June love horoscope: ಈ ರಾಶಿಯವರಿಗೆ ಬ್ರೇಕ್ ಅಪ್ ಸಾಧ್ಯತೆ..!

Published : Jun 05, 2023, 10:09 AM ISTUpdated : Jun 05, 2023, 10:14 AM IST
June love horoscope:  ಈ ರಾಶಿಯವರಿಗೆ ಬ್ರೇಕ್ ಅಪ್ ಸಾಧ್ಯತೆ..!

ಸಾರಾಂಶ

ನಮ್ಮ ಜೀವನದ ಪ್ರಮುಖ ಅಂಶಗಳನ್ನು ನಿರ್ಧರಿಸುವಲ್ಲಿ ಜ್ಯೋತಿಷ್ಯದ  ಪ್ರಮುಖ ಪಾತ್ರ ವಹಿಸುತ್ತದೆ. ವಿವಾಹ, ಉದ್ಯೋಗ ಹಾಗೂ ವ್ಯಕ್ತಿತ್ವ ಸೇರಿದಂತೆ ಕೆಲವೊಂದು ಸನ್ನಿವೇಶಗಳನ್ನು ಊಹಿಸಲು ಜ್ಯೋತಿಷ್ಯ ಸಹಾಯಕವಾಗಿದೆ. ಅದೇ ರೀತಿಯಲ್ಲಿ ಪ್ರೀತಿಯ ವಿಚಾರದಲ್ಲಿಯೂ ಕೂಡ ಜಾತಕ ಮಹತ್ವದ್ದಾಗಿದೆ. ಜೂನ್ ತಿಂಗಳಲ್ಲಿ 12 ರಾಶಿಚಕ್ರಗಳ ಪ್ರೀತಿಯ ಜಾತಕ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಮ್ಮ ಜೀವನದ ಪ್ರಮುಖ ಅಂಶಗಳನ್ನು ನಿರ್ಧರಿಸುವಲ್ಲಿ ಜ್ಯೋತಿಷ್ಯ (Astrology)ದ  ಪ್ರಮುಖ ಪಾತ್ರ ವಹಿಸುತ್ತದೆ. ವಿವಾಹ, ಉದ್ಯೋಗ ಹಾಗೂ ವ್ಯಕ್ತಿತ್ವ ಸೇರಿದಂತೆ ಕೆಲವೊಂದು ಸನ್ನಿವೇಶಗಳನ್ನು ಊಹಿಸಲು ಜ್ಯೋತಿಷ್ಯ ಸಹಾಯಕವಾಗಿದೆ. ಅದೇ ರೀತಿಯಲ್ಲಿ ಪ್ರೀತಿ (love)ಯ ವಿಚಾರದಲ್ಲಿಯೂ ಕೂಡ ಜಾತಕ ಮಹತ್ವದ್ದಾಗಿದೆ. ಜೂನ್ ತಿಂಗಳಲ್ಲಿ 12 ರಾಶಿಚಕ್ರಗಳ ಪ್ರೀತಿಯ ಜಾತಕ (Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಮೇಷ ರಾಶಿ (Aries)
ಪ್ರೀತಿಯ ಸಂಬಂಧದಲ್ಲಿ ಇರುವ ಜೋಡಿಗಳಿಗೆ ಈ ತಿಂಗಳು ಬಹಳ ಚಿಂತೆ (worry) ಕಾಡಲಿದೆ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಯಾವುದೋ ಒಂದು ಕಾರಣಕ್ಕೆ ಅಸಮಾಧಾನ (displeasure) ಹೊಂದಬಹುದು. ಅಥವಾ ನಿಮ್ಮ ಬಗ್ಗೆ ಅಸಹ್ಯ ಪಡುವ ಘಟನೆ ನಡೆಯಬಹುದು. ಇದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ (Disagreement) ಉಂಟಾಗಬಹುದು. ಇಬ್ಬರು ಒಮ್ಮತಕ್ಕೆ ಬಂದು ಸಮಸ್ಯೆ (problem) ಬಗೆಹರಿಸಿಕೊಳ್ಳಿ.

ವೃಷಭ ರಾಶಿ (Taurus)

ಜೂನ್ (June) ತಿಂಗಳಲ್ಲಿ ಈ ರಾಶಿಯವರಿಗೆ ಹೆಚ್ಚಿನ ಪ್ರೀತಿ ಸಿಗದೇ ಇರಬಹುದು. ಕೆಲ ವಿಚಾರಗಳಿಂದ ನಿಮ್ಮ ನಡುವೆ ಅಸಮಾಧಾನ ಉಂಟಾಗಬಹುದು. ಆದ್ದರಿಂದ ನಿಮ್ಮ ಸಂಗಾತಿ ಜೊತೆ ಚಾಟ್ ಮಾಡಿ ಅಥವಾ ಮಾತನಾಡಿ ಗೊಂದಲ (confused) ಗಳನ್ನು ಬಗೆಹರಿಸಿಕೊಳ್ಳಿ. ಈ ಮೂಲಕ ನಿಮ್ಮ ಬಂಧ (bond) ಗಟ್ಟಿಪಡಿಸಿಕೊಳ್ಳಿ.

