Chikkamagaluru: ಶಿವರಾತ್ರಿ ಹಬ್ಬಕ್ಕೆ ಲಕ್ಷಾಂತರ ಭಕ್ತರ ಪಾದಯಾತ್ರೆ: ಸ್ಥಳೀಯರಿಂದ ಉಚಿತ ಊಟದ ವ್ಯವಸ್ಥೆ!

By Govindaraj S  |  First Published Mar 4, 2024, 10:43 PM IST

ಶಿವರಾತ್ರಿ ಹಬ್ಬಕ್ಕೆ ಇನ್ನು ಕೆಲ ದಿನಗಳ ಬಾಕಿ  ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕಿಸುವ ರಸ್ತೆಯಾದ ಮೂಡಿಗೆರೆ ಟು ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ.
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.04): ಶಿವರಾತ್ರಿ ಹಬ್ಬಕ್ಕೆ ಇನ್ನು ಕೆಲ ದಿನಗಳ ಬಾಕಿ  ಇರುವಂತೆ ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕಿಸುವ ರಸ್ತೆಯಾದ ಮೂಡಿಗೆರೆ ಟು ಕೊಟ್ಟಿಗೆಹಾರದ ಮೂಲಕ ಜನರು ಸಾಗರದಂತೆ ಹೋಗುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಜನರು ಶ್ರೀ ಕ್ಷೇತ್ರದಕ್ಕೆ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದು ಕೊಟ್ಟಿಗೆಹಾರದಲ್ಲಿ ಕೆಲ ಭಕ್ತರು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ.ನೂರಾರು ಕೀಲೋಮೀಟರ್ ಗಟ್ಟಲೆ ಭಕ್ತರ ನಡೆಗೆ ಮೂಲಕ ತೆರಳಿ ದೇವರ ದರ್ಶನ ಪಡೆಯುಲಿದ್ದಾರೆ. 

Latest Videos

undefined

ಉರಿಬಿಸಿಲಿನಲ್ಲಿ ಪಾದಯಾತ್ರೆ: ಕಷ್ಟಗಳ ಪರಿಹಾರಕ್ಕೆ ಹಾಗೂ ಹರಕೆ ತೀರಿಸಲು ಭಕ್ತರು ಕೇಶರಿ ವಸ್ತ್ರಧರಿಸಿ ಉರಿಬಿಸಿಲಿನಲ್ಲಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೆಲವರು ಹರಿಕೆಹೊತ್ತ ಭಕ್ತರು ಪಾದಯಾತ್ರೆಯ ಹೋಗುತ್ತಿದ್ದು ವಯಸ್ಸಿನ ಮಿತಿ ಇಲ್ಲದೇ ಭಕ್ತರು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ. ಉರಿಬಿಸಿಲನ್ನು ಲೆಕ್ಕಿಸದೆ ಕೆಲವರು ಬರಿಗಾಲಿನಲ್ಲಿ ಮತ್ತೆ ಕೆಲವರು ಚಪ್ಪಲಿ ಧರಿಸಿ ನಡೆದುಕೊಂಡು ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ.ಆಯಾಸಗೊಂಡವರು ಬಸ್ನಿಲ್ದಾಣ,ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಇಷ್ಟಾರ್ಥ ನೆರವೇರಿಸುವಂತೆ ಹರಕೆ ಹೊತ್ತವರು ಪಾದಯಾತ್ರೆಯನ್ನು ಕೂಡಿಕೊಳ್ಳುತ್ತಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಈಗಾಗಲೇ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆಯನ್ನು ಹಮ್ಮಿಕೊಂಡಿದ್ದಾರೆ.

