ದಶಕದ ಬಳಿಕ ಕೊನೆಗೂ ಕೊಲ್ಲೂರು ಬ್ರಹ್ಮಕಲಶೋತ್ಸವಕ್ಕೆ ಕೂಡಿ ಬಂತು ಕಾಲ

By Suvarna News  |  First Published Mar 1, 2023, 4:45 PM IST

ಏಪ್ರಿಲ್ 30 ರಿಂದ ಮೇ 11 ರವರೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಒಟ್ಟು ಐದು ಕೋಟಿ ವೆಚ್ಚದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ರಾಜಕಾರಣಿಗಳ ಅಬ್ಬರ ಇಲ್ಲದೆ ಶಾಸ್ತ್ರೋಕ್ತವಾಗಿ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮಕಲಶ ನಡೆಯಬಹುದು.


ಶಶಿಧರ್ ಮಾಸ್ತಿಬೈಲು, ಉಡುಪಿ

ದಶಕದಿಂದ ಬಾಕಿ ಉಳಿದಿದ್ದ ಶ್ರೀ ಕ್ಷೇತ್ರ ಕೊಲ್ಲೂರಿನ ಅಷ್ಟಬಂಧ ಬ್ರಹ್ಮಕಳಶ ಕೊಲ್ಲೂರು ಮೂಕಾಂಬಿಕಾ ದೇವಿಗೆ ಸಮರ್ಪಣೆ ಆಗಲಿದೆ. ಐದಾರು ತಿಂಗಳಿಂದ ನಡೆಯುತ್ತಿದ್ದ ಜಟಾಪಟಿಗೆ ತಾತ್ಕಾಲಿಕ ವಿರಾಮ ಕಾಣಿಸುತ್ತಿದೆ. 

Tap to resize

Latest Videos

undefined

ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತಿದ್ದು ಜನಪ್ರತಿನಿಧಿಗಳಿಲ್ಲದೆ ನಾಡ ದೇವಿಗೆ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ. ಈ ಬಗ್ಗೆ ಭಕ್ತರ ಆಕ್ಷೇಪವಿದ್ದರೂ ಈಗಾಗಲೇ ವಿಳಂಬವಾಗಿದೆ, ಇನ್ನು ತಡ ಮಾಡುವುದಿಲ್ಲ ಎಂದು ವ್ಯವಸ್ಥಾಪಕ ಸಮಿತಿ ಹೇಳಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಶಕ್ತಿಪೀಠ. ರಾಜ್ಯ ಮಾತ್ರ ಅಲ್ಲ ಹೊರರಾಜ್ಯ, ಹೊರದೇಶದ ಭಕ್ತರು ಕೊಲ್ಲೂರಿನ ಕಾರಣಿಕಕ್ಕೆ ಸಾಕ್ಷಿ. ರಾಜ್ಯದ ಎರಡನೇ ಅತಿ ಹೆಚ್ಚು ವರಮಾನದ ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದ ಧಾರ್ಮಿಕ ಸಂಪ್ರದಾಯ ಒಂದು ನಿಂತುಬಿಟ್ಟಿತ್ತು. 2007 ಇಸವಿ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. 

ಇದರಿಂದ ಕಂಟಕಗಳು ಇವೆ ಎಂಬ ಅರಿವಿದ್ದರೂ ಅರ್ಚಕ ವೃಂದ, ಜನಪ್ರತಿನಿಧಿಗಳು, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಜಟಾಪಟಿಯಿಂದ ಬಾಕಿಯಾಗಿತ್ತು. ಏಪ್ರಿಲ್ ತಿಂಗಳಲ್ಲಿ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿದೆ.

ನಿತ್ಯಾನಂದನ 'ಕೈಲಾಸ'ದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

ಅಷ್ಟಬಂಧ ಬ್ರಹ್ಮ ಕಲಶ ಎಂದರೆ ಎಂಟು ಬಗೆಯ ದ್ರವ್ಯಗಳ ದೇವರ ಪೀಠಕ್ಕೆ ಲೇಪಿಸಲಾಗುತ್ತದೆ. ಪೀಠಕ್ಕೆ ಲೇಪ ಹಾಕಿ 48 ದಿನಗಳ ಕಾಲ ಅದನ್ನು ಒಣಗಲು ಖಾಲಿ ಬಿಡಬೇಕು. ಉತ್ಸವ, ಮೂಕಾಂಬಿಕಾ ದೇವಾಲಯ ದ ಜಾತ್ರೆ ಇರುವ ಕಾರಣ ಅಭಿಷೇಕಾಧಿಗಳು ನಡೆಯುತ್ತಿರುತ್ತದೆ. ಬ್ರಹ್ಮ ಕಲಶ ಯಾರ ಕಾಲದಲ್ಲಿ ಆಗಬೇಕು ಎಂಬ ಅರ್ಚಕರ ನಡುವೆ ಮೇಲಾಟದಲ್ಲೂ ವಿಳಂಬವಾಗಿತ್ತು. 

ಇದೀಗ ಏಪ್ರಿಲ್ 30 ರಿಂದ ಮೇ 11 ರವರೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಒಟ್ಟು ಐದು ಕೋಟಿ ವೆಚ್ಚದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ರಾಜಕಾರಣಿಗಳ ಅಬ್ಬರ ಇಲ್ಲದೆ ಶಾಸ್ತ್ರೋಕ್ತವಾಗಿ ಮೂಕಾಂಬಿಕಾ ದೇವಸ್ಥಾನದ ಬ್ರಹ್ಮಕಲಶ ನಡೆಯಬಹುದು.

ಚುನಾವಣಾ ನಿಯಮಗಳ ಕಡಿವಾಣ ಇರುವುದರಿಂದ ಕೇಂದ್ರ ರಾಜ್ಯದ ನಾಯಕರು ಕೇವಲ ಭಕ್ತರಾಗಿ ದೇಗುಲಕ್ಕೆ ಭೇಟಿ ಕೊಡುವ ಅವಕಾಶವನ್ನು ಮಾತ್ರ ಪಡೆಯಲಿದ್ದಾರೆ. ತರಾತುರಿ ಬೇಡ, ವೈಭವದಿಂದ ಬ್ರಹ್ಮಕಲಶ ನಡೆಸೋಣ ಎಂಬುದು ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟರ ಅಭಿಪ್ರಾಯವಾಗಿತ್ತು. ಸಮಿತಿ ಅರ್ಚಕರ ತೀರ್ಮಾನದ ನಂತರ ಏನೇನು ಬೆಳವಣಿಗೆಗಳು ಆಗುತ್ತದೆ ಎಂಬ ಕುತೂಹಲ ಭಕ್ತರಲ್ಲಿದೆ.

click me!