Falgun Maas 2022: ಹಿಂದೂ ವರ್ಷದ ಕೊನೆಯ ಮಾಸದ ವ್ರತ, ಹಬ್ಬ ಹರಿದಿನಗಳೇನು?

Published : Feb 21, 2022, 07:52 AM ISTUpdated : Feb 21, 2022, 07:53 AM IST
Falgun Maas 2022: ಹಿಂದೂ ವರ್ಷದ ಕೊನೆಯ ಮಾಸದ ವ್ರತ, ಹಬ್ಬ ಹರಿದಿನಗಳೇನು?

ಸಾರಾಂಶ

ಫಾಲ್ಗುಣ ಮಾಸ ಶುರುವಾಗಿದೆ. ಈ ಮಾಸದಲ್ಲಿ ಬರುವ ಹಬ್ಬ ಹರಿದಿನಗಳ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ. 

ಮಾಘ ಮಾಸ ಮುಗಿದು ಫಾಲ್ಗುಣ ಆರಂಭವಾಗಿದೆ. ಇದು ಹಿಂದೂ ಪಂಚಾಂಗದ ಕೊನೆಯ ತಿಂಗಳು. ಹೊಸ ಶಕ್ತಿಯ ಸಂಚಯವೊಂದು ಪ್ರಕೃತಿಯಲ್ಲಾಗುತ್ತಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಅದರ ಅರಿವು ಆಗುತ್ತದೆ. ಇದು ವಸಂತದ ಆರಂಭದ ಸೂಚನೆಯಾಗಿದೆ. ಚಳಿಗಾಲ ಮುಗಿದು ಬೇಸಿಗೆ ಶುರುವಾಗುತ್ತಿದೆ. ಪ್ರಕೃತಿ ಹೊಚ್ಚ ಹೊಸದಾಗಿ ತನ್ನನ್ನು ಸಿಂಗರಿಸಿಕೊಳ್ಳುತ್ತಿದೆ. ರೋಗರುಜಿನಗಳು ಕಡಿಮೆಯಾಗುವ ಸಮಯ. 
ಫಲ್ಗುಣಿ ನಕ್ಷತ್ರ ಎಂದು ಈ ತಿಂಗಳ ಹುಣ್ಣಿಮೆಯನ್ನು ಕರೆಯಲಾಗುತ್ತದೆ. ಹಾಗಾಗಿ, ಈ ಮಾಸಕ್ಕೆ ಫಾಲ್ಗುಣ ಎಂಬ ಹೆಸರಿದೆ. 

ಈ ಮಾಸವು 17 ಫೆಬ್ರವರಿಯಿಂದ ಆರಂಭವಾಗಿದ್ದು, 18 ಮಾರ್ಚ್‌(March)ವರೆಗೆ ಇರಲಿದೆ. ಫಾಲ್ಗುಣ ಎಂದರೇ ಹೊಸ ಉತ್ಸಾಹ(enthusiasm), ಹೊಸ ಚಿಗುರುಗಳ ಕಲರವ. ಪ್ರಕೃತಿಯಲ್ಲಿನ ಈ ಧನಾತ್ಮಕ ಬದಲಾವಣೆಗಳು ನಮ್ಮ ಮನಸ್ಸಿಗೂ ಹೊಸ ಚೈತನ್ಯ ತರುತ್ತವೆ. ಪಾಸಿಟಿವ್ ಆಗಿರಲು ಪ್ರೇರೇಪಿಸುತ್ತವೆ. ಈ ತಿಂಗಳಲ್ಲಿ ಕೆಲ ಹಬ್ಬ ಹರಿದಿನಗಳು ಬಂದು ನಮ್ಮ ಬದುಕನ್ನು ಹೆಚ್ಚು ಜೀವಂತಿಕೆಯಿಂದಿಡಲು ಸಜ್ಜಾಗಿವೆ. ಅವು ಯಾವೆಲ್ಲ, ಏನೆಲ್ಲ ಆಚರಣೆ ಈ ಮಾಸದಲ್ಲಿ ಕೈಗೊಳ್ಳಬೇಕು, ಯಾವ ದೇವರನ್ನು ಪೂಜಿಸಬೇಕು ಮುಂತಾದ ವಿವರಗಳನ್ನು ನೋಡೋಣ. 

