ವಯನಾಡ್ ಭೂಕುಸಿತದ ಬಗ್ಗೆ ಭವಿಷ್ಯ ನುಡಿದಿದ್ದ ಕೋಢಿಮಠ ಸ್ವಾಮೀಜಿ ಈಗ ಶ್ರಾವಣ ಮಾಸ ಆರಂಭದ ಹೊತ್ತಿನಲ್ಲಿ ಮಹಾ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ (ಆ.9): ಕ್ರೋಧಿನಾಮ ಸಂವತ್ಸರದಲ್ಲಿ ಅವಗಢಗಳೇ ಜಾಸ್ತಿ ಎಂದು ಹೇಳಿದ್ದ 20 ದಿನಗಳಲ್ಲೇ ಕೇರಳದ ವಯನಾಡ್‌ನಲ್ಲಿ ಭಾರೀ ಭೂಕುಸಿತ ಸಂಭವಿಸಿ 400ಕ್ಕೂ ಅಧಿಕ ಮಂದಿ ಸಾವು ಕಂಡಿದ್ದರು. ಆ ಬಳಿಕ ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದರು. ಈಗ ಶ್ರಾವಣ ಮಾಸ ಶುರುವಾಗಿದೆ. ಇಡೀ ಕರ್ನಾಟಕದಲ್ಲಿ ಹಬ್ಬದ ಋತುವನ್ನು ಸಂಭ್ರಮದಿಂದಲೇ ಆಚರಿಸಿದ್ದಾರೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶುಕ್ರವಾರ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಸ್ವಾಮೀಜಿಗಳು ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಇನ್ನಷ್ಟು ಹೆಚ್ಚಾಗುತ್ತವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಇದು ಶ್ರಾವಣ ಮಾಸ, ಹಬ್ಬದ ಋತು. ಹಾಗಿದ್ದರೂ ಎಚ್ಚರಿಕೆಯಿಂದ ಇರಬೇಕು. ಶ್ರಾವಣ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ.
ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ. ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಹೇಳಿದ್ದಾರೆ.
undefined
'ಇದು ಕ್ರೋಧಿನಾಮ ಸಂವತ್ಸರ, ಮಳೆ ಆಗುತ್ತೆ, ಗುಡ್ಡ ಉರುಳುತ್ತೆ..' ಮತ್ತೆ ಸತ್ಯವಾದ ಕೋಡಿಮಠ ಸ್ವಾಮೀಜಿ ಭವಿಷ್ಯ
ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಆಗಲಿರುವ ಬದಲಾವಣೆ ಬಗ್ಗೆ ಮಾತನಾಡಿದ್ದ ಅವರು ಸನ್ಯಾಸಿ ಬೇಡನ ಕಥೆಯನ್ನು ಹೇಳಿದ್ದರು. ಒಬ್ಬ ಸನ್ಯಾಸಿ ತಪ್ಪಿಸಿಗೆ ಕುಳಿತಿದ್ದನಂತೆ, ಆಗ ಒಬ್ಬ ಬೇಡ ಬೇಟೆಗೆ ಜಿಂಕೆಯನ್ನ ಓಡಿಸಿಕೊಂಡು ಬಂದ. ಸ್ವಾಮೀಜಿ ಮುಂದೆ ಜಿಂಕೆ ಹೋಯಿತಂತೆ ಆಗ ಸ್ವಾಮೀಜಿಯನ್ನ ಜಿಂಕೆ ಹೋಯಿತಾ ಅಂತ ಬೇಡ ಕೇಳಿದ್ದ. ಆಗ ಸನ್ಯಾಸಿ ಹೋಯಿತು ಅಂತಾ ಹೇಳಿದರೆ ಕೊಂದ ಪಾಪ ತಟ್ಟುತ್ತೆ, ಇಲ್ಲ ಅಂತಾ ಹೇಳಿದರೆ ಸುಳ್ಳು ಹೇಳಿದ ಪಾಪವೂ ತಟ್ಟುತ್ತೆ. ಹೀಗಿದ್ದಾಗ ಯಾವುದು ನೋಡ್ತು ಅದಕ್ಕೆ ಮಾತು ಬರಲ್ಲ, ಯಾವ್ದು ಮಾತನಾಡ್ತು ಅದಕ್ಕೆ ಮಾತನಾಡಕ್ಕೆ ಬರಲ್ಲ ಎಂದು ಸಂನ್ಯಾಸಿ ಹೇಳಿದ್ದ. ಕಣ್ಣು ನೋಡ್ತು ಕಣ್ಣಿಗೆ ಮಾತು ಬರಲ್ಲ, ನಾಲಿಗೆ ಮಾತಾಡ್ತು ಆದರೆ ಅದು ನೋಡಲಿಲ್ಲ ಎಂದು ತಿಳಿಸಿದ್ದರು.
ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ !