ರಾಜಕೀಯ ಅಸ್ಥಿರತೆ ಇದೆ, ಅದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ; ಕೋಡಿ ಶ್ರೀ

Published : Feb 04, 2023, 09:35 AM ISTUpdated : Feb 04, 2023, 09:39 AM IST
ರಾಜಕೀಯ ಅಸ್ಥಿರತೆ ಇದೆ, ಅದರೆ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ; ಕೋಡಿ ಶ್ರೀ

ಸಾರಾಂಶ

ರಾಜ್ಯ ರಾಜಕೀಯದ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ ಯುಗಾದಿ ನಂತರ ಪ್ರಕೃತಿ ವಿಕೋಪ ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ..  ಜಮಖಂಡಿಯಲ್ಲಿ ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಶ್ರೀ ಭವಿಷ್ಯ

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, ರಾಜಕೀಯ ಅಸ್ಥಿರತೆ ಇದೆ, ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ ಎಂದಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, 'ರಾಜಕೀಯ ಅಸ್ಥಿರತೆ ಇದೆ. ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟವಾಗಲಿದೆ. ಇನ್ನು ಈ ಚುನಾವಣೆವರೆಗೂ ಏನೂ ಹೇಳೋಕೆ ಆಗೋದಿಲ್ಲ, ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ‌‌‌, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದರು. 
ಮುಂದುವರಿದು, 'ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೆ ಆಗಲಿ ತಪ್ಪು ಇರಲಿ, ಸರಿ ಇರಲಿ, ನಾವು ಏನು ಮಾಡುತ್ತೇವೋ ಅದಕ್ಕೇ ಫಲ ಸಿಗೋದು ಮತ್ತು ನಾವು ಬಿತ್ತಿದ್ದೇ ಬೆಳೆಯೋದು. ಹೀಗಾಗಿ ಮಾಡಬಾರದು ಮಾಡಿದರೆ ಆಗಬಾರದ್ದು ಆಗುತ್ತದೆ' ಎಂದರು.

ಶನಿವಾರ ನಿಮ್ಮ ಕಣ್ಣಿಗೆ ಈ ವಿಷಯಗಳು ಬಿದ್ದರೆ ಶನಿಯ ಆಶೀರ್ವಾದ ಇದೆ ಎಂದರ್ಥ!

ಪ್ರಕೃತಿ ವಿಕೋಪ ಸಂಬಂದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೋಡಿಮಠದ ಶ್ರೀಗಳು, 'ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ, ಆಗೋದಿಲ್ಲ ಅಂತ ಹೇಳೋದಿಲ್ಲ. ಮುಂದೆ ಎಷ್ಟು ಸುಖವಿದೆಯೋ  ಅಷ್ಟು ಕಷ್ಟವಿದೆ. ಒಲೆ ಹತ್ತಿ ಉರಿದರೆ ನಿಂತುಕೊಳ್ಳಬಹುದು. ಧರೆ ಹೊತ್ತಿ ಉರಿದರೆ ನಿಲ್ಲೋಕಾಗೋದಿಲ್ಲ.. ನಾನು ಹೇಳಿದ ಮರುದಿನವೇ ಪ್ಲೈಟ್ ಅಪಘಾತವಾಗಿ 50 ಜನ ಸತ್ರು. ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ' ಎಂಬ ಭಯಾನಕ ಭವಿಷ್ಯವನ್ನೂ ನುಡಿದಿದ್ದಾರೆ. 

ರಾಹುಲ್ ಗಾಂಧಿ ಭಾರತ ಜೋಡೊ ವಿಚಾರದ ಬಗ್ಗೆ ಕೇಳಿದಾಗ ಒಳ್ಳೆಯದಾಗಲಿ ಎಲ್ಲರಿಗೂ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ ಕೋಡಿಮಠದ ಶ್ರೀಗಳು.
 

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