ಈ ಮಾಸದಲ್ಲಿ ಯಾರನ್ನು ಪೂಜಿಸಬೇಕು?
ನಿಮ್ಮ ಇಷ್ಟ ದೇವರನ್ನು ಯಾವಾಗ ಬೇಕಾದರೂ ಪೂಜಿಸಬಹುದು. ಎಲ್ಲ ದೇವರ ಆರಾಧನೆಗೆ ವರ್ಷದ 12 ತಿಂಗಳೂ ಸಕಾಲವೇ. ಆದರೆ, ಕೆಲವು ಮಾಸಗಳಲ್ಲಿ ಕೆಲ ದೇವರನ್ನು ವಿಶಿಷ್ಠವಾಗಿ ಸ್ಮರಿಸುವ ಸಂಪ್ರದಾಯ ನಮ್ಮಲ್ಲಿದೆ. ಅದರಂತೆ ಈ ಮಾಸವು ಶ್ರೀಕೃಷ್ಣ, ಈಶ್ವರ ಹಾಗೂ ಲಕ್ಷ್ಮೀದೇವಿ(Lakshmi)ಯ ಪೂಜೆ, ಆರಾಧನೆಗೆ ಉತ್ತಮವಾಗಿದೆ. ಇದರಿಂದ ಫಲಗಳು ಹೆಚ್ಚುತ್ತವೆ ಎಂದು ನಂಬಲಾಗಿದೆ. ಈ ಮಾಸದಲ್ಲಿ ಕೃಷ್ಣ ಪೂಜೆಯಿಂದ ಮಕ್ಕಳಾಗದ ದಂಪತಿಗೆ ಮಕ್ಕಳಾಗುವುದು ಎಂಬ ನಂಬಿಕೆ ಇದೆ. 

Shiva Karma: ಸಂತೋಷವಾಗಿರಲು ಶಿವ ಹೇಳಿದ ನಿಯಮಗಳಿವು..

ಫಾಲ್ಗುಣ ವ್ರತ, ಹಬ್ಬ (Vrat And Festival)
ವಿಜಯ ಏಕಾದಶಿ- 26 ಫೆಬ್ರವರಿ 
ಮಹಾ ಶಿವರಾತ್ರಿ- 1 ಮಾರ್ಚ್
ಫಾಲ್ಗುಣ ಅಮಾವಾಸ್ಯೆ- 2 ಮಾರ್ಚ್
ಫುಲೆರಾ ದೂಜ್- 4 ಮಾರ್ಚ್
ಅಮಲಕಿ ಏಕಾದಶಿ- 14 ಮಾರ್ಚ್
ಹೋಳಿ ಹುಣ್ಣಿಮೆ- 18 ಮಾರ್ಚ್

