಮವಿಶ್ವಾಸ, ಚಾಲನಾಶಕ್ತಿ ಮತ್ತು ಅನ್ವೇಷಣಾತ್ಮಕ ಧೋರಣೆಗೆ ಈ ವರ್ಷದಲ್ಲಿ ಕಾಸ್ಮಿಕ್‌ (Cosmic) ಎನರ್ಜಿಯ ಬಲವೂ ದೊರೆಯುತ್ತದೆ. ಎದುರಾಗುವ ಅವಕಾಶಗಳನ್ನು ಬಿಡದೇ ನಿಮ್ಮದಾಗಿಸಿಕೊಳ್ಳಿ. ಅದೃಷ್ಟ ಜತೆಗಿದ್ದು ಎಲ್ಲ ರೀತಿಯ ಸಹಾಯ ಮಾಡುತ್ತದೆ.

Tap to resize

Latest Videos

ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.

•    ಸಿಂಹ (Leo) 
ವಿಜಯವೇ ನಿಮ್ಮನ್ನು ಈ ವರ್ಷ ಎದುರು ನೋಡುತ್ತಿದೆ. ನಿಮ್ಮ ನೈಸರ್ಗಿಕ ವರ್ಚಸ್ಸು (Charisma) ಮತ್ತು ನಾಯಕತ್ವದ (Leadership) ಗುಣಗಳಿಗೆ 2024ರಲ್ಲಿ ಸಾಕಷ್ಟು ಅವಕಾಶ ದೊರೆಯುತ್ತದೆ. ನಿಮ್ಮ ವೃತ್ತಿ ಸಂಬಂಧಗಳು (Professional Relations) ಮತ್ತು ಕ್ರಿಯಾಶೀಲ ವಿಚಾರಗಳಲ್ಲಿ ನಿಮಗೆ ಗೆಲುವು ನಿಶ್ಚಿತ. ವಿಶ್ವಶಕ್ತಿಯ ಕೊಡುಗೆಯೂ ಇರುವುದರಿಂದ ಈ ಬಾರಿ ನಿಮಗೆ ಎಲ್ಲ ಕಡೆ ಯಶಸ್ಸೇ ದೊರೆಯುತ್ತದೆ. ನಿಮ್ಮ ಆಂತರಿಕ ಸಿಂಹವನ್ನು ಅಪ್ಪಿಕೊಳ್ಳಿ. ಕೊನೆಯಿಲ್ಲದ ಪ್ರಗತಿಗೆ ಕಾಸ್ಮಿಕ್‌ ಶಕ್ತಿಯ ಮಾರ್ಗದರ್ಶನದೊಂದಿಗೆ ಮುಂದೆ ಸಾಗಿ.

•    ತುಲಾ (Libra)
ತುಲಾ ರಾಶಿಯವರಿಗೆ 2024ರ ಮಿಂಚುವ ಅವಕಾಶ ನೀಡಿದೆ. ರಾಜತಾಂತ್ರಿಕ ವ್ಯವಹಾರಗಳಲ್ಲಿ ನಿಪುಣರಾಗಿರುವ ನಿಮಗೆ ಈ ಬಾರಿ ಖಾಸಗಿ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಕಾದಿದೆ. ಹೊಸ ಅವಕಾಶಗಳು ದೊರೆಯಲಿವೆ. ಕಾಸ್ಮಿಕ್‌ ಶಕ್ತಿಯ ಬೆಂಬಲದೊಂದಿಗೆ ನಿಮ್ಮ ಆಂತರಿಕ (Inner) ಶಕ್ತಿಯನ್ನು ಗುರುತಿಸಿಕೊಂಡು ಮುಂದೆ ಸಾಗಿ. ಅದೃಷ್ಟ ಬಲದಿಂದ ನಿಮ್ಮ ನಿರ್ಧಾರ ಈ ಬಾರಿ ಅತ್ಯಂತ ದೃಢವಾಗಿರಲಿದೆ, ಇದು ಧನಾತ್ಮಕ (Positive) ಪರಿಣಾಮಗಳಿಗೆ ಕಾರಣವಾಗುತ್ತದೆ. ಸಾಮರಸ್ಯದ ಗುಣವುಳ್ಳ ನೀವು ಅದೃಷ್ಟ ನಿಮ್ಮ ಜೀವನವನ್ನು ಹೇಗೆ ನೇಯಲಿದೆ ಎಂದು ಪರಾಮರ್ಶಿಸಿ.

ಈ ಜನರ ಪಾದಗಳನ್ನು ಮುಟ್ಟಬೇಡಿ, ನಿಮ್ಮ ಎಲ್ಲಾ ಸದ್ಗುಣಗಳು ನಾಶವಾಗಬಹುದು.

•    ಧನು (Sagittarius)
2024ನೇ ವರ್ಷ ಧನು ರಾಶಿಯವರಿಗೂ ಕಾಸ್ಮಿಕ್‌ ಶಕ್ತಿಯ ಹವೆಯನ್ನು ತುಂಬಲಿದೆ. ಆಶಾವಾದಿತನ (Optimistic) ಹಾಗೂ ಸ್ಫೂರ್ತಿದಾಯಕ ನಡವಳಿಗೆ ನಿಮ್ಮ ದೊಡ್ಡ ಶಕ್ತಿಯಾಗಿದೆ. ಬೆಳವಣಿಗೆ (Prosperity) ಹಾಗೂ ಯಶಸ್ಸಿಗೆ ಪೂರಕವಾಗುವ ಅನೇಕ ಅವಕಾಶಗಳು ನಿಮಗೆ ಲಭ್ಯವಾಗಲಿದೆ. ನಿಮ್ಮ ಪಯಣದಲ್ಲಿ ಯಶಸ್ಸು ಎನ್ನುವುದು ಸದಾಕಾಲ ಜತೆಯಾಗಲಿದೆ. ಮುಕ್ತ ಮನಸ್ಸಿನಿಂದ ಕೂಡಿದ್ದು, ಕಾಸ್ಮಿಕ್‌ ಎನರ್ಜಿ (Energy) ನಿಮ್ಮ ಜೀವನಕ್ಕೆ  ವಿಶೇಷ ಬೆಂಬಲ ನೀಡಲಿರುವುದನ್ನು ಕಾಣುವಿರಿ.  

click me!