ಆರತಿ ವೇಳೆ ಚಪ್ಪಾಳೆ ತಟ್ಟುವುದು ಏಕೆ?: ಇಲ್ಲಿದೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ...

Published : Jun 05, 2023, 11:15 AM IST
ಆರತಿ ವೇಳೆ ಚಪ್ಪಾಳೆ ತಟ್ಟುವುದು ಏಕೆ?: ಇಲ್ಲಿದೆ ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ...

ಸಾರಾಂಶ

ಪ್ರತಿಯೊಂದು ಹಿಂದೂಗಳ ಹಬ್ಬದಲ್ಲಿ ಪೂಜಾ ವಿಧಿವಿಧಾನಕ್ಕೆ ಪ್ರಮುಖ ಮಹತ್ವವಿದೆ. ಅದೇ ರೀತಿ ಆರತಿ, ಭಜನೆ, ಕೀರ್ತನೆಗಳು ಎಲ್ಲೇ ನಡೆಯುತ್ತಿದ್ದರೂ ಜನರು ಚಪ್ಪಾಳೆ (clap)ತಟ್ಟುವುದನ್ನು ನೀವು ಯಾವಾಗಲೂ ನೋಡಿದ್ದೀರಿ. ಚಪ್ಪಾಳೆ ತಟ್ಟುವುದು ಕೇವಲ ತಾಳಕ್ಕಾಗಿ ಅಲ್ಲ, ಇದರ ಹಿಂದೆ ಒಂದು ವಿಶೇಷ ಕಾರಣವೂ ಇದೆ. 

ಪ್ರತಿಯೊಂದು ಹಿಂದೂಗಳ ಹಬ್ಬ (festival)ದಲ್ಲಿ ಪೂಜಾ ವಿಧಿವಿಧಾನಕ್ಕೆ ಪ್ರಮುಖ ಮಹತ್ವವಿದೆ. ಅದೇ ರೀತಿ ಆರತಿ, ಭಜನೆ, ಕೀರ್ತನೆಗಳು ಎಲ್ಲೇ ನಡೆಯುತ್ತಿದ್ದರೂ ಜನರು ಚಪ್ಪಾಳೆ (clap) ತಟ್ಟುವುದನ್ನು ನೀವು ಯಾವಾಗಲೂ ನೋಡಿದ್ದೀರಿ. ಚಪ್ಪಾಳೆ ತಟ್ಟುವುದು ಕೇವಲ ತಾಳಕ್ಕಾಗಿ ಅಲ್ಲ, ಇದರ ಹಿಂದೆ ಒಂದು ವಿಶೇಷ ಕಾರಣವೂ ಇದೆ. ಈ ಸಂಪ್ರದಾಯ (tradition) ಯಾವಾಗ ಪ್ರಾರಂಭವಾಯಿತು ಮತ್ತು ಇದರ ಹಿಂದೆ ಇರುವ ಧಾರ್ಮಿಕ (Religious), ವೈಜ್ಞಾನಿಕ ಕಾರಣಗಳು ಮತ್ತು ಪ್ರಯೋಜ (benefit) ನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರತಿ, ಭಜನೆ (bhajan) ಹಾಗೂ ಕೀರ್ತನೆಗಳು ನಡೆಯುವಾಗ ಚಪ್ಪಾಳೆ ತಟ್ಟುವುದು ಒಂದು ಪ್ರಕ್ರಿಯೆ. ಚಪ್ಪಾಳೆ ತಟ್ಟುವುದರಿಂದ ಬರುವ ಶಬ್ದದಿಂದ ಭಜನೆಯ ಲಯ ಪ್ರತಿನಿಧಿಸುತ್ತದೆ. ಆದ್ದರಿಂದ ಈ ವೇಳೆ ಜನರು (People) ಭಕ್ತಿ (devotion)ಯಲ್ಲಿ ಮಗ್ನರಾಗುವಂತೆ ಆಗುತ್ತದೆ. ಈ ಶಬ್ದವು ದುಷ್ಪರಿಣಾಮ (adverse effect) ಗಳನ್ನು ತೆಗೆದುಹಾಕಿ, ಸುತ್ತಲೂ ಧನಾತ್ಮಕ ಶಕ್ತಿ (Positive energy) ಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಭಜನಾ, ಆರತಿ ನಡೆಯುವಾಗ ಚಪ್ಪಾಳೆ ತಟ್ಟುತ್ತಾರೆ. ಈ ಕ್ರಿಯೆಯು ಪೂಜಾ (Pooja) ಸ್ಥಳದ ಬಳಿ ಸಕಾರಾತ್ಮಕ (Positive) ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಭಕ್ತ ಪ್ರಹ್ಲಾದನಿಂದ ಪ್ರಾರಂಭ