ಮಿಥುನ ರಾಶಿ (Gemini)

ಪ್ರೀತಿ ಹಾಗೂ ಪ್ರಣಯ (romance)ಕ್ಕೆ ಸಂಂಧಿಸಿದಂತೆ ಈ ತಿಂಗಳು ತುಂಬಾ ಉತ್ತಮ. ನಿಮ್ಮ ಸಂಗಾತಿಯು ನಿಮ್ಮನ್ನು ಮೆಚ್ಚುತ್ತಾರೆ. ನೀವು ಡೇಟ್‌ಗೆ ಹೋಗಬಹುದು. ನಿಮ್ಮ ಮನದ ಮಾತನ್ನು ನಿಮ್ಮ ಪ್ರೇಮಿಗೆ ತಿಳಿಸಬಹುದು. ಈ ತಿಂಗಳು ನಿಮ್ಮ ದಾಂಪತ್ಯ ಜೀವನ (married life)ಕ್ಕೆ ಮುನ್ನುಡಿ ಬರೆಯಲಿದೆ.

ಕಟಕ ರಾಶಿ (Cancer)

ಈ ತಿಂಗಳು ಪ್ರೀತಿಯ ಸಂಬಂಧದಲ್ಲಿ ಇರುವವರಿಗೆ ಏರಿಳಿತ ತರಲಿದೆ. ಬ್ರೇಕ್ ಅಪ್ (break up) ಆಗುವ ಸಾಧ್ಯತೆ ಇದೆ. ಸಂಗಾತಿ ಬಗ್ಗೆ ನಂಬಿಕೆ ಹೋಗಿ ಅಸಮಾಧಾನಕ್ಕೆ ಕಾರಣವಾಗಬಹುದು. ಮತ್ತು ಇನ್ನೊಬ್ಬ ವ್ಯಕ್ತಿಯ ಜೊತೆ ನಿಮ್ಮ ಸಂಬಂಧ ಹಾಳಾಗಬಹುದು. ಸಲಹೆ (advice) ತೆಗೆದುಕೊಳ್ಳುವುದು ಅಪಾಯಕಾರಿ. ನಿಮ್ಮ ಸಂಗಾತಿಯನ್ನು ನಂಬಿ, ನಿಮ್ಮ ಬಂಧ ಗಟ್ಟಿಪಡಿಸಿ.

Daily Horoscope: ಈ ರಾಶಿಗೆ ಅನೈತಿಕ ಚಟುವಟಿಕೆಯತ್ತ ಎಳೆವ ಮನಸ್ಸು, ಎಚ್ಚರಿಕೆ ಅಗತ್ಯ!

 

ಸಿಂಹ ರಾಶಿ (Leo)

ಪ್ರೀತಿಯಲ್ಲಿರುವ ಜೋಡಿಗಳಿಗೆ ಈ ತಿಂಗಳು ಶುಭಕರ. ನಿಮ್ಮ ಸಂಗಾತಿ ನಿಮ್ಮ ಜೊತೆ ಉತ್ತಮ ಸಂಬಂಧ (good relationship) ಹೊಂದುತ್ತಾರೆ. ನಿಮ್ಮನ್ನು ಸಂತೋಷ ಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಡೇಟ್’ಗೆ ಹೋಗಲು ನೀವು ಪ್ಲಾನ್ ಮಾಡುವಿರಿ. ನಿಮ್ಮ ಕುಟುಂಬ (family)ದವರು ನಿಮ್ಮ ಪ್ರೀತಿಯನ್ನು ಒಪ್ಪುವ ಸಾಧ್ಯತೆ ಇದೆ.

ಕನ್ಯಾ ರಾಶಿ (Virgo)

ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಗೊಂದಲಗಳಿಂದ ಭಿನ್ನಭಿಪ್ರಾಯ (Disagreement)ಗಳು ಉಂಟಾಗಬಹುದು. ಆದರೆ ನಿಮ್ಮ ಸಂಗಾತಿ ನಿಮ್ಮ ಕೈ ಬಿಡಲ್ಲ. ನಿಮ್ಮ ನಡುವೆ ಪ್ರೀತಿಯ ಮಾಧುರ್ಯ ಉಳಿಯಲಿದೆ. ಪ್ರಣಯ (romance) ಸಂಬಂಧದಲ್ಲಿ ಏರಿಳಿತ ಸಾಧ್ಯತೆ ಇದೆ.

