2022ರ ಕೊನೆಯ ಸೂರ್ಯಗ್ರಹಣವು ಇದೇ ತಿಂಗಳಲ್ಲಿ ಸಂಭವಿಸಲಿದೆ. ಈ ಗ್ರಹಣವು ನಾಲ್ಕು ರಾಶಿಗಳ ಪಾಲಿಗೆ ಸಾಕಷ್ಟು ಕಷ್ಟನಷ್ಟ ತರುವುದರಿಂದ ಅವರ ಪಾಲಿಗೆ ನಿಜಾರ್ಥದಲ್ಲಿ ಗ್ರಹಣ ಕಾಡಲಿದೆ.
ಈ ವರ್ಷದಲ್ಲಿ ಈಗಾಗಲೇ ಒಂದು ಸೂರ್ಯ ಗ್ರಹಣ ಕಳೆದಿದೆ. ಇದು ಭಾರತದಲ್ಲಿ ಗೋಚರವಾಗಿಲ್ಲದ ಕಾರಣ ಯಾವುದೇ ಸೂತಕ ಕಾಲ ಇರಲಿಲ್ಲ. ಈಗ ಮತ್ತೊಂದು ಬಾರಿ ಸೂರ್ಯಗ್ರಹಣ ಸಂಭವಿಸಲಿದ್ದು ಇದು ಭಾರತದಲ್ಲಿ ಗೋಚರಿಸಲಿದೆ. ಅಷ್ಟೇ ಅಲ್ಲ, ಇದು ಈ ವರ್ಷದ ಕಡೆಯ ಸೂರ್ಯಗ್ರಹಣವಾಗಿದೆ. ಈ ಗ್ರಹಣವು ಯಾವಾಗ ಸಂಭವಿಸಲಿದೆ. ಇದರ ಲಾಭ ಯಾವ ರಾಶಿಗೆ, ಯಾವುದಕ್ಕೆ ನಷ್ಟ ಎಲ್ಲ ವಿವರ ತಿಳಿಯೋಣ.
2022ರ ಕಡೆಯ ಸೂರ್ಯಗ್ರಹಣ
2022ರ ಕೊನೆಯ ಸೂರ್ಯಗ್ರಹಣ(Solar Eclipse)ವು ಅಕ್ಟೋಬರ್ 25ರಂದು ಸಂಭವಿಸುತ್ತದೆ. ಇದು ದೀಪಾವಳಿಯ ನಂತರದ ದಿನದಂದು ಸಂಭವಿಸುತ್ತಿದ್ದು ಭಾಗಶಃ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣವು ಸುಮಾರು ನಾಲ್ಕು ಗಂಟೆಗಳಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ, ಭಾಗಶಃ ಸೂರ್ಯಗ್ರಹಣವು ಅಕ್ಟೋಬರ್ 25ರಂದು ಮಧ್ಯಾಹ್ನ 2.28ರಿಂದ 6.32ರವರೆಗೆ ಇರುತ್ತದೆ. ವಾಸ್ತವವಾಗಿ, ಗ್ರಹಣದ ಸಮಯದಲ್ಲಿ ಬ್ರಹ್ಮಾಂಡದ ವಿಶೇಷ ಶಕ್ತಿಗಳು ಸಕ್ರಿಯಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಈ ಸೂರ್ಯಗ್ರಹಣವು ಅನೇಕ ರಾಶಿಚಕ್ರಗಳ ಜೀವನದಲ್ಲಿ ಸಂತೋಷವನ್ನು ತರುತ್ತಿದೆ. ಆದರೆ ಈ ನಾಲ್ಕು ರಾಶಿಯವರು(Zodiacs) ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
Vastu Benefits: ವೃತ್ತಿಯಲ್ಲಿ ನೆಮ್ಮದಿಗಾಗಿ ತಾಮ್ರದ ಸೂರ್ಯ ಬಳಸಿ..
ಯಾವ ನಾಲ್ಕು ರಾಶಿಚಕ್ರದ ಚಿಹ್ನೆಗಳು ಸೂರ್ಯಗ್ರಹಣದ ಹೆಚ್ಚು ನಕಾರಾತ್ಮಕ ಪರಿಣಾಮ ಕಾಣುತ್ತವೆ ಎಂಬುದಿಲ್ಲಿದೆ.
ಮೇಷ ರಾಶಿ(Aries)
ಮೇಷ ರಾಶಿಯು ಈ ವರ್ಷದ ಭಾಗಶಃ ಸೂರ್ಯಗ್ರಹಣದಿಂದ ಪ್ರಭಾವಿತವಾಗಿರುವ ಮೊದಲ ಚಿಹ್ನೆಯಾಗಿದೆ. ಈ ವರ್ಗದಲ್ಲಿ ಬೀಳುವ ಜನರಿಗೆ, ಗ್ರಹಣವು ಏಳನೇ ಮನೆಯಲ್ಲಿ ನಡೆಯುತ್ತದೆ. ಅಲ್ಲಿ ನೀವು ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಆನಂದಿಸುವಿರಿ. ಆದರೂ, ನಿಮ್ಮ ಸಂಗಾತಿಯೊಂದಿಗೆ ಅನೇಕ ಭಿನ್ನಾಭಿಪ್ರಾಯಗಳನ್ನು ಕಾಣಬಹುದು. ಅದನ್ನು ಪರಸ್ಪರ ತಿಳುವಳಿಕೆಯೊಂದಿಗೆ ಪರಿಹರಿಸಬಹುದಾಗಿರುವುದರಿಂದ ತಾಳ್ಮೆ ಮತ್ತು ವಿವೇಕಯುತ ಮಾತುಕತೆ ಅಗತ್ಯ. ಅಲ್ಲದೆ, ಯಾವುದೇ ರೀತಿಯ ಹೊಸ ಹೂಡಿಕೆಯೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ.