ಕಾಂಗ್ರೆಸ್‌ ಎಫ್ಎಸ್‌ಎಲ್ ವರದಿ ಒಪ್ಪುವ ಸ್ಥಿತಿಯಲ್ಲಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಈ ವರ್ಷ ಭಕ್ತರ ಸಂಖ್ಯೆ ಅಧಿಕ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಭಕ್ತರ ಸಂಖ್ಯೆ ಅಧಿಕಗೊಂಡಿದೆ. ಪಾದಯಾತ್ರೆಯಲ್ಲಿ ತೆರಳಿ ಮಂಜುನಾಥನ ದರ್ಶನ ಪಡೆದು ವಾಹನದಲ್ಲಿ ಹಿಂದಿರುಗಲಿದ್ದಾರೆ. ಟ್ರ್ಯಾಕ್ಟರ್ಗೆ ಟಾರ್ಪಲ್ಕಟ್ಟಿಕೊಂಡು ಬಟ್ಟೆ,  ಪೇಸ್ಟ್, ಬ್ರೆಸ್, ಸೋಪುಗಳನ್ನಿಟ್ಟುಕೊಂಡು ಖಾಲಿ ವಾಹನ ಹೋಗುತ್ತಿರುವುದು ಕಂಡು ಬಂತು. ಕೆಲವರು ಟೀಶರ್ಟ್ಗಳ ಮೇಲೆ  ಆ ವ್ಯಕ್ತಿಯ ಹೆಸರು, ಗ್ರಾಮ ಎಷ್ಟೆನೇ ವರ್ಷದ ಪಾದಯಾತ್ರೆ ಎಂಬುದನ್ನು ಬರೆಸಿಕೊಂಡು ಪಾದಯಾತ್ರೆ ತೆರಳುತ್ತಿದ್ದಾರೆ.ಮೂಡಿಗೆರೆಯ ಕಾಫಿಕ್ಯೂರಿಂಗ್ ಬಳಿ ಸೇವಾ ಸಮಿತಿ ವತಿಯಿಂದ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿದೆ. 8ನೇ ವರ್ಷದ ಅನ್ನಸಂತರ್ಪಣೆ ಮತ್ತು ಉಚಿತ ವೈದ್ಯಕೀಯ ತಪಾಸಣೆಯನ್ನು ಹಮ್ಮಿಕೊಂಡಿದೆ. ಉರಿಬಿಸಿಲಿನಿಂದ ಬಂದವರು ಇಲ್ಲಿ ವಿಶ್ರಾಂತಿ ಪಡೆದು ಬಳಿಕ ಪಾದಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ.

ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್‌ ಯೋಜನೆ: ಸಂಸದ ಪ್ರಜ್ವಲ್‌ ರೇವಣ್ಣ

ಕೊಟ್ಟಿಗೆಹಾರದಲ್ಲಿ ಶ್ರೀರಾಮಮಂದಿರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದೆ. 3 ಜಾಗದಲ್ಲಿ ಪೆಂಡಾಲ್ನಿರ್ಮಿಸಲಾಗಿದೆ. ಮಲಗಲು ಜಾಗದ ಕೊರತೆ ಉಂಟಾದರೆ ಕೆಲವರು ಬಸ್ನಿಲ್ದಾಣದಲ್ಲು ತಂಗುತ್ತಿದ್ದಾರೆ. ಬೆಂಗಳೂರಿನಿಂದ ದಾನಿಗಳು ಕಾಫಿ,ತಿಂಡಿ, ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.ಕಡೂರು ತಾಲೂಕಿನ ಜಿಗಣೆಗಳ್ಳಿಯ ಚೈತ್ರ 4ನೇ ವರ್ಷ ಪಾದಯಾತ್ರೆ ತೆರಳುತ್ತಿದ್ದರೆ, ಮಂಜುಳ 3ನೇ ವರ್ಷ 14 ವರ್ಷದ ಬಾಲಕಿ ಸಿಂಚನ ಮಹಿಳೆಯರೊಂದಿಗೆ ಹೆಜ್ಜೆಹಾಕುತ್ತಿದ್ದಾಳೆ. ಕಾನಗೊಂಡನಹಳ್ಳಿಯ ಸ್ವಾಮಿ,ಮಂಜುನಾಥ ಮತ್ತು ದರ್ಶನ್ ಅವರುಗಳು ೬ನೇ ವರ್ಷದ ಪಾದಯಾತ್ರೆ ಕೈಗೊಂಡಿದ್ದಾರೆ. ಯಾವುದೇ ಹರಕ್ಕೆ ಹೊತ್ತಿಲ್ಲ, ಧರ್ಮಸ್ಥಳದಲ್ಲಿ ನಡೆಯುವ ಶಿವರಾತ್ರಿಯನ್ನು ನೋಡುವ ಸಲುವಾಗಿ ಹೋಗುತ್ತಿರುವುದಾಗಿ ಹೇಳಿದರು.

click me!