ತುಲಾ ರಾಶಿ (Libra)

ಪ್ರಣಯ ಸಂಬಂಧದಲ್ಲಿ ಇರುವವರಿಗೆ ಈ ತಿಂಗಳು ಸೂಕ್ತವಲ್ಲ. ನೀವು ತುಂಬಾ ಜಾಗರೂಕ (careful)ರಾಗಿರಬೇಕು. ಏಕೆಂದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಅಪನಂಬಿಕೆ  (disbelief) ಹೊಂದಬಹುದು. ಅಥವಾ ಬೇರೊಬ್ಬರು ನಿಮ್ಮ ಸಂಬಂಧ (relationship) ಹಾಳು ಮಾಡಬಹುದು. ನಿಮ್ಮ ಜೊತೆಗಾರರ ಜೊತೆ ಈ ವಿಚಾರ ಚರ್ಚೆ ಮಾಡಿ, ಗೊಂದಲ ಬಗೆಹರಿಸಿಕೊಳ್ಳಿ.

ವೃಶ್ಚಿಕ ರಾಶಿ (Scorpio)

ಈ ತಿಂಗಳು ಪ್ರೀತಿಯ ರಿಲೇಷನ್‌ಶಿಪ್‌ನಲ್ಲಿ ಇರುವವರು ತುಂಬಾ ಜಾಗೃತರಾಗಿರಬೇಕು. ಏಕೆಂದರೆ ನಿಮ್ಮ ಕುಟುಂಬದಿಂದ ವಿರೋಧ (opposition) ವ್ಯಕ್ತವಾಗಬಹುದು. ಇದು ನಡೆದರೆ ಅನೇಕ ಸಮಸ್ಯೆ ಎದುರಾಗಬಹುದು. ನಿಮ್ಮ ಸಂಗಾತಿ ನಿಮ್ಮ ಜೊತೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ. ನಿಮ್ಮ ಕುಟುಂಬದವರ ಮನವೊಲಿಸಲು (convince) ಪ್ರಯತ್ನಿಸಿ.

ಮಿಥುನದಲ್ಲಿ ಬುಧನಿಂದ 3 ರಾಶಿಗಳಿಗೆ Bhadra Rajyog

 

ಧನು ರಾಶಿ (Sagittarius)

ಸಂಬಂಧ (relationship)ದಲ್ಲಿ ಇರುವವರಿಗೆ ಈ ತಿಂಗಳು ಉತ್ತಮ. ನೀವು ನಿಮ್ಮ ಸಂಗಾತಿ ಜೊತೆ ಉತ್ತಮ ಸಂಬಂಧ ಬೆಳೆಸುವಿರಿ. ನಿಮ್ಮ ಪ್ರೇಮಿಯಿಂದ ಬಹಳಷ್ಟು ಪ್ರೀತಿ (Love) ಪಡೆಯುವಿರಿ.

ಮಕರ ರಾಶಿ (Capricorn)

ಸಂಬಂಧದಲ್ಲಿ ಇರುವವರಿಗೆ ಈ ತಿಂಗಳು ಸಮಸ್ಯೆ ತರಲಿದೆ. ನಿಮ್ಮ ಸಂಗಾತಿ ಅಸಮಾಧಾನ ಆಗುವ ಸಾಧ್ಯತೆ ಇದೆ. ನಿಮ್ಮನ್ನು ಅನುಮಾನಿ (Doubt)ಸಲು ಪ್ರಾರಂಭಿಸಬಹುದು. ನೀವು ಅವರಿಗೆ ಸಹಾಯ ಮಾಡುವ ಭರವಸೆ  (hope) ನೀಡಬೇಕು.

ಕುಂಭ ರಾಶಿ (Aquarius)

ಪ್ರಣಯ ಸಂಬಂಧದವರಿಗೆ ಈ ತಿಂಗಳು ಸೂಕ್ತವಲ್ಲ. ನಿಮ್ಮ ಸಂಗಾತಿಯ ಜೊತೆ ನೀವು ಕೆಲ ವಿಚಾರಗಳ ಬಗ್ಗೆ ವಾದ (argument) ಉಂಟಾಗಬಹುದು. ನಿಮ್ಮ ನಡುವೆ ಬಿರುಕು ಮೂಡುವ (break up) ಸಾಧ್ಯತೆ ಇದೆ. ನೀವು ಒಟ್ಟಿಗೆ ಸೇರಿ ಮುಂದಿನ ಜೀವನದ ಕುರಿತು ಮಾತುಕತೆ ನಡೆಸಿದರೆ ಉತ್ತಮ.

ಮೀನ ರಾಶಿ (Pisces)

ಈ ತಿಂಗಳು ಪ್ರೇಮಿಗಳಿಗೆ ಶುಭದಾಯಕ. ನಿಮ್ಮ ಸಂಗಾತಿ ನಿಮ್ಮ ಜೊತೆ ಕೋಪ (anger)ಗೊಳ್ಳಬಹುದು. ನಿಮ್ಮ ಸಂಗಾತಿಗೆ ನಿಮ್ಮ ಸಮಯ (time) ನೀಡಿ, ಬೆಂಬಲ ಕೊಡಿ. ನಿಮ್ಮ ಸಂಬಂಧ ಹಾಳು ಮಾಡುವ ಜನರಿಂದ ಎಚ್ಚರಿಕೆಯಿಂದ ಇರಿ.
 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!