Latest Videos

ಬಯಸಿದ್ದೆಲ್ಲ ಕೊಡುವ ಕಾಮಧೇನು ಹಸುವಿನ ಕತೆ ಕೇಳಿದ್ದೀರಾ?

By Suvarna NewsFirst Published Jun 8, 2022, 12:54 PM IST
Highlights

ಕಾಮಧೇನು ಎಂದರೆ ಕಾಮಿಸಿದ್ದನ್ನೆಲ್ಲ ಕೊಡುವವಳು ಎಂದರ್ಥ. ಕಾಮಧೇನು ಹಸುವು ಎಲ್ಲ ಹಸುಗಳ ತಾಯಿಯಾಗಿದ್ದು, ಅವಳ ಜನನದ ಕತೆ ವಿಶಿಷ್ಠವಾಗಿದೆ. 

ಕಾಮಧೇನು(Kamadhenu) ಹೆಸರು ಕೇಳದವರಿಲ್ಲ. ಆಕೆಯು ಎಲ್ಲ ಹಸುಗಳ ತಾಯಿ. ಹಿಂದೂ ಸಂಸ್ಕೃತಿಯ ಭಾಗವಾಗಿರುವ ಕಾಮಧೇನು ಕೇಳಿದ್ದನ್ನೆಲ್ಲ ಕರುಣಿಸುವವಳು, ಅಪರಿಮಿತ ಕರುಣೆ ಉಳ್ಳವಳು ಎಂಬ ಖ್ಯಾತಿ ಪಡೆದಿದ್ದಾಳೆ. ಭಾರತೀಯ ಪುರಾಣ ಕತೆಗಳು ಕಾಮಧೇನುವನ್ನು ಬ್ರಹ್ಮ ಪುತ್ರರೂ, ಶಿವ ಭಕ್ತರೂ ಆದ 11 ರುದ್ರರ ತಾಯಿ ಎನ್ನುತ್ತವೆ. 

ಕಾಮಧೇನುವು ಮಾನವ ಹೃದಯವು ಬಯಸಬಹುದಾದ ಎಲ್ಲವನ್ನೂ ಪೂರೈಸುತ್ತಾಳೆ. ಅವಳ ಬಗ್ಗೆ ಅನೇಕ ಕಥೆಗಳಿವೆ, ಮತ್ತು ಅವೆಲ್ಲವೂ ಬಹಳ ಆಸಕ್ತಿದಾಯಕವಾಗಿವೆ.

ಕಾಮಧೇನುವಿನ ಕಥೆಯು ವೇದಗಳಲ್ಲಿ ಕಂಡುಬರುತ್ತದೆ, ಅದು ತುಂಬಾ ಹಳೆಯದು. ಈ ಹಸುವಿನ ನಾಲ್ಕು ಕಾಲುಗಳು ವೇದಗಳ ನಾಲ್ಕು ಗ್ರಂಥಗಳನ್ನು ಸಂಕೇತಿಸುತ್ತವೆ. ಹಲ್ಲುಗಳು ಮಾನವ ಜೀವನದ ಗುರಿಗಳಾದ ನಾಲ್ಕು ಪುರುಷಾರ್ಥ(Purusharth)ಗಳನ್ನು ಸಂಕೇತಿಸುತ್ತವೆ. ಕೊಂಬುಗಳು ದೇವರುಗಳನ್ನು ಸಂಕೇತಿಸಿದರೆ, ಭುಜಗಳು ಅಗ್ನಿಯ ಸಂಕೇತವಾಗಿದೆ. ಆದ್ದರಿಂದ ಪವಿತ್ರವಾದುದೆಲ್ಲವೂ ಈ ಗೋವಿನಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಕಾಮಧೇನುವಿನ ಸಾರವನ್ನು ಹೊಂದಿದ ಹಸುಗಳನ್ನು ಬಹಳ ಪವಿತ್ರವೆಂದು ಭಾವಿಸಲಾಗುತ್ತದೆ. 

