ನೀವು ಡಿಸೆಂಬರ್‌ನಲ್ಲಿ ಹುಟ್ಟಿದವರಾ? ಈ ಗುಣ ನಿಮ್ಮದಾಗಿರುತ್ತೆ!

By Suvarna NewsFirst Published Dec 3, 2020, 4:55 PM IST
Highlights

ವರ್ಷ ಭವಿಷ್ಯ, ರಾಶಿ ಭವಿಷ್ಯ ಹೀಗೆ ಹಲವು ಕಡೆಗಳಿಂದ ಭವಿಷ್ಯದಲ್ಲಿ ಆಗುವ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ತೋರುತ್ತೇವೆ. ಗುಣ ಸ್ವಭಾವಗಳ ಬಗ್ಗೆ ಎಷ್ಟು ತಿಳಿದುಕೊಂಡರು ಮತ್ತಷ್ಟು ತಿಳಿಯುವ ಹಂಬಲ ಎಲ್ಲರಿಗೂ ಇರುತ್ತದೆ. ಹಾಗೆಯೇ ಪ್ರತಿ ತಿಂಗಳಿನಲ್ಲಿ ಜನಿಸಿದವರ ಗುಣ ಒಂದೇ ರೀತಿ ಇರಲು ಸಾಧ್ಯವಿಲ್ಲ. ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಗುಣದಲ್ಲಿ, ಸ್ವಭಾವದಲ್ಲಿ ಭಿನ್ನತೆ ಇರುತ್ತದೆ, ಹಾಗೆಯೇ ಅದರದ್ದೇ ಆದ ವಿಶೇಷತೆಯೂ ಇರುತ್ತದೆ. ಹಾಗೆಯೇ ಡಿಸೆಂಬರ್‌ನಲ್ಲಿ ಜನಿಸಿದವರ ಗುಣ, ಸ್ವಭಾವವೂ ವಿಶಿಷ್ಟವಾಗಿರುತ್ತದೆ. ಹೇಗಿರುತ್ತಾರೆ ಡಿಸೆಂಬರ್‌ನಲ್ಲಿ ಜನಿಸಿದವರು ನೋಡೋಣ ಬನ್ನಿ.

ಮನುಷ್ಯನಿಗೆ ತನ್ನ ಗುಣ ಏನು ಎಂಬುದು ಗೊತ್ತಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತದೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇನ್ನು ಪ್ರಮುಖವಾಗಿ ಹುಟ್ಟಿದ ತಿಂಗಳಿನಿಂದ ಗುಣವನ್ನು ತಿಳಿದುಕೊಳ್ಳಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಹುಟ್ಟಿದ ದಿನಾಂಕ, ಸಮಯ, ವಾರ ಎಲ್ಲವನ್ನೂ ನೋಡಿ ಭವಿಷ್ಯದ ವಿಚಾರವನ್ನು ತಿಳಿಸಲಾಗುತ್ತದೆ. ಹಾಗೆಯೇ ಆಯಾ ತಿಂಗಳು ಮತ್ತು ವಾರದಲ್ಲಿ ಹುಟ್ಟಿದವರ ಗುಣ ಸ್ವಭಾವವನ್ನು ತಿಳಿಯಬಹುದಾಗಿದೆ. ಒಂದೇ ತಿಂಗಳಿನಲ್ಲಿ ಹಲವರು ಜನಿಸಿರುತ್ತಾರೆ. ಒಬ್ಬರಿಗಿಂತ ಒಬ್ಬರು ಗುಣ, ಸ್ವಭಾವಗಳಲ್ಲಿ ಭಿನ್ನರಾಗಿದ್ದರೂ, ಕೆಲವು ಅಂಶಗಳು ಒಂದೇ ಆಗಿರುತ್ತವೆ. ಅದು ಆ ತಿಂಗಳ ಮಹಿಮೆ ಆಗಿರುತ್ತದೆ. ಹಾಗಾದರೆ ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದನ್ನು ತಿಳಿಯೋಣ...