ದಂತಕಥೆ (legend)ಯ ಪ್ರಕಾರ ಚಪ್ಪಾಳೆ ತಟ್ಟುವಿಕೆಯನ್ನು ಭಕ್ತ ಪ್ರಹ್ಲಾದನಿಂದ ಪ್ರಾರಂಭಿಸಲಾಯಿತು. ಭಕ್ತ ಪ್ರಹ್ಲಾದ (Bhakta Prahlada)ನ ತಂದೆ ಹಿರಣ್ಯಕಶಪುವಿಗೆ ಮಗನ ವಿಷ್ಣು ಭಕ್ತಿ ಇಷ್ಟವಾಗಲ್ಲ. ಆದ್ದರಿಂದ ಅದನ್ನು ತಡೆಯಲು ನಾನಾ ಅಡಚಣೆ (obstacle)ಗಳನ್ನು ಮಾಡುತ್ತಾನೆ. ಆದರೆ ಅವು ಯಾವುವು ಪ್ರಹ್ಲಾದನ ಮೇಲೆ ಯಾವುದೇ ಪರಿಣಾಮ ಬೀರಲ್ಲ. 

ಒಮ್ಮೆ ಪ್ರಹ್ಲಾದನ ಎಲ್ಲಾ ವಾದ್ಯ (instrument)ಗಳನ್ನು ಹಿರಣ್ಯಕಶಪು ನಾಶಪಡಿಸಿದನು. ಹಾಗೆ ಮಾಡುವುದರಿಂದ ಪ್ರಹ್ಲಾದನನ್ನು ನಿಲ್ಲಿಸಬಹುದು ಎಂದು ಆತನಿಗೆ ಅನಿಸಿತ್ತು. ಆದರೆ ಅದು ನೆರವೇರಲಿಲ್ಲ. ಪ್ರಹ್ಲಾದನು ಭಗವಂತನನ್ನು ಸ್ಮರಿಸುತ್ತಾ ಚಪ್ಪಾಳೆ (clap) ತಟ್ಟುವ ತಾಳವನ್ನು ಇಟ್ಟುಕೊಂಡನು. ಈ ಚಪ್ಪಾಳೆಯಿಂದ ತಾಳವನ್ನು ರಚಿಸಿದ್ದರಿಂದ, ಅದಕ್ಕೆ ಚಪ್ಪಾಳೆ ಎಂದು ಹೆಸರು ಬಂದಿದೆ. ಆಗ ಚಪ್ಪಾಳೆ ತಟ್ಟುವ ಸಂಪ್ರದಾಯ (tradition) ಶುರುವಾಯಿತು.

June love horoscope: ಈ ರಾಶಿಯವರಿಗೆ ಬ್ರೇಕ್ ಅಪ್ ಸಾಧ್ಯತೆ..!

 

ಚಪ್ಪಾಳೆ ತಟ್ಟುವಿಕೆಯ ಧಾರ್ಮಿಕ ಮಹತ್ವ

ನಿಮ್ಮ ಕೈಗಳನ್ನು ಚಪ್ಪಾಳೆ ತಟ್ಟುವ ಮೂಲಕ, ನಿಮ್ಮ ಪ್ರಾರ್ಥನೆ (prayer)ಗಳನ್ನು ಕೇಳಲು ನೀವು ದೇವರನ್ನು ಆಹ್ವಾನಿಸುತ್ತೀರಿ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ದೇವರ ಗಮನ ಸೆಳೆಯಲಾಗುತ್ತದೆ. ಇದಲ್ಲದೆ ಆರತಿ, ಭಜನೆ, ಕೀರ್ತನೆ  (Psalm) ಈ ಸಮಯದಲ್ಲಿ ಕೈ ಚಪ್ಪಾಳೆ ತಟ್ಟುವುದರಿಂದ ಪಾಪ (sin) ನಾಶವಾಗುತ್ತದೆ ಎಂದು ನಂಬಲಾಗಿದೆ. ಮತ್ತು ನಕಾರಾತ್ಮಕ ಶಕ್ತಿ (Negative energy)ಯು ಕರಗುತ್ತದೆ ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ಮಹತ್ವ

ವೈಜ್ಞಾನಿಕ (Scientific) ಕಾರಣವೆಂದರೆ ಚಪ್ಪಾಳೆ ತಟ್ಟುವುದರಿಂದ ಕೈಗಳ ಆಕ್ಯುಪ್ರೆಶರ್ (Acupressure) ಪಾಯಿಂಟ್‌ಗಳ ಮೇಲೆ ಒತ್ತಡ ಬೀಳುತ್ತದೆ. ಹೃದಯ ಮತ್ತು ಶ್ವಾಸಕೋಶ (lungs)ದ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದು ರಕ್ತದೊತ್ತಡ (blood pressure) ವನ್ನು ಸಮತೋಲನದಲ್ಲಿಡುತ್ತದೆ. ಇದನ್ನು ಯೋಗದ ಒಂದು ವಿಧವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಅನೇಕ ರೋಗ (disease)ಗಳು ದೂರವಾಗುತ್ತವೆ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