ಕೋಡಿ ಶ್ರೀ ಮತ್ತೊಂದು ಭಯಾನಕ ಭವಿಷ್ಯ: ಪ್ರಕೃತಿಯ ವಿಕೋಪದ ಬಗ್ಗೆ ಎಚ್ಚರಿಕೆ

By Ramesh BFirst Published Sep 9, 2022, 2:46 PM IST
Highlights

ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ  ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದು, ಪ್ರಕೃತಿಯ ವಿಕೋಪದ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ, (ಸ್ಟೆಂಬರ್.09): ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ (Prediction). 

ಈ ಬಾರಿ ಮಳೆ ಬಗ್ಗೆ ಇಂದು(ಸೆಪ್ಟೆಂಬರ್.09) ಮಂಡ್ಯದ ಬೂಕನಕೆರೆಯಲ್ಲಿ ಕೋಡಿ ಶ್ರೀ ಭವಿಷ್ಯ ಭಯಾನಕ ಭವಿಷ್ಯ ನುಡಿದಿದ್ದು, ಪ್ರಕೃತಿಯ ವಿಕೋಪದ ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಹಾಗಾದ್ರೆ, ಶ್ರೀಗಳ ಭವಿಷ್ಯ ಏನಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ..

ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ ಹೊಸಹೊಸ ವಿಷಜಂತುಗಳು ಉದ್ಭವಿಸಲಿದೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.

ಕಾರ್ತಿಕದಲ್ಲಿ ಸಾಲು ಸಾಲು ಅನಾಹುತ! ನಿಜವಾಗುತ್ತಾ ಕೋಡಿ ಶ್ರೀ ಭವಿಷ್ಯ?

ಕೊrOನಾ ಬಗ್ಗೆ ಈ ಹಿಂದೆ ಹೇಳಿದ್ದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಎಲ್ಲಾ ಮಾತುಗಳು ನಿಜವಾಗಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಇದಕ್ಕೆಲ್ಲಾ ಪರಿಹಾರ ದೇವರನ್ನು  ಪೂಜಿಸುವುದು. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ.ಯೋಗ್ಯ ಸಾಧುಗಳಿದ್ದಾರೆ. ಗದ್ದುಗೆಗಳಿವೆ ಎಲ್ಲರೂ ಸೇರಿ ಪ್ರಾರ್ಥಿಸಿದ್ರೆ ಜಗತ್ತು ಉಳಿಯುತ್ತದೆ ಎಂದು  ಸಲಹೆ ನೀಡಿದರು.

ಇನ್ನು ಇದೇ ವೇಳೆ ಮಠದ ವಿರುದ್ಧ ಶರಣರ ವಿರುದ್ಧ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ. ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ತಿಕ ಮಾಸದ ಭವಿಷ್ಯ
ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು ಎಂದು ಭವಿಷ್ಯ ನುಡಿದಿದ್ದರು.ಅಲ್ಲದೇ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜ್ಞಾನದ ಕೊರತೆ.  ಈ ಜ್ಞಾನದ ಕೊರತೆಯಿಂದಾಗಿ ದೇಶದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದು ಈ ಹಿಂದಿನ ಕಾರ್ತಿಕ ಮಾಸದ ಭವಿಷ್ಯ  ಹೇಳಿದ್ದರು.

click me!