ಕಾಮಧೇನುವು ಐದು ವಿಭಿನ್ನ ರೂಪಗಳಲ್ಲಿ ಅಸ್ತಿತ್ವದಲ್ಲಿದೆ ಎನ್ನಲಾಗುತ್ತದೆ: ನಂದ, ಸುನಂದಾ, ಸುರಭಿ, ಸುಮನ ಮತ್ತು ಸುಶೀಲ. ಇತರ ಹೆಸರುಗಳು ಸಬಲಾ ಮತ್ತು ಮಾತೃಕಾ. ಈಕೆಯ ಪುತ್ರಿ ನಂದಿನಿ(Nandini). ಸತ್ಯಯುಗದಲ್ಲಿ ಕಾಮಧೇನುವು ತನ್ನ ನಾಲ್ಕು ಕಾಲುಗಳಿಂದ ಭೂಮಿಯ ಮೇಲೆ ಸಬಲಳಾಗಿ ನಿಂತಿದ್ದಳು. ತ್ರೇತಾಯುಗದಲ್ಲಿ ಮೂರು ಕಾಲುಗಳು, ಪರಿಪೂರ್ಣತೆಗಿಂತ ಕಡಿಮೆಯ ಎರಡನೇ ಹಂತ ಮತ್ತು ಕಲಿಯುಗದಲ್ಲಿ ಕೇವಲ ಒಂದು ಕಾಲು ಮಾತ್ರ ಭೂಮಿಯ ಮೇಲಿಟ್ಟಿದ್ದಾಳೆ ಎನ್ನಲಾಗುತ್ತದೆ. 

ರಾಶಿ ಪ್ರಕಾರ, ನಿಮ್ಮ ಯಾವ ವಯಸ್ಸಿನಲ್ಲಿ ಜೀವನಸಂಗಾತಿ ಮೀಟ್ ಆಗ್ತೀರಾ ತಿಳೀಬೇಕಾ?

ಕಾಮಧೇನು ಹಸುವಿನ ಕಥೆ?(Story of kamadhenu)
ವಿವಿಧ ಗ್ರಂಥಗಳು ಕಾಮಧೇನುವಿನ ಜನ್ಮ ಕಥೆಯ ವೈವಿಧ್ಯಮಯ ಆವೃತ್ತಿಗಳನ್ನು ಒದಗಿಸುತ್ತವೆ. ಅವುಗಳಲ್ಲಿ ಹೆಚ್ಚು ವ್ಯಾಪಕವಾಗಿರುವುದು ಈ ದೈವಿಕ ಹಸುವು ಸಮುದ್ರ ಮಂಥನದ ಸಮಯದಲ್ಲಿ ಕ್ಷೀರ ಸಾಗರದಿಂದ ಹೊರಹೊಮ್ಮಿತು ಎಂಬುದು. 

ಹಿಂದೂ ಪುರಾಣ(Mythology)ದ ಈ ಕಥೆಯಲ್ಲಿ, ದೇವತೆಗಳು ಮತ್ತು ರಾಕ್ಷಸರು ಅಮರತ್ವದ ಹಾಲನ್ನು ಪಡೆಯಲು ಸಾಗರವನ್ನು ಮಥಿಸಿದರು. ಆ ಮಂಥನದಿಂದ ಅಮೃತ ಮಾತ್ರವಲ್ಲ, 14 ರೀತಿಯ ಪವಿತ್ರ ವಸ್ತುಗಳು ಹೊರಬಂದವು. ಅವುಗಳಲ್ಲೊಂದು ಕಾಮಧೇನು. ಈ ಕಾಮಧೇನುವನ್ನು ಏನು ಮಾಡುವುದೆಂದು ದೇವತೆಗಳು ಚರ್ಚಿಸಿ ಆಕೆಯನ್ನು ಸಪ್ತಋಷಿಗಳಿಗೆ ನೀಡಲು ನಿರ್ಧರಿಸುತ್ತಾರೆ. ಸದಾ ಯಜ್ಞಯಾಗಾದಿಗಳಲ್ಲಿ ತೊಡಗಿರುವ ಋಷಿವರ್ಯರಿಗೆ ಹಾಲು ಮತ್ತು ತುಪ್ಪವನ್ನು ಕಾಮಧೇನು ಒದಗಿಸುತ್ತಾಳೆ ಎಂಬುದು ಇದಕ್ಕೆ ಕಾರಣ. ಕಾಲಾನಂತರದಲ್ಲಿ ವಸಿಷ್ಠರ ಕೈ ಸೇರುತ್ತಾಳೆ ಕಾಮಧೇನು. 