ಇದನ್ನು ಓದಿ: ಈ ಫೋಟೋ ಮನೆಯಲ್ಲಿಟ್ಟರೆ ಕೆಡುಕು ಖಚಿತ, ನಿಮ್ಮ ಮನೆಯಲಿದ್ಯಾ? 

ಹಣವಂತರು
ಡಿಸೆಂಬರ್ ಮೊದಲ ಹದಿನೈದು ದಿನದ ಅವಧಿಯಲ್ಲಿ ಜನಿಸಿದವರು ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸುವವರಾಗಿರುತ್ತಾರೆ. ಅಷ್ಟೇ ಭಾವನಾಜೀವಿಗಳು ಇವರಾಗಿರುತ್ತಾರೆ. ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಕುಂಟುಂಬದಿಂದ ದೂರವಿರುವುದು ಇವರಿಗೆ ಹೆಚ್ಚಿನ ನೋವನ್ನು ತರುವ ವಿಚಾರವಾಗಿರುತ್ತದೆ.

ಡಿಸೆಂಬರ್ 15ರಿಂದ 31ರ ಅವಧಿಯಲ್ಲಿ ಜನಿಸಿದವರು ಕಲಾಕಾರರು ಮತ್ತು ದಾರ್ಶನಿಕರಾಗಿರುತ್ತಾರೆ.ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಸ್ವಪ್ರಯತ್ನದಿಂದಲೇ ಜೀವನದಲ್ಲಿ ಅತ್ಯುತ್ತಮ ಸ್ಥಿತಿಗೆ ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ಹಣವಂತರಾಗಿರುತ್ತಾರೆ. ಲಕ್ಷ್ಮೀ ಕೃಪೆಯನ್ನು ಹೊಂದಿರುವ ಇವರು ಖರ್ಚು ಮಾಡಲು ಯೋಚಿಸುವುದಿಲ್ಲ.

ನೇರ ನುಡಿ
ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ಸ್ಪಷ್ಟವಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳುವವರು. ಇದರಿಂದ ಹಲವರ ದ್ವೇಷವನ್ನು ಎದುರಿಸುತ್ತಾರೆ. ಯಾವುದೇ ವಿಚಾರದ ಬಗ್ಗೆಯಾದರೂ ತಮಗೆ ಅನ್ನಿಸಿರುವುದನ್ನು ಅಥವಾ ಸತ್ಯವಾದುದನ್ನೇ ಮಾತನಾಡುವ ಸ್ವಭಾವ ಇವರದ್ದಾಗಿರುತ್ತದೆ. ಹೊಸ ಹೊಸ ವಿಚಾರಗಳ ಬಗ್ಗೆ ತಿಳಿಯುವುದು ಇವರಿಗೆ ತುಂಬಾ ಇಷ್ಟ. ಹೆಚ್ಚು ಮಾತನಾಡುವ ಡಿಸೆಂಬರ್ ತಿಂಗಳಿನವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳುವ ಸಂಯಮವನ್ನು ಕಡಿಮೆ ಹೊಂದಿರುತ್ತಾರೆ. 

ಇದನ್ನು ಓದಿ: ಈ ಕಾರ್ತಿಕ ಪೂರ್ಣಿಮೆಯಂದು ಏನು ಮಾಡಿದರೆ ಶುಭವಾಗುತ್ತೆ...!? 

ಕಾರ್ಯ ನಿಷ್ಠೆ
ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಇವರು, ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಚತುರತೆಯನ್ನು ಹೊಂದಿರುತ್ತಾರೆ. ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡಿ ಮುಗಿಸುವವರಲ್ಲಿ ಡಿಸೆಂಬರ್‌ನಲ್ಲಿ ಜನಿಸಿದವರು ಮೊದಲಿಗರು. ಕೆಲಸದ ವಿಷಯದಲ್ಲಿ ಆಲಸೀತನವನ್ನು ತೋರದೆ ಹಿಡಿದ ಕೆಲಸ ಮುಗಿಯುವವರೆಗೆ ಶಾಂತಿಯಿಂದ ಕೂರುವುದೇ ಇಲ್ಲ. ಹಾಗಾಗಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆಯನ್ನು ಮತ್ತು ಯಶಸ್ಸನ್ನು ಕಾಣುವವರು ಇವರಾಗಿರುತ್ತಾರೆ.

