Chanakty Niti: ಸಂಸಾರದ ಅಪಶ್ರುತಿಗೆ ಕಾರಣವಾಗೋ ಹೆಣ್ಣಿನ ದುರ್ಗುಣಗಳಿವು!

By Suvarna NewsFirst Published Jun 11, 2023, 1:18 PM IST
Highlights

ಹೆಣ್ಣು ಸಂಸಾರದ ಕಣ್ಣು ಅಂತಾರೆ. ಹೆಣ್ಣು ಸರಿಯಾದ ದಾರಿಯಲ್ಲಿ ನಡೆದರೆ ಗಂಡ, ಮಕ್ಕಳು ಸೇರಿ ಸಂಸಾರವೇ ಸುಖವಾಗಿರಲು ಸಾಧ್ಯ. ಆದರೆ, ಆಕೆಗೆ ದುರ್ಗಣಗಳಿದ್ದರೆ? ಚಾಣಕ್ಯ ಹೇಳುವುದೇನು?

ಆಚಾರ್ಯ ಚಾಣಕ್ಯ ಜೀವನದ ಬಗ್ಗೆ ಅನೇಕ ಪಾಠಗಳನ್ನು ಹೇಳಿದ್ದಾನೆ. ಸುಖ ಸಂಸಾರ, ಹೆಣ್ಣು ಗಂಡಿನ ದುರ್ಗುಣಗಳು, ಜೀವನದಲ್ಲಿ ಖುಷಿಯಾಗಿರಲು ಏನು ಮಾಡಬೇಕು ಎಂಬುದರಿಂದ ಹಿಡಿದು ಹಲವು ವಿಷಯಗಳ ಬಗ್ಗೆ ಚಾಣಕ್ಯ ತನ್ನದೇ ಆದ ವಿವರಣೆ ನೀಡಿದ್ದಾನೆ. ಆಧುನಿಕ ಬರಹಗಾರರ Personality Development ಪುಸ್ತಕಗಳಲ್ಲಿ ಉಲ್ಲೇಖವಾಗುವ ಹಲವಾರು ವಿಷಯಗಳನ್ನು ಚಾಣಕ್ಯ ತನ್ನ ಕೃತಿಗಳಲ್ಲಿ ಮೆನ್ಷನ್ ಮಾಡಿದ್ದಾನೆಂಬುವುದು ವಿಶೇಷ. ಹೀಗೇ ಇದ್ದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ, ಹಾಗಿರುವುದು ಹೇಗೆಂಬ ಗೊಂದಲ ಅನೇಕರಿಗೆ. ಮನುಷ್ಯ ಸಹಜ ಗುಣಗಳನ್ನು ಬದಲಾಯಿಸೋದು ಕಷ್ಟ. ಅವೇ ಅವರ ಜೀವನಕ್ಕೆ ಮಾರಕವಾಗಿರುತ್ತೆ ಎಂಬುವುದೂ ಸತ್ಯ. ಇಂಥ ಕೆಲವು ಹೆಣ್ಣಿನ ದುರ್ಗುಣಗಳನ್ನು ಬದಲಾಯಿಸೋದು ಕಷ್ಟ ಬಿಡಿ. ಇದರಿಂದಾನೇ ಸಂಸಾರವೂ ಹಾಳಾಗುವುದಲ್ಲದೇ, ಆಕೆಗೂ ಯಶಸ್ಸು ಸಿಗೋಲ್ಲ ಅಂತಾನೆ ಚಾಣಕ್ಯ. ಅಷ್ಟಕ್ಕೂ ಈ ಬಗ್ಗೆ ಚಾಣಕ್ಯ ಹೇಳಿದ್ದೇನು? 