ಶಿವರಾತ್ರಿಯಿಂದ ಹೋಳಿಯವರೆಗೆ
ಮಹಾ ಶಿವರಾತ್ರಿಯ ವೈಭೋಗದಿಂದ ಹೋಳಿಯ ವರ್ಣದೋಕುಳಿವರೆಗೆ ಈ ಮಾಸದ ಸಂಭ್ರಮಾಚರಣೆಗಳು ಹರಡಿವೆ. ಫಾಲ್ಗುಣ ಶುರುವಾಗುತ್ತಿದ್ದಂತೆಯೇ ವ್ರತ, ಉಪವಾಸ ಹೆಚ್ಚುತ್ತವೆ. ಈ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಅಂದರೆ ಈ ಬಾರಿ ಫೆ.24ರಂದು ಸೀತಾ ಅಷ್ಟಮಿ(Sita Ashtami) ಅಥವಾ ಜಾನಕಿ ಜಯಂತಿ ಆಚರಿಸಲಾಗುತ್ತದೆ. ಸೀತಾ ಮಾತೆಯ ಜನ್ಮದಿನವಾದ ಅಂದು ರಾಮ ಸೀತೆ ಇಬ್ಬರನ್ನೂ ಪೂಜಿಸಿ, ಭಜಿಸಿ, ಸ್ಮರಿಸಲಾಗುತ್ತದೆ. ಮದುವೆಯಾಗದ ಮಹಿಳೆಯರು ಉತ್ತಮ ಪತಿಯನ್ನು ಬೇಡಿ, ಹಾಗೂ ವಿವಾಹಿತ ಮಹಿಳೆಯರು ಪತಿಯ ಆಯುರಾರೋಗ್ಯಕ್ಕಾಗಿ ಉಪವಾಸ ವ್ರತ ಆಚರಿಸುತ್ತಾರೆ. 

Weekly Horoscope: ಈ ರಾಶಿಯವರಿಗೆ ಬರಬೇಕಿದ್ದ ಸಾಲದ ಮೊತ್ತ ಕೈ ಸೇರಲಿದೆ, ಹೀಗಿದೆ ಈ ವಾರ ಭವಿಷ್ಯ

ಇನ್ನು ಇದೇ ಕೃಷ್ಣ ಪಕ್ಷದ ಏಕಾದಶಿ ಅಂದರೆ 11ನೇ ದಿನದಂದು ವಿಜಯ ಏಕಾದಶಿಯನ್ನು ಆಚರಿಸಲಾಗುತ್ತದೆ. ಅಂದು ವಿಷ್ಣುವಿನ ಪೂಜೆಗೆ ಮಹತ್ವದ ದಿನವಾಗಿದೆ. 
ಮಾರ್ಚ್ 1ರಂದು ಮಹಾ ಶಿವರಾತ್ರಿ ಆಚರಣೆ ಇದ್ದು, ಶಿವನ ಭಕ್ತರ ಭಕ್ತಿಯು ಪರಾಕಾಷ್ಠೆ ತಲುಪುತ್ತದೆ. ಈ ದಿನ ಭಾರತದಾದ್ಯಂತ ಶಿವಭಕ್ತರು ರಾತ್ರಿ ಪೂರ್ತಿ ಜಾಗರಣೆ ಮಾಡಿ ಶಿವನ ಸ್ಮರಣೆ, ಭಜನೆಯಲ್ಲಿ ತೊಡಗುತ್ತಾರೆ. 
ಇನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಆಚರಿಸಲಾಗುತ್ತದೆ. ಅತಿ ವರ್ಣರಂಜಿತ ಹಬ್ಬವಾದ ಹೋಳಿ ಹುಣ್ಣಿಮೆ ಮಾರ್ಚ್ 18ರಂದು ಬರುತ್ತಿದೆ. ಅಂದು ಭಕ್ತರು ಕಾಮದಹನ ಮಾಡಿ ಬಣ್ಣಗಳ ಎರಚಾಟದಲ್ಲಿ ಹೊಸ ಉತ್ಸಾಹವನ್ನು ಕಂಡುಕೊಳ್ಳುತ್ತಾರೆ. 
ಫಾಲ್ಗುಣದ ಅಮಾವಾಸ್ಯೆಗೂ ವಿಶೇಷ ಮಾನ್ಯತೆ ಇದ್ದು, ಆ ದಿನ ಮಾಡುವ ದಾನ(Donation), ಧರ್ಮ ಕ್ರಿಯೆಗಳಿಗೆ, ಪಿತೃ ತರ್ಪಣಕ್ಕೆ ವಿಶೇಷ ಫಲವಿದೆ ಎಂದು ನಂಬಲಾಗುತ್ತದೆ. ಈ ದಿನದ ಉಪವಾಸ ಆಚರಣೆ ಸಂತೋಷ, ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. 

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