ಕಟಕ ರಾಶಿ(Cancer)
ಭಾಗಶಃ ಸೂರ್ಯಗ್ರಹಣದ ನಕಾರಾತ್ಮಕ ಪರಿಣಾಮವನ್ನು ಕಟಕ ರಾಶಿಯವರೂ ಕಾಣಬೇಕಾಗುತ್ತದೆ. ಈ ಸಮಯದಲ್ಲಿ ಕಟಕ ರಾಶಿಯ ಜನರು ಮಾನಸಿಕ ಒತ್ತಡವನ್ನು ಅನುಭವಿಸಬಹುದು. ಅದು ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಆರ್ಥಿಕ ರಂಗದಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಕಾರ್ಯತಂತ್ರದ ಯೋಜನೆ ಅಗತ್ಯವಿದೆ. ಉದ್ಯೋಗ ಮತ್ತು ವ್ಯಾಪಾರ ಮಾಡುವವರಿಗೆ ದೊಡ್ಡ ಯೋಜನೆಗಳನ್ನು ಪಡೆಯುವ ಸಾಧ್ಯತೆಗಳು ತುಂಬಾ ಕಡಿಮೆ. ವಿವಾಹಿತ ಮತ್ತು ಡೇಟಿಂಗ್ ಮಾಡುತ್ತಿರುವವರು ಪರಸ್ಪರ ಸಮನ್ವಯದ ಮೂಲಕ ತಮ್ಮ ಸಂಬಂಧವನ್ನು ಉಳಿಸಿಕೊಳ್ಳಬೇಕು. ಗರಿಷ್ಠ ಪ್ರಯೋಜನಗಳನ್ನು ಪಡೆಯಲು ದುರ್ಗಾ ದೇವಿಯನ್ನು ಪೂಜಿಸಲು ಸೂಚಿಸಲಾಗುತ್ತದೆ.
ತುಲಾ ರಾಶಿ(Libra)
ತನ್ನದೇ ಮನೆಯಲ್ಲಿ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿರುವ ತುಲಾ ಈ ವರ್ಷ ಭಾಗಶಃ ಸೂರ್ಯಗ್ರಹಣದಿಂದ ಪ್ರಭಾವಿತವಾಗಿರುವ ಮೂರನೇ ಚಿಹ್ನೆಯಾಗಿದೆ. ತುಲಾ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಣಕಾಸಿನ ದೃಷ್ಟಿಯಿಂದಲೂ, ವಿಷಯಗಳು ಸುಗಮವಾಗಿ ಮತ್ತು ಸ್ಥಿರವಾಗಿ ಕಾಣುತ್ತಿಲ್ಲ. ಬದಲಿಗೆ, ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ವಿಷಯಗಳು ಬಗೆಹರಿಯುವವರೆಗೆ ಯಾವುದೇ ರೀತಿಯ ಹೊಸ ಕೆಲಸವನ್ನು ಮಾಡುವುದನ್ನು ತಾತ್ಕಾಲಿಕವಾಗಿ ತಪ್ಪಿಸಿ. ನಿಮ್ಮ ಸಂಬಂಧದಲ್ಲಿ ನೀವು ಅನ್ಯತೆಯನ್ನು ಸಹ ಅನುಭವಿಸಬಹುದು. ಈ ಹಂತದಲ್ಲಿ ಶಿವನನ್ನು ಆರಾಧಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Vastu tips: ಮನೆಯಲ್ಲಿ ಸದಾ ಜಗಳವೇ? ಈ ರೀತಿಯ ಕನ್ನಡಿ, ಪಾತ್ರೆಗಳನ್ನು ಕೂಡಲೇ ಎಸೆಯಿರಿ
ಧನು ರಾಶಿ(Sagittarius)
2022ರ ಭಾಗಶಃ ಸೂರ್ಯಗ್ರಹಣದಿಂದ ಪ್ರಭಾವಿತವಾಗಿರುವ ನಾಲ್ಕನೇ ಚಿಹ್ನೆ ಧನು ರಾಶಿ. ಈ ರಾಶಿಚಕ್ರದ ಜನರು 11ನೇ ಮನೆಯಲ್ಲಿ ಸೂರ್ಯಗ್ರಹಣವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಏಕೆಂದರೆ ಗ್ರಹಣವು ನಿಮಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಣಕಾಸಿನ ವಿಷಯದಲ್ಲಿ, ಯಾವುದೇ ಒಳ್ಳೆಯ ಸುದ್ದಿಯನ್ನು ನೋಡಲಾಗುವುದಿಲ್ಲ, ಬದಲಿಗೆ ಕೇವಲ ಸವಾಲುಗಳನ್ನು ಮಾತ್ರ ಎದುರಿಸುತ್ತೀರಿ. ಹಾಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರದಿಂದಿರಿ. ಆದಾಗ್ಯೂ, ವಿವಾಹಿತ ದಂಪತಿಗಳು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಪರಸ್ಪರ ಹತ್ತಿರ ಬರುವ ಮೂಲಕ ಈ ಹಂತವನ್ನು ಆನಂದಿಸುತ್ತಾರೆ. ಆಂಜನೇಯನ ಆರಾಧನೆಯಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.