ಈ ದೇವಾಲಯದಲ್ಲಿ ಬೆಳ್ಳಿಯ ನಾಣ್ಯ ಮಂತ್ರಿಸಿ ತಂದರೆ ನೀವು ಶ್ರೀಮಂತರಾದಿರೆಂದೇ ಲೆಕ್ಕ!

By Suvarna News  |  First Published Jun 12, 2023, 5:56 PM IST

ಇದು ಹೇಳೀ ಕೇಳೀ ಕುಬೇರ ದೇವಾಲಯ. ಕುಬೇರನ ಅನುಗ್ರಹ ಇದ್ದಲ್ಲಿ ಸಂಪತ್ತಿಗೆ ಕೊರತೆ ಎಲ್ಲಿ? ಇಲ್ಲಿ ಕೊಡುವ ಬೆಳ್ಳಿಯ ನಾಣ್ಯ ನಿಮ್ಮ ಜೀವನವನ್ನೇ ಬದಲಿಸಬಲ್ಲದು. 


ಭಾರತ ದೇಶದಲ್ಲಿ ಲಕ್ಷ ಲಕ್ಷ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ದೇಶದ ಬಹುತೇಕ ದೇವಾಲಯಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಇಂದು ನಾವು ಹೇಳುವ ದೇವಾಲಯದ ವೈಶಿಷ್ಠ್ಯತೆ ವಿಭಿನ್ನವಾಗಿದೆ. ಅಲ್ಲಿ ದರ್ಶನದ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ವಿಶಿಷ್ಠ ದೇವಾಲಯವು ಬೇರೆಲ್ಲೂ ಅಲ್ಲ, ಆದರೆ ದೇವರ ನಾಡು ಉತ್ತರಾಖಂಡದಿಂದ 40 ಕಿಮೀ ದೂರದಲ್ಲಿರುವ ಜಾಗೇಶ್ವರ ಧಾಮದಲ್ಲಿದೆ. 

ಕುಬೇರನ ದೇವಾಲಯ
ಈ ಜಾಗೇಶ್ವರ ಧಾಮದಲ್ಲಿ ಕುಬೇರ ದೇವಸ್ಥಾನವೂ ಇದೆ. ಕುಬೇರನು ಸಂಪತ್ತಿನ ದೇವರು. ಕುಬೇರನು ರಾವಣನ ಮಲ ಸಹೋದರನೂ ಆಗಿದ್ದನು. ಕುಬೇರನನ್ನು ದೀಪಾವಳಿ ಮತ್ತು ಧನ್ತೇರಸ್ ದಿನದಂದು ಪೂಜಿಸಲಾಗುತ್ತದೆ. ಈ ದೇವಾಲಯದ ಬಗ್ಗೆ ತಿಳಿಯೋಣ.

Tap to resize

Latest Videos

ಕುಬೇರ ದೇವಾಲಯದ ಇತಿಹಾಸ
ಉತ್ತರಾಖಂಡದ ಅಲ್ಮೋರಾದಲ್ಲಿರುವ ಈ ಕುಬೇರ ದೇವಾಲಯದ ಇತಿಹಾಸವು ದೇವಾಲಯದಂತೆಯೇ ಆಸಕ್ತಿದಾಯಕವಾಗಿದೆ. ಈ ದೇವಾಲಯವನ್ನು 7ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಕೆಲವರು ನಂಬಿದರೆ, ಕೆಲವರು ಇದನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ನಂಬುತ್ತಾರೆ. ಇದನ್ನು 7ರಿಂದ 14ನೇ ಶತಮಾನದ ನಡುವೆ ಕಟ್ಯೂರಿ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಗಿದೆ.

ಆರನೇ ಕುಬೇರ ದೇವಾಲಯ 
ಇದು ದೇಶದ ಆರನೇ ಕುಬೇರ ದೇವಾಲಯ. ಇಲ್ಲಿ ಭಗವಂತ ಕುಬೇರನು ಏಕ ಮುಖದ ಶಿವಲಿಂಗದಲ್ಲಿ ಕುಳಿತಿದ್ದಾನೆ. ಇದು ದೇಶದ ಅತ್ಯಂತ ಪುರಾತನವಾದ ಕುಬೇರ ದೇವಾಲಯ ಎಂದು ಅರ್ಚಕರು ಹೇಳುತ್ತಾರೆ. ಇಲ್ಲಿ ಕುಬೇರನನ್ನು ಶಿವನೆಂದು ಪೂಜಿಸಲಾಗುತ್ತದೆ. ಭಗವಾನ್ ಕುಬೇರನ ಕೃಪೆಗೆ ಪಾತ್ರರಾದವರಿಗೆ ಎಂದಿಗೂ ಸಂಪತ್ತಿಗೆ ಕೊರತೆಯಿರುವುದಿಲ್ಲ.

ಬೆಳ್ಳಿ ನಾಣ್ಯ ನೀಡಲಾಗುತ್ತೆ..
ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ ಈ ದೇವಸ್ಥಾನದಿಂದ ಬೆಳ್ಳಿ ನಾಣ್ಯಗಳನ್ನು ನೀಡಿ ಮಂತ್ರವನ್ನು ಪಠಿಸಿದ ನಂತರ ಹಳದಿ ಬಟ್ಟೆಯಲ್ಲಿ ಸುತ್ತಿ ಕೊಡುತ್ತಾರೆ. ಇದರ ನಂತರ ಜನರ ಇಷ್ಟಾರ್ಥಗಳು ಪೂರೈಕೆಯಾದರೆ ಅವರು ಭಗವಾನ್ ಕುಬೇರನಿಗೆ ಖೀರ್ ಅರ್ಪಿಸುತ್ತಾರೆ.

ಇದಲ್ಲದೇ ವ್ಯಾಪಾರ ಸರಿಯಾಗಿ ನಡೆಯದ ಜನರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇನ್ನೊಂದು ನಂಬಿಕೆಯ ಪ್ರಕಾರ ಈ ದೇವಾಲಯದ ಗರ್ಭಗುಡಿಯ ಮಣ್ಣನ್ನು ಯಾರು ತೆಗೆದುಕೊಂಡು ಹೋಗಿ ತನ್ನ ಭಂಡಾರದಲ್ಲಿ ಇಟ್ಟುಕೊಳ್ಳುತ್ತಾರೋ ಅವರ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ದೀಪಾವಳಿಯ ದಿನದ ಕಾಂತಿ
ಸಂಪತ್ತಿನ ದೇವರು ಕುಬೇರನನ್ನು ದೀಪಾವಳಿಯ ದಿನದಂದು ಪೂಜಿಸಲಾಗುತ್ತದೆ. ಆದ್ದರಿಂದಲೇ ಧಂತೇರಸ್ ಮತ್ತು ದೀಪಾವಳಿಯ ದಿನ ಇಲ್ಲಿ ಭಕ್ತರ ದಂಡೇ ನೆರೆದಿರುತ್ತದೆ. ಈ ದೇವಾಲಯದ ನೈಜ ಸೌಂದರ್ಯವನ್ನು ನೀವು ನೋಡಲು ಬಯಸಿದರೆ, ಧನ್ತೇರಸ್ ಮತ್ತು ದೀಪಾವಳಿಯ ನಡುವೆ ಇಲ್ಲಿಗೆ ಹೋಗಿ. ಈ ದೇವಾಲಯವನ್ನು ವಧುವಿನಂತೆ ಅಲಂಕರಿಸಲಾಗಿರುತ್ತದೆ ಮತ್ತು ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

click me!