ಸತ್ಯವಂತರು
ಡಿಸೆಂಬರ್‌ನಲ್ಲಿ ಹುಟ್ಟಿದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಗುರುವಿನ ಕೃಪೆ ಈ ತಿಂಗಳಿನಲ್ಲಿ ಜನಿಸಿದವರಿಗೆ ಹೆಚ್ಚಾಗಿರುತ್ತದೆಂದು ಸಹ ಹೇಳುತ್ತಾರೆ. ಸುಳ್ಳು ಹೇಳುವುದು ಇವರಿಗೆ ಆಗಿಬರದ ವಿಚಾರ. ಸತ್ಯವನ್ನು ಹಾಗೆ ಪಟ್ ಎಂದು ಹೇಳಿಬಿಡುವ ಇವರು ಹಲವರ ಸುಳ್ಳನ್ನು ಬಯಲಿಗೆಳೆಯುವಲ್ಲಿ ಸಫಲರಾಗುತ್ತಾರೆ.
ಈ ತಿಂಗಳಿನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವುದರೊಂದಿಗೆ ನೋಡಲು ಆಕರ್ಷಕವಾಗಿರುತ್ತಾರೆ. ಇತರರನ್ನು ತಮ್ಮತ್ತ ಸೆಳೆದುಕೊಳ್ಳುವ ಆಕರ್ಷಣೆಯನ್ನು ಹೊಂದಿರುತ್ತಾರೆ. 

ಹೆಚ್ಚಿನ ಆತ್ಮವಿಶ್ವಾಸ
ಡಿಸೆಂಬರ್‌ನಲ್ಲಿ ಜನಿಸಿದವರು ಹೆಚ್ಚಿನ ಆತ್ಮ ವಿಶ್ವಾಸವನ್ನು ಹೊಂದಿರುತ್ತಾರೆ. ಈ ತಿಂಗಳಿನಲ್ಲಿ ಜನಿಸಿದವರು ಎಲ್ಲರಿಗೂ ಪ್ರಿಯರಾಗಿತ್ತಾರೆ. ಅವರ ಆತ್ಮವಿಶ್ವಾಸವು ಎಲ್ಲರ ಮನಗೆಲ್ಲುವಲ್ಲಿ ಸಹಾಯಕವಾಗುತ್ತದೆ.  ಇವರಿದ್ದ ಕಡೆ ಖುಷಿ ಇರುತ್ತದೆ ಎಂದು ಸಹ ಹೇಳಲಾಗುತ್ತದೆ.

ಓದಿನಲ್ಲಿ ಉತ್ತಮರು
ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ  ಸಾಧಕರು. ಸಮಸ್ಯೆಗಳು ಎದುರಾದಾಗ ಗಂಭೀರತೆಯಿಂದ ಯೋಚಿಸಿ ಪರಿಹಾರ ಕಂಡುಕೊಳ್ಳುವ ಸ್ವಭಾವ ಇವರದ್ದು. 

ಇದನ್ನು ಓದಿ: ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..! 

ಗುಣದೋಷ
ಡಿಸೆಂಬರ್‌ನಲ್ಲಿ ಜನಿಸಿದವರ ‌ನೇರ ನುಡಿ ಕೆಲವೊಮ್ಮೆ ಒಳ್ಳೆಯದು ಮಾಡಿದರೆ, ಹಲವು ಬಾರಿ ಸಂಕಷ್ಟವನ್ನು ತಂದಿಡುತ್ತದೆ. ಸತ್ಯವಂತರಾಗಿರುವ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು, ತಮ್ಮ ಈ ಗುಣದಿಂದ ಇತರರಿಗೆ ನೋವುಂಟು ಮಾಡುವ ಸಾಧ್ಯತೆ ಇರುತ್ತದೆ. ಅಪ್ರಿಯವಾದ ಸತ್ಯವನ್ನು ಹೇಳದಿರುವುದೇ ಒಳ್ಳೆಯದು ಎಂದು ಶಾಸ್ತ್ರವೇ ಹೇಳುತ್ತದೆ.

click me!