ಸುಳ್ಳಿನಿಂದ (Lie) ಮನೆ ಕಟ್ಟೋರು:
ಅನೇಕರ ಸುಳ್ಳು ಹೇಳುವ ಮೂಲಕವೇ ಹಿಡಿದ ಕೆಲಸವನ್ನು ಸಾಧಿಸುತ್ತಾರೆ. ಕೆಲವರಿಗೆ ರಕ್ತಗತವಾಗಿ ಈ ಗುಣ ಕರಗತವಾಗಿರುತ್ತೆ. ಅದರಲ್ಲಿಯೂ ಮಹಿಳೆಯರು ಸುಳ್ಳು ಹೇಳುವುದು ಹೆಚ್ಚು ಎನ್ನೋ ಚಾಣಕ್ಯ, ಬೇಕಾಬಿಟ್ಟಿ ಸುಳ್ಳು ಹೇಳೋರು ಜೀವನದಲ್ಲಿ ಏನನ್ನೂ ಸಾಧಿಸುವುದಿಲ್ಲ. ಆದರೆ, ಗಂಡನ ಒಳಿತಿಗಾಗಿಯೇ ಸುಳ್ಳು ಹೇಳೋರ ವೈವಾಹಿಕ ಜೀವನ (Married Life) ಸುಖವಾಗಿರುತ್ತಾನೆ, ಎಂದಿದ್ದಾನೆ. 

ಚಾಣಕ್ಯ ನೀತಿ: ನಿಮ್ಮ 'ಈ' ನಾಲ್ಕು ರಹಸ್ಯ ಬಯಲಾದರೆ ನಿಮ್ಮ ಜೀವನ ನರಕ...

Latest Videos

ಮಹಿಳೇಯರೇ ಸ್ಟ್ರಾಂಗು:
ಹೆಣ್ಣು ತಾನು ಸದಾ ಬುದ್ಧಿವಂತಳೆಂದು (Intelligent) ಸಾಬೀತು ಮಾಡಲು ಯತ್ನಿಸುತ್ತಲೇ ಇರುತ್ತಾಳೆ. ಇದರಿಂದಾನೇ ದಾಂಪತ್ಯದಲ್ಲಿ ವಾದ ವಿವಾದಗಳು (Arguments) ಹೆಚ್ಚಾಗುತ್ತದೆ. ಆದರೆ ಚಾಣಕ್ಯ ಹೇಳುವ ಪ್ರಕಾರ ತಮ್ಮ ಜೊತೆ ಇರೋರೆಲ್ಲರೂ ತನಗಿಂಥ ದುರ್ಬಲರು (Weak) ಎಂದು ಪರಿಗಣಿಸುವ ಸ್ತ್ರೀಯರೂ ಇರುತ್ತಾರೆ. ಇದು ಜೊತೆಗಿರೋರನ್ನೂ ಪೇಚಿಗೆ ಸಿಲುಕಿಸುತ್ತದೆ. ಅಂಥ ಮಹಿಳೆಯರಿಂದ ಸ್ವಲ್ಪ ದೂರವಿದ್ದರೆ ಒಳಿತು ಎನ್ನುವ ಜೊತೆಗೆ ಮಹಿಳೆಯರೂ ಹೆಚ್ಚು ಧೈರ್ಯಶಾಲಿಗಳು ಎಂಬುದನ್ನೂ ಒಪ್ಪಿ ಕೊಳ್ಳುತ್ತಾನೆ. 

ಮನಿ ಮೋಹ ಹೆಚ್ಚು
ಹೆಂಗಸರಿಗೆ ಪುರುಷರಿಗಿಂತಲೂ ಹಣದ ವ್ಯಾಮೋಹ ಹೆಚ್ಚಂತೆ! ಅಲ್ಲದೇ ಅದು ಎಲ್ಲಿಂದ ಬರುತ್ತದೆ ಎನ್ನುವುದರ ಮೇಲೆ ಅವಳ ಮನಸ್ಸು ಚಂಚಲವಾಗುತ್ತದೆ. ಕೆಲವೊಮ್ಮೆ ಈ ಹಣಕ್ಕಾಗಿಯೇ ನಾರಿ ತನ್ನೆಲ್ಲಾ ಮಿತಿಗಳನ್ನೂ ದಾಟಲು ಸಿದ್ಧಳಾಗಿರುತ್ತಾಳಂತೆ. ತಪ್ಪು ದಾರಿ ಹಿಡಿಯಲೂ ಹಿಂದು ಮುಂದು ನೋಡಲ್ವಂತೆ. ಆಗ ಜೊತೆಗಿರೋರು ಇದರಿಂದ ದುಃಖ-ನೋವು ಅನುಭವಿಸುತ್ತಾನೆಂದು ಹೇಳಿದ್ದಾನೆ ಚಾಣಕ್ಯ. ಅದರಲ್ಲಿ ಸಂಸಾರದ ನೌಕೆ ಹಳಿ ತಪ್ಪೋದು ಗ್ಯಾರಂಟಿ ಇಂಥ ಹೆಣ್ಣಿನಿಂದಾನೇ ಎನ್ನುವುದು ಅವನ ಬಲವಾದ ವಾದ.