ದಕ್ಷನ ಮಗಳೇ?
ಸಂಸ್ಕೃತ ಮಹಾಕಾವ್ಯ ಮಹಾಭಾರತದ ಪುಸ್ತಕವಾದ ಅನುಶಾಸನ ಪರ್ವದ ಪ್ರಕಾರ, ಕಾಮಧೇನುವು ಪ್ರಪಂಚದ ಸೃಷ್ಟಿಕರ್ತ ದಕ್ಷನ ಮಗಳು. ಈತನನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ. ಸಾಗರಗಳ ಮಂಥನದಿಂದ ಸೃಷ್ಟಿಯಾದ ಅಮರತ್ವದ ಅಮೃತವನ್ನು ಸೇವಿಸಿದ ನಂತರ ಅವಳು ದಕ್ಷನಿಂದ ಜೀವ ಪಡೆದಳು. ಆದ್ದರಿಂದ ಕೆಲವು ದಂತಕಥೆಗಳಲ್ಲಿ ಹಸುವನ್ನು ಪ್ರಪಂಚದ ತಾಯಿ ಮತ್ತು ಬ್ರಹ್ಮ ದೇವರ ಮಗು ಎಂದು ಪರಿಗಣಿಸಲಾಗುತ್ತದೆ.

ವಿಷ್ಣು ಮತ್ತು ಭಗವತ್ ಪುರಾಣದ ಪ್ರಕಾರ, ಸುರಭಿ ಅಂದರೆ ಕಾಮಧೇನುವು ದಕ್ಷ ಮತ್ತು ಋಷಿ ಕಶ್ಯಪನ ಪತ್ನಿಯ ಮಗಳು.

ಮೇಷ ಎಂದರೆ ರೋಷ, ಆವೇಶ, ಆತ್ಮವಿಶ್ವಾಸ.. ಈ ರಾಶಿಯ ಸ್ವಭಾವವಿದು..

ಎಲ್ಲಾ ಹಸುಗಳಿಗೂ ತಾಯಿ
ಮತ್ಸ್ಯ ಪುರಾಣ(Mathsya Puran)ದ ಒಂದು ಆವೃತ್ತಿಯ ಪ್ರಕಾರ, ಅವಳು ಬ್ರಾಹ್ಮಣರು ಮತ್ತು ಎಲ್ಲಾ ಹಸುಗಳ ತಾಯಿಯೂ ಹೌದು.

ದೇವಿ ಭಾಗವತ ಪುರಾಣದ ಕತೆ ಬೇರೆಯೇ ಇದೆ. ಕೃಷ್ಣ ಮತ್ತು ರಾಧೆಗೆ ಬಾಯಾರಿಕೆಯಾದಾಗ ಭಗವಂತನು ಹಸು ಸುರಭಿ ಅಥವಾ ಕಾಮಧೇನುವನ್ನು ಸೃಷ್ಟಿಸಿದನು. ಅದರಿಂದ ಸುರಿದ ಹಾಲು ಅವರ ಬಾಯಾರಿಕ ತಣಿಸಿತು. ಆದರೆ, ಹಾಲು ಸುರಿವುದು ನಿಲ್ಲದೆ ಹಾಲಿನ ಸಾಗರವಾಯಿತು. ಆಗ ಕಾಮಧೇನುವಿನಿಂದ ಸಾವಿರಾರು ಹಸುಗಳು ಹುಟ್ಟಿ ಗೋಪಿಯರಿಗೆ ಸೇವೆ ಸಲ್ಲಿಸಲು ನಿಂತವು. 
 

click me!