ಚಾಣಕ್ಯ ‘ನೀತಿ ಶಾಸ್ತ್ರ’: ಹೆಂಡತಿಗೆ ಈ ‘ನಾಲ್ಕು’ ವಿಷಯ ಹೇಳಬಾರದು..!

ಮೂರ್ಖ ವರ್ತನೆ (Foolish Behavior)
ಮನುಷ್ಯ ಅಂದ್ರೆ ತಪ್ಪು ಮಾಡೋದು ಸಹಜ. ಆದರೆ, ಅದನ್ನು ತಿದ್ದಿಕೊಂಡು ಮುಂದೆ ಸಾಗಿದರೆ ಯಶಸ್ಸು ಕೈ ಹಿಡಿಯುತ್ತೆ. ಆದರೆ, ಕೆಲವು ಮಹಿಳೆಯರು ತಪ್ಪು ಅಂತ ಗೊತ್ತಿದ್ದರೂ ಕೆಲವು ಕೆಲಸಗಳನ್ನು ಬಿಡದೇ ಮಾಡುತ್ತಾರಂತೆ. ಮತ್ತೆ ಮತ್ತೆ ಅದೇ ತಪ್ಪನ್ನು ಮಾಡಲೂ ಹೇಸುವುದಿಲ್ಲವಂತೆ. ಹಾಗಂತ ಅವಳು ಪಶ್ಚಾತ್ತಾಪ (Repent) ಪಡೋಲ್ಲ ಅಂಥ ಅರ್ಥವಲ್ಲ. ಆದರೂ ತಪ್ಪು ಮಾಡುತ್ತಲೇ ಇರುತ್ತಾಳಂತೆ. ಇದು ಜೊತೆಗಿರೋರಿಗೆ ಮಾಡೋ ನಷ್ಟ ಅಷ್ಟಿಷ್ಟಲ್ಲ. ಇದು ಜೀವನದ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುವುದು ಸುಳ್ಳಲ್ಲ ಎನ್ನುತ್ತಾನೆ ಚಾಣಕ್ಯ. 

ಅಷ್ಟೇ ಅಲ್ಲದೇ ಈ ನಾಲ್ಕು ವರ್ತನೆಗಳು ಮಹಿಳೆಯರಲ್ಲಿ ಇದ್ದರೆ ಬದಲಾಯಿಸಲೂ ಆಗೋಲ್ಲ ಎನ್ನೋದು ಚಾಣುಕ್ಯನ ವಾದ. ತಮಗೆ ನಷ್ಟ ಮಾಡಿಕೊಳ್ಳುವುದಲ್ಲದೇ, ತಮ್ಮ ಜೊತೆಗಿರುವವರಿಗೆ ಹಾಗೂ ಸಂಸಾರಕ್ಕೆ ಸೇರಿ ವೈವಾಹಿಕ ಜೀವನಕ್ಕೂ ಈ ದುರ್ಗಣಿಗಳಿಂದ ಹಾನಿ ಎನ್ನುತ್ತಾನೆ ಚಾಣಕ್ಯ. ಹೌದು ಅಂತ ನಿಮಗೂ ಅನಿಸುತ್ತಾ? 

click me!